ಆರೋಗ್ಯ

ತಾಯಿಯ ಎದೆಹಾಲು ಹೆಚ್ಚಿಸಲು ಸರಳ ಮನೆಮದ್ದು

ಮಕ್ಕಳಿಗೆ ತಾಯಿಯ ಎದೆಹಾಲು ಸರ್ವಶ್ರೇಷ್ಠ ಆಹಾರವಾಗಿರುತ್ತದೆ. ಒಂದು ವೇಳೆ ತಾಯಿಯ ಎದೆಹಾಲು ಕ್ಷೀಣಿಸಿದರೆ ಮಗುವಿನ ಬೆಳವಣಿಗೆ ಹಾಗು ಬುದ್ಧಿಶಕ್ತಿಯ ಮೇಲೆ ದುಷ್ಪರಿಣಾಮ ಬೀರುತ್ತದೆ.

ತಾಯಿಯ ಎದೆಹಾಲು ಕ್ಷೀಣಿಸಿದರೆ ಇದನ್ನು ಆಯುರ್ವೇದದ ಮೂಲಖ ಪರಿಹಾರ ಕಂಡುಕೊಳ್ಳಬಹುದು.

 

 

 

ವಿಧಾನ 1:
1 ಚಮಚ ಜೀರಿಗೆ ಪುಡಿ ಹಾಗು 1 ಚಮಚ ಸಕ್ಕರೆಯನ್ನು ಒಂದು ಲೋಟ ಹಾಲಿನಲ್ಲಿ ಮಿಶ್ರಣ ಮಾಡಿ. ಸಕ್ಕರೆ ಕರಾಗುವರೆಗೂ ಮಿಶ್ರಣವನ್ನು ಚಮಚದ ಸಹಾಯದಿಂದ ತಿರುವಿ. ಈ ಮಿಶ್ರಣವನ್ನು ದಿನಾಲೂ ಮಲಗುವ ಮುಂಚೆ ತಪ್ಪದೆ ಕುಡಿಯಿರಿ.

 

 

ವಿಧಾನ ೨:
1 ಚಮಚ ಮೆಂಥೆ ಕಾಳನ್ನು ಒಂದು ಬಟ್ಟಲು ನೀರಿನಲ್ಲಿ ರಾತ್ರಿಯಿಡಿ ನೆನೆಯಿಡಿ, ಮುಂಜಾನೆ ಆ ಮಿಶ್ರಣವನ್ನು ಕುದಿಸಿ. ನಂತರ ಆರಿಸಿ ಸೋಸಿ ಕುಡಿಯಿರಿ. ತಾಯಿಯ ಹಾಲಿನ ಉತ್ಪಾದನೆ ಬೇಗನೆ ಹೆಚ್ಚುತ್ತದೆ.

 

 

ವಿಧಾನ ೩:
1 ಚಮಚ ಸೋಂಪು ಕಾಳುಗಳನ್ನೂ(ಬಡೇ ಸೋಂಫ್) ಒಂದು ಲೋಟ ಬಿಸಿ ನೀರಿನಲ್ಲಿ ಅರ್ಧ ಘಂಟೆ ನೆನೆಸಿಡಿ ನಂತರ  ನೀರನ್ನು ಸೋಸಿ ಕುಡಿಯಿರಿ.

 

 

ದಿನಾಲೂ ಹೀಗೆ ಮಾಡುವುದರಿಂದ ತಾಯಿಯ ಎದೆಹಾಲಿನಲ್ಲಿ ವೃದ್ಧಿ ಕಾಣಿಸುತ್ತದೆ ಇದರಿಂದ ಮಕ್ಕಳ ಬೆಳವಣಿಗೆಗೆ ಸಹಾಯವಾಗುತ್ತದೆ.

ಮಗುವಿಗೆ ತಾಯಿಯ ಎದೆಹಾಲು ಅತಿ ಅವಶ್ಯವಾಗಿರುತ್ತದೆ. ಮಗು ಜನಿಸಿದ ಆರು ತಿಂಗಳವರೆಗೆ ತಾಯಿಯ ಎದೆಹಾಲು ಮಾತ್ರ ನೀಡಬೇಕು. ಇದರಿಂದ ಜೀವನಾದ್ಯಂತ ಮನುಷ್ಯ ಆರೋಗ್ಯವಾಗಿರಲು ನೆರವಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಮಗುವಿಗೆ 6 ತಿಂಗಳ ನಂತರ ಎದೆಹಾಲು ಜೊತೆಗೆ ಉಳಿದ ಆಹಾರವನ್ನು ತಿನ್ನಿಸಬೇಕು, ಎದೆಹಾಲನ್ನು ಮಗುವಿಗೆ 2 ವರ್ಷ ಕಳೆಯುವವರೆಗೂ ನೀಡಬಹುದು.

ಮಗು ಹುಟ್ಟಿದ ತಕ್ಷಣ ತಾಯಿಯ ಎದೆಯಲ್ಲಿರುವ ಹಾಲಿನಲ್ಲಿ ಇಮ್ಯುನೋಗ್ಲೋಬಿನ್ ಐಜಿಎಯಿದ್ದು ಸಾಂಕ್ರಾಮಿಕ ಜೀವಿಗಳ ವಿರುದ್ಧ ರಕ್ಷಣಾತ್ಮಕ ಪದರವನ್ನು ಅದು ಒದಗಿಸುತ್ತದೆ. ಆ ಮೂಲಕ ಶಿಶುಗಳನ್ನು ಸಾಂಕ್ರಾಮಿಕ ರೋಗಗಳಿಂದ ತಡೆಗಟ್ಟಬಹುದು. ತಾಯಿಯ ಎದೆಹಾಲು ಮಕ್ಕಳಿಗೆ ಉತ್ತಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ನೀಡುತ್ತದೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top