fbpx
ಮನೋರಂಜನೆ

“ಯಾರಾದರೂ ನಿಮ್ಮನ್ನ ಮಂಚಕ್ಕೆ ಕರೆದರೆ ಹೀಗ್ ಮಾಡಿ” ಎಂದು ನಟಿಯರಿಗೆ ಸಲಹೆ ಕೊಟ್ರು ಆಲಿಯಾ ಭಟ್.

ಸಿನಿಮಾಗಳಲ್ಲಿ ನಟಿಸಲು ಅವಕಾಶ ಕೊಡುವ ಆಮಿಷವೊಡ್ಡಿ ಯುವನಟಿಯರನ್ನು ಮಂಚಕ್ಕೆ ಕರೆಯುವ ಕಾಯಿಲೆ ಎಲ್ಲ ಚಿತ್ರರಂಗಗಳಿಗೂ ಸಾಂಕ್ರಾಮಿಕವಾಗಿ ಹರಡಿಕೊಂಡಂತಿದೆ.. ಇತ್ತೀಚಿನ ದಿನಗಳಲ್ಲಿ ದೇಶವ್ಯಾಪಿ ಭಾರಿ ಚರ್ಚೆಯನ್ನು ಹುಟ್ಟುಹಾಕಿರುವ ಇಂತಹ ಅನಿಷ್ಟ ಪಿಡುಗಿನ ವಿರುದ್ಧ ದಕ್ಷಿಣ ಭಾರತ ಚಿತ್ರರಂಗದ ಎಲ್ಲಾ ಭಾಷೆಯ ಪ್ರಸಿದ್ಧ ಯುವ ನಟಿಯರನೇಕರು ತಾವು ಅನುಭವಿಸಿದ್ದ ಕಾಸ್ಟಿಂಗ್ ಕೌಚ್ ಮನೋ ವ್ಯಾಕುಲವನ್ನು ಸಾಂದರ್ಭಿಕವಾಗಿ ಬಿಚ್ಚಿಡುತ್ತಿದ್ದಾರೆ.

 

 

ಇತ್ತೀಚಿಗೆ ಕಾಸ್ಟಿಂಗ್ ಕೌಚ್ ವಿರುದ್ಧ ರೊಚ್ಚಿಗೆದ್ದು ನಡುರಸ್ತೆಯಲ್ಲಿ ಬಟ್ಟೆಗಳನ್ನು ಬಿಚ್ಚಿ ಅರೆ ಬೆತ್ತಲೆ ಪ್ರತಿಭಟನೆ ನಡೆಸಿದೇಟಿಗೆ ತೆಲುಗು ಚಿತ್ರರಂಗದೊಳಗೆ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿ ಇಡೀ ದೇಶದಾದ್ಯಂತ ಸುದ್ದಿಗೆ ಗ್ರಾಸವಾಗಿತ್ತು. ಅದಾದೇಟಿಗೆ ಹಲವು ಚಿತ್ರರಂಗದ ನಟಿಯರೂ ಕೂಡ ಚಿತ್ರರಂಗದಲ್ಲಿ ತಮಗಾಗುತ್ತಿರುವ ಚಿತಾಹಿಂಸೆಯನ್ನು ಒಂದರ ಹಿಂದೊಂದರಂತೆ ಬಿಚ್ಚಿಡುತ್ತಾ ಬಂದಿದ್ದಾರೆ. ಇದೀಗ ಬಾಲಿವುಡ್ ಕ್ಯೂಟ್ ಕ್ವೀನ್ ಎಂದೇ ಹೆಸರಾಗಿರುವ ಆಲಿಯಾ ಭಟ್ ಇದೇ ಮೊದಲ ಬಾರಿಗೆ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ.

 

 

ಈ ಬಗ್ಗೆ ಮಾತನಾಡಿರುವ ಆಲಿಯಾ ಭಟ್ “ಚಿತ್ರರಂಗದಲ್ಲಿ ಇದುವರೆಗೂ ನಾನು ಆ ರೀತಿಯ ಸಮಸ್ಯೆಗಳನ್ನು ಎದುರಿಸಿಲ್ಲ, ಹಾಗಂತ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ನಡೆಯೋದಿಲ್ಲ ಎಂದು ಅರ್ಥವಲ್ಲ. ಸಿನಿಮಾ ಅವಕಾಶಕ್ಕಾಗಿ ಕಷ್ಟಪಡುತ್ತಿರುವ ಹುಡುಗಿಯರನ್ನು ಕೆಲವರು ದುರಪಯೋಗ ಪಡಿಸಿಕೊಳ್ಳುತ್ತಾರೆ. ಪಾತ್ರ ಕೊಡುವುದಾಗಿ ಹೇಳಿ ಯಾರಾದರೂ ನಿಮ್ಮನ್ನು ಮಂಚಕ್ಕೆ ಆಹ್ವಾನಿಸಿದರೆ ಅಂತಹ ಹೆಣ್ಣು ಮಕ್ಕಳು ಮೊದಲು ನಿಮ್ಮ ಕುಟುಂಬದವರಿಗೆ ಹೇಳಿ. ನಂತರ ಪೊಲೀಸರಿಗೆ ದೂರು ನೀಡಿ  ಪಲ್ಲಂಗಕ್ಕೆ ಕರೆಯುವ ಕೆಟ್ಟ ವ್ಯಕ್ತಿಗಳಿಗೆ ಸರಿಯಾದ ಪಾಠ ಕಲಿಸಿ” ಎಂದು ಸಲಹೆ ನೀಡಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top