ಹೆಚ್ಚಿನ

ಸೂರ್ಯ ದೋಷದಿಂದ ಪರಿಹಾರ ಹೊಂದಿ ನಿಮ್ಮ ಎಲ್ಲ ಆರೋಗ್ಯ ಸಮಸ್ಯೆಯಿಂದ ಹೊರಬರಬೇಕು ಅಂದ್ರೆ ಹೀಗೆ ಮಾಡಿ .

ಸೂರ್ಯ ದೋಷದಿಂದ ಪರಿಹಾರ ಹೊಂದಿ ನಿಮ್ಮ ಎಲ್ಲ ಆರೋಗ್ಯ ಸಮಸ್ಯೆಯಿಂದ ಹೊರಬರಬೇಕು ಅಂದ್ರೆ ಹೀಗೆ ಮಾಡಿ .

ಸೂರ್ಯ ದೇವರನ್ನು ಆರಾಧಿಸಿದರೆ ಆರೋಗ್ಯ ಭಾಗ್ಯ ಲಭಿಸುತ್ತದೆ.ಸೂರ್ಯ ದೋಷ ನಿವಾರಣೆಗೆ ಏನು ಮಾಡಬೇಕು ?
ಹಿಂದೂಗಳು ಜೀವನ ಆಚಾರ ಮತ್ತು ಸಂಪ್ರದಾಯದಲ್ಲಿ ನವಗ್ರಹಗಳಿಗೆ ತುಂಬಾ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಮಾನವನ ಸ್ಥಿತಿಗತಿಗಳ ಮೇಲೆ, ವ್ಯಾಪಾರದ ಮೇಲೆ ನವಗ್ರಹಗಳ ಪ್ರಭಾವ ಇದ್ದೇ ಇರುತ್ತದೆ. ನಮ್ಮ ಸಂಪ್ರದಾಯದಲ್ಲಿ ದೇವತೆಗಳ ಸಮಾನವಾಗಿ ನವಗ್ರಹಗಳಿಗೂ ಕೂಡ ಅಷ್ಟೇ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಮನುಷ್ಯರು ಮಾಡಿದ ಪಾಪ, ಕರ್ಮಗಳನ್ನು, ಪುಣ್ಯಗಳನ್ನು ಅನುಸರಿಸಿ ಅವರ ಒಳ್ಳೆಯ ಮತ್ತು ಕೆಟ್ಟ ಫಲಿತಾಂಶಗಳನ್ನು ಈ ನವಗ್ರಹಗಳು ನೀಡುತ್ತಾರೆ .

 

 

ಬ್ರಹ್ಮನ ಪುತ್ರರಾದ ಕಶ್ಯಪರು ಮತ್ತು ಇವರ ಪತ್ನಿ ಅದಿತಿ. ಈ ದಂಪತಿಗಳ ಸಂತಾನವೇ ಸೂರ್ಯನು. ಸೂರ್ಯನಿಗೆ ಮಿತ್ರ ಗ್ರಹಗಳು ಚಂದ್ರ, ಗುರು, ಕುಜ, ಕೇತು .ಸೂರ್ಯನಿಗೆ ಶತ್ರು ಗ್ರಹಗಳು ಶುಧ, ಶನಿ ಮತ್ತು ರಾಹು ಗ್ರಹ .
ಸೂರ್ಯನು ಜಾತಕದಲ್ಲಿ ನೀಚ ಸ್ಥಾನದಲ್ಲಿ ಇದ್ದರೆ ಇದರಿಂದಾಗುವ ಕೆಟ್ಟ ಪರಿಣಾಮಗಳನ್ನು ಸೂರ್ಯ ದೋಷ ಎಂದು ಕರೆಯಲಾಗುತ್ತದೆ. ಸೂರ್ಯನ ಪ್ರಭಾವ ಮುಖ್ಯವಾಗಿ ದೇಹದ ಆರೋಗ್ಯದ ಮೇಲೆ ಮತ್ತು ಆತ್ಮದ ಮೇಲೆ ಪ್ರಭಾವ ಬೀರುತ್ತದೆ. ನಮ್ಮ ದೇಹದಲ್ಲಿ ಸೂರ್ಯನ ತೇಜಸ್ಸು ಕಡಿಮೆಯಾದರೆ, ಜನ್ಮ ಜಾತಕದಲ್ಲಿ ಸೂರ್ಯನು ಬಲಹೀನನಾಗಿದ್ದರೆ, ಸೂರ್ಯನ ದೆಶೆ ನಡೆಯುತ್ತಿದ್ದರೆ ಸೂರ್ಯ ದೋಷ ಎಂದು ಕರೆಯಲಾಗುತ್ತದೆ .

ಈ ಸೂರ್ಯ ದೋಷ ಇರುವವರಿಗೆ ಅವರ ಮನಸ್ಸು ಒಂದು ಕಡೆ ಸ್ಥಿರವಾಗಿ ಇರುವುದಿಲ್ಲ. ತಂದೆಯ ಕಡೆಯಿಂದ ಬಾಧೆಗಳು, ತಂದೆಯ ಜೊತೆ ಶತ್ರುತ್ವ, ತಂದೆಗೆ ಅನಾರೋಗ್ಯ, ವೈಯಕ್ತಿಕ ಜೀವನದಲ್ಲಿ ಅಡೆತಡೆಗಳು, ವ್ಯಾಪಾರದಲ್ಲಿ ನಷ್ಟಗಳು, ವೃತ್ತಿಯಲ್ಲಿಯೂ ಕೂಡ ಅಡೆತಡೆಗಳು ಉಂಟಾಗುತ್ತವೆ.

ಕುಟುಂಬದಲ್ಲಿ ಕಲಹ, ಪ್ರಯಾಣದಲ್ಲಿ ಕಷ್ಟಗಳು , ಅತಿಯಾದ ಭಯ, ಪೂರ್ವ ದಿಕ್ಕಿನಲ್ಲಿ ಬರುವ ಕಷ್ಟಗಳು, ಕ್ಷಯರೋಗ, ಆತ್ಮಬಲ ಕಡಿಮೆಯಾಗುವುದು, ಅತಿಯಾದ ಖಾರ ತಿನ್ನುವುದು, ಕಣ್ಣುಗಳು ಸರಿಯಾಗಿ ಕಾಣಿಸದೇ ಇರುವುದು, ಕಣ್ಣಿಗೆ ಸಂಬಂಧಪಟ್ಟ ಕಾಯಿಲೆಗಳು ಇವೆಲ್ಲವನ್ನೂ ಕೂಡ ಅನುಭವಿಸಬೇಕಾಗುತ್ತದೆ.ಸೂರ್ಯನನ್ನು ಪೂಜಿಸುವುದು, ಆದಿತ್ಯ ಹೃದಯ ಪಾರಾಯಣ ಮಾಡುವುದು, ಕೆಂಪು ಬಣ್ಣದ ವಸ್ತ್ರವನ್ನು ಧರಿಸುವುದು, ಮಾಣಿಕ್ಯ ಹರಳನ್ನು ಧರಿಸುವುದು ಒಳ್ಳೆಯದು.
ಸೂರ್ಯನಿಗೆ ಗೋಧಿ , ಬೆಲ್ಲ, ಕಂಚು, ಕುದುರೆ, ಕೆಂಪು ಚಂದನ,ಕೆಂಪು ತಾವರೆ ಹೂವುಗಳನ್ನು ಭಾನುವಾರ ದಿನ ಪೂಜೆ ಮಾಡಿ, ದಾನ ಮಾಡಿದರೆ ಸೂರ್ಯ ದೋಷದಿಂದ ಮುಕ್ತಿ ಹೊಂದಬಹುದು. ಯಾಕೆಂದರೆ ಇವೆಲ್ಲಾ ಸೂರ್ಯನಿಗೆ ಸಂಬಂಧಪಟ್ಟಿರುವ ಸಾಮಗ್ರಿಗಳು ಮತ್ತು ವಸ್ತುಗಳಾಗಿವೆ .

 

 

ಕಂಚು ಅಥವಾ ತಾಮ್ರದಿಂದ ಮಾಡಿದ ಉಂಗುರವನ್ನು ಧರಿಸಿದರೆ ಒಳ್ಳೆಯದು. ಕೇಸರಿ ಹೂವು ,ಕೆಂಪು ಚಂದನವನ್ನು ತಾಮ್ರದ ಪಾತ್ರೆಯಲ್ಲಿ ಬೆರೆಸಿ ಆ ನೀರಿನಿಂದ ಸ್ನಾನ ಮಾಡುವುದರಿಂದ ಸೂರ್ಯ ದೋಷ ನಿವಾರಣೆಯಾಗುತ್ತದೆ. ಅತಿಯಾದ ಕೋಪವನ್ನು ಕಡಿಮೆ ಮಾಡಿಕೊಳ್ಳುವುದರಿಂದ ಸೂರ್ಯ ದೋಷ ಸ್ವಲ್ಪವಾದರೂ ಕಡಿಮೆಯಾಗುತ್ತದೆ.

ಭಾನುವಾರದ ದಿನ ಕೆಂಪು ಅಥವಾ ಕೇಸರಿ ಬಣ್ಣದ ಉಡುಪನ್ನು ಧರಿಸಿದರೆ ಒಳ್ಳೆಯದು. ಬೆಲ್ಲವನ್ನು ತಿಂದು ಆ ದಿನದ ಕೆಲಸವನ್ನು ಪ್ರಾರಂಭಿಸಿದರೆ ಒಳ್ಳೆಯದು.
“ಓಂ ಹ್ರಂ ಹ್ರೀಂ ಹ್ರೌಂ ಸಃ ಸೂರ್ಯಾಯ ನಮಃ” ಎನ್ನುವ ಈ ಮೂಲಮಂತ್ರವನ್ನು ನಲವತ್ತು ದಿನಗಳು ಆರು ಸಾವಿರ ಬಾರಿ ಜಪಿಸಬೇಕು. ಈ ಮಂತ್ರವನ್ನು ಜಪಿಸುವುದರಿಂದ ಸೂರ್ಯನ ತೇಜಸ್ಸು ಹೆಚ್ಚಾಗಿ ಸೂರ್ಯನಿಗೆ ಸಂಬಂಧಿಸಿದ ದೋಷಗಳು ಎಲ್ಲ ದೂರವಾಗುತ್ತವೆ.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top