fbpx
ಸಮಾಚಾರ

ಓಯ್ ಗಣಿಧಣಿಗಳೇ ನನ್ನ ಎಕ್ಕಡಾ ಕೂಡ ನೀವ್ ಕೊಂಡ್​ಕೊಳ್ಳೋಕಾಗಲ್ಲ- ವೆಂಕಟ್ ಅವಾಜ್

ತನ್ನ ಹುಚ್ಚಾಟಗಳಿಂದಲೇ ಹೆಸರವಾಸಿಯಾಗಿ ಕಂಡ ಕಂಡವರಿಗೆಲ್ಲಾ ಪುಕ್ಸಟ್ಟೆ ಅವಾಜು ಬಿಟ್ಟು, ಒಂದಿಬ್ಬರಿಗೆ ಗೂಸಾ ಕೂಡ ಕೊಟ್ಟು ಯದ್ವಾ ತದ್ವಾ ಫೇಮಸ್ ಆದವರು ಫೈರಿಂಗ್ ಸ್ಟಾರ್ ಹುಚ್ಚಾ ವೆಂಕಟ್. ಇಷ್ಟುದಿನ ತನ್ನ ವೈವಿಧ್ಯಮಯ ತಿಕ್ಕಲಾಟಗಳಿಂದಲೇ ವಿವಾದಗಳನ್ನು ಹುಟ್ಟುಹಾಕಿ ರಂಕಲು ಎಬ್ಬಿಸಿಕೊಂಡು ಸುದ್ದಿಯಾಗುತ್ತಿದ್ದ ಕಾಂಟ್ರಾವರ್ಷಿಯಲ್ ಕಿಂಗ್ ಹುಚ್ಚ ವೆಂಕಟ್ ಇದೀಗ ನೇರವಾಗಿ ಗಣಿಧಣಿಗಳಿಗೆಯೇ ಸವಾಲಾಕಿದ್ದಾನೆ.

 

 

ಹೌದು, ಮೊನ್ನೆ ತಾನೇ ಅತಂತ್ರವಾದ ಚುನಾವಣೆ ಫಲಿತಾಂಶದಲ್ಲಿ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಬಿಜೆಪಿ ಪಕ್ಷ ಬಹುಮತ ಸಾಬೀತುಪಡಿಸಲು ಪಟ್ಟ ಪರಿಶ್ರಮ ಮಾಧ್ಯಮಗಳ ಮುಖಾಂತರ ಬಹುಷಃ ಎಲ್ಲರೂ ನೋಡಿರುತ್ತೀರಿ. ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನ ಸೆಳೆಯಲು ಕೋಟಿ ಕೋಟಿ ಹಣದ, ಮಂತ್ರಿಗಿರಿಗಳ ಆಫರ್ ನೀಡಿದ್ದರು ಎನ್ನಲಾಗಿರುವ ಗಣಿಧಣಿಗಳ ವಿರುದ್ಧ ಹುಚ್ಚ ವೆಂಕಟ್ ಸೈಲೆಂಟಾಗಿ ಅವಾಜ್ ಹಾಕಿದ್ದಾರೆ.

 

 

ಈ ವಿಚಾರವಾಗಿ ತಮ್ಮ ಫೇಸ್ಬುಕ್ ಖಾತೆಯಲ್ಲಿ ವಿಡಿಯೋವೊಂದನ್ನು ಅಪ್ಲೋಡ್ ಮಾಡಿರುವ ಹುಚ್ಚ ವೆಂಕಟ್ ಯಾವುದೇ ಆಮಿಷಗಳಿಗೆ ಬಲಿಯಾಗದೆ ಕಾಂಗ್ರೆಸ್ ಮತ್ತು ಜೆಡಿಎಸ್ ನಲ್ಲಿಯೇ ಉಳಿದುಕೊಂಡ ಶಾಸಕರನ್ನು ಅಭಿನಂದಿಸಿದ್ದಾರೆ. ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯನಿಗೆ ಇದೇ ರೀತಿ ಸಪೋರ್ಟ್​ ಮಾಡಿ ಎಂದು ಶಾಸಕರಲ್ಲಿ ಕೇಳಿಕೊಂಡಿರುವ ಹುಚ್ಚ ವೆಂಕಟ್ ಯಾರಾದರೂ ಗಣಿಧಣಿಗಳು ಏನಾದರೂ ಆಮಿಷವೊಡ್ಡಿದರೆ “ನನ್ ಸ್ಟೈಲ್ ನಲ್ಲಿ ನನ್ನ ಎಕ್ಕಡಾ ಕೂಡ ಕೊಂಡುಕೊಳ್ಳೋದಕ್ಕೆ ಆಗಲ್ಲ” ಎಂದು ಹೇಳಿ ಎಂಬ ಸಲಹೆ ನೀಡಿದ್ದಾರೆ.

ಹುಚ್ಚ ವೆಂಕಟನ ಮಾತುಗಳನ್ನು ಆತನ ಬಾಯಿಯಲ್ಲೇ ಕೇಳಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top