fbpx
ಜ್ಯೋತಿಷ್ಯ

ವಾರ ಭವಿಷ್ಯ ಮೇ 28 ನೇ ತಾರೀಖಿನಿಂದ ಜೂನ್ 3 ನೇ ತಾರೀಖಿನವರೆಗೆ.

ವಾರ ಭವಿಷ್ಯ ಮೇ 28 ನೇ ತಾರೀಖಿನಿಂದ ಜೂನ್ 3 ನೇ ತಾರೀಖಿನವರೆಗೆ.

ಮೇಷ ರಾಶಿ.

 

 

ಉದ್ಯೋಗದಲ್ಲಿ ಬಡ್ತಿ, ಸ್ತ್ರೀಯರಿಗೆ ಲಾಭ, ವಿದ್ಯಾರ್ಥಿಗಳಲ್ಲಿ ಆತಂಕದ ವಾತಾವರಣ , ಮಾನಸಿಕ ವ್ಯಥೆ,ಯಾರ್ಯಾರು ವಾಹನವನ್ನು ತೆಗೆದುಕೊಳ್ಳಬೇಕು ಎನ್ನುತ್ತಿದ್ದೀರೋ ಅವರಿಗೆ ವಾಹನ ಯೋಗ, ಹಿರಿಯರಿಂದ ಬೋಧನೆ, ಹಿರಿಯರ ಬುದ್ಧಿ ಮಾತನ್ನು ಸ್ವೀಕರಿಸುವುದು ಉತ್ತಮ, ಷೇರು ವ್ಯವಹಾರಗಳಲ್ಲಿ ತೊಡಗಿರುವವರಿಗೆ ಬಹಳ ಸುಲಭ , ವಾರಾಂತ್ಯದಲ್ಲಿ ದಾಂಪತ್ಯದಲ್ಲಿ ಅನ್ಯೋನ್ಯತೆ ಲಭ್ಯವಾಗುತ್ತದೆ.
ಪರಿಹಾರ.
“ಓಂ ಸ್ಕಂದಾಯ ನಮಃ” ಈ ಮಂತ್ರವನ್ನು ನೂರಾ ಎಂಟು ಬಾರಿ ಜಪಿಸಿ ಮಂಗಳವಾರ ಭಸ್ಮಾರ್ಚನೆಯನ್ನು ಮಾಡಿ ಸುಬ್ರಹ್ಮಣ್ಯನಿಗೆ ನಮಸ್ಕಾರ ಮಾಡಿ .

ವೃಷಭ ರಾಶಿ.

 

 

ಯತ್ನ ಕಾರ್ಯದಲ್ಲಿ ಹಿಂಜರಿಕೆ,ಕೆಲಸ ಕಾರ್ಯಗಳಿಂದ ಹಿಂದೆ ಸರಿಯುತ್ತೀರಿ, ಆರ್ಥಿಕ ಪರಿಸ್ಥಿತಿಯಲ್ಲಿ ಬಿಕ್ಕಟ್ಟು, ಮನಃಕ್ಲೇಶ, ಮನಸ್ಸನ್ನು ಕೆಡಿಸಿಕೊಳ್ಳುತ್ತೀರಿ, ಮನಸ್ಸನ್ನು ಏಕಾಗ್ರತೆಯ ಕಡೆಗೆ ತರುವ ಪ್ರಯತ್ನವನ್ನು ಮಾಡಿ, ವ್ಯಾಪಾರ ವ್ಯವಹಾರದಲ್ಲಿ ನಷ್ಟ, ತೀರ್ಥ ಕ್ಷೇತ್ರ ,ತೀರ್ಥ ಯಾತ್ರೆ ದರ್ಶನ ಮಾಡುವ ಶುಭಯೋಗ, ಶತ್ರು ಬಾಧೆ, ಶತ್ರುಗಳು ಮಾಡುವ ಷಡ್ಯಂತ್ರಕ್ಕೆ ನೀವು ಬೀಳಬೇಕಾಗುತ್ತದೆ, ಆದ್ದರಿಂದ ಜಾಗ್ರತೆಯಿಂದ ಇರಿ.
ಪರಿಹಾರ.
ಪ್ರತಿನಿತ್ಯ ಸೂರ್ಯ ನಮಸ್ಕಾರವನ್ನು ಮಾಡಿ ,ಆದಿತ್ಯ ಹೃದಯ ಪಾರಾಯಣ ಮಾಡಿ, ಪಕ್ಷಿಗಳಿಗೆ ಧಾನ್ಯವನ್ನು ಹಾಕಿ.

 

ಮಿಥುನ ರಾಶಿ.

 

ದೇವತಾ ಕಾರ್ಯಗಳಲ್ಲಿ ಭಾಗಿ, ಅವಿವಾಹಿತರಿಗೆ ವಿವಾಹಯೋಗ, ಉತ್ತಮ ಬುದ್ಧಿಶಕ್ತಿ ನಿಮ್ಮ ಶರೀರದಲ್ಲಿ ಉತ್ಪತ್ತಿಯಾಗಲಿದೆ, ಸ್ತ್ರೀಯರಿಗೆ ಲಾಭ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಪ್ರಗತಿ, ನಂಬಿದ ಜನರಿಂದ ಮೋಸ ಹೋಗಬೇಕಾಗುತ್ತದೆ, ನಂಬಿಕೆ ದ್ರೋಹಕ್ಕೆ ಒಳಗಾಗುತ್ತೀರಿ.
ಪರಿಹಾರ.
ದುರ್ಗಾ ಸಪ್ತಶತಿ ಪಾರಾಯಣವನ್ನು ಪ್ರತಿನಿತ್ಯ ಮಾಡಿ, ಶುಕ್ರವಾರ ಎಂಟು ಜನ ಸುಮಂಗಲಿಯರಿಗೆ ಅರಿಶಿನ ಕುಂಕುಮವನ್ನು ಕೊಟ್ಟು ನಮಸ್ಕಾರವನ್ನು ಮಾಡಿ.

ಕಟಕ ರಾಶಿ.

 

ಅನ್ಯ ಜನರಲ್ಲಿ ವೈಮನಸ್ಯ, ಅತಿಯಾದ ನಿದ್ರೆ, ಸಾಮಾನ್ಯ ನೆಮ್ಮದಿಗೆ ಧಕ್ಕೆ ಬರಲಿದೆ, ನಾನಾ ರೀತಿಯ ಚಿಂತೆಗಳು ಈ ವಾರ ನಿಮ್ಮನ್ನು ಕಾಡಲಿವೆ, ಕಾರ್ಯಕ್ಷೇತ್ರದಲ್ಲಿ ಪ್ರಗತಿಯಾಗಲಿದೆ , ಸ್ಥಗಿತ ಕಾರ್ಯಗಳು ಮುಂದುವರಿಯುತ್ತವೆ .
ಪರಿಹಾರ.
ಪ್ರತಿ ನಿತ್ಯ ವಿಷ್ಣು ಸಹಸ್ರ ನಾಮವನ್ನು ಪಾರಾಯಣ ಮಾಡಿ, ಕಡು ಬಡವರಿಗೆ ಅನ್ನದಾನವನ್ನು ಅಥವಾ ಕೈಲಾದ ಸೇವೆಯನ್ನು ಬುಧವಾರದ ದಿನ ಮಾಡಿ.

ಸಿಂಹ ರಾಶಿ.

 

ನೂತನ ಕೆಲಸ ಕಾರ್ಯಗಳಲ್ಲಿ ಭಾಗಿಯಾಗುವ ಸಾಧ್ಯತೆಗಳು ಹೆಚ್ಚಾಗಿ ಕಂಡುಬರುತ್ತದೆ, ಯಾರು ವಿದ್ಯಾಭ್ಯಾಸವನ್ನು ಮಾಡುತ್ತಿದ್ದೀರೋ ಅವರಿಗೆ ವಿದ್ಯಾಭ್ಯಾಸದಲ್ಲಿ ಪ್ರಗತಿ, ವಿದೇಶ ಪ್ರಯಾಣ, ಅಧಿಕ ಖರ್ಚನ್ನು ಮಾಡಿಕೊಳ್ಳುತ್ತೀರಾ, ಖರ್ಚಿನ ಮೇಲೆ ಹಿಡಿತವನ್ನು ಇಟ್ಟುಕೊಳ್ಳಿ, ಸಾಲ ಮಾಡುವ ಸಾಧ್ಯತೆಗಳು ಹೆಚ್ಚಾಗಿ ಕಂಡುಬರುತ್ತವೆ, ವ್ಯವಹಾರಗಳಲ್ಲಿ ಏರುಪೇರು ಉಂಟಾಗಲಿದೆ, ಚಂಚಲ ಸ್ವಭಾವ , ಮನಸ್ಸನ್ನು ಹತೋಟಿಗೆ ತೆಗೆದುಕೊಳ್ಳುವ ಪ್ರಯತ್ನವನ್ನು ಮಾಡಿ .
ಪರಿಹಾರ.
“ಓಂ ಶ್ವೇತ ವರಹಾಯ ನಮಃ” ಈ ಮಂತ್ರವನ್ನು ಪ್ರತಿನಿತ್ಯ ನೂರಾ ಎಂಟು ಬಾರಿ ಜಪಿಸಿ, ಬುಧವಾರ ಓಟು ಬ್ರಾಹ್ಮಣರಿಗೆ ಸ್ವಯಂಪಾಕವನ್ನು ನೀಡಿ ನಮಸ್ಕರಿಸಿ, ಆಶೀರ್ವಾದವನ್ನು ಪಡೆಯಿರಿ .

ಕನ್ಯಾ ರಾಶಿ.

 

ಧಾರ್ಮಿಕ ಕ್ಷೇತ್ರಗಳಲ್ಲಿ ಮತ್ತು ಕೆಲಸಗಳಲ್ಲಿ ಭಾಗಿಯಾಗುವ ಶುಭಯೋಗ , ಯಾರನ್ನೂ ಕೂಡ ಹೆಚ್ಚಿಗೆ ನಂಬಬೇಡಿ, ನಿಮ್ಮ ಬುದ್ಧಿ ನಿಮ್ಮ ಕೈಯಲ್ಲಿ ಇರಲಿ, ಅಕಾಲ ಭೋಜನ,ಮಾತೃವಿನಿಂದ ಸಹಾಯ , ದಂಡ ಕಟ್ಟಬೇಕಾಗುತ್ತದೆ ಆದ್ದರಿಂದ ಎಚ್ಚರಿಕೆಯನ್ನು ವಹಿಸಿ, ಅಭಿವೃದ್ಧಿ ಕುಂಠಿತವಾಗುತ್ತದೆ, ಸಾಧಾರಣವಾಗಿರುವ ಲಾಭವನ್ನು ಈ ವಾರ ಪಡೆಯಲಿದ್ದೀರಿ.

ಪರಿಹಾರ .
“ಓಂ ಆಂಜನೇಯಾಯ ನಮಃ” ಈ ಮಂತ್ರವನ್ನು ನೂರಾ ಎಂಟು ಬಾರಿ ಜಪಿಸಿ, ದಕ್ಷಿಣಾಭಿಮುಖವಾಗಿರುವ ಆಂಜನೇಯನಿಗೆ ಮಂಗಳವಾರ ನಾಟಿ ತುಳಸಿಯಿಂದ ಅರ್ಚನೆಯನ್ನು ಮಾಡಿ, ನಮಸ್ಕಾರವನ್ನು ಮಾಡಿ.

ತುಲಾ ರಾಶಿ .

 

ವಾದ ವಿವಾದಗಳಲ್ಲಿ ಜಯ ಲಭಿಸಲಿದೆ, ಅಧಿಕ ಲಾಭವನ್ನು ಗಳಿಸಲಿದ್ದೀರಿ ,ಹಿರಿಯರಲ್ಲಿ ಭಕ್ತಿ ಗೌರವ ಹೆಚ್ಚಾಗಲಿದೆ, ಶತ್ರುಗಳ ಬಾಧೆ ,ಶತ್ರುಗಳು ಮಾಡುವ ಷಡ್ಯಂತ್ರಕ್ಕೆ ನೀವು ಬಲಿಯಾಗಬೇಕಾಗುತ್ತದೆ, ಮಹಿಳೆಯರಿಗೆ ವಿಶೇಷವಾದ ಲಾಭ, ಹಳೆಯ ಸಾಲವನ್ನು ಮರುಪಾವತಿ ಮಾಡುವ ಸಂದರ್ಭ ಬರಲಿದೆ ,ದೂರ ಪ್ರಯಾಣ ಮಾಡುವ ಸಂದರ್ಭ ಒದಗಿ ಬರಲಿದೆ, ವಾರಾಂತ್ಯದಲ್ಲಿ ಮನಃಶಾಂತಿ ದೊರೆಯಲಿದೆ.
ಪರಿಹಾರ .
“ ಓಂ ಹೇರಂಬ ಗಣಪತಯೇ ನಮಃ” ಈ ಮಂತ್ರವನ್ನು ನೂರಾ ಎಂಟು ಬಾರಿ ಜಪಿಸಿ, ಮಂಗಳವಾರ ದೂರ್ವಾರ್ಚನೆಯನ್ನು ಮಾಡಿಸಿ, 21 ಬಾರಿ ನಮಸ್ಕಾರವನ್ನು ಮಾಡಿ.

ವೃಶ್ಚಿಕ ರಾಶಿ.

 

ಈ ವಾರ ಪ್ರಿಯ ಜನರ ಭೇಟಿ ಮಾಡುವ ಶುಭಯೋಗ, ಅನಿರೀಕ್ಷಿತ ಬಿಕಟ್ಟನ್ನು ಮಾಡಿಕೊಳ್ಳುತ್ತೀರಾ, ಆದ್ದರಿಂದ ಖರ್ಚಿನ ಮೇಲೆ ಹಿಡಿತವಿರಲಿ, ರಾಜಕೀಯ ಕ್ಷೇತ್ರದಲ್ಲಿ ಇರುವವರಿಗೆ ಮುನ್ನಡೆ, ಶರೀರದಲ್ಲಿ ಏನೋ ಒಂದು ರೀತಿಯ ತಳಮಳ ಉಂಟಾಗಲಿದೆ , ಕೋರ್ಟ್ ಕೆಲಸಗಳಲ್ಲಿ ಜಯ ಲಭಿಸಲಿದೆ, ಆರ್ಥಿಕ ಪರಿಸ್ಥಿತಿಯಲ್ಲಿ ಬಿಕ್ಕಟ್ಟು ಉಂಟಾಗಲಿದೆ.
ಪರಿಹಾರ .
ಹನುಮಾನ್ ಚಾಲೀಸವನ್ನು ಪಾರಾಯಣ ಮಾಡಿ ಅಂಧ ಮಕ್ಕಳಿಗೆ ಕೈಲಾದ ಸಹಾಯವನ್ನು ಮಾಡಿ.

ಧನಸ್ಸು ರಾಶಿ.

 

ಈ ವಾರ ಶ್ರಮಕ್ಕೆ ತಕ್ಕ ಫಲ ಲಭಿಸಲಿದೆ, ಉದ್ಯೋಗದಲ್ಲಿ ಇರುವವರಿಗೆ ಉದ್ಯೋಗದಲ್ಲಿ ಪ್ರಗತಿ, ಹಿತೈಷಿಗಳು ನಿಮ್ಮ ಸಾಧನೆಯನ್ನು ಕೊಂಡಾಡಲಿದ್ದಾರೆ, ಗುರುಗಳ ದರ್ಶನವನ್ನು ಮಾಡುತ್ತೀರಾ, ವ್ಯಾಪಾರದಲ್ಲಿ ವೃದ್ಧಿ, ರಿಯಲ್ ಎಸ್ಟೇಟ್ ವ್ಯಾಪಾರವನ್ನು ಯಾರು ಮಾಡುತ್ತಿದ್ದೀಯೋ ಅವರಿಗೆ ಬಹಳಷ್ಟು ಲಾಭ .
ಪರಿಹಾರ.
ಪ್ರತಿನಿತ್ಯ ಔದುಂಬರ ವೃಕ್ಷಕ್ಕೆ ಪ್ರದಕ್ಷಿಣೆ ಹಾಕಿ, ಗುರುವಾರ ಹಳದಿ ವಸ್ತ್ರವನ್ನು ಬ್ರಾಹ್ಮಣರಿಗೆ ದಾನ ಮಾಡಿ , ನಮಸ್ಕಾರ ಮಾಡಿ.

ಮಕರ ರಾಶಿ.

 

ಕುಟುಂಬ ಸೌಖ್ಯ, ಸತ್ಕಾರ್ಯದಲ್ಲಿ ಆಸಕ್ತಿ, ಪುಣ್ಯ ಕ್ಷೇತ್ರಗಳನ್ನು ದರ್ಶನ ಮಾಡುವ ಶುಭಯೋಗ,ಧನ ವ್ಯಯವನ್ನು ಮಾಡಿಕೊಳ್ಳುತ್ತೀರಾ, ಸುಮ್ಮನೆ ಹಣವನ್ನು ಖರ್ಚು ಮಾಡಿಕೊಳ್ಳುತ್ತೀರಾ, ಖರ್ಚಿನ ಮೇಲೆ ಹಿಡಿತವನ್ನು ಇಟ್ಟುಕೊಳ್ಳಿ, ನೀವಾಡುವ ಮಾತಿನಿಂದ ಅನರ್ಥಗಳ ಉಂಟಾಗುವ ಸಾಧ್ಯತೆಗಳು ಹೆಚ್ಚಾಗಿದೆ, ಆದ್ದರಿಂದ ಮಾತಿನ ಮೇಲೆ ನಿಗಾವನ್ನು ಇಡಿ, ಸ್ಥಳ ಬದಲಾವಣೆಯಾಗುವ ಸಾಧ್ಯತೆಗಳಿವೆ, ಪ್ರತಿಷ್ಠಿತ ಜನರ ಪರಿಚಯವಾಗುತ್ತದೆ.
ಪರಿಹಾರ.
ಪ್ರತಿ ನಿತ್ಯ ಕನಕಧಾರ ಸ್ತ್ರೋತ್ರ ಪಾರಾಯಣ ಮಾಡಿ, ಗೋ ಪೂಜೆಯನ್ನು ಮಾಡಿ ,ಹಸು ಮತ್ತು ಕರುವಿಗೆ ಬೆಲ್ಲ ಮತ್ತು ಬಾಳೆ ಹಣ್ಣನ್ನು ತಿನ್ನಿಸಿ , ನಮಸ್ಕಾರ ಮಾಡಿ .

ಕುಂಭ ರಾಶಿ.

 

ಈ ವಾರ ಸಮಾಜದಲ್ಲಿ ಉತ್ತಮ ಗೌರವ, ಹೆಸರು, ಕೀರ್ತಿ, ಲಭ್ಯವಾಗಲಿದೆ, ಸಣ್ಣ ಪುಟ್ಟ ವಿಚಾರಗಳಿಗೆ ಮನಸ್ತಾಪವನ್ನು ಮಾಡಿಕೊಳ್ಳುತ್ತೀರಾ , ಅದರಿಂದ ಯಾವುದೇ ಪ್ರಯೋಜನ ಇಲ್ಲ, ತಾಳ್ಮೆ ಅತ್ಯಗತ್ಯ, ದೊಡ್ಡವರು ಹೇಳುತ್ತಾರೆ ತಾಳಿದವನು ಬಾಳಿಯಾನು ಎಂದು, ಕಾರ್ಯ ಸಾಧನೆಗಾಗಿ ಬಹಳಷ್ಟು ತಿರುಗಾಟವನ್ನು ಮಾಡುತ್ತೀರಾ, ಶುಭವಾರ್ತೆಯನ್ನು ಕೇಳುತ್ತೀರಾ , ಯಾರ್ಯಾರು ವಸ್ತ್ರ ವ್ಯಾಪಾರಿಗಳಿದ್ದೀರೋ ಅವರಿಗೆ ಬಹಳಷ್ಟು ಲಾಭವಾಗುತ್ತದೆ.
ಪರಿಹಾರ.
ಪ್ರತಿನಿತ್ಯ ಅಶ್ವತ್ಥ ವೃಕ್ಷಕ್ಕೆ ಪ್ರದಕ್ಷಿಣೆಯನ್ನು ಹದಿನೆಂಟು ಬಾರಿ ಮಾಡಿ, ಸೂರ್ಯ ನಮಸ್ಕಾರವನ್ನು ಮಾಡಿ.

ಮೀನ ರಾಶಿ.

 

ಈ ವಾರ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಾಣಲಿದ್ದು, ಉದ್ಯೋಗದಲ್ಲಿ ಉದ್ಯೋಗಾವಕಾಶಗಳು ಲಭಿಸಲಿವೆ, ನಂಬಿಕೆ ದ್ರೋಹಕ್ಕೆ ಒಳಗಾಗಬೇಕಾಗುತ್ತದೆ, ಸಣ್ಣಪುಟ್ಟ ವಿಷಯಗಳಿಗೆ ಕಲಹವನ್ನು ಉಂಟು ಮಾಡಿಕೊಳ್ಳುತ್ತೀರಾ, ಕೋಪವನ್ನು ಹೆಚ್ಚಾಗಿ ಮಾಡಿಕೊಳ್ಳುತ್ತೀರಾ, ಆದಷ್ಟು ಕೋಪವನ್ನು ಕಡಿಮೆ ಮಾಡಿಕೊಳ್ಳಿ, ಕಲಹಗಳನ್ನು ಮಾಡಿ ಮಾಡಿಕೊಳ್ಳಬೇಡಿ, ಮಿತ್ರರಿಂದ ಸಹಾಯವನ್ನು ಪಡೆಯಲಿದ್ದೀರಿ, ದ್ವಿಚಕ್ರ ವಾಹನದಿಂದ ತೊಂದರೆಗೆ ಒಳಗಾಗಬೇಕಾಗುತ್ತದೆ, ಯಾರು ದ್ವಿಚಕ್ರ ವಾಹನ ಚಾಲನೆಯನ್ನು ಮಾಡುತ್ತೀರೋ ಅವರು ಜಾಗ್ರತೆಯಿಂದ ವಾಹನ ಚಾಲನೆಯನ್ನು ಮಾಡಿ.
ಪರಿಹಾರ.
ಪ್ರತಿನಿತ್ಯ ಶಿವಪಂಚಾಕ್ಷರಿ ಮಂತ್ರವಾದ “ಓಂ ನಮಃ ಶಿವಾಯ” ಈ ಮಂತ್ರವನ್ನು ನೂರಾ ಎಂಟು ಬಾರಿ ಜಪಿಸಿ, ಸೋಮವಾರ ಶಿವನಿಗೆ ರುದ್ರಾಭಿಷೇಕವನ್ನು ಮಾಡಿ, ನಮಸ್ಕಾರ ಮಾಡಿ .

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top