ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ಡಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿಯಾಗಿ ಜಿ. ಪರಮೆಶ್ವರ್ ಇಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಕರ್ನಾಟಕ ರಾಜ್ಯದ ಇಪ್ಪತ್ತೈದನೇ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಪ್ರಮಾಣವಚನ ಸ್ವೀಕರಿಸಿದರೆ ಡಾ.ಜಿ ಪರಮೇಶ್ವರ್ ರಾಜ್ಯದ ಒಂಭತ್ತನೇ ಉಪಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಲಿದ್ದಾರೆ. ಈ ಹಿನ್ನಲೆಯಲ್ಲಿ ಇದುವರೆಗೆ ಯಾರೆಲ್ಲಾ ಉಪಮುಖ್ಯಮಂತ್ರಿಗಳಾಗಿದ್ದಾರೆ ಎನ್ನುವ ಸಣ್ಣ ಕಿರುನೋಟ ಇಲ್ಲಿದೆ.
ಕರ್ನಾಟಕ ರಾಜ್ಯದ ಉಪಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿರುವವರು.
1] ಎಸ್.ಎಂ.ಕೃಷ್ಣ [ಕಾಂಗ್ರೆಸ್] – 19, ನವೆಂಬರ್ 1992 ರಿಂದ – 09, ಡಿಸೆಂಬರ್ 1994
2] ಜೆ.ಹೆಚ್. ಪಟೇಲ್ [ಜೆಡಿಎಸ್]- 11,ಡಿಸೆಂಬರ್. 1994 ರಿಂದ – 31 ಮೇ , 1996
3]ಸಿದ್ದರಾಮಯ್ಯ [ಜೆಡಿಎಸ್]- 31,ಮೇ 1996 ರಿಂದ – 07 ಅಕ್ಟೋಬರ್ , 1999
4]ಸಿದ್ದರಾಮಯ್ಯ [ಜೆಡಿಎಸ್]- 28, ಮೇ 2004 – 05 ಆಗಸ್ಟ್ 2005
5] ಎಂ.ಪಿ.ಪ್ರಕಾಶ್[ಜೆಡಿಎಸ್] – 08 ಆಗಸ್ಟ್ 2005, – 28 ಜನವರಿ 2006
6] ಬಿ.ಎಸ್.ಯಡಿಯೂರಪ್ಪ[ಬಿಜೆಪಿ] – 03 ಫೆಬ್ರವರಿ 2006 – 08 ಅಕ್ಟೋಬರ್ 2007
7] ಆರ್.ಅಶೋಕ್[ಬಿಜೆಪಿ] – 12 ಜುಲೈ 2012 – 12 ಮೇ 2013
8] ಕೆ.ಎಸ್.ಈಶ್ವರಪ್ಪ[ಬಿಜೆಪಿ] – 12 ಜುಲೈ 2012 – 12 ಮೇ 2013
9) ಡಾ.ಜಿ.ಪರಮೇಶ್ವರ್ [ಕಾಂಗ್ರೆಸ್] – ಮೇ.23 2018 ರಿಂದ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
