ಹೆಚ್ಚಿನ

ಅಮಾವಾಸ್ಯೆಯ ದಿನ ಯಾವ ರಾಶಿಯವರು ಯಾವ ದೇವರನ್ನು ಪೂಜೆ ಮಾಡಿದರೆ ಒಳ್ಳೆಯ ಫಲವನ್ನು ಪಡ್ಕೊಬಹುದು ಅಂತ ತಿಳ್ಕೊಳ್ಳಿ .

ಅಮಾವಾಸ್ಯೆಯ ದಿನ ಯಾವ ರಾಶಿಯವರು ಯಾವ ದೇವರನ್ನು ಪೂಜೆ ಮಾಡಿದರೆ ಒಳ್ಳೆಯ ಫಲವನ್ನು ಪಡ್ಕೊಬಹುದು ಅಂತ ತಿಳ್ಕೊಳ್ಳಿ .

ಅತೀಂದ್ರಿಯ ಶಕ್ತಿಗಳು ಇರುವ ಅಮಾವಾಸ್ಯೆ ಅಥವಾ ಪೂರ್ಣ ಕತ್ತಲಾಗಿರುವ ಚಂದ್ರನ ದಿನದಂದು ಯಾವ ರಾಶಿಯವರು ಯಾವ ದೇವರನ್ನು ಪೂಜೆ ಮಾಡಿದರೆ ಒಳ್ಳೆಯದು ಎಂದು ನಿಮಗೆ ಗೊತ್ತಾ ?
ನಮ್ಮ ಹಿಂದೂ ಸಂಪ್ರದಾಯದಲ್ಲಿ ಅಮಾವಾಸ್ಯೆಯ ದಿನಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ಹಿಂದಿನಿಂದಲೂ ಕೂಡ ನಮ್ಮ ಹಿರಿಯರು ಕೊಟ್ಟಿದ್ದಾರೆ. ಚಾಂದ್ರಮಾನದ ಹದಿನೈದು ದಿನದ ಮೊದಲನೆಯ ರಾತ್ರಿ ಇದು. ಈ ದಿನ ಚಂದ್ರನು ಸಂಪೂರ್ಣವಾಗಿ ಕತ್ತಲಾಗಿ ಹೋಗಿರುತ್ತಾನೆ. ಚಂದ್ರನು ಕಾಣದೇ ಇರುವುದರಿಂದ ಈ ದಿನವನ್ನು ಅಮಾವಾಸ್ಯೆ ಎಂದು ಚಂದ್ರನಿಲ್ಲದ ದಿನ ಎಂದು ಕರೆಯಲಾಗುತ್ತದೆ.

 

 

ಗರುಡ ಪುರಾಣದಲ್ಲಿ ಬರುವ ವಿಷ್ಣುವಿನ ಹೇಳಿಕೆಯ ಪ್ರಕಾರ ಅಮಾವಾಸ್ಯೆಯ ದಿನ , ಮರಣಿಸಿರುವ ಪಿತೃಗಳ ಆತ್ಮವು ತಮ್ಮ ಮನೆಗಳಿಗೆ ಆಹಾರವನ್ನು ಹುಡುಕಿಕೊಂಡು ಬರ್ತಾರೆ. ಬಂದು ಆಹಾರವನ್ನು ತಿಂದು ಆಶೀರ್ವಾದ ಮಾಡಿ ಹೋಗುತ್ತಾರೆ . ಸೋಮವಾರದ ದಿನ ಅಮಾವಾಸ್ಯೆ ಬಂದಲ್ಲಿ ಅದನ್ನು ಸೋಮಾವತಿ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ ಹಾಗೂ ಶನಿವಾರದ ದಿನ ಅಮಾವಾಸ್ಯೆ ಬಂದಲ್ಲಿ ಶನಿ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ

ಅಮಾವಾಸ್ಯೆಯ ದಿನ ಪೂಜೆ ಮಾಡಿ ಇಷ್ಟ ದೇವರ ಅನುಗ್ರಹವನ್ನು ಶೀಘ್ರವಾಗಿ ಪಡೆಯಬಹುದು. ಅಮಾವಾಸ್ಯೆಯ ದಿನ ಯಾವ ರಾಶಿಯವರು ಯಾವ ದೇವರನ್ನು ಪೂಜೆ ಮಾಡಿದರೆ ಒಳ್ಳೆಯ ಫಲವನ್ನು ಕಾಣಬಹುದು ಎಂಬುದನ್ನು ಈಗ ನಾವು ತಿಳಿದುಕೊಳ್ಳೋಣ. ಯಾವ ರಾಶಿಯವರು ಯಾವ ದೇವರನ್ನು ಪೂಜೆ ಮಾಡಬೇಕು ?.

ಮೇಷ ರಾಶಿ

 

ಈ ರಾಶಿಯವರು ಅಶ್ವತ್ಥ ಮರವನ್ನು ಪೂಜೆ ಮಾಡಿ ಒಂಬತ್ತು ಬಾರಿ ಪ್ರದಕ್ಷಿಣೆಯನ್ನು ಮಾಡಿದರೆ ಒಳ್ಳೆಯದು.

ವೃಷಭರಾಶಿ

 

 

ಈ ರಾಶಿಯವರು ಶಿವಲಿಂಗಕ್ಕೆ ನೀರಿನ ಅಭಿಷೇಕ ಮತ್ತು ನೀರಿನ ಜೊತೆಗೆ ಎಳ್ಳನ್ನು ಬೆರೆಸಿ ಅಭಿಷೇಕ ಮಾಡಿದರೆ ಒಳ್ಳೆಯದು .

ಮಿಥುನ ರಾಶಿ

 

 

ಈ ರಾಶಿಯವರು ಶ್ರೀ ಮಹಾವಿಷ್ಣುವಿನ ದೇವಸ್ಥಾನಕ್ಕೆ ಭೇಟಿ ನೀಡಿ ನೀಲಿ ಹೂವುಗಳನ್ನು ಸಮರ್ಪಿಸಬೇಕು.

ಕಟಕ ರಾಶಿ

 

 

ಈ ರಾಶಿಯವರು ಶಿವಲಿಂಗಕ್ಕೆ ಜೇನು ತುಪ್ಪದಿಂದ ಅಭಿಷೇಕ ಮಾಡಿದರೆ ಒಳ್ಳೆಯದು .

ಸಿಂಹ ರಾಶಿ

 

 

ಈ ರಾಶಿಯವರು ಗೌರಿ ದೇವಿಗೆ ಕುಂಕುಮಾರ್ಚನೆಯನ್ನು ಮಾಡಿದರೆ ಉತ್ತಮ.

ಕನ್ಯಾ ರಾಶಿ

 

 

ಇವರು ಅಶ್ವತ್ಥ ಮರವನ್ನು ಪೂಜೆ ಮಾಡಿ ನೂರಾ ಎಂಟು ಬಾರಿ ಪ್ರದಕ್ಷಿಣೆಯನ್ನು ಹಾಕಿ ನಮಸ್ಕಾರ ಮಾಡಬೇಕು.

ತುಲಾ ರಾಶಿ

 

 

ಈ ರಾಶಿಯವರು ಸಾಲಿಗ್ರಾಮಕ್ಕೆ ನಾಟಿ ತುಳಸಿಯನ್ನು ಅರ್ಪಿಸಿ ನಮಸ್ಕರಿಸಬೇಕು.

ವೃಶ್ಚಿಕ ರಾಶಿ

 

 

ಇವರು ಅಮಾವಾಸ್ಯೆಯ ದಿನ ಶಿವಲಿಂಗಕ್ಕೆ ಪಂಚಾಮೃತವನ್ನು ನೈವೇದ್ಯವಾಗಿ ಅರ್ಪಿಸಿ ನಮಸ್ಕರಿಸಬೇಕು.

ಧನಸ್ಸು ರಾಶಿ

 

 

ಇವರು ಶ್ರೀ ಮಹಾವಿಷ್ಣುವಿನ ದೇವಸ್ಥಾನಕ್ಕೆ ಭೇಟಿ ನೀಡಿ ಕೆಂಪು ಹೂವುಗಳನ್ನು ಸಮರ್ಪಣೆ ಮಾಡಿದರೆ ಉತ್ತಮ .

ಮಕರ ರಾಶಿ 

 

 

ಈ ರಾಶಿಯವರು ಗಣೇಶ ದೇವನಿಗೆ ಮೊಸರನ್ನವನ್ನು ನೈವೇದ್ಯವಾಗಿ ಸಮರ್ಪಿಸಬೇಕು.

ಕುಂಭ ರಾಶಿ

 

 

ಈ ರಾಶಿಯವರು ಈ ದಿನ ಶಿವನಿಗೆ ಅನ್ನದಿಂದ ಮಾಡಿದ ಸಿಹಿ ಪದಾರ್ಥವನ್ನು ನೈವೇದ್ಯವಾಗಿ ಸಮರ್ಪಿಸಬೇಕು.

ಮೀನ ರಾಶಿ

 

 

ಈ ರಾಶಿಯವರು ಹಸುವಿಗೆ ಬೆಲ್ಲವನ್ನು ನೀಡಿದರೆ ಒಳ್ಳೆಯದು.

ಹೀಗೆ ಈ ರೀತಿಯಾಗಿ ಪ್ರತಿಯೊಂದು ರಾಶಿಯವರು ಕೂಡ ವಿಧ ವಿಧವಾದ ದೇವರನ್ನು ವಿಧ ವಿಧವಾದ ರೀತಿಯಲ್ಲಿ ಪೂಜಿಸಿ ದೇವರ ಅನುಗ್ರಹವನ್ನು ಪಡೆದುಕೊಳ್ಳಬಹುದು .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top