fbpx
ಸಮಾಚಾರ

ವಾಷಿಂಗ್ ಮಷೀನ್ ಆಗಾಗ ಕೆಟ್ಟು ಹೋಗ್ತಿದೆ ಅನ್ನೋರು ಈ ವಿಧಾನ ಅನುಸರಿಸಿ ಚೆನ್ನಾಗಿ ಬಾಳಿಕೆ ಬರುತ್ತೆ

ಇತ್ತೀಚಿನ ದಿನದಲ್ಲಿ ನಾವು ಬಟ್ಟೆ ತೆಳೆಯಲು ವಾಷಿಂಗ್ ಮಷೀನ್ ಬಳಕೆ ಹೆಚ್ಚಾಗಿ ಮಾಡುತ್ತಿದ್ದೇವೆ. ಆದರೆ ನಾವು ವಾಷಿಂಗ್ ಮಷೀನ್ ಸ್ವಚ್ಛತೆಗೆ ಹೆಚ್ಚಾಗಿ ಗಮನ ಕೊಡದೆ ಇರುವುದರಿಂದ ಅದು ಬೇಗನೆ ಕೆಟ್ಟು ಹೋಗುವ ಸಂಭವ ಇರುತ್ತದೆ. ನಾವು ಬಟ್ಟೆ ಸ್ವಚ್ಛ್ ಮಡಿದ ನಂತರ ವಾಷಿಂಗ್ ಮಷೀನ್ ಕೂಡ ಸ್ವಚ್ಛ ಮಾಡಬೇಕು. ಇಲ್ಲದೆ ಹೋದರೆ ವಾಷಿಂಗ್ ಮಷೀನ್ ಕ್ರಮೇಣವಾಗಿ ಹಾಳಾಗುತ್ತ ಹೋಗುತ್ತದೆ.

 

 

ವಾಷಿಂಗ್ ಮಷೀನ್ ಹೇಗೆ ಸ್ವಚ್ ಮಾಡಬೇಕು ಎಂಬುಧರ ಬಗ್ಗೆ ತಿಳಿದು ಕೊಳ್ಳೋಣ.

 

1: ಬಟ್ಟೆ ತೊಳೆದ ಬಳಿಕ ಉಗುರು ಬೆಚ್ಚಗಿನ ನೀರನ್ನು ತೆಗೆದುಕೊಂಡು ಮಷೀನ್ ನಲ್ಲಿ ಹಾಕಿ ಬಟನ್ ಆನ್ ಮಾಡಬೇಕು. ಇನ್ನು ಕೆಲವೊಂದು ವಾಷಿಂಗ್ ಮಚಿನ್ ನಲ್ಲಿ ಆಟೋ ಕ್ಲೀನ್ ಬಟನ್ ಕೊಟ್ಟಿರುತ್ತಾರೆ.

 

2: ಬಟ್ಟೆ ತೊಳೆದ ಬಳಿಕ ಅದಕ್ಕೆ ಸ್ವಲ್ಪ ವೈಟ್ ವಿನೆಗರ್ ಅಥವಾ ನಿಂಬೆರಸ ಮತ್ತು ಸ್ವಲ್ಪ ಬೇಕಿಂಗ್ ಸೋಡಾ ಹಾಕಿ ಮತ್ತೆ ಚಾಲನೆ ಮಾಡಬೇಕು. ನಂತರ ಆ ನೀರನ್ನು ಹೊರಗೆ ಬಿಡಬೇಕು. ಹೀಗೆ ಮಾಡಿದರೆ ಮಷೀನ್ ನಲ್ಲಿದ್ದ ಕೊಳೆ ನಿವಾರಣೆಯಾಗಿರುತ್ತದೆ. ನಂತರ ಒಂದು ಒಣ ಬಟ್ಟೆಯಿಂದ ಒಳಭಾಗವನ್ನು ಒರೆಸಬೇಕು.

3: ಯಾವುದೇ ಕಾರಣಕ್ಕೂ ಮಷೀನ್ ಒಳಗಡೆ ಇಲಿಗಳು ಹೋಗದಂತೆ ನೋಡಿಕೊಳ್ಳಿ. ಇಲಿ ವಾಷಿಂಗ್ ಮಷೀನ್ ಒಳಗಡೆ ಪ್ರವೇಶ ಮಾಡಿದರೇ. ವೈರ್ ಇನ್ನಿತರೇ ಚಿಕ್ಕ ಭಾಗಗಳನ್ನು ಕಡಿದು ವಾಷಿಂಗ್ ಮಷೀನ್ ಹಾಳು ಮಾಡುವ ಸಂಭವ ಇರುತ್ತದೆ.

4: ಬಟ್ಟೆ ತೊಳೆದ ಬಳಿಕ ಸ್ವಲ್ಪ ಕಾಲ ಮುಚ್ಚಳ ತೆಗೆದಿಡಿ. ಇದರಿಂದ ವಾಸನೆ ಬರುವುದಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top