fbpx
ಧರ್ಮ

24 ಮೇ : ನಿತ್ಯಪಂಚಾಂಗ ಮತ್ತೆ ಭವಿಷ್ಯ

ಗುರುವಾರ, ೨೪ ಮೇ ೨೦೧೮
ಸೂರ್ಯೋದಯ : ೦೫:೫೬
ಸೂರ್ಯಾಸ್ತ : ೧೮:೩೬
ಶಕ ಸಂವತ : ೧೯೪೦ ವಿಲಂಬಿ
ಅಮಂತ ತಿಂಗಳು : ಜ್ಯೇಷ್ಠ (ಅದಿಕ)
ಪಕ್ಷ : ಶುಕ್ಲ ಪಕ್ಷ
ತಿಥಿ : ದಶಮೀ
ನಕ್ಷತ್ರ : ಉತ್ತರ ಫಾಲ್ಗುಣಿ
ಯೋಗ : ವಜ್ರ –
ಪ್ರಥಮ ಕರಣ : ತೈತಲೆ
ಸೂರ್ಯ ರಾಶಿ : ವೃಷಭ
ಅಭಿಜಿತ್ ಮುಹುರ್ತ : ೧೧:೫೧ – ೧೨:೪೧
ದುರ್ಮುಹೂರ್ತ : ೧೦:೦೯ – ೧೧:೦೦
ದುರ್ಮುಹೂರ್ತ : ೧೫:೧೩ – ೧೬:೦೪
ಅಮೃತಕಾಲ : ೧೨:೩೬ – ೧೪:೧೨
ವರ್ಜ್ಯಂ : ೨೮:೧೪+ – ೨೯:೫೧+

ಮೇಷ (Mesha)

 

ಯಾವುದೇ ಋಣಾತ್ಮಕ ವಿಚಾರಗಳಿಗೆ ಕಿವಿಗೊಡದಿರುವುದು ಒಳಿತು. ಆಲೋಚಿಸಿ ನಿರ್ಧಾರ ತೆಗೆದುಕೊಳ್ಳಿರಿ. ನೀವು ಆಡುವ ಮಾತು ಪರರನ್ನು ನೋಯಿಸದಂತೆ ನೋಡಿಕೊಳ್ಳಿರಿ. ಸಮಾಜದಲ್ಲಿ ನಿಮ್ಮ ಸ್ಥಾನಮಾನಕ್ಕೆ ಚ್ಯುತಿ ಇರುವುದಿಲ್ಲ.

ವೃಷಭ (Vrushabh)


ಹೊಗಳಿಕೆಗೆ ಮನಸೋತು ಕೆಲವೊಮ್ಮೆ ಇಲ್ಲ-ಸಲ್ಲದ ಮಾತುಗಳು ನಿಮ್ಮ ಬಾಯಿಂದ ಹೊರ ಬರುವುದು. ಮಾತಿನ ಮೇಲೆ ಹಿಡಿತವಿರಲಿ. ಯಾರಾದರೂ ಹೊಗಳಿದರೆ ನಕ್ಕು ಸುಮ್ಮನಾಗಿರಿ. ಮಕ್ಕಳ ವಿದ್ಯಾಭ್ಯಾಸದ ಕಡೆ ಗಮನ ಕೊಡುವುದು ಒಳ್ಳೆಯದು.

ಮಿಥುನ (Mithuna)


ಆಸ್ತಿಯ ಬಗೆಗಿನ ವಿವಾದ ಮತ್ತೆ ಕಾಣಿಸಿಕೊಳ್ಳುವುದು. ಹಿರಿಯರ ಮಧ್ಯಸ್ಥಿಕೆಯಿಂದ ಸುಖಾಂತ್ಯವಾಗುವುದು. ಜೀವನದಲ್ಲಿ ಮತ್ತಷ್ಟು ಯಶಸ್ಸು ದೊರೆಯಲಿದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.

ಕರ್ಕ (Karka)


ಹಿರಿಯರ ಸಕಾಲಿಕ ಎಚ್ಚರಿಕೆಯ ಮಾತನ್ನು ಗ್ರಹಿಸಿದಲ್ಲಿ ಮುಂದೆ ಒದಗಬಹುದಾದ ತೊಂದರೆಯನ್ನು ತಪ್ಪಿಸಿಕೊಳ್ಳಬಹುದು. ವಿದ್ಯಾರ್ಥಿಗಳು ವಿದ್ಯೆಯಲ್ಲಿ ಹೆಚ್ಚಿನ ಪ್ರಗತಿ ತೋರುವರು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.

ಸಿಂಹ (Simha)


ನಿಮ್ಮ ಕೆಲಸ ಕಾರ್ಯಗಳ ಮೂಲಕ ಸಾಮಾಜಿಕ ಜೀವನದಲ್ಲಿ ಹೆಸರು ಗಳಿಸುವಿರಿ. ಎಲ್ಲಾ ವಿಷಯಗಳಲ್ಲೂ ಯೋಚಿಸಿ ಪ್ರತಿಕ್ರಿಯೆ ನೀಡಿ. ಉದ್ವೇಗದ ಭರದಲ್ಲಿ ಆಡಿದ ಮಾತಿಗೆ ಪಶ್ಚಾತ್ತಾಪ ಪಡಬೇಕಾಗುವುದು.

ಕನ್ಯಾರಾಶಿ (Kanya)


ಹಿರಿಯರ ಆಸ್ತಿಯ ವಿವಾದ ಒಂದು ಹಂತ ತಲುಪಲಿದೆ. ಎಲ್ಲಾ ಆಸ್ತಿಯು ನನಗೆ ದಕ್ಕಬೇಕೆಂಬ ಸಂಕುಚಿತ ಮನೋಭಾವನೆ ಬಿಡಿ. ಸಹೋದರ-ಸಹೋದರಿಯರಿಗೆ ಕೊಡಬೇಕಾದ್ದನ್ನು ಕೊಟ್ಟುಬಿಡಿ. ಸಮಾಜದಲ್ಲಿ ನಿಮ್ಮ ಪ್ರತಿಷ್ಠೆ ಹೆಚ್ಚಾಗುವುದು.

ತುಲಾ (Tula)


ನೆರೆಹೊರೆಯವರೊಂದಿಗೆ ಪ್ರೀತಿ-ವಿಶ್ವಾಸದಿಂದ ಇರಿ. ಅನಗತ್ಯ ವಿಷಯಗಳಲ್ಲಿ ಮೂಗು ತೂರಿಸಿ ಮನಸ್ತಾಪಕ್ಕೆ ಒಳಗಾಗುವಿರಿ. ನಿಮ್ಮ ಕೆಲಸ ಕಾರ್ಯಗಳಲ್ಲಿ ತಲ್ಲೀನತೆಯಿಂದ ಮಗ್ನರಾಗಿರಿ. ಭಗವಂತನ ಆಶೀರ್ವಾದ ದೊರೆಯುವುದು.

ವೃಶ್ಚಿಕ (Vrushchika)


ನಿಮ್ಮ ಕರ್ತವ್ಯಪರತೆಯೇ ನಿಮ್ಮನ್ನು ಉತ್ತುಂಗಕ್ಕೆ ಕೊಂಡೊಯ್ಯುವುದು. ಸ್ವಾಭಾವಿಕವಾಗಿ ಆ ಕಾರಣದಿಂದ ಈದಿನ ಆನಂದ ನಿಮ್ಮ ಕೆಲಸದಲ್ಲಿ ವ್ಯಕ್ತಗೊಳ್ಳುವುದು. ಶತ್ರುಗಳು ನಿಮ್ಮ ವಿಚಾರಧಾರೆಯನ್ನು ಗೌರವಿಸುವರು.

ಧನು ರಾಶಿ (Dhanu)


ಈದಿನ ನೀವು ಪ್ರಯಾಣವನ್ನು ಹಮ್ಮಿಕೊಳ್ಳದಿರುವುದು ಒಳ್ಳೆಯದು. ಆಸ್ತಿ ವಿಚಾರದಲ್ಲಿ ಇದ್ದ ಸಮಸ್ಯೆಗಳು ಅಚ್ಚರಿ ಎಂಬಂತೆ ಬಗೆಹರಿಯುವುದು. ಹಣಕಾಸಿನ ಪರಿಸ್ಥಿತಿ ಉತ್ತಮವಿದ್ದು ನಿಮ್ಮ ಮಾತಿಗೆ ಎಲ್ಲೆಡೆ ಗೌರವ ದೊರೆಯುವುದು.

ಮಕರ (Makara)


ನಿಮ್ಮ ದೌರ್ಬಲ್ಯ ಎಂದರೆ ಅತಿ ಮುಂಗೋಪ. ಸಿಟ್ಟಿನಿಂದ ಕೆಲವು ಅವಕಾಶಗಳನ್ನು ಕಳೆದುಕೊಳ್ಳುವಿರಿ. ನಿಮ್ಮನ್ನು ಪ್ರಚೋದಿಸುವ ಅಥವಾ ಕೆರಳಿಸುವ ಹಲವು ವಿದ್ಯಮಾನಗಳು ನಡೆಯುವುದು. ಯಾವುದಕ್ಕೂ ಪ್ರತಿಕ್ರಿಯಿಸದೆ ಇರಿ.

ಕುಂಭರಾಶಿ (Kumbha)


ಯಾರೊಂದಿಗೂ ಇಂದು ಅಸಮಾಧಾನ ವ್ಯಕ್ತಪಡಿಸುವುದು ಒಳ್ಳೆಯದಲ್ಲ. ಇನ್ನೊಬ್ಬರ ವಿಷಯದಲ್ಲಿ ಮೂಗು ತೂರಿಸದಿರಿ. ವೈಯಕ್ತಿಕ ಕಾರ್ಯಕಲಾಪಗಳಲ್ಲಿ ಯಶಸ್ಸು ದೊರೆಯುವುದು. ಮಕ್ಕಳ ಪ್ರಗತಿಯು ತುಸು ನೆಮ್ಮದಿ ನೀಡುವುದು.

ಮೀನರಾಶಿ (Meena)


ಆಶಾವಾದ ಮತ್ತು ಧನಾತ್ಮಕ ಚಿಂತನೆ ನಿಮ್ಮ ಸುತ್ತಲಿರುವ ಜನರನ್ನು ಪ್ರಭಾವಿತಗೊಳಿಸುವುದು. ಈ ದಿನ ನಿಮ್ಮ ಮನಸ್ಸಿಗೆ ಮುದ ನೀಡುವ ವಾರ್ತೆಯನ್ನು ಕೇಳುವಿರಿ. ಮಕ್ಕಳು ವಿದ್ಯಾಭ್ಯಾಸದಲ್ಲಿ ನಿಷ್ಠೆ ತೋರುವರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top