ದೇವರು

ಒಂದು ದಿನಕ್ಕೆ 6 ಬಾರಿ ಪೂಜೆ ಸಲ್ಲಿಸುವ ಏಕೈಕ ಶ್ರೀನಿವಾಸನ ದೇವಾಲಯದ ಈ ವಿಷಯಗಳು ನಿಮಗೆ ಗೊತ್ತಾ

ಒಂದು ದಿನಕ್ಕೆ 6 ಬಾರಿ ಪೂಜೆ ಸಲ್ಲಿಸುವ ಉದ್ದಾನ ಶಯನ ಭಂಗಿಯಲ್ಲಿ ಇರುವ ಏಕೈಕ ಶ್ರೀನಿವಾಸನ ದೇವಾಲಯ ಇದು.ನಿಮಗೆ ಈ ದೇವಸ್ಥಾನದ ಬಗ್ಗೆ ಎಷ್ಟು ಗೊತ್ತು ?

ಶ್ರೀನಿವಾಸ ಮನೆ ಅಳಿಯನಾಗಿ ಹೋಗಿದ್ದು ಯಾವ ಊರಿಗೆ ? ಈ ಗ್ರಾಮದಲ್ಲಿ ವೆಂಕಟೇಶ್ವರನಿಗಿಂತ  ಲಕ್ಷ್ಮೀ ದೇವಿಯನ್ನು ಹೆಚ್ಚು ಪೂಜಿಸುವುದು ಯಾಕೆ ? ಇಲ್ಲಿ ವಿಭಿನ್ನವಾಗಿ ಮಲಗಿರುವ ತಿಮ್ಮಪ್ಪನನ್ನು ದರ್ಶನ ಮಾಡಿದರೆ ಪುಣ್ಯ ಲಭಿಸುತ್ತದೆ.ಇಲ್ಲಿರುವ ದೇಗುಲ ಸಂಪೂರ್ಣ ಶ್ರೀನಿವಾಸ ಕಲ್ಯಾಣವನ್ನು ಕಥೆಯನ್ನು ತೆರೆದಿಡುತ್ತದೆ

 

 

ಭಾರತ ಒಂದು ಪೌರಾಣಿಕ ತಾಣ. ಇಲ್ಲಿ ಪರಮಾತ್ಮ ಶ್ರೀ ರಂಗನಾಥನೇ ಮನೆ ಅಳಿಯನಾಗಿದ್ದಾರೆ ಮನೆಯ ಅಳಿಯನಾಗಿದ್ದರೂ ಅದು ಯಾವ ಸ್ಥಳಗಳಲ್ಲಿ ತಮಿಳುನಾಡಿನಲ್ಲಿರುವ ಅ ವಿಶಿಷ್ಟ ದೇವಾಲಯ ಯಾವುದು ? ಬನ್ನಿ ಅದರ ಬಗ್ಗೆ ತಿಳಿದುಕೊಳ್ಳೋಣ ? ಬಡವ ಶ್ರೀಮಂತರೆನ್ನದೆ ಕರುಣಿಸುತ್ತಾನೆ ತಿಮ್ಮಪ್ಪ. ತಿರುಮಲ “ಹೇ ಶ್ರೀನಿವಾಸ ಶ್ರೀ ವೆಂಕಟೇಶ ನೀನೊಲಿದ ಮನೆ ಮನೆಯೂ ಲಕ್ಷ್ಮೀ ನಿವಾಸ” ಎಂದು ಹಾಡಿ ಹೊಗಳಲಾಗಿದೆ. ಲಕ್ಷ್ಮೀ ದೇವಿಯ ಕೃಪೆ ಒಂದು ಇದ್ದರೆ ಬದುಕು ಬಂಗಾರ ಎಂಬುದು ಹಿಂದೂ ಧರ್ಮದ ನಂಬಿಕೆಯಾಗಿದೆ . “ ಸಂಕಟ ಬಂದಾಗ ವೆಂಕಟರಮಣ” ಎನ್ನುವುದು ಬಹಳಷ್ಟು ಜನಪ್ರಿಯವಾದ ಮಾತು .ಯಾರಿಗೆ ಕಷ್ಟ ಎದುರಾದರೂ ಮೊಟ್ಟ ಮೊದಲು ಬಾಲಾಜಿಯ ದರ್ಶನ ಪಡೆಯುವುದು ಹಿಂದೂಗಳಲ್ಲಿ ಇದೆ.

ಹೀಗಾಗಿ ವೆಂಕಟರಮಣ ಎಂದ ಕೂಡಲೇ ನೆನಪಾಗುವುದು ಭೂವೈಕುಂಠ ಎಂದೇ ಪ್ರಸಿದ್ಧಿಯಾಗಿರುವ ತಿರುಪತಿ ತಿಮ್ಮಪ್ಪನ ಸನ್ನಿಧಿ. ಬಡವರಿಂದ ಹಿಡಿದು ಅತಿ ಶ್ರೀಮಂತರವರೆಗೆ ಎಲ್ಲ ವರ್ಗದ ಭಕ್ತರು ಬಂದು ಪ್ರಾರ್ಥಿಸುವುದು ಇಲ್ಲಿನ  ವಿಶೇಷ. ಜನರಲ್ಲಿ ಈ ಆಧುನಿಕ ಯುಗದಲ್ಲೂ ದೇವರ ಮೇಲಿನ ಭಕ್ತಿ, ನಂಬಿಕೆ ಉಳಿದುಕೊಂಡಿದ್ದರೆ ಅಲ್ಲಿರುವ ವಿಶೇಷತೆಯೇ ಕಾರಣ. ನಂಬಿದವರನ್ನು ಕೈಬಿಡುವುದಿಲ್ಲ ಎನ್ನುವುದಕ್ಕೆ ಕಾರಣ ಅಲ್ಲಿರುವ ಶ್ರೀನಿವಾಸ.

ಇಂದು ಶ್ರೀನಿವಾಸನ ಮಾವನ ಊರಿನ ಬಗ್ಗೆ ತಿಳಿದುಕೊಳ್ಳೋಣ .

ಬೃಗು ಮಹರ್ಷಿಗಳಿಂದ ಆರಂಭವಾಯಿತು ಶ್ರೀನಿವಾಸನ ಕಲ್ಯಾಣ. ಪುರಾಣಗಳಲ್ಲಿ ಹೇಳುವಂತೆ ಒಮ್ಮೆ ಭೃಗು ಮಹರ್ಷಿ ಕೈಲಾಸಕ್ಕೆ ಬರುತ್ತಾರೆ. ಶ್ರೀಮನ್ನಾರಾಯಣನನ್ನು ದರ್ಶನ ಮಾಡುವುದು ಈತನ ಉದ್ದೇಶವಾಗಿರುತ್ತದೆ. ಆದರೆ ವಿಷ್ಣುವು ಬೃಗು ಮಹರ್ಷಿಗಳು  ಬಂದಿದ್ದನ್ನು ಗಮನಿಸುವುದಿಲ್ಲ. ಇದರಿಂದ ಕೋಪಗೊಳ್ಳುತ್ತಾನೆ ಬೃಗು ಮಹರ್ಷಿ, ಕೋಪಗೊಂಡಿದ್ದ ಬೃಗು ಮಹರ್ಷಿ ಶ್ರೀ ಲಕ್ಷ್ಮೀ ದೇವಿಯ ವಾಸಸ್ಥಾನವಾದ ವಕ್ಷ ಸ್ಥಳವಾದ ಎದೆಗೆ ಒದೆಯುತ್ತಾನೆ. ವಿಷ್ಣು ಬೃಗು ಮುನಿಯನ್ನು ಸಮಾಧಾನ ಪಡಿಸುವ ಹಾಗೆ ತನ್ನ ಕಾಲುಗಳನ್ನು ಕೈಯಲ್ಲಿ ಹಿಡಿದು ಕಾಲನ್ನು ಒತ್ತಲು ಆರಂಭಿಸುತ್ತಾನೆ. ಕಾಲನ್ನು ಒತ್ತುತ್ತಾ ಒತ್ತುತ್ತಾ ಮುನಿಯ ಬಲಗಾಲಿನಲ್ಲಿದ್ದ ಅಹಂಕಾರದ ಕಣ್ಣನ್ನು ಕಿತ್ತು ಹಾಕುತ್ತಾನೆ.ಬೃಗು ಮಹರ್ಷಿಗೆ ಆಗ ತನ್ನ ತಪ್ಪಿನ ಅರಿವಿಗಾಗಿ ಅರಿವಾಗುತ್ತದೆ. ಆಗ ವಿಷ್ಣುವನ್ನು ತನ್ನ ಮೋಕ್ಷದ ದಾರಿಯ ಬಗ್ಗೆ ಕೇಳಿಕೊಳ್ಳುತ್ತಾನೆ. ಆಗ ವಿಷ್ಣುವನ್ನು ಕುರಿತು ತನಗೆ ಭೂಮಿಯ ಮೇಲೆ ದರ್ಶನ ನೀಡಬೇಕೆಂದು ಕೇಳಿಕೊಳ್ಳುತ್ತಾನೆ. ಆಗ ಬೃಗು ಮಹರ್ಷಿಯು ಪುನರ್ಜನ್ಮ ತಾಳುತ್ತಾನೆ.

 

 

ಭೂಲೋಕದಲ್ಲಿ ಹೇಮ ಖುಷಿಯಾಗಿ ಜನಿಸಿದ್ದ ಬೃಗು ಮಹರ್ಷಿ.

ಭೂಲೋಕದಲ್ಲಿ ವಿಷ್ಣುವು  ದರ್ಶನ ನೀಡಬೇಕೆಂದು ಕೇಳಿಕೊಳ್ಳುವರು. ಬೃಗು ಮಹರ್ಷಿಗಳು ಪುನರ್ಜನ್ಮವನ್ನು ತಾಳಿ ಭೂಮಿಗೆ ಬರುತ್ತಾನೆ. ಇದಕ್ಕೆ ಲಕ್ಷ್ಮಿ ದೇವಿ ಕೂಡ ಒಪ್ಪಿಗೆ ಸೂಚಿಸುತ್ತಾಳೆ. ಆಗ ಬೃಗು ಮಹರ್ಷಿಯು ಒಂದು ಸಣ್ಣ ದೇಗುಲದಲ್ಲಿ ಕುಳಿತು ತಪಸ್ಸನ್ನು ಮಾಡುತ್ತಿರುತ್ತಾನೆ. ಕಡೆಗೆ ಆತನಿಗೆ ವಿಷ್ಣುವಿನ ದರ್ಶನ ಕೂಡ ಪ್ರಾಪ್ತಿಯಾಗುತ್ತದೆ . ನಂತರ ಭೃಗು ಮಹರ್ಷಿ ಇದೇ ಸ್ಥಳದಲ್ಲಿ ವಿಷ್ಣುವಿನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುತ್ತಾರೆ. ಇದೇ ವೇಳೆ ಲಕ್ಷ್ಮೀ ದೇವಿಯು ತಾವರೆ ಹೂವಿನ ಮಧ್ಯದಿಂದ ಉದ್ಭವಿಸುತ್ತಾಳೆ. ಇದರಿಂದ ಹೇಮ ಋಶಿಯ ರೂಪದಲ್ಲಿದ್ದ ಭೃಗು ಮಹರ್ಷಿ ಆಕೆಯನ್ನು ಸ್ವೀಕಾರ ಮಾಡಿ ಕೋಮಲಾಂಭೆ ಎಂದು ಹೆಸರನ್ನು ಇಡುತ್ತಾರೆ. ತಂದೆಯಾಗಿ ಎಲ್ಲ ಸೇವೆಗಳನ್ನು ಮಾಡುತ್ತಾನೆ. ಇನ್ನೂ ಯುಕ್ತ ವಯಸ್ಸು ಬಂದ ಮೇಲೆ  ಆಕೆಗೆ ವರನನ್ನು ಹುಡುಕುವುದಕ್ಕೆ ಪ್ರಾರಂಭಿಸುತ್ತಾನೆ .

ಶ್ರೀನಿವಾಸ ಪಾತಾಳ ಶ್ರೀನಿವಾಸ ಆದದ್ದು ಹೇಗೆ ?

ಇತ್ತ ಲಕ್ಷ್ಮಿ ದೇವಿಯನ್ನು ಹುಡುಕುತ್ತಾ ಶ್ರೀನಿವಾಸನು ಬರುತ್ತಾನೆ.ಲಕ್ಷ್ಮಿ ದೇವಿಯನ್ನು ಹುಡುಕುತ್ತಾ ಬಂದ ಶ್ರೀನಿವಾಸನಿಗೆ ಬೃಗು ಮುನಿಗಳು ತಪಸ್ಸುಗೈದ ಸ್ಥಳಗಳಲ್ಲಿ ಕೋಮಲಾಂಭೆಯು  ಕಾಣಿಸಿಕೊಳ್ಳುತ್ತಾಳೆ. ಆಕೆಯೇ ಲಕ್ಷ್ಮಿ ದೇವಿ ಎಂದು ಗುರುತಿಸಿ ಶ್ರೀನಿವಾಸನು ಆಕೆಯನ್ನು ಪಡೆಯುವ ಉದ್ದೇಶದಿಂದ ಮರದ ಪೊದೆಯಲ್ಲಿ ಕೆಲವು ಸಮಯ ಅಡಗಿ ಕುಳಿತುಕೊಳ್ಳುತ್ತಾನೆ. ಇದರಿಂದ ಶ್ರೀನಿವಾಸನಿಗೆ ಪಾತಾಳ ಶ್ರೀನಿವಾಸ ಎಂದು ಕರೆಯಲಾಗಿತ್ತು. ಹೀಗೆ ವೈಕುಂಠದಿಂದ ವಿಷ್ಣು ಇಲ್ಲಿ ಬಂದು ಶ್ರೀನಿವಾಸನಾಗಿ ಲಕ್ಷ್ಮಿ ದೇವಿಯನ್ನು ಮದುವೆಯಾಗುತ್ತಾನೆ .ಅಷ್ಟೇ ಅಲ್ಲ ಮನೆ ಅಳಿಯನಾಗಿ ಬಾಲಾಜಿ ಇಲ್ಲೇ ಉಳಿದು ಬಿಡುತ್ತಾರಂತೆ. ಕಾಲಾ ನಂತರ ಇದೇ ಸ್ಥಳದಲ್ಲಿ ಒಂದು ದೇಗುಲ ನಿರ್ಮಾಣವಾಯಿತು. ಇದೆ ನೋಡಿ ಈ ಸಾರಂಗಪಾಣಿ ದೇಗುಲ.

ಲಕ್ಷ್ಮಿದೇವಿ ಹುಟ್ಟಿದ ಆ ಸ್ಥಳದ ಬಗ್ಗೆ ನಿಮಗೆಷ್ಟು ಗೊತ್ತು ?

ಇಂದಿಗೂ ಕೂಡ ಈ ಸ್ಥಳದಲ್ಲಿ ವಿಷ್ಣುವನ್ನು ಆರು ಬಾರಿ ಪೂಜಿಸುತ್ತಾರೆ ಬನ್ನಿ ಆ ಸ್ಥಳ ಯಾವುದೆಂದು ? ತಿಳಿದು   ಈ ದೇವಾಲಯವು ಎಲ್ಲಿದೆ ?ಎಂಬುದನ್ನು ತಿಳಿಯೋಣ…

ಶ್ರೀನಿವಾಸ ಮತ್ತು ಲಕ್ಷ್ಮಿ ದೇವಿಯ ಕಲ್ಯಾಣ ಕೂಡ ಇದೇ ದೇವಾಲಯದಲ್ಲಿ ನೆರವೇರಿತ್ತಂತೆ. ಲಕ್ಷ್ಮೀ ದೇವಿಯನ್ನು  ಹುಡುಕುತ್ತಾ ಇಲ್ಲಿಗೆ ಬರುವ ಮಹಾವಿಷ್ಣು ಭೂಸ್ಪರ್ಶದಿಂದ ಸಾಮಾನ್ಯ ಮಾನವನಾಗುತ್ತಾನೆ. ಬಕುಳ ದೇವಿಯ ಸ್ಪರ್ಶದಿಂದ ಅವಳ ಮಗನಾಗಿ ಆಶ್ರಮ ಸೇರುತ್ತಾನೆ. ಬೇಟೆಗೆ ಹೋದಾಗ ಪದ್ಮಾವತಿಯಲ್ಲಿ ಅನುರಕ್ತನಾಗುತ್ತಾನೆ .ಸಪ್ತ ಋುಷಿಗಳ ಸಂತಾನದ ಫಲವಾಗಿ ಪದ್ಮಾವತಿ ಶ್ರೀನಿವಾಸನ ಕಲ್ಯಾಣ ನಿಶ್ಚಯವಾಗುತ್ತದೆ. ನಂತರ ಆ ಪವಿತ್ರ ದೇವಾಲಯದಲ್ಲಿ ಶ್ರೀನಿವಾಸ ಕಲ್ಯಾಣವೂ ನಡೆಯುತ್ತದೆ. ಕುಬೇರನಿಂದ ಸಾಲ ಪಡೆಯುವ ಶ್ರೀನಿವಾಸ ಕಲಿಯುಗದಲ್ಲಿ   ಸಾಲ ತೀರಿಸಲು ಇಲ್ಲಿ ಶಿಲೆಯಾಗಿ ನಿಲ್ಲುತ್ತಾನೆ. ಆ ಪವಿತ್ರ ಕ್ಷೇತ್ರದಲ್ಲಿಯೇ  ವಿಷ್ಣು ಅಳಿಯನಾಗಿ ಲಕ್ಷ್ಮೀ ದೇವಿಯನ್ನು ವರಿಸಿದ್ದು.

 

 

ವಿಷ್ಣುವಿಗೆ ಮುಡಿಪಾದ ದೇವಾಲಯಕ್ಕೆ ಇದೇ ಪೌರಾಣಿಕ ಮಹತ್ವ.

ಈ ದೇವಾಲಯದಲ್ಲಿದೆ ವಿಷ್ಣುವಿನ ಅತಿ ಎತ್ತರದ ಮೂರ್ತಿ. ಆರು ಬಾರಿ ವಿಷ್ಣುವನ್ನು ಪೂಜಿಸಲ್ಪಡುವ ಏಕೈಕ ದೇಗುಲ ಇದು. ತಮಿಳುನಾಡಿನ ಪ್ರಖ್ಯಾತ ಆಳ್ವರ  ಸಂತರು ಪಟ್ಟಿ ಮಾಡಿರುವ ದಿವ್ಯಾ ಸೇನಂನ ನೂರಾ ಎಂಟು ವಿಷ್ಣು ದೇವಾಲಯಗಳ ಪೈಕಿ ಒಂದಾಗಿದೆ . ಈ ದೇವಾಲಯ ಇಲ್ಲಿರುವ ವಿಷ್ಣುವಿನ ಅತಿ ದೊಡ್ಡ ಮೂರ್ತಿ ಮತ್ತು ಅತಿ ಎತ್ತರವಾದ ಗೋಪುರವುಳ್ಳ. ದೇವಾಲಯ ಸಾಕಷ್ಟು ಭಕ್ತಾದಿಗಳನ್ನು ಹಾಗೂ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತದೆ. ಈ ದೇವಾಲಯದ ರಾಜಗೋಪುರವೂ 123 ಅಡಿಗಳಷ್ಟು ಎತ್ತರವನ್ನು ಹೊಂದಿದ್ದು, ಇದರ ಪಶ್ಚಿಮದ ಪ್ರವೇಶ ದ್ವಾರಕ್ಕೆ ಪವಿತ್ರವಾದ ಕಲ್ಯಾಣಿಯೂ ಸಹ ಇದೆ.

ಈ ದೇವಾಲಯದಲ್ಲಿ ಶ್ರೀ ವಿಷ್ಣುವನ್ನು ಆರು ಬಾರಿ ಪೂಜೆ ಮಾಡುತ್ತಾರೆ. ನಮ್ಮಲ್ಲಿ ಯಾವ ವಿಷ್ಣು ದೇವಾಲಯದಲ್ಲೂ ಈ ರೀತಿ ಪೂಜಿಸುವುದಿಲ್ಲ. ವೈಷ್ಣವ ಸಂಪ್ರದಾಯವನ್ನು ಹೊಂದಿರುವ ಈ ದೇವಾಲಯದಲ್ಲಿ ಪ್ರತಿನಿತ್ಯ ಆರು ಬಾರಿ  ಪೂಜೆಗಳನ್ನು ಹಾಗೂ ವರ್ಷಕ್ಕೆ ಹನ್ನೆರಡು ಉತ್ಸವಗಳನ್ನು ಮಾಡಲಾಗುತ್ತದೆ. ಅದರಲ್ಲೂ ಚೈತ್ರ ಮಾಸದಲ್ಲಿ ಜರುಗುವ ರಥೋತ್ಸವದಲ್ಲಿ ಅದ್ಭುತವಾದ ಆಕರ್ಷಣೆಯನ್ನು ಹೊಂದಿರುತ್ತದೆ. ಈ ಜೋಡಿ ರಥದಲ್ಲಿ ಮರದಿಂದ ಮಾಡಲಾಗಿದ್ದು ವಿಶೇಷ ಅಲ್ಲದೆ ಈ ರಥಗಳು ತಮಿಳುನಾಡಿನಲ್ಲೇ ಮೂರನೆಯ ದೊಡ್ಡ ರಥಗಳಾಗಿವೆ. ಪ್ರತಿ ರಥಗಳು ಬರೋಬ್ಬರಿ ಮುನ್ನೂರು ಟನ್ಗಳಷ್ಟು ಭಾರ ತೂಗುತ್ತವೆ.

ಶ್ರೀನಿವಾಸ ಕಲ್ಯಾಣ ನಡೆದ ಆ ಪವಿತ್ರ ಸ್ಥಳ ಯಾವುದು ?

ತಮಿಳುನಾಡಿನಲ್ಲಿದೆ ಆ ದೇಗುಲದ ಹೆಬ್ಬಾಗಿಲು .ಹೌದು, ಶ್ರೀ ಲಕ್ಷ್ಮಿಯು ಹೇಮ ಋುಷಿಯ ಮಗಳಾಗಿ ಮತ್ತೆ ವಿಷ್ಣುವಿನ ಕೈಹಿಡಿದ ಇಂಥಹ  ಅಪರೂಪದ ಕತೆಯನ್ನು ಸಾರುವ ಅದ್ಭುತ ದೇವಾಲಯವೇ ಸಾರಂಗಪಾಣಿ . ಇದೇ ದೇವಾಲಯದಲ್ಲಿ ಶ್ರೀಮಾನ್ ವಿಷ್ಣು ಅಳಿಯನಾಗಿದ್ದು, ಸಂಸ್ಕೃತದಲ್ಲಿ ಸಾರಂಗ ಎಂದರೆ ಧನಸ್ಸು ಎಂದು, ಪಾಣಿ ಎಂದರೆ ಹಿಡಿದವನೆಂತಲೂ ಅರ್ಥವಿದೆ. ಹಾಗಾಗಿ ಇಲ್ಲಿ ವಿಷ್ಣು ಸಾರಂಗಪಾಣಿಯಾಗಿ ಭಕ್ತರನ್ನು ಹರಸುತ್ತಿದ್ದಾನೆ ಎನ್ನುವ ವಾಡಿಕೆ ಇದೆ.

ಈ ಕ್ಷೇತ್ರ ಇರುವುದಾದರೂ ಎಲ್ಲಿ ?

 

 

ಈ ಪವಿತ್ರ ಸ್ಥಳ ಇರುವುದು ತಮಿಳುನಾಡಿನ ಕುಂಭಕೋಣಂನಲ್ಲಿ. ಕುಂಭಕೋಣಂ ಪಟ್ಟಣದಲ್ಲೇ ಅತಿ ಎತ್ತರದ ರಾಜಗೋಪುರ ಹೊಂದಿರುವ ದೇವಾಲಯ ಇದಾಗಿದ್ದು, ಇದರ ಆವರಣದಲ್ಲೇ ನಾಲ್ಕು ಚಿಕ್ಕ ಗೋಪುರಗಳು ಇರುವುದನ್ನು ಸಹ ಕಾಣಬಹುದು. ಅಲ್ಲದೇ ಕೆಲವು ಕಲ್ಯಾಣಿಗಳು ದೇವಾಲಯದ ಆವರಣದಲ್ಲಿದ್ದು, ಪವಿತ್ರವಾದ  ಪೋರ್ಟರ್ ಕಲ್ಯಾಣಿಯಲ್ಲಿ ಶ್ರೀ ಲಕ್ಷ್ಮೀ ದೇವಿಯ ಉತ್ಸವ ನಡೆಸಲಾಗುತ್ತದೆ .

ಸಾರಂಗಪಾಣಿಯಲ್ಲಿದೆ  ವಿಷ್ಣುವಿನ ಶಯನ ಬಂಗಿಯ ಮೂರ್ತಿ. ತಾವರೆಯಲ್ಲಿ ಹುಟ್ಟಿದ ಲಕ್ಷ್ಮಿ ದೇವಿಗೆ ನಡೆಯುತ್ತದೆ ವಿಶೇಷ ಪೂಜೆ .

ಇಲ್ಲಿ ಶ್ರೀನಿವಾಸನು ಶಯನ ಸ್ಥಿತಿಯಿಂದ ಸ್ವಲ್ಪ ಮೇಲೆ ಎದ್ದ ಸ್ಥಿತಿಯಲ್ಲಿ ದರ್ಶನವನ್ನು ನೀಡಿದ್ದಾನೆ. ಇದನ್ನು ಉದ್ದಾನ ಶಯನ ಭಂಗಿ ಎಂದು ಸಹ ಕರೆಯುತ್ತಾರೆ . ಇಂತಹ ಸ್ಥಿತಿಯಲ್ಲಿ ವಿಷ್ಣುವಿನ ವಿಗ್ರಹ ಇರುವುದು ಪ್ರಪಂಚದಲ್ಲಿ ಇದೊಂದೇ ಇರಬಹುದು. ಇಡೀ ದೇಶದಲ್ಲಿ ಬೇರೆಲ್ಲೂ ಶ್ರೀ ವಿಷ್ಣುವಿನ ಉದ್ದಾನ ಶಯನ ಭಂಗಿ ಇಲ್ಲ. ಈ ಕಾರಣಗಳಿಂದ ಸಾರಂಗಪಾಣಿ ದೇವಾಲಯವು ಪೌರಾಣಿಕ ಮಹತ್ವವನ್ನು ಹೊಂದಿದೆ .

ಲಕ್ಷ್ಮೀದೇವಿಯು ತಾವರೆಯಿಂದ ಕಲ್ಯಾಣಿಯ  ನೀರಿನಲ್ಲಿ ತಾವರೆ ಹೂವಿನ  ಸಮೇತಳಾಗಿ ಹೇಮ ಋುಷಿಗಳಿಗೆ ಮಗಳ ರೂಪದಲ್ಲಿ ಹುಟ್ಟುತ್ತಾಳೆ . ಈ ಕಾರಣದಿಂದ ಈ ಕ್ಷೇತ್ರವನ್ನು ಲಕ್ಷ್ಮೀದೇವಿ ಹುಟ್ಟಿದ್ದ ಪವಿತ್ರ ಸ್ಥಳ ಎಂದು ಹೆಸರುವಾಸಿಯಾಗಿದೆ. ಜನರ ಪಾಲಿಗೆ ಆರಾಧ್ಯ ದೇವಿಯಾಗಿದ್ದು, ತಮ್ಮನ್ನು ನಂಬಿ ಬರುವ ಭಕ್ತರ  ಕಷ್ಟ ಕಾರ್ಪಣ್ಯಗಳನ್ನು ಹೋಗಲಾಡಿಸುವ ಮಹಾಶಕ್ತಿಯಾಗಿದ್ದಾಳೆ. ಪ್ರತಿದಿನ ಮಹಾಲಕ್ಷ್ಮಿಗೆ ತಾವರೆ ಹೂವುಗಳಿಂದ ಅಲಂಕಾರ ಮಾಡಲಾಗುತ್ತದೆ. ಸಾವಿರಾರು ಭಕ್ತರು ಈಕೆಯ ಕೃಪಾಕಟಾಕ್ಷಕ್ಕೆ ಪಾತ್ರರಾಗಲು ಸಾರಂಗಪಾಣಿ ಕ್ಷೇತ್ರಕ್ಕೆ ಬರುತ್ತಾರೆ .

 

 

ಸಾರಂಗಪಾಣಿ ತಿರುಪತಿ ದೇವಾಲಯದಂತೆ ಮೂರನೇ ಸ್ಥಾನದಲ್ಲಿರುವ ಸಾರಂಗಪಾಣಿ ದೇವಾಲಯವು ಮಹತ್ವ ಪಡೆಯುತ್ತದೆ. ಹಾಗಾಗಿ ಇಲ್ಲಿಗೆ ಭೇಟಿ ನೀಡುವ ಭಕ್ತರ ಸಂಖ್ಯೆಯೂ ಅಪಾರವಾಗಿದೆ .ತಾಂಜಾವೂರು ಜಿಲ್ಲೆಯಲ್ಲಿರುವ ಕುಂಭಕೋಣಂ ಅನ್ನು ಸುಲಭವಾಗಿ ತಲುಪಬಹುದಾಗಿದೆ. ತಾಂಜವೂರಿನಿಂದ ಸಾಕಷ್ಟು ಬಸ್ಸುಗಳು ಕುಂಭಕೋಣಂಗೆ ತೆರಳಲು ದೊರೆಯುತ್ತವೆ. ಜೀವನದಲ್ಲಿ ಒಮ್ಮೆಯಾದರೂ ಈ ಪುಣ್ಯ ಕ್ಷೇತ್ರಕ್ಕೆ ಭೇಟಿ ಕೊಟ್ಟು ಶ್ರೀನಿವಾಸ ಮತ್ತು ಲಕ್ಷ್ಮೀ ದೇವಿಯ ದರ್ಶನ ಪಡೆಯಬೇಕು .

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top