ದೇವರು

ಇಲ್ಲಿ ನೋಡಿ ಆಶ್ಚರ್ಯ ಈ ದೇವಸ್ಥಾನದ ಮೆಟ್ಟಿಲಿನ ಮೇಲೆ ತಟ್ಟಿದರೆ ಸಂಗೀತ ಸ್ವರಗಳು ಕೇಳಿಸುತ್ತವೆಯಂತೆ,ಈ ದೇವಾಲಯದ ವಿಶೇಷತೆ ಏನು ,ಈ ದೇವಾಲಯದ ಸಂಪೂರ್ಣ ಮಾಹಿತಿ ನಿಮಗಾಗಿ .

ಇಲ್ಲಿ ನೋಡಿ ಆಶ್ಚರ್ಯ ಈ ದೇವಸ್ಥಾನದ ಮೆಟ್ಟಿಲಿನ ಮೇಲೆ ತಟ್ಟಿದರೆ ಸಂಗೀತ ಸ್ವರಗಳು ಕೇಳಿಸುತ್ತವೆಯಂತೆ,ಈ ದೇವಾಲಯದ ವಿಶೇಷತೆ ಏನು ,ಈ ದೇವಾಲಯದ ಸಂಪೂರ್ಣ ಮಾಹಿತಿ ನಿಮಗಾಗಿ .

ಈ ದೇವಸ್ಥಾನದ ಮೆಟ್ಟಿಲಿನ ಮೇಲೆ ತಟ್ಟಿದರೆ, ಸಂಗೀತ ಸ್ವರಗಳು ಕೇಳಿಸುತ್ತವೆಯಂತೆ. ಇದು ಎಲ್ಲಿದೆ ? ಎಂದು ನಿಮಗೆ ಗೊತ್ತಾ ? ಈ ದೇವಸ್ಥಾನ ಯಾವುದು ಎಂದು ಗೊತ್ತಾ ?

ನಮ್ಮ ದೇಶದಲ್ಲಿ ಅನೇಕ ಪುರಾತನ , ಐತಿಹಾಸಿಕವಾದಂತಹ ದೇವಾಲಯಗಳು ಇವೆ. ಒಂದೊಂದು ದೇವಾಲಯಕ್ಕೂ ಸಹ ಒಂದೊಂದು ವಿಶೇಷತೆ ಇದೆ. ಇದಕ್ಕೆ ಸ್ಥಳ ಪುರಾಣವೂ ಸಹ ಇದೆ. ಈ ದೇವಾಲಯವನ್ನು ಯಾರು ನಿರ್ಮಿಸಿದ್ದರು ? ಯಾಕೆ ನಿರ್ಮಿಸಿದ್ದರು ? ಅದರ ಕ್ಷೇತ್ರ ಪಾಲಕ ಯಾರು ? ದೇವಾಲಯದಲ್ಲಿ ನೆಲೆಸಿರುವ ದೇವರು ಅಥವಾ ದೇವತೆಯಾದರೂ ಯಾರು ? ಆ ದೇವಾಲಯಕ್ಕೆ ಇರುವ ವಿಶೇಷತೆಗಳೇನು ? ಎಂಬ ವಿವರಗಳನ್ನು ಸಹ ನಮಗೆ ಆಯಾ ದೇವಾಲಯಗಳ ಬಳಿಗೆ ಹೋದರೆ ತಿಳಿಯುತ್ತದೆ.

 

 

ಆದರೆ ನಾವು ಈಗ ಹೇಳುವ ದೇವಾಲಯಗಳ ಬಗ್ಗೆ ಹೇಳಲು ಹೊರಟಿರುವ ದೇವಾಲಯದಲ್ಲಿ ಒಂದು ವಿಶೇಷತೆ ಇದೆ. ಭಾಗಶಃ ಅಂತಹ ವಿಶೇಷತೆಗಳನ್ನು ನೀವು ಎಂದಿಗೂ ಕೇಳಿರುವುದಿಲ್ಲ. ತಮಿಳುನಾಡಿನಲ್ಲಿ ಕುಂಭಕೋಣಂ ಪ್ರದೇಶದಿಂದ ಮೂರು ಕಿಲೋಮೀಟರ್ ದೂರದಲ್ಲಿ ಇರುವ ಒಂದು ಜಾಗದಲ್ಲಿ ಪುರಾತನ ಹಿಂದೂ ದೇವಾಲಯ ಇದೆ. ಇದನ್ನು ಹನ್ನೆರಡನೇ ಶತಮಾನದಲ್ಲಿ ಎರಡನೇ ರಾಜ ಚೋಳ ನಿರ್ಮಿಸಿದ ಎಂದು ಸ್ಥಳ ಪುರಾಣಗಳು ಹೇಳುತ್ತವೆ .
ಇನ್ನು ಈ ದೇವಾಲಯದಲ್ಲಿ ನೆಲೆಸಿರುವುದು ಐರಾವತೇಶ್ವರ ಸ್ವಾಮಿ. ಇಂದ್ರನ ಬಳಿ ಇರುವ ಐರಾವತ, ಬಿಳಿ ಆನೆ ಈ ದೇವಾಲಯದಲ್ಲಿ ಶಿವನನ್ನು ಪೂಜಿಸಿತ್ತಂತೆ, ಹಾಗಾಗಿಯೇ ಐರಾವತ ಹೆಸರಿನಲ್ಲಿ ಈ ದೇವಾಲಯದಲ್ಲಿರುವ ಶಿವನಿಗೆ ಐರಾವತೇಶ್ವರ ಸ್ವಾಮಿ ಎಂದು ಹೆಸರು ಕೂಡ ಬಂದಿದೆ.

 

 

ಈ ಐರಾವತೇಶ್ವರ ಸ್ವಾಮಿ ದೇವಾಲಯಕ್ಕೆ ಒಂದು ವಿಶೇಷತೆ ಇದೆ. ಅದೇನೆಂದರೆ ಈ ದೇವಾಲಯದ ಹೊರಾಂಗಣದಲ್ಲಿ ಒಂದು ಚಿಕ್ಕ ಮಂಟಪಕ್ಕೆ ಹೊಂದಿಕೊಂಡು ಇರುವ ಮೆಟ್ಟಿಲಿನ ಮೇಲೆ ಯಾರಾದರೂ ಕೈಯಿಂದ ತಟ್ಟಿದರೆ ಸಾಕು ಸಪ್ತ ಸ್ವರಗಳು ಕೇಳಿಸುತ್ತವೆಯಂತೆ.ಒಂದೊಂದು ಮೆಟ್ಟಿಲಿನ ಮೇಲೆ ತಟ್ಟುತ್ತಾ ಹೋದರೆ, ಒಂದೊಂದು ಸ್ವರ ನಮಗೆ ಕೇಳಿಸುತ್ತದೆ. ಆದರೆ ಈ ಮೆಟ್ಟಿಲುಗಳಿಗೆ ಇರುವ ಐತಿಹಾಸಿಕ ಹಿನ್ನೆಲೆಯಲ್ಲಿ ಇವು ಶೀಘ್ರವಾಗಿ ಹಾಳಾಗುವ ಅವಕಾಶ ಇದೆ ಎಂದು ಗುರುತಿಸಿದ ಈ ದೇವಾಲಯದ ಸಿಬ್ಬಂದಿ ಅದನ್ನು ಯಾರೂ ತಾಕದಂತೆ ಸುತ್ತಲೂ ಕಬ್ಬಿಣದ ಕಂಬಿಗಳನ್ನು ಹಾಕಿ ರಕ್ಷಿಸಿದ್ದಾರೆ.

ಈ ದೇವಾಲಯದ ಗೋಡೆಗಳ ಮೇಲೆ ಅದ್ಭುತವಾದ ಶಿಲಾ ಕೆತ್ತನೆಯೂ ಸಹ ಇದೆ. ಈ ಶಿಲೆಗಳನ್ನು ನೋಡಿದರೆ ಆಶ್ಚರ್ಯ ಚಕಿತರಾಗುತ್ತಾರೆ. ಶಿಲ್ಪಿಗಳ ಕೈ ಚಳಕಕ್ಕೆ ಬೆರಗಾಗಿ ಮಾರುಹೋಗುತ್ತಿದ್ದಾರೆ. ಏನೇ ಆಗಲಿ ಈ ದೇವಾಲಯ ತುಂಬಾ ವಿಶೇಷತೆಯಿಂದ ಕೂಡಿದ್ದು ಸಪ್ತ ಸ್ವರಗಳ, ಸಂಗೀತದ ಧ್ವನಿಯಿಂದ ತುಂಬಾ ವಿಭಿನ್ನವಾದ ದೇವಾಲಯ ಎಂದು ಖ್ಯಾತಿಯನ್ನು ಪಡೆದಿದೆ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top