ದೇವರು

ಶಿವನ ಅರ್ಧನಾರೀಶ್ವರ ರೂಪದ ಹಿಂದಿರುವ ರಹಸ್ಯದ ಹಾಗೂ ಕುತೂಹಲಕಾರಿಯಾದ ವಿಷ್ಯದ ಬಗ್ಗೆ ತಪ್ಪದೆ ತಿಳ್ಕೊಳ್ಳಿ .

ಶಿವನ ಅರ್ಧನಾರೀಶ್ವರ ರೂಪದ ಹಿಂದಿರುವ ರಹಸ್ಯದ ಹಾಗೂ ಕುತೂಹಲಕಾರಿಯಾದ ವಿಷ್ಯದ ಬಗ್ಗೆ ತಪ್ಪದೆ ತಿಳ್ಕೊಳ್ಳಿ .

ಶಿವನ ಅರ್ಧನಾರೀಶ್ವರ ರೂಪದ ಹಿಂದಿರುವ ರಹಸ್ಯ. ಇದು ಪ್ರತಿಯೊಬ್ಬರೂ ಕೂಡ ತಿಳಿದುಕೊಳ್ಳಲೇ ಬೇಕಾಗಿರುವ ವಿಷಯ.

ಶಿವನ ಅರ್ಧನಾರೀಶ್ವರ ರೂಪದ ವಿಷಯವಾಗಿ ಹಲವಾರು ಸಂದೇಹಗಳು ನಮ್ಮ ಮನಸ್ಸಿನಲ್ಲಿ ಮೂಡುತ್ತವೆ. ಆದರೂ ಇದರ ಬಗ್ಗೆ ವೇದಗಳಲ್ಲಿ ವಿವರವಾಗಿ ವಿವರಿಸಿದ್ದಾರೆ. ಸೃಷ್ಟಿಯ ಪ್ರಾರಂಭದಲ್ಲಿ ಬ್ರಹ್ಮ ದೇವರು ಮಾಡಿದ ಮಾನಸಿಕ ಸೃಷ್ಟಿಯನ್ನು ವಿಸ್ತರಿಸಲು ಸಾಧ್ಯವಾಗಲಿಲ್ಲ ಇದರಿಂದ ತೀವ್ರ ನಿರಾಸೆಗೊಂಡರು ಆಗ ಅಶರೀರವಾಣಿಯೊಂದು “ಮೈಥುನೀ” ಸೃಷ್ಟಿ ಮಾಡೆಂದು ಅರ್ಪಿಸಿತು.
ಬ್ರಹ್ಮ ಈ ಮಾತುಗಳನ್ನು ಅನುಸರಿಸಿ ಮೈಥುನಿ ಸೃಷ್ಟಿಯನ್ನು ಮಾಡಲು ಹೊರಟಾಗ ಸ್ತ್ರೀ ಜನೋತ್ಪತ್ತಿ ಆಗದೆ, ಮತ್ತೆ ವಿಫಲನಾದನು ಶಿವನ ಸಹಕಾರವಿಲ್ಲದೆ ಸ್ತ್ರೀ ಜನೋತ್ಪತ್ತಿ, ಸಾಧ್ಯವಿಲ್ಲ ಆದುದರಿಂದ ಶಿವನನ್ನು ಪ್ರಸನ್ನಗೊಳಿಸಲು ಬ್ರಹ್ಮ ದೇವನು ಕಠೋರ ತಪಸ್ಸನ್ನು ಮಾಡಿದನು.

 

ಹಲವು ವರ್ಷಗಳ ಕಠೋರ ತಪಸ್ಸನ್ನು ಮಾಡಿದ ನಂತರ ಪ್ರಸನ್ನನಾದ ಉಮಾ ಮಹೇಶ್ವರ , ಅರ್ಧನಾರೀಶ್ವರ ರೂಪದಲ್ಲಿ ಬ್ರಹ್ಮನಿಗೆ ದರ್ಶನ ನೀಡಿದನು.ಆದಿ ದೇವನ ದಿವ್ಯ ಸ್ವರೂಪವನ್ನು ನೋಡಿದ ಬ್ರಹ್ಮ ಪರಮಾನಂದ ಭರಿತರಾಗಿ ಸಾಷ್ಟಾಂಗ ಪ್ರಣಾಮ ಮಾಡಿದ. “

ವತ್ಸಾ , ನಿನ್ನ ಇಚ್ಛೆ ನನಗೆ ಗೊತ್ತಿದೆ . ಸೃಷ್ಟಿ ಮುಂದುವರಿಯಬೇಕು ಎಂಬ ಸಂಕಲ್ಪದಿಂದ ನೀನು ಮಾಡಿದ ಕಠೋರ ತಪಸ್ಸಿಗೆ ಮೆಚ್ಚಿಕೊಂಡಿದ್ದೇನೆ ಎಂದು ಹೇಳಿದ ಶಿವ. ತನ್ನ ಶರೀರದಿಂದ ಉಮಾ ದೇವಿಯನ್ನು ಬೇರ್ಪಡಿಸಿದ. ಹೀಗೆ ಶಿವನ ದೇಹದಿಂದ ಅರ್ಧ ಭಾಗವಾದ ಪರಾಶಕ್ತಿ ಅಮ್ಮನವರಿಗೆ ಬ್ರಹ್ಮದೇವ ಸಾಷ್ಟಾಂಗ ನಮಸ್ಕಾರ ಮಾಡಿ ಹೀಗೆ ಹೇಳಿದನು.
ಸೃಷ್ಟಿಯ ಆರಂಭದಲ್ಲಿ ನಿನ್ನ ಪ್ರಾಣನಾಥನಾದ ಆದಿದೇವ ನನ್ನನ್ನು ಸೃಷ್ಟಿಸಿದ. ಆತನ ಆದೇಶದ ಅನುಸಾರವಾಗಿಯೇ ಸಮಸ್ತ ದೇವತೆಗಳನ್ನು ಮಾನಸಿಕವಾಗಿ ಸೃಷ್ಟಿಸಿದೆ .ಅನೇಕ ತೊಂದರೆಗಳಿಂದ ಸೃಷ್ಟಿಯನ್ನು ಮುಂದುವರಿಸಲು ವಿಫಲನಾಗಿದ್ದೇನೆ. ಆದುದರಿಂದ ಈಗ ಸ್ತ್ರೀ ಪುರುಷ ಸಮಾಗಮದ ಮೂಲಕ ಪ್ರಜೆಗಳ ಉತ್ಪತ್ತಿ ಮಾಡಿ ಸೃಷ್ಟಿಯನ್ನು ಮುಂದುವರಿಸುತ್ತೇನೆ. ಆದರೆ ಇದುವರೆಗೂ ಸ್ತ್ರೀಯನ್ನು ಸೃಷ್ಟಿಸಲು ನನ್ನಿಂದ ಆಗಲಿಲ್ಲ .

 

 

ತಾಯಿ, ನೀನು ಸಂಪೂರ್ಣ ಸೃಷ್ಟಿಗೆ, ಶಕ್ತಿಗಳಿಗೆ ಉಗಮ ಸ್ಥಾನ. ಹೇ ಮಾತೆ ನಾರಿ ಕುಲವನ್ನು ಸೃಷ್ಟಿಸುವ ಶಕ್ತಿಯನ್ನು ನನಗೆ ಕರುಣಿಸು ಎಂದು ಮತ್ತೊಮ್ಮೆ ಪ್ರಾರ್ಥಿಸುತ್ತಿದ್ದೇನೆ . ಚರಾಚರ ಸೃಷ್ಟಿ ವೃದ್ಧಿಸಲು, ನನ್ನ ಪುತ್ರನಾದ ದಕ್ಷನಿಗೆ ಮಗಳಾಗಿ ಅವತಾರವೆತ್ತಿ ನನ್ನನ್ನು ಕರುಣಿಸು ತಾಯಿ” ಎಂದು ಬ್ರಹ್ಮದೇವನು ಬೇಡಿಕೊಂಡನು.

ಬ್ರಹ್ಮನ ಕೋರಿಕೆಯನ್ನು ಮನ್ನಿಸಿದ ಶಿವಾನಿ, ತಥಾಸ್ತು ಎಂದು ಸ್ತ್ರೀಯನ್ನು ಸೃಷ್ಟಿಸುವ ವರವನ್ನು ಬ್ರಹ್ಮನಿಗೆ ಕರುಣಿಸಿದಳು. ಲಕ್ಷ್ಯ ಸಾಧನೆಗೆ ತನ್ನ ಭ್ರೂ ಮಧ್ಯದಿಂದ ತನಗೆ ಸಮನಾದ ಒಂದು ಶಕ್ತಿಯನ್ನು ಬಿಡುಗಡೆಗೊಳಿಸಿದಳು. ಆ ದಿವ್ಯ ತೇಜೋ ರೂಪವನ್ನು ನೋಡಿದ ಶಿವ ನಸು ನಗೆಯಿಂದ ದೇವಿ, ಬ್ರಹ್ಮ ತನ್ನ ತಪಸ್ಸಿನಿಂದ ನಿನ್ನನ್ನು ಆರಾಧಿಸಿದ. ನೀನು ಆತನನ್ನು ಅನುಗ್ರಹಿಸಿ ಆತನ ಇಚ್ಛೆಯನ್ನು ಪೂರೈಸು ಎಂದು ಹೇಳಿದ .
ಪರಮೇಶ್ವರನ ಆಜ್ಞೆಯನ್ನು ಶಿರಸಾ ಪಾಲಿಸಿದ ಜಗನ್ಮಾತೆ ಬ್ರಹ್ಮನ ಕೋರಿಕೆಯಂತೆ ದಕ್ಷನ ಮಗಳಾದಳು. ಹೀಗೆ ಬ್ರಹ್ಮನಿಗೆ ಅನುಪಮ ಶಕ್ತಿಯನ್ನು ಕರುಣಿಸಿದ ಶಿವಾನಿ ಮಹಾದೇವನ ಶರೀರದೊಳಗೆ ಪ್ರವೇಶಿಸಿದಳು. ತನ್ನ ಆಸೆ ನೆರವೇರಿದ್ದರಿಂದ, ಬ್ರಹ್ಮದೇವ ಅಂದಿನಿಂದ ಪರಮೇಶ್ವರನನ್ನು ಸ್ಮರಿಸುತ್ತಾ ಸ್ತ್ರೀ ಸೃಷ್ಟಿಯನ್ನು ಮುಂದುವರಿಸಿದನು .

 

 

ಹೀಗೆ ಶಿವ , ಶಕ್ತಿ ಪರಸ್ಪರ ಬೇರೆಯಾಗಿ ಸೃಷ್ಟಿಗೆ ಮೂಲ ಕಾರಣರಾದರು. ಹೂವಿನಲ್ಲಿ ಪರಿಮಳ , ಚಂದ್ರನಲ್ಲಿ ಕಾಂತಿ, ಸೂರ್ಯನಲ್ಲಿ ತೇಜಸ್ಸು , ವಿಕ್ಷಿಪ್ತವಾಗಿರುವಂತೆ ಶಿವನಲ್ಲಿ ಶಕ್ತಿಯೂ ವಿಕ್ಷಿಪ್ತರಾಗಿದ್ದಾರೆ. ಇದೇ ಅರ್ಧನಾರೀಶ್ವರನ ರಹಸ್ಯ .

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top