ದೇವರು

ಇಲ್ಲಿ ನೋಡಿ ಆಶ್ಚರ್ಯ ಈ ದೇವಾಲಯದ ಗರ್ಭ ಗುಡಿಯ ದೇವರ ಮೂರ್ತಿಯು ತುಂಬಾ ಮೃದುವಾಗಿ ಇದೆಯಂತೆ ,ಇದಕ್ಕೆ ಕಾರಣ ಹಾಗೂ ಈ ದೇವರ ಮಹಿಮೆಯನ್ನು ತಪ್ಪದೆ ತಿಳ್ಕೊಳ್ಳಿ .

ಇಲ್ಲಿ ನೋಡಿ ಆಶ್ಚರ್ಯ ಈ ದೇವಾಲಯದ ಗರ್ಭ ಗುಡಿಯ ದೇವರ ಮೂರ್ತಿಯು ತುಂಬಾ ಮೃದುವಾಗಿ ಇದೆಯಂತೆ ,ಇದಕ್ಕೆ ಕಾರಣ ಹಾಗೂ ಈ ದೇವರ ಮಹಿಮೆಯನ್ನು ತಪ್ಪದೆ ತಿಳ್ಕೊಳ್ಳಿ .

ನಮ್ಮ ಭಾರತ ದೇಶದಲ್ಲಿ ಅನೇಕ ದೇವಾಲಯಗಳಿವೆ. ಅದರಲ್ಲೂ ಸಹ ಆಶ್ಚರ್ಯವನ್ನು ಉಂಟು ಮಾಡುವ ದೇವಾಲಯಗಳು ಇವೆ . ಆ ದೇವಸ್ಥಾನದ ಗರ್ಭಗುಡಿಯೊಳಗೆ, ಮೂರ್ತಿಯಲ್ಲಿ ಒಂದು ಆಶ್ಚರ್ಯಕರ ಸಂಗತಿ ಅಡಗಿದೆ. ಅದೇನೆಂದರೆ ಈ ಗರ್ಭ ಗುಡಿಯಲ್ಲಿರುವ ದೇವಾಲಯದ ಮೂರ್ತಿಯನ್ನು ಮುಟ್ಟಿದರೆ ಅದು ತುಂಬಾ ಮೃದುವಾಗಿದೆಯಂತೆ.
ಹೌದು , ಇದು ನಿಜ . ಇಲ್ಲಿನ ಸ್ಥಳ ಪುರಾಣಗಳು ಹೇಳುವ ಪ್ರಕಾರ, ಇಲ್ಲಿ ದೇವಾಲಯವು ಹೇಗೆ ಸ್ಥಾಪನೆಯಾಯಿತು ಎಂಬುದನ್ನು ತಿಳಿಸುತ್ತದೆ .ಪ್ರತಿ ದೇವಾಲಯದ ಹಿಂದೆಯೂ ಕೂಡ ಕಲ್ಲಿನಿಂದ ಕೆತ್ತನೆ ಮಾಡಿರುವ ವಿಗ್ರಹವು ಸಾಮಾನ್ಯವಾಗಿ ಕಂಡು ಬರುತ್ತದೆ.

 

 

ಆದರೆ ಇಲ್ಲಿನ ದೇವಾಲಯದಲ್ಲಿ ಮಾತ್ರ ಇರುವ ಒಂದು ವಿಶೇಷವೆಂದರೆ ಇಲ್ಲಿನ ಸ್ವಾಮಿಯ ವಿಗ್ರಹಕ್ಕೆ ಕಲ್ಲಿನದ್ದಾಗಿದ್ದು, ಮುಟ್ಟಿದರೆ ಮೃದುವಾಗಿ ಇರುವುದು .ಇದು ಪ್ರತಿಯೊಬ್ಬರನ್ನು ಆಶ್ಚರ್ಯ ಚಕಿತರನ್ನಾಗಿ ಮಾಡಿಸುತ್ತದೆ. ಹಾಗಾದರೆ ಇಷ್ಟು ಆಶ್ಚರ್ಯವನ್ನು ಉಂಟು ಮಾಡುವ ಮತ್ತು ಉಂಟು ಮಾಡುತ್ತಿರುವ ಈ ದೇವಾಲಯ ಎಲ್ಲಿದೆ ? ಈ ದೇವಾಲಯದ ವಿಶೇಷತೆಗಳೇನು ಎಂದು ತಿಳಿದುಕೊಳ್ಳೋಣ ಬನ್ನಿ
ಈ ವಿಚಿತ್ರವಾದ ದೇವಾಲಯವು ತೆಲಂಗಾಣ ರಾಜ್ಯದ, ವಾರಂಗಲ್ ಜಿಲ್ಲೆಯಲ್ಲಿನ, ಮಂಗಲಪೇಟ ಮಂಡಲದಿಂದ, ಮಲ್ಲೂರು ಗ್ರಾಮದ, ಚಿಕ್ಕದಾದ ಗುಡ್ಡದ ಮೇಲೆ ಇದೆ. ಇದೊಂದು ಮಹಮಾನ್ವಿತವಾದ ದೇವಾಲಯವಾಗಿದ್ದು. ಅದನ್ನು ಶ್ರೀ ಹೇಮಾಚಲ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯ ಎಂದು ಕರೆಯುತ್ತಾರೆ . ಅದ್ಭುತವಾದ ಬೆಟ್ಟಗಳ ಮಧ್ಯೆ ಸ್ವಾಮಿಯು ನೆಲೆಸಿದ್ದಾರೆ. ಇದೊಂದು ಸ್ವಯಂಭೂ ಚರಿತ್ರೆಯನ್ನು ಹೊಂದಿರುವ ದೇವಾಲಯ ಎಂದು ಪ್ರಸಿದ್ಧಿಯನ್ನು ಪಡೆದಿದೆ .ನವ ನರಸಿಂಹ ಕ್ಷೇತ್ರಗಳಲ್ಲಿ ಈ ಕ್ಷೇತ್ರವೂ ಸಹ ಒಂದು ಎಂದು ಹೇಳಲಾಗುತ್ತದೆ .

ಈ ಕ್ಷೇತ್ರವು ಅತ್ಯಂತ ಪ್ರಾಚೀನವಾದದ್ದು. ಸುಮಾರು ಆರು ಶತಮಾನಕ್ಕಿಂತಲೂ ಹಳೆಯದಾದ ದೇವಸ್ಥಾನವೆಂದು ನಂಬಲಾಗಿದೆ. ಹನ್ನೆರಡನೇ ಶತಮಾನದಲ್ಲಿ ಕಾಕತೀಯ ರಾಜವಂಶದವರು ಈ ದೇವಾಲಯವನ್ನು ಪುನರ್ ನಿರ್ಮಾಣ ಮಾಡಿದ್ದರೂ, ಇದನ್ನು ಹದಿನೇಳನೇ ಶತಮಾನದಲ್ಲಿ ನವಾಬರು, ಇಲ್ಲಿನ ಸ್ವಾಮಿಗೆ ನೂರಾ ಐವತ್ತು ಕೆಜಿ ಬೆಳ್ಳಿಯ ಕವಚವನ್ನು ಕಾಣಿಕೆಯಾಗಿ ನೀಡಿದ್ದರಂತೆ. ಇನ್ನು ಈ ದೇವಾಲಯದಲ್ಲಿ ಮೂಲ ವಿಗ್ರಹವು ಸುಮಾರು ಒಂಬತ್ತು ಅಡಿ ಎತ್ತರವಿದ್ದು, ಕಪ್ಪು ಕಲ್ಲಿನ ವಿಗ್ರಹ ಇದಾಗಿದೆ.

 

 

ಇಲ್ಲಿನ ಸ್ವಾಮಿಯು ಕತ್ತಿನವರೆಗೆ ನರ ರೂಪದಲ್ಲಿದ್ದು, ತಲೆ ಭಾಗವು ಸಿಂಹ ರೂಪದಲ್ಲಿ ದರ್ಶನವನ್ನು ನೀಡುತ್ತದೆ. ಆದರೆ ಹೀಗೆ ಇರಲು ಕಾರಣವೇನೆಂದರೆ .
ಒಂದು ಕಾಲದಲ್ಲಿ ಹುತ್ತದಲ್ಲಿ ಇದ್ದ ಈ ಸ್ವಾಮಿಯನ್ನು ಭಕ್ತರು ತೆಗೆಯುವ ಸಮಯದಲ್ಲಿ ಸ್ವಲ್ಪ ಸ್ವಾಮಿಯ ಹಣೆಗೆ ಏಟು ತಗುಲಿ ಗಾಯವಾಗಿತ್ತಂತೆ .ಹಾಗಾಗಿ ಇಂದಿಗೂ ಆ ಪ್ರದೇಶದಲ್ಲಿ ದೇವಾಲಯದ ಅರ್ಚಕರು ಆ ಸ್ಥಳದಲ್ಲಿ ಚಂದನವನ್ನು ಹಚ್ಚುತ್ತಾರಂತೆ. ಹಾಗಾಗಿ ಈ ದೇವಾಲಯದಲ್ಲಿನ ವಿಗ್ರಹವನ್ನು ಎಲ್ಲಿ ಮುಟ್ಟಿದರೂ ಕೂಡ ಕಲ್ಲನ್ನು ಮುಟ್ಟಿದ ಹಾಗೆ ಅನ್ನಿಸುವುದಿಲ್ಲ. ಹಾಗೂ ಸಜೀವ ಮಾನವನ ಶರೀರವನ್ನು ಮುಟ್ಟಿದ ಹಾಗೆ ಮೃದುವಾಗಿ ಇರುತ್ತದೆ.

ದಕ್ಷಿಣ ಭಾರತ ದೇಶದಲ್ಲಿ ಈ ರೀತಿಯ ವಿಗ್ರಹವು ಎಲ್ಲಿಯೂ ಇಲ್ಲ. ಹಾಗೆಯೇ ಎಳ್ಳು ಎಣ್ಣೆಯಿಂದ ಎಲ್ಲಿಯೂ ಸ್ವಾಮಿಗೆ ಅಭಿಷೇಕವನ್ನು ಮಾಡುವುದಿಲ್ಲ. ಆದರೆ ಈ ದೇವಾಲಯದಲ್ಲಿ ಮಾತ್ರ ಸ್ವಾಮಿಗೆ ಎಳ್ಳೆಣ್ಣೆಯಿಂದ ಮಾತ್ರ ಅಭಿಷೇಕವನ್ನು ಮಾಡಲಾಗುತ್ತದೆ. ಇದು ಇಲ್ಲಿನ ಮತ್ತೊಂದು ವಿಶೇಷವಾಗಿದೆ .
ಈ ಪ್ರದೇಶವು ಅರ್ಧ ಚಂದ್ರಾಕಾರದಲ್ಲಿ ಇರುತ್ತದೆಯಂತೆ . ಹಾಗಾಗಿ ಭಾರದ್ವಜ ಮಹರ್ಷಿಗಳು ಇದನ್ನು ಹೇಮಾಚಲಂ ಎಂದು ಹೆಸರನ್ನು ಇಟ್ಟರು ಎಂದು ಪ್ರತೀತಿ ಕೂಡ ಇದೆ. ಇಲ್ಲಿ ಚಿಂತಾಮಣಿ ಜಲಧಾರೆಗೆ ಇನ್ನೊಂದು ವಿಶೇಷತೆ ಇದೆ. ಇಲ್ಲಿನ ನೀರು ಮೂತ್ರಪಿಂಡ ವ್ಯಾಧಿಗಳಿಗೆ, ಸೊಂಟಕ್ಕೆ ಸಂಬಂಧಿಸಿದ ವ್ಯಾಧಿಗಳಿಗೆ ದಿವ್ಯವಾದ ಔಷಧವಾಗಿದೆ. ಇಲ್ಲಿನ ನೀರು ಸಕಲ ರೋಗಕ್ಕೂ ಔಷಧಿಯನ್ನು ಹೊಂದಿದೆ ಎಂದು ಹೇಳಬಹುದಾಗಿದೆ.

 

 

ಅಷ್ಟೇ ಅಲ್ಲ ಗುಡ್ಡದ ಮೇಲಿನ ಮರಗಳ ಮಧ್ಯೆ ಜಲಧಾರೆಯಾಗಿ ಸುರಿಯುವ ಈ ನೀರು ಎಲ್ಲಿಂದ ಬರುತ್ತದೆ ಎಂದು ಇಂದಿಗೂ ಕೂಡ ಯಾರಿಗೂ ಕಂಡು ಹಿಡಿಯಲು ಸಾಧ್ಯವಾಗಿಲ್ಲವಂತೆ. ಈ ವಿಧವಾಗಿ ಇಲ್ಲಿ ನೆಲೆಸಿರುವ ಶ್ರೀ ಹೇಮಾಚಲ ಲಕ್ಷ್ಮೀ ನರಸಿಂಹ ಸ್ವಾಮಿಯು ಭಕ್ತರನ್ನು ವಿಶೇಷವಾಗಿ ಆಕರ್ಷಿಸುತ್ತಿದೆ .

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top