ದೇವರು

ಕೆಚ್ಚಲಿನ ಹಾಲಿನಿಂದ ಹುಟ್ಟಿಕೊಂಡ ಕಷ್ಟಗಳನ್ನು ನಿವಾರಿಸುವ ಶ್ರೀ ಹಾಲು ಮಲ್ಲೇಶ್ವರ ಸ್ವಾಮಿ ದೇವಾಲಯದ ಮಹತ್ವ ಹಾಗೂ ವಿಶೇಷತೆ ಬಗ್ಗೆ ತಿಳ್ಕೊಂಡ್ರೆ ಇಂದೇ ಭೇಟಿ ಮಾಡ್ತೀರಾ.

ಕೆಚ್ಚಲಿನ ಹಾಲಿನಿಂದ ಹುಟ್ಟಿಕೊಂಡ ಕಷ್ಟಗಳನ್ನು ನಿವಾರಿಸುವ ಶ್ರೀ ಹಾಲು ಮಲ್ಲೇಶ್ವರ ಸ್ವಾಮಿ ದೇವಾಲಯದ ಮಹತ್ವ ಹಾಗೂ ವಿಶೇಷತೆ ಬಗ್ಗೆ ತಿಳ್ಕೊಂಡ್ರೆ ಇಂದೇ ಭೇಟಿ ಮಾಡ್ತೀರಾ.

ಸುಮಾರು ಒಂದು ಸಾವಿರ ವರ್ಷಗಳಿಗಿಂತಲೂ ಹಿಂದಿನ ಇತಿಹಾಸ ಹೊಂದಿರುವ ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವಸ್ಥಾನದ ಹಿಂಭಾಗದಲ್ಲಿ ಕೆರೆಯ ಏರಿಯ ಆಳದಲ್ಲಿ ಶ್ರೀ ಹಾಲು ಮಲ್ಲೇಶ್ವರ ಸ್ವಾಮಿಯ ಒಂದು ಚಿಕ್ಕದಾದ ದೇವಸ್ಥಾನವಿದೆ.
ಇಲ್ಲಿ ಇರುವುದು ಮನುಷ್ಯರು ಪ್ರತಿಷ್ಠಾಪಿಸಿದ ಶಿವ ಲಿಂಗವಲ್ಲ. ಭೂಮಿಯಲ್ಲಿ ಹುಟ್ಟಿದ ಲಿಂಗವು ಇದಾಗಿದೆ. ಇದನ್ನು ನೀವು ನಂಬಲೇಬೇಕು. ಪೂರ್ವ ಕಾಲದಲ್ಲಿ ಇದು ಅರಣ್ಯ ಪ್ರದೇಶವಾಗಿತ್ತು.ಶ್ರೀ ಹಾಲು ಮಲ್ಲೇಶ್ವರ ಸ್ವಾಮಿ ದೇವಸ್ಥಾನವಿರುವ ಜಾಗದಲ್ಲಿ ಒಂದು ಪುಟ್ಟ ಹುತ್ತವಿತ್ತು. ಹುತ್ತದಲ್ಲಿದ್ದ ಮಲ್ಲಪ್ಪನಹಳ್ಳಿಯ ರೈತರ ದನಗಳು ಮೇಯಲು ಅರಣ್ಯಕ್ಕೆ ಹೋಗುತ್ತಿದ್ದವು. ಆಗ ಮೇಯಲು ಹೋಗುತ್ತಿರುವಾಗ ದನಗಳ ಪೈಕಿ ಹಸುವೊಂದು ಒಂದು ಕೆರೆಯ ಏರಿಯಲ್ಲಿ ಹುತ್ತದ ಮೇಲೆ ನಿಂತುಕೊಂಡು ಕೆಚ್ಚಲಿನಿಂದ ಹಾಲನ್ನು ಧಾರಾಕಾರವಾಗಿ ಸುರಿಸುತ್ತಿತ್ತಂತೆ.

 

 

ಜನರೆಲ್ಲ ಈ ಅದ್ಭುತವನ್ನು ನೋಡಿ ಹುತ್ತವಿದ್ದ ಸ್ಥಳವನ್ನು ಅಗೆದು ಪರೀಕ್ಷಿಸಿದಾಗ, ಅಲ್ಲಿ ಒಂದು ಸಣ್ಣದಾದ ಐದರಿಂದ ಆರು ಅಂಗುಲ ಎತ್ತರವಿರುವ ಉದ್ಭವಲಿಂಗ ಗೋಚರಿಸಿತ್ತು. ಆಗ ಜನರೆಲ್ಲ ಸೇರಿ ಅಲ್ಲೇ ಒಂದು ಚಿಕ್ಕದಾದ ದೇವಸ್ಥಾನವನ್ನು ಕಟ್ಟಿಸಿದ್ದರು. ಇದೆ ಮುಂದೆ ಶ್ರೀ ಹಾಲು ಮಲ್ಲೇಶ್ವರ ಸ್ವಾಮಿ ಎಂದು ಪ್ರಸಿದ್ಧಿ ಪಡೆಯಿತು.

ಹಿಂದಿನ ಕಾಲದಲ್ಲಿ ಇಲ್ಲಿ ಆಶ್ರಮ ಮಾಡಿಕೊಂಡಿದ್ದ ಋಷಿ ಮುನಿಗಳು, ಭೂಮಿಯಲ್ಲಿದ್ದ ಲಿಂಗವನ್ನು ತಮ್ಮ ದಿವ್ಯ ದೃಷ್ಟಿಯಿಂದ ನೋಡಿ ನಂತರ ಅಲ್ಲಿ ಲಿಂಗ ಸಿಕ್ಕಿತ್ತಂತೆ. ಅಗೆದಾಗ ಅಲ್ಲಿ ಹಾಲು ಉಕ್ಕಿ ಹರಿದು ಬಂದಿತ್ತಂತೆ. ಆದ್ದರಿಂದ ಇದಕ್ಕೆ ಶ್ರೀ ಹಾಲು ಮಲ್ಲೇಶ್ವರ ಸ್ವಾಮಿ ಎಂದು ಹೆಸರಿಟ್ಟರಂತೆ .ನಂತರ ಅದಕ್ಕೆ ಅಲ್ಲೇ ಒಂದು ಸಣ್ಣ ಗುಡಿಯನ್ನು ಕಟ್ಟಿಕೊಂಡು.ಶಿವ ದೇವರನ್ನು ಋಷಿಗಳು ಪೂಜಿಸುತ್ತಿದ್ದರಂತೆ.

 

 

ಇನ್ನು ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವಸ್ಥಾನವು, ಕರ್ನಾಟಕ ರಾಜ್ಯದ ತುಮಕೂರು ತಾಲ್ಲೂಕಿನ, ಹಚ್ಚ ಹಸಿರಿನಿಂದ ಕೂಡಿರುವ ಆವೃತವಾಗಿರುವ ಹರೆಯೂರು ಗ್ರಾಮದಲ್ಲಿ ಇದೆ. ತುಮಕೂರು ನಗರಕ್ಕೆ ಹದಿನಾರು ಕಿಲೋಮೀಟರ್ ದೂರದಲ್ಲಿರುವ ಈ ಪ್ರಸಿದ್ಧ ಯಾತ್ರಾ ಸ್ಥಳವೂ ಬೆಂಗಳೂರು ಹೊನ್ನಾವರ ರಾಷ್ಟ್ರೀಯ ಹೆದ್ದಾರಿ NH 206 ರಲ್ಲಿ ಇದೆ. ತುಮಕೂರಿನಿಂದ ಶಿವಮೊಗ್ಗದ ಕಡೆಗೆ ಹೋಗುವಾಗ, ದಾರಿ ಮಾರ್ಗದಲ್ಲಿ ಸಿಗುವ ಮಲ್ಲಸಂದ್ರ ಗ್ರಾಮದಿಂದ ದಕ್ಷಿಣಕ್ಕೆ ಎಂಟು ಕಿಲೋಮೀಟರ್ ದೂರದಲ್ಲಿದೆ.

ನೀವು ಈ ಸ್ಥಳಕ್ಕೆ ರೈಲಿನ ಮುಖಾಂತರ ಕೂಡ ತಲುಪಬಹುದು. ಹೌದು ಮಲ್ಲಸಂದ್ರ ರೈಲು ನಿಲ್ದಾಣವೇ ಹರೆಯೂರು ಸಮೀಪದ ರೈಲು ನಿಲ್ದಾಣವಾಗಿದ್ದು . ಇಲ್ಲಿಂದ ದೇವಾಲಯಕ್ಕೆ ಹೋಗಿ ಬರಲು ಉತ್ತಮ ಡಾಂಬರು ರಸ್ತೆಯಿದ್ದು, ಆಟೋ, ಟೆಂಪೋ ಅಥವಾ ಯಾವುದೇ ವಾಹನದಲ್ಲಿ ನೀವು ಇಲ್ಲಿಗೆ ಸುಲಭವಾಗಿ ತಲುಪಬಹುದಾಗಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top