ಸಮಾಚಾರ

ಶ್ರೀಲಂಕಾದಲ್ಲಿ ಭೂಮಿಯನ್ನು ಅಗೆಯುವಾಗ ಬಯಲಾದ ಅತಿ ದೊಡ್ಡ ರಹಸ್ಯ ,ಹನುಮಂತನಿಗೂ ಇದ್ದಕ್ಕೂ ಇರುವ ಸಂಬಂಧ ವೇನು .

ಶ್ರೀಲಂಕಾದಲ್ಲಿ ಭೂಮಿಯನ್ನು ಅಗೆಯುವಾಗ ಬಯಲಾದ ಅತಿ ದೊಡ್ಡ ರಹಸ್ಯ ,ಹನುಮಂತನಿಗೂ ಇದ್ದಕ್ಕೂ ಇರುವ ಸಂಬಂಧ ವೇನು .

ವಾಯುಪುತ್ರ ಹನುಮ ವಾಯುವಿಗೆ ಎಲ್ಲವನ್ನೂ ಮೀರಿ ಹೋಗುವ ಶಕ್ತಿ ಇದೆ. ಅದನ್ನು ಮೀರಿ ಹೋಗುವ ಶಕ್ತಿ ಕೇವಲ ಮನಸ್ಸಿಗೆ ಮಾತ್ರ ಇದೆ ಎಂದು ಹಿರಿಯರು ಹೇಳುತ್ತಾರೆ. ಅದನ್ನೇ ಮನೋ ವೇಗ ಎನ್ನುವುದು. ಈ ಮನೋ ವೇಗ ಉಳ್ಳವನೇ ಆಂಜನೇಯ. ಆದ್ದರಿಂದ ಆತನನ್ನು ಖುಷಿ ಮುನಿಗಳು ಮನೋವೇಗ ಘಮನ ಎಂದು ವರ್ಣಿಸುತ್ತಾರೆ. ನಮ್ಮ ಮನಸ್ಸಿನಲ್ಲಿರುವ ಸಂಕಲ್ಪವನ್ನು ತಿಳಿದು ಅದಕ್ಕೆ ಸ್ಪಂದಿಸಿ ನಮ್ಮನ್ನು ಭವ ಸಾಗರದಿಂದ ದಾಟಿಸುವ ಶಕ್ತಿ ಕೇವಲ ಆಂಜನೇಯ ಸ್ವಾಮಿಗೆ ಮಾತ್ರ ಇದೆ.

 

 

ಆಂಜನೇಯ ಸ್ವಾಮಿಯ ಹೆಸರು ಹೇಳಿದರೆ ಸಾಕು ಭಕ್ತಿಗೆ ,ಯುಕ್ತಿಗೆ, ವಾಕ್ಚಾತುರ್ಯಕ್ಕೆ, ಶಿಸ್ತಿಗೆ , ಯಶಸ್ಸಿಗೆ ಪ್ರತಿರೂಪವಾಗಿ ನಿಲ್ಲುತ್ತಾನೆ. ಆಪತ್ತಿನಲ್ಲಿ ಇರುವವರನ್ನು ರಕ್ಷಿಸುವಂತಹ ಸ್ನೇಹ, ಬಾಂಧವ್ಯದ ಬೆಸುಗೆಯಲ್ಲಿ ಪರಮೋದ್ದಾರವನ್ನು ಕಂಡುಕೊಳ್ಳುವ ಸೃಷ್ಟಿಯಲ್ಲಿ ಒಬ್ಬರೇ ಮಾತ್ರ ಇರುವವರು ಅಂಥವರೇ ಆಂಜನೇಯ.
ಸಹಾಯಹಸ್ತವನ್ನು ನೀಡುವುದು ಕೇವಲ ಆಂಜನೇಯನಿಂದಲೇ ಆರಂಭವಾಗಿದೆ ಎಂದು ಹೇಳಲಾಗುತ್ತದೆ. ತಾನು ನಂಬಿದ ತನ್ನ ಸ್ವಾಮಿಗೆ ಶರಣಾಗಿ ನಂಬಿಕೆ, ವಿಶ್ವಾಸವನ್ನು ಉಳಿಸಿಕೊಂಡು ಶ್ರೀರಾಮಚಂದ್ರನಿಗೆ ಸಹಾಯವನ್ನು ಮಾಡಿ ತನ್ನ ಕೀರ್ತಿಯನ್ನು ದಶ ದಿಕ್ಕುಗಳಲ್ಲಿಯೂ ಪಸರಿಸುವಂತಹ ಶಕ್ತಿ ಉಳ್ಳವನು ಕೇವಲ ಆಂಜನೇಯ.

ರಾಮನ ಪಾದಗಳಲ್ಲಿ ಅತೀವವಾದ ಭಕ್ತಿಯನ್ನು ಉಳ್ಳವನು ಹನುಮ. ಮಹಾ ಪರಾಕ್ರಮ ಶಾಲಿ ಸಹಾಯ ಮಾಡುವ ಪರಿಯನ್ನು ಎಷ್ಟು ಬಗೆಯಲ್ಲಿ ವರ್ಣಿಸಿದರೂ ಅದು ಅಸಾಧ್ಯವೇ. ಸಹಾಯ ಹಸ್ತ ಬೇಡಿ ಬಂದವರಿಗೆ ಪರ್ವತಗಳನ್ನು ದಾಟಿ ಗಿರಿ ಶಿಖರಗಳನ್ನು ಪುಡಿಪುಡಿ ಮಾಡುವಷ್ಟು ಪರಾಕ್ರಮ ಬಲಶಾಲಿ ಈತ. ಧೈರ್ಯಕ್ಕೆ ಪ್ರತಿರೂಪ, ಶಿಸ್ತಿನ ಸಿಪಾಯಿ ಶ್ರೀರಾಮನಿಗೆ ಎದುರು ನಿಲ್ಲುವ ಪರಮ ಭಕ್ತನ ವಾಹನವನ್ನು ಶಿರಸಾವಹಿಸಿ ಮುನ್ನಡೆಸುವಂತಹ ವ್ಯಕ್ತಿ ಹನುಮಂತನಿಗೆ ಇದೆ.ಅಂತಹ ಮಹಾ ಪರಾಕ್ರಮಿ ಶಾಲಿಯಾದ ಆಯುಧ ಗದೆ .ಈ ಗಧೆಯ ಬಗ್ಗೆ ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಯಾಕೆಂದರೆ ಪುರಾಣಗಳ ಪ್ರಕಾರ ಯಾವ ದೇವತೆಗಳಿಗೂ ಇಂತಹ ಆಯುಧ ಇಲ್ಲ ಎಂದು ಹೇಳುತ್ತಾರೆ. ಆಂಜನೇಯನಿಗೆ ಮಾತ್ರ ಅದನ್ನು ಹೊರುವಷ್ಟು ಶಕ್ತಿ, ಉಪಯೋಗಿಸಿ ಬಲ್ಲ ಯುಕ್ತಿ ಗೊತ್ತಿದೆ. ಇದರಿಂದ ಯುದ್ಧಕ್ಕೆ ಇಳಿದರೆ ಸಾಕು ಎದುರು ಎಂತಹ ಯೋಧನೆ ಇದ್ದರೂ ಕ್ಷಣಗಳಲ್ಲಿ ಮೂರ್ಛೆ ಹೊಂದಿ ಕೊನೆಗಾಣಬೇಕಾಗುತ್ತದೆ.

 

 

ಆತನ ಆಯುಧ ಅಂತಹ ರಾಕ್ಷಸರಿಗೆ ನಡುಕವನ್ನು ಹುಟ್ಟಿಸುವಂಥದ್ದು. ಅದನ್ನು ಮುಟ್ಟಿದರೆ ಸಾಕು ಭಸ್ಮವಾಗುತ್ತಾರೆ. ಹೋಗಲಿ ಮುಟ್ಟಿ ಕದಲಿಸಲು ಹರಸಾಹಸ ಮಾಡಿ ಮುಟ್ಟಿ ಕದಲಿಸಲು ಹೆಣಗಾಡಬೇಕಾಗುತ್ತದೆ. ಮನೋ ವೇಗವನ್ನು ಹೊಂದಿರುವುದರಿಂದ ಈತನು ತನ್ನ ಮನಸ್ಸಿಗೆ ತಕ್ಕಂತೆ ಆಯುಧವನ್ನು ಬದಲಿಸಿಕೊಳ್ಳಬಲ್ಲ ಯುಕ್ತಿಯನ್ನು, ಶಕ್ತಿಯನ್ನು ಹೊಂದಿರುವಂಥವು ಎಂದು ಹೇಳಲಾಗುತ್ತದೆ.
ಹೀಗಾಗಿ ಈಗ ಆತನ ಆಯುಧ ಶ್ರೀಲಂಕಾದಲ್ಲಿ ಹೊರ ಬಿದ್ದಿರುವ ವಿಷಯ ತಿಳಿದು ಬಂದಿದೆ. ರಾವಣನೊಂದಿಗೆ ಯುದ್ಧ ಮಾಡಿದ ನಂತರ ಆಂಜನೇಯ ಸ್ವಾಮಿ ಅಲ್ಲಿಯೇ ಗುಡ್ಡ ಬೆಟ್ಟಗಳಲ್ಲಿ ನೆಲೆಸಿರುವನೆಂದು ಪ್ರತೀತಿ ಇದೆ. ಆದ್ದರಿಂದಲೇ ಆತನ ಆಯುಧ ಅಲ್ಲೇ ಬಿದ್ದಿರಬೇಕು ಎಂದು ಹೇಳುವುದುಂಟು. ಅದು ಈಗ ಹೊರಗೆ ಬಂದಿದೆ ಎಂದು ಹೇಳಲಾಗುತ್ತಿದೆ. ಅದರ ಭಾರ 21 ಟನ್ನುಗಳಷ್ಟು, ಉದ್ದ ನಲವತ್ತೈದು ಅಡಿಗಳಂತೆ. ಇದನ್ನು ಮನುಷ್ಯರು ಕದಲಿಸುವುದು ಅಸಾಧ್ಯವಾದ ಮಾತಾಗಿದೆಯಂತೆ. ಶ್ರೀಲಂಕಾಕ್ಕೂ ರಾಮಾಯಣಕ್ಕೂ ಇರುವ ನಂಟು ಬೇರೆಯಾಗಿ ಹೇಳುವ ಅಗತ್ಯವೇನೂ ಇಲ್ಲ.

ರಾವಣಾಸುರನ ಜೊತೆ ನಡೆಯುವ ಯುದ್ಧ, ಸೀತೆಯ ಅಪಹರಣ ನಂತರ ಶ್ರೀರಾಮನು ರಾವಣನನ್ನು ಸಂಹರಿಸಿ ಸೀತಾ ಮಾತೆಯನ್ನು ಕರೆದುಕೊಂಡು ಬಂದು ಇಬ್ಬರೂ ಒಂದಾಗಿ ಅಯೋಧ್ಯೆಯಲ್ಲಿ ನಡೆಸಿರುವ ವಿಚಾರ ಎಲ್ಲರಿಗೂ ತಿಳಿದಿರುವ ವಿಷಯವೇ ಅದರ ನಂತರ ಚಿರಂಜೀವಿ ಆಗುವಂತೆ ಸಾಕ್ಷಾತ್ ಜಗನ್ಮಾತೆಯಾದ ಸೀತೆಯು ಹನುಮಂತನನ್ನು ಹರಸಿ ಆಶೀರ್ವದಿಸಿದಳು ಎಂದು ಹೇಳಲಾಗುತ್ತದೆ. ಎಲ್ಲಿಯವರೆಗೂ ಸೂರ್ಯ, ಚಂದ್ರರು ನೆಲೆಸಿರುವವರು, ಎಲ್ಲಿಯವರೆಗೂ ರಾಮನ ಕೀರ್ತಿ ಇರುತ್ತದೆಯೋ, ಅಲ್ಲಿಯವರೆಗೂ ನೀನು ಚಿರಂಜೀವಿಯಾಗಿ ಈ ಜಗತ್ತಿನಲ್ಲಿ ನೆಲೆಸಿರುವೆ ಎಂದು ಸಾಕ್ಷಾತ್ ಸೀತೆಯೇ ಹನುಮನನ್ನು ಹರಸುತ್ತಾಳೆ.

 

 

ಇನ್ನು ಈಗ ಇಲ್ಲಿ ಹೊರಬಿದ್ದ ಈ ವಿಷಯದ ಬಗ್ಗೆ ಸಾಕಷ್ಟು ಸಂದೇಹಗಳು ಇವೆ. ಈ ಸಂಗತಿಗೆ ಬಂದಾಗ ಇಂದೋರ್ ನಲ್ಲಿರುವ ಕ್ವೀಟ್ ಫೋರ್ಟ್ ನಲ್ಲಿ ಏರ್ಪಡಿಸಿದ್ದ 125 ಅಡಿಗಳಷ್ಟು ಇರುವ ಆಂಜನೇಯ ಸ್ವಾಮಿಯ ವಿಗ್ರಹಕ್ಕೆ ಈ ಗಧೆಯನ್ನು ಇಟ್ಟಿದ್ದಾರಂತೆ. ಮೊದಲಿಗೆ ಈ ಗಧೆ ಶ್ರೀಲಂಕಾದಲ್ಲಿ ಸಿಕ್ಕಿತ್ತೆಂದು ಪ್ರಚಾರ ಮಾಡಲಾಯಿತಂತೆ.
ಆಂಜನೇಯನ ಪಾದಗಳ ಗುರುತು ಕಂಡ ನಾವು ಆಯುಧವು ಕೂಡ ಅಲ್ಲಿಯೇ ಸಿಕ್ಕಿರಬಹುದೆಂದು ಕೆಲವರು ವಿಸ್ಮಯದಂತೆ ಮತ್ತೆ ಕೆಲವರ ಸಂಶಯ ಏನಪ್ಪಾ ಎಂದರೆ ಈಗ ಇದನ್ನು ಶ್ರೀಲಂಕಾದಲ್ಲಿ ಯಾಕೆ ಸಿಕ್ಕಿತು ಎಂದು ಮತ್ತೆ ಕೆಲವರು ಇದು ಸುಳ್ಳು ಎಂದು ಕೂಡ ವಾದಿಸುತ್ತಿರುವವರು.ಕಥೆ ಏನೇ ಆಗಿರಲಿ ಆ ಆಂಜನೇಯನ ಗದೆ ಎಲ್ಲೋ ಒಂದು ಕಡೆ ಇದ್ದೇ ಇರುತ್ತದೆ. ಯಾಕೆಂದರೆ ಆತ ಚಿರಂಜೀವಿ. ಆದ್ದರಿಂದ ಚಿರಂಜೀವಿಯಾದ ಹನುಮಂತನನ್ನು ಭಕ್ತರು ಶ್ರದ್ಧೆ ,ಭಕ್ತಿಯಿಂದ ಪೂಜಿಸುತ್ತಾರೆ .

 

ಆತನ ಗದೆ , ಆತನ ಪರಾಕ್ರಮ, ಶಕ್ತಿ ,ಆತನ ಯುಕ್ತಿಗೆ, ಶರಣಾಗಿ ಹೋದವರಿಗೆ ಆ ಭಜರಂಗಬಲಿ ಅಭಯಹಸ್ತ ನೀಡದೇ ಬಿಡುವುದಿಲ್ಲ . ಕಥೆಗಳು ಏನೇ ಇರಲಿ ಆಯುಧ ಎಲ್ಲೇ ಇರಲಿ ಹನುಮಂತನು ಚಿರಂಜೀವಿ ಆಗಿರುವುದಂತೂ ಸತ್ಯ. ಯಾರು ಹನುಮಂತನನ್ನು ಭಕ್ತಿ ಶ್ರದ್ಧೆಯಿಂದ ಪೂಜಿಸುತ್ತಾರೋ , ಅವರು ಸಕಲ ಕಷ್ಟಗಳಿಂದ ಸಕಲ ದುಃಖಗಳಿಂದ ಮುಕ್ತಿ ಹೊಂದಿ ಸುಖವಾಗಿ ಜೀವನ ಸಾಗಿಸುವಂತವರಾಗುತ್ತಾರೆ.

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top