ದೇವರು

ಈ ದೇವಾಲಯದಿಂದ ಮಣ್ಣಿನ ಹಾವನ್ನು ತಂದು ಈ ರೀತಿ ಪೂಜೆ ಮಾಡಿದರೆ ಆರೋಗ್ಯ, ಭೂಮಿ,ಆಸ್ತಿ ಹಾಗೂ ಮಾಟ-ಮಂತ್ರಗಳಂತ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ .

ಈ ದೇವಾಲಯದಿಂದ ಮಣ್ಣಿನ ಹಾವನ್ನು ತಂದು ಈ ರೀತಿ ಪೂಜೆ ಮಾಡಿದರೆ ಆರೋಗ್ಯ, ಭೂಮಿ,ಆಸ್ತಿ ಹಾಗೂ ಮಾಟ-ಮಂತ್ರಗಳಂತ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ .

 

 

 

ತುಮಕೂರು ಜಿಲ್ಲೆಯ, ತಿಪಟೂರು ತಾಲ್ಲೂಕಿನ, ಕೆಂಪಮ್ಮ ದೇವಿ ದೇವಾಲಯದಲ್ಲಿ ಬಜಗೂರು ಎಂಬ ಸ್ಥಳದಲ್ಲಿ ಇದೆ.ಈ ದೇವಸ್ಥಾನ ನಾಲ್ಕು ಪ್ರಮುಖ ದೇವಾಲಯಗಳನ್ನು ಕೂಡ ಒಳಗೊಂಡಿದೆ.ಅವುಗಳಾದ ಕೆಂಪಮ್ಮ ದೇವಿ ,ಕೊಲ್ಲಾಪುರದಮ್ಮ ದೇವಿ,ಮುಳಕಟ್ಟಮ್ಮ ದೇವಿ,ಆಂಜನೇಯ ಸ್ವಾಮಿ ದೇವಾಲಯಗಳು ಇವೆ.ಬನ್ನಿ ಅವುಗಳ ಬಗ್ಗೆ ತಿಳಿದುಕೊಳ್ಳೋಣ.

ಕೆಂಪಮ್ಮ ದೇವಿ ಮತ್ತು ಕೊಲ್ಲಾಪುರದಮ್ಮ ದೇವಿ ದೇವಾಲಯ.

 

 

 

ಇಲ್ಲಿನ ಕೆಂಪಮ್ಮ ಹಾಗೂ ಕೊಲ್ಲಾಪುರದಮ್ಮ ದೇವತೆಗಳು ಯಾವುದೇ ರೀತಿಯ ಅನಾರೋಗ್ಯ ಹಾಗೂ ಸಂಪತ್ತಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹಾರ ಮಾಡಲು ಶತ ಸಿದ್ದರು ಎಂದು ಇಲ್ಲಿನ ಭಕ್ತರು ನಂಬಿದ್ದಾರೆ .ಇದಕ್ಕಾಗಿ ದೇವಿಯರಿಗೆ ಮಡಿಲಕ್ಕಿ ಸೇವೆಯನ್ನು ಮಾಡಬೇಕಾಗುತ್ತದೆ .

ಮುಳಕಟ್ಟಮ್ಮ ದೇವಿ ದೇವಾಲಯ .
ಇನ್ನೊಂದು ದೇವಿ ಮುಳಕಟ್ಟಮ್ಮ ದೇವಾಲಯವು ಭೂಮಿಗೆ, ಆಸ್ತಿ ವಿವಾದಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹಾರ ಮಾಡಲು ಶತ ಸಿದ್ಧರು ಎಂದು ನಂಬಲಾಗಿದೆ. ಇದಕ್ಕಾಗಿ ಹರಕೆಯನ್ನು ಕಟ್ಟಿಕೊಂಡು ಮಣ್ಣಿನಿಂದ ಮಾಡಿದ ಹಾವನ್ನು ಮನೆಗೆ ತೆಗೆದುಕೊಂಡು ಹೋಗಬೇಕಾಗುತ್ತದೆ. ಹಾಗೂ ಈ ಹಾವಿಗೆ ನಿರಂತರವಾಗಿ ಪೂಜೆಗಳನ್ನು ಮಾಡಬೇಕಾಗುತ್ತದೆ. ನಿಮ್ಮ ಸಮಸ್ಯೆಗಳು ಸರಿ ಹೋದ ನಂತರ ಈ ಮಣ್ಣಿನ ಹಾವನ್ನು ಮತ್ತೆ ದೇವಾಲಯಕ್ಕೆ ತಂದು ಮರಳಿ ಒಪ್ಪಿಸಬೇಕಾಗುತ್ತದೆ. ಈ ರೀತಿಯಾಗಿ ಈ ದೇವಸ್ಥಾನದಲ್ಲಿ ಹರಕೆ ಪ್ರಕ್ರಿಯೆಗಳು ನಡೆಯುತ್ತಾ ಇರುತ್ತದೆ.

ಆಂಜನೇಯ ಸ್ವಾಮಿ ದೇವಾಲಯ.

 

 

 

 

 

 

 

 

 

 

 

ಹಾಗೆಯೇ ಇಲ್ಲಿ ಆಂಜನೇಯ ಸ್ವಾಮಿಯ ದೇವಾಲಯವಿದೆ. ಆಂಜನೇಯ ದೇವರು ಮಾಟ, ಮಂತ್ರ ಮುಂತಾದ ದುಷ್ಟ ಗ್ರಹ ಪೀಡೆಗಳಿಂದ ರಕ್ಷಿಸಲು ಸಹಾಯ ಮಾಡುತ್ತಾನೆ ಎಂದು ಸಹ ಇಲ್ಲಿನ ಭಕ್ತರು ನಂಬಿದ್ದಾರೆ.

 

 

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top