ವಿಶೇಷ

ಸಿರಿಯಾ ಬಗ್ಗೆ ಈ ವಿಷಯಗಳು ತಿಳಿದುಕೊಂಡರೆ ಆಶ್ಚರ್ಯದ ಜೊತೆ ಭಯ ಕೂಡ ಆಗುತ್ತೆ

ಪ್ರಪಂಚದಲ್ಲಿ ಹಲವಾರು ದೇಶಗಳಿಗೆ ಪ್ರತಿಯೊಂದು ದೇಶವೂ ಅದರದ್ದೇ ಆದ ವಿಶಿಷ್ಟತೆ ,ಭಯಾನಕತೆಯಿಂದ ಹೆಸರು ಮಾಡಿದೆ ,ಕೆಲವು ದೇಶಗಳು ಒಳ್ಳೆಯ ರೀತಿಯ ಹೆಸರು ಮಾಡಿದ್ದರೆ ಇನ್ನು ಕೆಲವು ದೇಶಗಳು ತನ್ನದೇ ಆದ ವಿಚಿತ್ರ ಆಚಾರಗಳಿಂದ ಜಗತ್ತೇ ಅದರತ್ತ ತಲೆ ಎತ್ತಿ ನೋಡುವಂತೆ ಮಾಡುತ್ತಿದೆ , ಸಿರಿಯಾ ದೇಶದಲ್ಲಿ ವಿಚಿತ್ರ ವಿಶೇಷತೆ ಗಳಿಗಿಂತ ಅಲ್ಲಿನ ಭಯಾನಕತೆ ಬಹಳ ಹೆಚ್ಚಾಗಿದೆ ಸಿರಿಯಾ ದೇಶದ ಬಗ್ಗೆ ಮಾತನಾಡುವ ಮುನ್ನ ಅದರ ಬಾವುಟದ ವಿಶೇಷತೆಯನ್ನು ತಿಳಿದುಕೊಳ್ಳೋಣ .

 

 

ಸಿರಿಯಾ ದೇಶದ ಬಾವುಟದಲ್ಲಿ ಮೂರು ಬಣ್ಣಗಳಿದ್ದು ಇದು ಸ್ವಾತಂತ್ರ್ಯ ಹಾಗೂ ಶಾಂತಿಯನ್ನು ಸೂಚಿಸುತ್ತದೆ , ಹಾಗೆಯೇ ಮಧ್ಯದಲ್ಲಿ ಇರುವ ಎರಡು ನಕ್ಷತ್ರಗಳು ಸಿರಿಯಾ ಈಜಿಪ್ಟ್ ಹಾಗೂ ಅರಬ್ ದೇಶಗಳ ಸ್ವಾತಂತ್ರ್ಯವನ್ನು ಪ್ರತಿನಿಧಿಸುತ್ತದೆ .

ಸಿರಿಯಾ ದೇಶದಲ್ಲಿ ಅಲ್ಲಿನ ಪ್ರಜೆಗಳು ಯಾವುದೇ ಧರ್ಮವನ್ನು ಪಾಲನೆ ಮಾಡಬಹುದು ಇಂಥದ್ದೇ ಧರ್ಮ ಎಂದು ಇಲ್ಲ ಆದರೆ ಇಸ್ಲಾಂ ಧರ್ಮದ ಪ್ರಭಾವ ಹೆಚ್ಚಾಗಿರುವ ಕಾರಣ ಇಲ್ಲಿನ ರಾಜನು ಸಹ ಇಸ್ಲಾಂ ಧರ್ಮಕ್ಕೆ ಸೇರಿದವರಾಗಿರಬೇಕು ಎಂದು ಅಪೇಕ್ಷಿಸುತ್ತಾರೆ .

‘ಸಿರಿಯಾ’ ಎಂಬ ಪದವು ‘ಅಸಿರಿಯಾ’ ಎಂಬ ಪದದಿಂದ ಬರುತ್ತದೆ ಅಸಿರಿಯಾ ಎಂದರೆ ರಾಜಕುಮಾರ ಎಂದು ಅರ್ಥ, ಸಿರಿಯಾದಲ್ಲಿ ಎರಡು ಕೋಟಿಯಷ್ಟು ಜನಸಂಖ್ಯೆ ಇದ್ದು ಸುಮಾರು ಇಪ್ಪತ್ತು ಸಾವಿರ ಜನ ಇಸ್ರೇಲಿನ ದೇಶಕ್ಕೆ ಸೇರಿದವರು ಇಲ್ಲಿ ಇರುತ್ತಾರೆ .

 

 

ಸಿರಿಯಾದಲ್ಲಿ ಸುಮಾರು ಅರುವತ್ತರಷ್ಟು ಶೇ ಮಂದಿ ನಿರುದ್ಯೋಗಿಗಳು ಇದ್ದಾರೆ, ತಮ್ಮ ಜೀವನಕ್ಕೆ ಬೇಕಾದ ಕನಿಷ್ಠ ಸೌಕರ್ಯಗಳನ್ನು ಮಾಡಿಕೊಳ್ಳಲಾಗದ ಪರಿಸ್ಥಿತಿಯಲ್ಲಿ ಅಲ್ಲಿನ ಯುವಕರು ಇರುತ್ತಾರೆ , ಅದಕ್ಕೆ ತಮ್ಮ ಸೌಕರ್ಯಗಳನ್ನು ನೀಗಿಸಿಕೊಳ್ಳಲು ಭಯೋತ್ಪಾದನೆಯಂತಹ ಅಡ್ಡದಾರಿಗಳನ್ನು ಹಿಡಿಯುತ್ತಾರೆ ಈ ದೇಶದಲ್ಲಿ ಸೈನಿಕರು ಹಾಗೂ ಭಯೋತ್ಪಾದಕರ ನಡುವೆ ನಿರಂತರವಾಗಿ ಯುದ್ಧ ನಡೆಯುತ್ತಲೇ ಇರುತ್ತದೆ .

ಯುದ್ಧದಿಂದ ಬೇಸತ್ತ ಅಲ್ಲಿನ ಜನರು ಇತರ ದೇಶಗಳಿಗೆ ಓಡಿಹೋಗುತ್ತಾರೆ ಸಿರಿಯಾದಲ್ಲಿ ಎಂಬತ್ತ ಏಳರಷ್ಟು ಶೇ ಜನ ಇಸ್ಲಾಂ ಧರ್ಮಕ್ಕೆ ಸೇರಿದವರಾಗಿದ್ದಾರೆ .

ಈ ದೇಶದಲ್ಲಿ ಅತಿ ಹೆಚ್ಚು ಪತ್ರಕರ್ತರನ್ನು ಮಾಧ್ಯಮದವರನ್ನು ಕೊಲೆ ಮಾಡಿರುವ ಆರೋಪ ಸಹ ಇದೆ ಇಲ್ಲಿನ ಯಾವುದೇ ಭಯೋತ್ಪಾದಕ ಕೃತ್ಯಗಳನ್ನು ಸಹ ಸೆರೆ ಹಿಡಿದು ಪ್ರಪಂಚಕ್ಕೆ ತೋರಿಸುವಂತಿಲ್ಲ ಅಂಥವರನ್ನು ನಿರ್ದಾಕ್ಷಿಣ್ಯವಾಗಿ ಕೊಲೆ ಮಾಡುತ್ತಾರೆ .

2011 ರಲ್ಲಿ ನಡೆದ ಭಯಾನಕ ಸಿವಿಲ್ ವಾರ್ ನಿಂದ ಸಿರಿಯಾ ದೇಶದಲ್ಲಿನ ಸುಮಾರು ಇಪ್ಪತ್ತೈದು ಲಕ್ಷ ನಿರಾಶ್ರಿತರು ಟರ್ಕಿಗೆ ಹೋಗಿ ನೆಲೆ ನಿಂತರೂ ಹಾಗೆಯೇ ಹನ್ನೊಂದು ಲಕ್ಷ ಸಿರಿಯನ್ ನಿರಾಶ್ರಿತರು ಲೆಬನಾನ್ ದೇಶಕ್ಕೆ ಹೊರಟು ಹೋದರು .

 

 

ಆದರೂ ಸಹ ಸಿರಿಯಾ ದೇಶದಲ್ಲಿ ಅತ್ಯಂತ ಪ್ರತಿಭಾವಂತರು ಇದ್ದು ಆಪಲ್ ಕಂಪನಿಯ ಸಿಇಒ ಹಾಗೂ ಅಮೆರಿಕದ ಖ್ಯಾತ ಕಾಮಿಡಿಯನ್ ಗಳು ಸಹ ಸಿರಿಯಾ ಮೂಲದವರೇ ಆಗಿದ್ದಾರೆ .

ಅತಿ ಹೆಚ್ಚು ಆದಾಯ ಇರುವ ದೇಶಗಳಾದ ರಷ್ಯಾ, ಜಪಾನ್ ,ಸಿಂಗಪುರ ,ಉತ್ತರ ಕೊರಿಯ ದೇಶಗಳು ಸಿರಿಯಾದ ನಿರಾಶ್ರಿತರಿಗೆ ಯಾವುದೇ ರೀತಿಯ ಹಣದ ಸಹಾಯವನ್ನು ಮಾಡಲು ನಿರಾಕರಿಸಿದ್ದಾರೆ ಆದರೆ ಆ ದೇಶಗಳ ಪೌರತ್ವವನ್ನು ನೀಡಲು ಮುಂದೆ ಬಂದಿದ್ದಾರೆ .

ಈವರೆಗೂ ಎರಡೂವರೆ ಲಕ್ಷಕ್ಕೂ ಹೆಚ್ಚು ಜನರು ಹತ್ಯೆಗೆ ಒಳಗಾಗಿದ್ದು ಸಿರಿಯಾ ದೇಶವು ಅಲ್ಲಿನ ನಾಗರಿಕರನ್ನು ಮಿಲಿಟರಿಗೆ ಸೇರಲು ಆಹ್ವಾನ ನೀಡುತ್ತಿದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top