fbpx
ಮನೋರಂಜನೆ

ವರ್ಮಾ ಸಿನಿಮಾದಲ್ಲಿ ನಟಿಸಲಿದ್ದಾರೆ ಡಾಲಿ ಧನಂಜಯ್

ಸೂರಿ ನಿರ್ದೇಶನದ ಟಗರು ಚಿತ್ರದಲ್ಲಿ ಡಾಲಿಯಾಗಿ ಅಬ್ಬರಿಸಿರುವವರು ಧನಂಜಯ್. ಟಗರು ಚಿತ್ರದ ನಂತರ ಧನಂಜಯ್ ನಿಂತಲ್ಲಿ ಕುಂತಲ್ಲಿ ಸುದ್ದಿಯ ಸುಗ್ಗಿ. ಬಹುಶಃ ಅಂಥಾದ್ದೊಂದು ಪಾತ್ರವನ್ನು ಧನಂಜಯ್ ನಿರ್ವಹಿಸಿದ್ದಾರೆಂದು ಯಾರೂ ಊಹಿಸಿರಲಿಕ್ಕಿಲ್ಲ. ಆದರೆ ಸೂರಿ ರೂಪಿಸಿರೋ ಆ ಪಾತ್ರದಲ್ಲಿನ ಅಬ್ಬರದ ನಟನೆಯ ಮೂಲಕ ಧನಂಜಯ್ ಸಿನಿಮಾ ಜೀವನದ ಮತ್ತೊಂದು ಆಯಾಮದತ್ತ ಹೊರಳಿಕೊಳ್ಳೋ ಲಕ್ಷಣಗಳೂ ದಟ್ಟವಾಗಿವೆ. ಇದಕ್ಕೆ ಸಾಕ್ಷಿ ಎಂಬಂತೆ ಇದೀಗ ರಾಮ್ ಗೋಪಾಲ್ ವರ್ಮಾ ಅವರ ಚಿತ್ರದಲ್ಲಿ ಧನಂಜಯ್ ನಟಿಸುತ್ತಿದ್ದಾನಂತೆ.

 

 

ಟಗರು ಚಿತ್ರವನ್ನು ರಾಂಗೋಪಾಲ್ ವರ್ಮಾ ನೋಡಿ ಥ್ರಿಲ್ ಆಗಿದ್ದಾರೆ. ಇದು ಸೂರಿ ನಿರ್ದೇಶನದ ಅದ್ಭುತ ಸೃಷ್ಟಿ ಅಂತ ಕೊಂಡಾಡಿರುವ ವರ್ಮಾ ವಿಶೇಷವಾಗಿ ಮಾನ್ವಿತಾ ಮತ್ತು ಧನಂಜಯ್ ಅವರ ನಟನೆಯನ್ನು ನಟನೆಯನ್ನು ಕಂಡು ಫಿದಾ ಆಗಿರುವ ವರ್ಮಾ ಈ ಹಿಂದೆ ತಮ್ಮ ಮುಂದಿನ ಚಿತ್ರದಲ್ಲಿ ನಟಿಸುವಂತೆ ಮಾನ್ವಿತಾಗೆ ಆಫರ್ ಮಾಡಿ ಜೊತೆಗೆ ಅಡ್ವಾನ್ಸ್ ಹಣವನ್ನೂ ಸಂದಾಯ ಮಾಡಿದ್ದರು. ಇದೀಗ ಧನಂಜಯ್ ಅವರಿಗೂ ಮುಂದಿನ ಚಿತ್ರದಲ್ಲಿ ನಟಿಸುವಂತೆ ವರ್ಮಾ ಆಫರ್ ನೀಡಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ.

 

 

ಟಗರು ಚಿತ್ರ ನೋಡಿದ ನಂತರ ವರ್ಮಾ ಖುದ್ದಾಗಿ ಸೂರಿ ಮತ್ತು ಟೀಮನ್ನು ಭೇಟಿಯಾಗಿ ಸಂತಸ ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಮಾನ್ವಿತಾ ಹರೀಶ್, ಡಾಲಿ ಧನಂಜಯ್ ಕೂಡಾ ಜೊತೆಗಿದ್ದರು. ಇದೇ ಸಂದರ್ಭದಲ್ಲಿ ಧನಂಜಯ್ ಜೊತೆ ವರ್ಮಾ ಮಾತುಕತೆ ನಡೆಸಿದ್ದರಂತೆ. ಈ ಸಂಬಂಧ ಹೈದ್ರಾಬಾದ್ ನಲ್ಲಿ ಒಂದು ಸುತ್ತಿನ ಮಾತುಕತೆ ಕೂಡ ವರ್ಮಾ ಮತ್ತು ಧನಂಜಯ್ ಮುಗಿಸಿದ್ದಾರಂತೆ. ಮೂಲಗಳ ಪ್ರಕಾರ ವರ್ಮಾ ಅವರ ಮುಂದಿನ ಚಿತ್ರದಲ್ಲಿ ನೆಗಿಟಿವ್ ರೋಲ್ ಮಾಡಲಿದ್ದಾರಂತೆ,

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top