fbpx
ದೇವರು

ರಾಮೇಶ್ವರಕ್ಕೆ ಹೋದ್ರು ಶನೇಶ್ವರನ ಕಾಟ ತಪ್ಪುವುದಿಲ್ಲ ಎಂಬ ಮಾತಿದೆ ,ಶನಿ ದೋಷ ಬಂದ್ರೆ ಪಡಬಾರದ ಕಷ್ಟ ಪಡಬೇಕಾಗುತ್ತದೆ ಅದಕ್ಕೆ ಹೀಗೆ ಮಾಡಿ ಪರಿಹಾರ ಮಾಡ್ಕೊಳ್ಳಿ .

ರಾಮೇಶ್ವರಕ್ಕೆ ಹೋದ್ರು ಶನೇಶ್ವರನ ಕಾಟ ತಪ್ಪುವುದಿಲ್ಲ ಎಂಬ ಮಾತಿದೆ ,ಶನಿ ದೋಷ ಬಂದ್ರೆ ಪಡಬಾರದ ಕಷ್ಟ ಪಡಬೇಕಾಗುತ್ತದೆ ಅದಕ್ಕೆ ಹೀಗೆ ಮಾಡಿ ಪರಿಹಾರ ಮಾಡ್ಕೊಳ್ಳಿ .

ಪ್ರತಿಯೊಬರೂ ಮೊದಲಿಗೆ ನಾವು ನನ್ನ ಜಾತಕಗಳನ್ನು ಪರಿಶೀಲಿಸಿ ಕೊಂಡಾಗ, ಜನ್ಮದಲ್ಲಿ ಶನಿ ,ನಷ್ಟದಲ್ಲಿ ಶನಿ ,ಅಂದರೆ ಹನ್ನೆರಡನೇ ಮನೆಯಲ್ಲಿ ಮತ್ತು ಎರಡನೇ ಮನೆಯಲ್ಲಿ ಶನಿ ಸಂಚಾರವನ್ನೂ ಮಾಡುತ್ತಿರುವ ಸಮಯದಲ್ಲಿ, ಇದನ್ನು ನಾವು ಸಾಡೆಸಾತಿ ಶನಿ ಎಂದು ಕರೆಯುತ್ತೇವೆ. ಅಂದರೆ ಏಳರ ಆಟ ಎಂದು ಅರ್ಥ .ಅಂದರೆ ಇಂತಹ ಏಳರ ಆಟದ ಶನಿ ಪ್ರತಿಯೊಬ್ಬ ಮನುಷ್ಯನಿಗೂ ಕೂಡ ಬರುತ್ತದೆ. ಅವರಿಗೆ ಬರಲ್ಲ, ಇವರಿಗೆ ಬರಲ್ಲ, ಎನ್ನುವ ಬೇಧ ಭಾವವೇನೂ ಇಲ್ಲ. ಗ್ರಹಚಾರದ ದೋಷದ , ಲೆಕ್ಕಾಚಾರದ ಅನುಕೂಲಗಳನ್ನು ನಾವು ನೋಡಿದಾಗ ಆ ಅನುಕೂಲಗಳಲ್ಲಿ ವ್ಯವಸ್ಥಿತವಾಗಿ ಶನೈಶ್ಚರ ಏಳರ ಆಟಕ್ಕೆ ಬಂದಾಗ ಏಳೂವರೆ ವರ್ಷಗಳ ಕಾಲ ಬಹಳಷ್ಟು ಸಂಕಷ್ಟಗಳನ್ನು ತಂದೊಡ್ಡುತ್ತಾನೆ.

 

 

ಅದರಲ್ಲೂ ಜನ್ಮಕ್ಕೆ ಅಂದರೆ ನಿಮ್ಮ ರಾಶಿಗೆ ಶನಿ ಬಂದಾಗ ,ನಿಮ್ಮ ರಾಶಿಯಲ್ಲಿ ಶನಿ ಸ್ಥಿತನಿದ್ದಾಗ, ನಾನಾ ರೀತಿಯ ಸಮಸ್ಯೆಗಳನ್ನು ತಂದೊಡ್ಡುತ್ತಾನೆ. ಅದಕ್ಕೆಲ್ಲ ಧೃತಿಗೆಡಬಾರದು. ಅದಕ್ಕೆ ದೊಡ್ಡವರು, ಹಿರಿಯರು ಹೇಳುತ್ತಾರೆ. ಅದೇನೆಂದರೆ “ರಾಮೇಶ್ವರಕ್ಕೆ ನೀವು ಹೋದರೂ ಕೂಡ ಶನೇಶ್ವರನ ಕಾಟ ತಪ್ಪುವುದಿಲ್ಲ” ಎಂದು ಹೇಳುತ್ತಾರೆ.

ಹೌದು ಇದು ಸತ್ಯವಾದ ವಿಚಾರವಾಗಿದೆ. ಮೊದಲು ಈ ಶನೇಶ್ವರ ನಿಮಗೆ ಜನ್ಮದಲ್ಲಿ ಅಥವಾ ಏಳರ ಆಟದಲ್ಲಿ ಇದ್ದರೆ, ವ್ಯವಸ್ಥಿತವಾಗಿ ಎಷ್ಟೋ ಜನ ಶನೇಶ್ಚರನ ದೇವಸ್ಥಾನಕ್ಕೆ ಹೋಗಿ, ದೀರ್ಘದಂಡ ನಮಸ್ಕಾರವನ್ನು ಮಾಡುತ್ತೀರಾ. ಆದರೆ ಇದು ಖಂಡಿತವಾಗಿಯೂ ತಪ್ಪು. ಆ ರೀತಿ ದೀರ್ಘದಂಡ ನಮಸ್ಕಾರವನ್ನು ಮಾಡಬೇಡಿ. ಶನೇಶ್ವರನಿಗೆ ನಮಸ್ಕಾರವನ್ನು ಮಾಡಿ.ಆದರೆ ಶನಿಗ್ರಹದ ಸ್ವಾಮಿ ಪವಮಾನ ಅಂದರೆ ಆಂಜನೇಯ ಸ್ವಾಮಿ. ಆದ್ದರಿಂದ ಯಾರಿಗೆ ಶನಿದೋಷ, ಸಾಡೇ ಸಾಥಿ ಏಳರ ಆಟದ ಶನಿ , ಜನ್ಮದಲ್ಲಿ ಶನಿ ಇರುವವರು ಈ ಕೆಲವು ಪರಿಹಾರಗಳನ್ನು ಮಾಡಿಕೊಳ್ಳಬೇಕು.

ಪರಿಹಾರ.

ಶನೇಶ್ವರ ಸ್ವಾಮಿಯ ದೇವಸ್ಥಾನಕ್ಕೆ ಹೋಗಿ ಯಾರು ಕೂಡ ದೀರ್ಘದಂಡ ನಮಸ್ಕಾರ ಹಾಕಬೇಡಿ ಬದಲಾಗಿ ನಮಸ್ಕಾರ ಮಾಡಿ.ಆಂಜನೇಯ ಸ್ವಾಮಿಯ ದೇವಾಲಯದಲ್ಲಿ ದೀರ್ಘದಂಡ ನಮಸ್ಕಾರವನ್ನು ಮಾಡಿ.ಪವಮಾನ ಸೂಕ್ತವನ್ನು ಪಾರಾಯಣ ಮಾಡಬೇಕು ಅಥವಾ ಹೆಚ್ಚಾಗಿ ಆಂಜನೇಯನ ದೇವಾಲಯಕ್ಕೆ ಹೋಗಬೇಕು ಎಳ್ಳು ಬತ್ತಿಯನ್ನು ಹಚ್ಚಬೇಕು.
ಆಂಜನೇಯ ಸ್ವಾಮಿಗೆ ನಾಟಿ ತುಳಸಿಯಿಂದ ಅರ್ಚನೆಯನ್ನು ಮಾಡಬೇಕು, ಸಿಂಧೂರ ಧಾರಣೆಯನ್ನು ಮಾಡಬೇಕು.
ಪ್ರತಿ ನಿತ್ಯ ಸೂರ್ಯ ನಮಸ್ಕಾರವನ್ನು ಮಾಡಬೇಕು.
ಪ್ರತಿ ಶನಿವಾರ ಸಾಧ್ಯವಾದರೆ ಶನಿ ಶಾಂತಿ ಹೋಮವನ್ನು ಆಚರಣೆ ಮಾಡಲು ಮುಂದಾಗಬೇಕು.

 

 

ಈ ರೀತಿ ವ್ಯವಸ್ಥಿತವಾಗಿ ನೀವು ಈ ಎಲ್ಲ ಪರಿಹಾರಗಳನ್ನು ಮಾಡಿಕೊಂಡು ಬಂದಾಗ ಶನೈಶ್ಚರನ ದೋಷ ಖಂಡಿತವಾಗಿಯೂ ಯಾವುದೇ ರೀತಿಯ ತೊಂದರೆ ತಾಪತ್ರಯಗಳನ್ನು ತಂದೊಡ್ಡುವುದಿಲ್ಲ. ನಿಮ್ಮೆಲ್ಲರಿಗೂ ಕೂಡ ಆಗ ಶನಿ ದೋಷ ನಿವಾರಣೆಯಾಗುತ್ತದೆ. ಅಂಜನೇಯ ಸ್ವಾಮಿಯ ಕೃಪೆಯೂ ಸಹ ಲಭಿಸುತ್ತದೆ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top