ದೇವರು

ಹೆಣ್ಣು ದೇವರಿಗೆ ಉಡಿ ತುಂಬುವುದರ ಹಿಂದೆ ಇರುವ ಉದ್ದೇಶ ,ಅದರ ಮಹತ್ವ ಹಾಗೂ ಅವನ್ನು ಕ್ರಮಬದ್ಧವಾಗಿ ಹೇಗೆ ಮಾಡಬೇಕು ಎಂಬುವುದರ ಸಂಪೂರ್ಣ ಮಾಹಿತಿ ನಿಮಗಾಗಿ .

ಹೆಣ್ಣು ದೇವರಿಗೆ ಉಡಿ ತುಂಬುವುದರ ಹಿಂದೆ ಇರುವ ಉದ್ದೇಶ ,ಅದರ ಮಹತ್ವ ಹಾಗೂ ಅವನ್ನು ಕ್ರಮಬದ್ಧವಾಗಿ ಹೇಗೆ ಮಾಡಬೇಕು ಎಂಬುವುದರ ಸಂಪೂರ್ಣ ಮಾಹಿತಿ ನಿಮಗಾಗಿ .

ದೇವಿಗೆ ಉಡಿಯನ್ನು ಹೇಗೆ ತುಂಬಬೇಕು ? ಉಡಿಯ ಮಹತ್ವ ಏನು ?

 

 

ದೇವಿಗೆ ಉಡಿ ತುಂಬಿಸುವುದು ಎಂಬ ಮಾತನ್ನು ನಾವು ಸಾಮಾನ್ಯವಾಗಿ ಆಗಾಗ್ಗೆ ಕೇಳಿರುತ್ತೇವೆ. ಶಾಸ್ತ್ರಜ್ಞರು, ಜ್ಯೋತಿಷ್ಯರು ನಮ್ಮ ಹಿರಿಯರು ಈ ಸಂಪ್ರದಾಯ ಬಗ್ಗೆ ಆಗ್ಗಾಗ್ಗೆ ಹೇಳುವುದನ್ನು ಕೇಳಿರುತ್ತೇವೆ. ಈ ಉಡಿಯನ್ನು ಹೇಗೆ ತುಂಬಿಸುವುದು ಎಂದು ನಿಮಗೆ ಗೊತ್ತೆ ?

ಸಾಮಾನ್ಯವಾಗಿ ಊರಿನ ದೇವಿಯ ದೇವತೆ , ಗ್ರಾಮ ದೇವತೆ ಅಥವಾ ನೀವು ಹೋಗುವ ಯಾವುದೇ ದೇವಿಯ ದೇವಸ್ಥಾನಕ್ಕೆ, ನೀವು ನಿಮ್ಮ ಆಸೆಗಳನ್ನು ಪೂರೈಸಿಕೊಳ್ಳಲು ಹರಕೆಯನ್ನು ಹೊತ್ತಿರುತ್ತಾರೆ. ನಮ್ಮ ಕೆಲಸಗಳು ಯಶಸ್ವಿಯಾಗಿ ಯಾವುದೇ ಅಡೆತಡೆ ಇಲ್ಲದೆ ಪೂರ್ಣಗೊಂಡರೆ ದೇವಿಗೆ ಉಡಿಯನ್ನು ತುಂಬಿಸುತ್ತೇವೆ ಎಂದು ದೇವಿಯಲ್ಲಿ ಬೇಡಿಕೊಳ್ಳುತ್ತಾರೆ .
ನೀವು ಹೀಗೆ ಬೇಡಿಕೊಂಡ ನಂತರ ,ನಿಮ್ಮ ಕೆಲಸ ಯಶಸ್ವಿಯಾಗಿ ಯಾವುದೇ ವಿಜ್ಞವಿಲ್ಲದೆ,ಅಡೆ, ತಡೆ ಪೂರ್ಣವಾದ ನಂತರ ದೇವಿಗೆ ಹರಕೆಯನ್ನು ತೀರಿಸುತ್ತಾರೆ ಎಂದರೆ ದೇವಿಗೆ ಉಡಿಯನ್ನು ಸಮರ್ಪಿಸುತ್ತಾರೆ. ಈ ಉಡಿ ತುಂಬುವುದು ಹೇಗೆ ? ಏನು ಮಾಡಬೇಕು ? ಯಾವೆಲ್ಲ ವಸ್ತುಗಳು ಬೇಕು ? ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ

ಭಕ್ತರು ತಮ್ಮ ಕೋರಿಕೆಗಳು ಈಡೇರಿದಾಗ, ದೇವಿಗೆ ಭಕ್ತಿ ,ಶ್ರದ್ಧೆಯಿಂದ ಉಡಿಯನ್ನು ತುಂಬಿಸುತ್ತಾರೆ. ಆ ಉಡಿಯಲ್ಲಿ ಏನೇನು ಸಾಮಗ್ರಿಗಳು ಇರಬೇಕು ? ಯಾವೆಲ್ಲಾ ಸಾಮಗ್ರಿಗಳು ಬೇಕು ? ಹೂ, ಹಣ್ಣು ಕಾಯಿಯನ್ನು ಸಮರ್ಪಿಸುವುದರ ಜೊತೆಗೆ ಉಡಿಯಲ್ಲಿ ಯಾವೆಲ್ಲಾ ಸಾಮಗ್ರಿಗಳು ಇರಬೇಕು ? ಎಂಬುದನ್ನು ತಿಳಿದುಕೊಳ್ಳೋಣ.

 

 

1.ದೇವಿಗೆ ನೂಲಿನ ಅಥವಾ ರೇಷ್ಮೆ ಸೀರೆಯನ್ನು ಹೊಸದನ್ನು ಅರ್ಪಿಸಬೇಕು. ಆದು 6 ಗಜದ ಸೀರೆಗಿಂತ ಒಂಬತ್ತು ಗಜದ ಸೀರೆಯನ್ನು ಅರ್ಪಿಸುವುದು ಯೋಗ್ಯವಾದದ್ದು ಮತ್ತು ಉತ್ತಮ.
2.ತಟ್ಟೆಯಲ್ಲಿ ಸೀರೆಯನ್ನಿಟ್ಟು, ಸೀರೆಯ ಮೇಲೆ ಸ್ವಲ್ಪ ಅಕ್ಕಿ, ಕುಪ್ಪಸದ ಬಟ್ಟೆ ಮತ್ತು ತೆಂಗಿನಕಾಯಿಯನ್ನು ಇಡಬೇಕು. ತೆಂಗಿನಕಾಯಿಯ ಜುಟ್ಟು ದೇವಿಯ ಕಡೆಗೆ ಇರಬೇಕು.
3.ಈ ಎಲ್ಲ ವಸ್ತುಗಳನ್ನು ಬೊಗಸೆಯಲ್ಲಿ ತೆಗೆದುಕೊಂಡು ನಮ್ಮ ಎದೆಯ ಸಮೀಪ ಹಿಡಿದು ಶರಣಾಗತ ಭಾವದಿಂದ ದೇವಿಯ ಎದುರು ನಿಲ್ಲಬೇಕು.
4. “ದೇವಿಯಿಂದ ಚೈತನ್ಯವು ಸಿಗಲಿ ಮತ್ತು ನನ್ನ ಆಧ್ಯಾತ್ಮಿಕ ಉನ್ನತಿಯಾಗಲಿ” ಎಂದು ಭಾವಪೂರ್ಣವಾಗಿ ಪ್ರಾರ್ಥನೆ ಮಾಡಿ ಉಡಿಯನ್ನು ದೇವಿಯ ಚರಣಗಳಲ್ಲಿ ಅರ್ಪಿಸಬೇಕು. ನಂತರ ಉಡಿಯ ಸಾಮಗ್ರಿಗಳ ಮೇಲೆ ಸ್ವಲ್ಪ ಅಕ್ಕಿಯನ್ನು ಅರ್ಪಿಸಬೇಕು.

ಇದನ್ನೇ ಹೀಗೆ ಶಾಸ್ತ್ರ ಸಂಪ್ರದಾಯವಾಗಿ ಮಾಡುವ ಕೆಲಸಕ್ಕೆ ದೇವಿಗೆ ಉಡಿ ತುಂಬುವುದು ಎಂದು ಹೆಸರು.ಭಕ್ತಿ ಶ್ರದ್ಧೆಯಿಂದ ದೇವಿಗೆ ಭಕ್ತರು ಉಡಿಯನ್ನು ಅವರ ಅಗತ್ಯತೆಗೆ ತಕ್ಕಂತೆ ಉಡಿಯನ್ನು ತುಂಬಿಸುತ್ತಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top