ಧರ್ಮ

6 ಜೂನ್ : ನಿತ್ಯಭವಿಷ್ಯ ಮತ್ತೆ ಪಂಚಾಂಗ

ಬುಧವಾರ, ೦೬ ಜೂನ್ ೨೦೧೮
ಸೂರ್ಯೋದಯ : ೦೫:೫೬
ಸೂರ್ಯಾಸ್ತ : ೧೮:೪೦
ಶಕ ಸಂವತ : ೧೯೪೦ ವಿಲಂಬಿ
ಅಮಂತ ತಿಂಗಳು : ಜ್ಯೇಷ್ಠ (ಅದಿಕ)

ಪಕ್ಷ : ಕೃಷ್ಣ ಪಕ್ಷ
ತಿಥಿ : ಸಪ್ತಮೀ
ನಕ್ಷತ್ರ : ಶತಭಿಷ
ಯೋಗ : ವಿಷ್ಕುಂಭ
ಸೂರ್ಯ ರಾಶಿ : ವೃಷಭ

ಅಭಿಜಿತ್ ಮುಹುರ್ತ : ಯಾವುದೂ ಇಲ್ಲ
ಅಮೃತಕಾಲ : ೧೨:೨೬ – ೧೪:೧೧
ರಾಹು ಕಾಲ: ೧೨:೧೮ – ೧೩:೫೩
ಗುಳಿಕ ಕಾಲ: ೧೦:೪೨ – ೧೨:೧೮
ಯಮಗಂಡ: ೦೭:೩೧ – ೦೯:೦೭

ಮೇಷ (Mesha)

 

ವಿದ್ಯಾರ್ಥಿಗಳಿಗೆ ಉದಾಸೀನತೆ, ಪುಕ್ಕಲುತನದಿಂದ ಹಿನ್ನಡೆ ಕಂಡು ಬಂದೀತು. ಕೌಟುಂಬಿಕ ಸಾಮರಸ್ಯದಿಂದ ಗೃಹ ಸುಖ ಸ್ವರ್ಗವೆನಿಸಲಿದೆ. ಮನೆಯಲ್ಲಿ ಧರ್ಮಪತ್ನಿಯ ಆಕಾಂಕ್ಷೆಗಳ ಪೂರೈಕೆಯಿಂದ ಸುಖ ಪ್ರಾಪ್ತಿಯಾದೀತು.

ವೃಷಭ (Vrushabh)


ಹಳೇ ಬಾಕಿ ಮರುಪಾವತಿಯಾಗಿ ಖುಶಿ ಕೊಡಲಿದೆ. ನ್ಯಾಯಾಲಯದ ವ್ಯವಹಾರದಲ್ಲಿ ಕೀರ್ತಿ ತಂದೀತು. ವಾಹನ ಖರೀದಿಯ ಯೋಗದ ಸಾಧ್ಯತೆ ಇದೆ. ಆರೋಗ್ಯ ಭಾಗ್ಯ ಸುಧಾರಿಸುತ್ತಾ ಇರುತ್ತದೆ. ಮನೆಯಲ್ಲಿ ಮಡದಿಯ ಕಿರಿಕಿರಿ ಹೆಚ್ಚಾದೀತು.

ಮಿಥುನ (Mithuna)


ಯೋಗ್ಯ ಯುವತಿಯರಿಗೆ ಪ್ರೇಮ ಪ್ರಸ್ತಾವಗಳು ಕಂಕಣಬಲಕ್ಕೆ ಪೂರಕವಾದಾವು. ಕುಂಬಾರ, ಬಡಗಿ, ಚಮ್ಮಾರ ಹಾಗೂ ಚಿನ್ನದ ವ್ಯವಹಾರದಲ್ಲಿ ಶ್ರಮಕ್ಕೆ ತಕ್ಕ ಪ್ರತಿಫ‌ಲ ಸಿಗಲಾರದು. ಎಲ್ಲಾ ಇದ್ದು ಹಣದ ಸಮಸ್ಯೆ ತಂದೀತು.

ಕರ್ಕ (Karka)


ಹಿರಿಯರಿಗೆ ಯಾತ್ರೆ, ಪುಣ್ಯಕಾರ್ಯಗಳು ನಡೆದಾವು. ಪ್ರೇಮ ಪ್ರಕರಣಗಳು ಫ‌ಲ ನೀಡಲಿವೆ. ಪಾಲು ಬಂಡವಾಳ ಆದಾಯ ಹೆಚ್ಚಳ. ಆರೋಗ್ಯದ ಬಗ್ಗೆ ಸದಾ ಎಚ್ಚರ ವಿರಲಿ. ತೆರಿಗೆ ಯಾ ಸರಕಾರಿ ಅಧಿಕಾರಿಗಳಿಂದ ಕಿರುಕುಳ ಇದೆ.

ಸಿಂಹ (Simha)


ಹಣ ಆಗಾಗ ನೀರಿನಂತೆ ಖರ್ಚಾದೀತು. ಆದರೂ ಆದಾಯಕ್ಕೆ ಕೊರತೆ ಇರದು. ಆಗಾಗ ಬಂಧು ಸಮಾಗಮ ಸಂತಸ ತಂದೀತು. ಮಗನ ಉದ್ಯೋಗ ಲಾಭದಿಂದ ಹರುಷ. ವಿದ್ಯಾರ್ಜನೆಗಾಗಿ ವಿದ್ಯಾರ್ಥಿಗಳಿಗೆ ವಿದೇಶ ಸಂಚಾರ ಭಾಗ್ಯವಿದೆ.

ಕನ್ಯಾರಾಶಿ (Kanya)


ಶತ್ರುಗಳ ಕಾಟವಿದ್ದರೂ ಕಾರ್ಯಸಿದ್ಧಿ. ನ್ಯಾಯಾಲಯದ ಕೆಲಸಕಾರ್ಯಗಳು ಮುಂದುವರಿಯಲಿವೆ. ದೂರ ಸಂಚಾರಕ್ಕಾಗಿ ನಿರುದ್ಯೋಗಿಗಳಿಗೆ ಉದ್ಯೋಗದ ಕರೆ ಬಂದೀತು. ಹಿರಿಯರ ಆರೋಗ್ಯದ ಬಗ್ಗೆ ಗಮನ ಹರಿಸಿರಿ.

ತುಲಾ (Tula)


ಎಲ್ಲಾ ಅನುಕೂಲವಿದ್ದರೂ ಮನಸ್ಸಿಗೆ ಸಮಾಧಾನ ಇರದು. ವ್ಯಾಪಾರ, ವ್ಯವಹಾರದಲ್ಲಿ ಹೊಡಿಕೆಗಳಲ್ಲಿ ಹೆಚ್ಚಿನ ಲಾಭ ಕಂಡು ಬಂದೀತು. ಯೋಗ್ಯ ವಯಸ್ಕರಿಗೆ ಸದ್ಯದಲ್ಲೇ ಕಂಕಣಬಲದ ಯೋಗವಿದೆ. ದಾಯಾದಿಗಳಿಂದ ದೂರವಿರಿ.

ವೃಶ್ಚಿಕ (Vrushchika)


ಶುಭಮಂಗಲ ಕಾರ್ಯಗಳು ನೆರವೇರುತ್ತವೆ. ವಿದ್ಯಾರ್ಥಿಗಳ ಪ್ರಯತ್ನಧಿಬಲ ಸಾರ್ಥಕವೆನಿಸಲಿದೆ. ಮನೆಯಲ್ಲಿ ಹೊಂದಾಣಿಕೆ, ಸಾಮರಸ್ಯ ತೋರಿ ಬರಲಿದೆ. ವ್ಯಾಪಾರ, ವ್ಯವಹಾರಗಳು ಲಾಭವನ್ನು ತಂದು ಕೊಡಲಿವೆ.

ಧನು ರಾಶಿ (Dhanu)


ಎಳೂವರೆ ಶನಿ ಇದ್ದರೂ ಸದ್ಯದಲ್ಲೇ ಅಭಿವೃದ್ಧಿದಾಯಕ ವಾತಾವರಣ ಗೋಚರಕ್ಕೆ ಬರುವುದು. ನಿರುದ್ಯೋಗಿಗಳು ಆಶಾಧಿಭರಿತರಾದರು. ಹಿರಿಯರ ಅನುಗ್ರಹದಿಂದ ಮನೆಯಲ್ಲಿ ಸುಖಶಾಂತಿ ಲಭಿಸಲಿದೆ. ಸಂಚಾರದಲ್ಲಿ ಜಾಗ್ರತೆ.

ಮಕರ (Makara)


ದಾಂಪತ್ಯದಲ್ಲಿ ಹೊಂದಾಣಿಕೆ ಇರಲಿ. ಕೌಟುಂಬಿಕವಾಗಿ ಸಾಂಸಾರಿಕವಾಗಿ ಶುಭಮಂಗಲ ಕಾರ್ಯಗಳ ಸಂಭ್ರಮ ತಂದೀತು. ಶೈಕ್ಷಣಿಕ ಕ್ಷೇತ್ರದಲ್ಲಿ ಅಧ್ಯಾಪಕ ವರ್ಗದವರಿಗೆ ಸ್ಥಾನಮಾನ, ಗೌರವ ಸಿಗಲಿದೆ. ದಿನಾಂತ್ಯ ಶುಭವಿದೆ.

ಕುಂಭರಾಶಿ (Kumbha)


ಸಾಂಸಾರಿಕವಾಗಿ ಸಹೋದರರೊಳಗೆ ಮತಭೇದ ಉಂಟಾದೀತು. ಧನಾದಾಯ ಉತ್ತಮವಿದ್ದರೂ ಖರ್ಚುವೆಚ್ಚಗಳು ತೋರಿ ಬಂದೀತು. ಸಾಮಾಜಿಕವಾಗಿ ಸ್ಥಾನಮಾನ, ಗೌರವವಿದ್ದರೂ ಜಾಗ್ರತೆ ವಹಿಸಿರಿ.

ಮೀನರಾಶಿ (Meena)


ವಿದ್ಯಾರ್ಥಿಗಳು ವಿದ್ಯಾಭಾಗ್ಯದ ಪ್ರಯೋಜನವನ್ನು ಪಡೆಯಲಿದ್ದಾರೆ. ಯುವಕ, ಯುವತಿಯರಿಗೆ ಪ್ರೇಮ ಪ್ರಸಂಗ ಕಗ್ಗಂಟಾದೀತು. ಹಿರಿಯರು ತೀರ್ಥಯಾತ್ರ ದರ್ಶನ ಪಡೆಯಲಿದ್ದಾರೆ. ನೂತನ ವ್ಯಾಪಾರ, ವ್ಯವಹಾರದಲ್ಲಿ ಜಾಗ್ರತೆ ಇರಲಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top