ದೇವರು

ಯಾವ ಗಣೇಶನ ವಿಗ್ರಹವನ್ನು ಪೂಜಿಸಿದ್ದಾರೆ ಯಾವ ಯಾವ ಲಾಭವಾಗಿ ನಿಮ್ಮ ಕಷ್ಟಗಳು ಪರಿಹಾರವಾಗಿ ಸಂತೋಷದ ದಿನಗಳು ಮರಳಿ ಬರುತ್ತದೆ ಅಂತ ತಪ್ಪದೆ ತಿಳ್ಕೊಳ್ಳಿ .

ಯಾವ ಗಣೇಶನ ವಿಗ್ರಹವನ್ನು ಪೂಜಿಸಿದ್ದಾರೆ ಯಾವ ಯಾವ ಲಾಭವಾಗಿ ನಿಮ್ಮ ಕಷ್ಟಗಳು ಪರಿಹಾರವಾಗಿ ಸಂತೋಷದ ದಿನಗಳು ಮರಳಿ ಬರುತ್ತದೆ ಅಂತ ತಪ್ಪದೆ ತಿಳ್ಕೊಳ್ಳಿ .

ನಾಯಕನ ಸೊಂಡಿಲು ಬಲಕ್ಕೆ, ಎಡಕ್ಕೆ ನೇರವಾಗಿ ಇರುತ್ತದೆ. ಇದರಲ್ಲಿ ನೀವು ಯಾವುದನ್ನು ಪೂಜೆ ಮಾಡಿದರೆ ಒಳ್ಳೆಯದು ? ಎಂದು ನಿಮಗೆ ಗೊತ್ತೇ ?
ಸಾಧಾರಣವಾಗಿ ವಿನಾಯಕನ ಪ್ರತಿಮೆಯನ್ನು ಇಡುವುದು, ಪೂಜೆಯನ್ನು ಮಾಡುವುದು, ವಿಸರ್ಜನೆಯನ್ನು ಮಾಡುವುದು ಇವೆಲ್ಲ ಸಹಜವೇ. ಆದರೆ ನಿಮಗೊಂದು ವಿಷಯ ಗೊತ್ತೇ ? ಅದೇನೆಂದರೆ ಇದು ವಿನಾಯಕನ ಸೊಂಡಿಲಿಗೆ ಸಂಬಂಧಿಸಿದ್ದು. ಇಷ್ಟಕ್ಕೂ ಅದರಲ್ಲಿ ವಿಶೇಷ ಏನಿದೆ ? ಎಂದು ಅಂದುಕೊಳ್ಳುತ್ತಿದ್ದೀರಾ. ನಿಜವಾಗಿಯೂ ಇದರಲ್ಲಿ ವಿಶೇಷತೆ ಇದೆ.

 

 

ಅದೇನೆಂದರೆ ಯಾವ ವಿನಾಯಕನ ಪ್ರತಿಮೆಗಾದರೂ ಸೊಂಡಿಲು ಇರುತ್ತದೆ ಅಲ್ಲವೇ ? ಆ ಸೊಂಡಿಲು ಯಾವ ಕಡೆಗೆ ತಿರುಗಿರುತ್ತದೆ ಎಂಬುದನ್ನು ನೀವು ಜಾಗ್ರತೆಯಿಂದ ಗಮನಿಸಿದ್ದೀರಾ ? ಹೆಚ್ಚಾಗಿ ಜನ ಇದನ್ನು ಗಮನಿಸುವುದಿಲ್ಲ. ಸಹಜವಾಗಿ ಯಾರಾದರೂ ಸೊಂಡಿಲನ್ನು ನೋಡುತ್ತಾರೆಯೇ ವಿನಃ , ಸೊಂಡಿಲು ಯಾವ ಕಡೆಗೆ ತಿರುಗಿದೆ ಎಂದು ಅಷ್ಟಾಗಿ ಪರಿಶೀಲಿಸುವುದಿಲ್ಲ.

ಆದರೆ ಸಾಮಾನ್ಯವಾಗಿ ನಾವು ಮನೆಯಲ್ಲಿ ಪೂಜೆಯನ್ನು ಮಾಡುವ ಬೀದಿ ಬದಿಗಳಲ್ಲಿ, ಮಂಟಪಗಳಲ್ಲಿ ಇಡುವ ವಿನಾಯಕನ ವಿಗ್ರಹಗಳಲ್ಲಿ ವಿನಾಯಕನ ಸೊಂಡಿಲು ಎಡಕ್ಕೆ ತಿರುಗಿರುತ್ತದೆ. ದೇವಾಲಯಗಳಲ್ಲಿ ಕೆಲವು ಪ್ರದೇಶಗಳಲ್ಲಿ ಇರುವ ವಿಗ್ರಹಗಳಲ್ಲಿ ಮಾತ್ರವೇ ವಿನಾಯಕನ ಸೊಂಡಿಲು ಬಲಕ್ಕೆ ತಿರುಗಿರುತ್ತದೆ. ಇಲ್ಲವೆಂದರೆ ನೇರವಾಗಿ ಇರುತ್ತದೆ. ಕಾಣಿಸುತ್ತದೆ ಆದರೆ ಈ ಮೂರು ಕಡೆಯಲ್ಲಿ ಒಂದೊಂದು ಕಡೆಗೆ ಸೊಂಡಿಲು ಇರುವ ಗಣೇಶನನ್ನು ಪೂಜಿಸಿದರೆ, ಒಂದೊಂದು ವಿಧವಾದ ಫಲಗಳು ಸಿಗುತ್ತದೆ. ಅದೇನೋ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

 

 

ಎಡಗಡೆಗೆ ಸೊಂಡಿಲು ಇರುವ ಗಣಪತಿ .
ಎಡಗಡೆಗೆ ಸೊಂಡಿಲು ಇರುವ ಗಣಪತಿಯನ್ನು ಪೂಜಿಸಿದರೆ, ನಮ್ಮ ಮನೆಗಳಲ್ಲಿ, ಬೀದಿಗಳಲ್ಲಿ ಏರ್ಪಾಟು ಮಾಡುವ ಗಣೇಶನ ವಿಗ್ರಹಗಳಿಗೆ ಸೊಂಡಿಲು ಹೀಗೆ ಎಡಕ್ಕೆ ಇರುತ್ತದೆಯಂತೆ. ಹೌದು, ನಿಜ ಆದರೆ ಈ ಸೊಂಡಿಲು ಎಡಕ್ಕೆ ಇರುವ ಗಣೇಶನನ್ನು ಪೂಜಿಸಿದರೆ ಮನೆಯಲ್ಲಿರುವ ವಾಸ್ತು ದೋಷವೂ ತೊಲಗಿ ಹೋಗುತ್ತದೆಯಂತೆ. ಮನೆಯಲ್ಲಿ ಇರುವವರ ಆರೋಗ್ಯ ಚೆನ್ನಾಗಿರುತ್ತದೆ. ಇದರ ಜೊತೆಗೆ ಗಣೇಶನ ತಾಯಿಯಾದ ಪಾರ್ವತಿಯ ಆಶೀರ್ವಾದವು ಕೂಡ ಆ ಮನೆಯಲ್ಲಿರುವವರಿಗೆ ಲಭಿಸುತ್ತದೆ. ಆ ಮನೆಯಲ್ಲಿ ಇರುವವರಿಗೆ ಸಂತೋಷ ಲಭಿಸುತ್ತದೆ.

ಬಲಕ್ಕೆ ಸೊಂಡಿಲು ಇರುವ ಗಣಪತಿ .
ಬಲಕ್ಕೆ ಸೊಂಡಿಲು ಇರುವ ಗಣೇಶನನ್ನು ಪೂಜಿಸಿದರೆ, ದೇವಾಲಯಗಳಲ್ಲಿ ಪ್ರತಿಷ್ಠಾಪಿಸುವ ಗಣೇಶನ ವಿಗ್ರಹಗಳಿಗೆ ಸೊಂಡಿಲು ಈ ರೀತಿ ಬಲಕ್ಕೆ ಇರುತ್ತದೆ. ಈ ವಿನಾಯಕನನ್ನು ಸಿದ್ಧಿ ವಿನಾಯಕ ಎಂದು ಕರೆಯುತ್ತಾರೆ. ಈ ವಿನಾಯಕನನ್ನು ಪೂಜಿಸಿದರೆ ನಾವು ಅಂದುಕೊಂಡ ಕೆಲಸ ಕಾರ್ಯಗಳು ಮತ್ತು ನಮ್ಮ ಇಷ್ಟಾರ್ಥಗಳು ಬೇಗನೆ ಸಿದ್ಧಿಸುತ್ತವೆ.
ಮುಂಬೈನಲ್ಲಿರುವ ಸಿದ್ಧಿ ವಿನಾಯಕ ದೇವಾಲಯಕ್ಕೆ ಹೋದಲ್ಲಿ ಏನು ಕೋರಿದರೂ ನಡೆಯುತ್ತದೆ ,ನೆರವೇರುತ್ತದೆ ಎನ್ನುವ ನಂಬಿಕೆ ಭಕ್ತರಲ್ಲಿದೆ. ಅದಕ್ಕಾಗಿಯೇ ಮುಂಬೈನಲ್ಲಿ ಇರುವ ವಿನಾಯಕನಿಗೆ ಕೋರಿದ ಕೋರಿಕೆಗಳನ್ನು ತೀರಿಸುವ ವರಸಿದ್ದಿ ವಿನಾಯಕ ಎಂದು ಕರೆಯುತ್ತಾರೆ .

ಸೊಂಡಿಲು ನೇರವಾಗಿ ಇರುವ ಗಣಪತಿ.
ಸೊಂಡಿಲು ನೇರವಾಗಿ ಇರುವ ಗಣೇಶನ ವಿಗ್ರಹಗಳು ಅತ್ಯಂತ ವಿರಳ, ತುಂಬಾ ಅಪರೂಪವಾಗಿ ನಮಗೆ ನೋಡಲು ಕಾಣಸಿಗುತ್ತವೆ. ಈ ರೀತಿಯ ಆಕಾರದಲ್ಲಿ ಇರುವ ಗಣೇಶನನ್ನು ಪೂಜಿಸಿದರೆ ಜೀವನದಲ್ಲಿ ಅಂದುಕೊಳ್ಳದೇ ಇರುವ ನಮ್ಮ ಕೈಯಿಂದ ಆಗುವುದಿಲ್ಲ ಎನ್ನುವಂತಹ ಎಷ್ಟೇ ಕಠಿಣವಾಗಿರುವ ದೊಡ್ಡದಾದ ಕಾರ್ಯಗಳು ಸಹ ನೆರವೇರುತ್ತವೆ ಎಂದು ಹೇಳಲಾಗಿದೆ .

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top