ಭವಿಷ್ಯ

9 ಜೂನ್ ರಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ ತಿಳಿಯಲು ಮುಂದೆ ಓದಿ

ಶನಿವಾರ, ೦೯ ಜೂನ್ ೨೦೧೮
ಸೂರ್ಯೋದಯ : ೦೫:೫೬
ಸೂರ್ಯಾಸ್ತ : ೧೮:೪೧
ಶಕ ಸಂವತ : ೧೯೪೦ ವಿಲಂಬಿ
ಅಮಂತ ತಿಂಗಳು : ಜ್ಯೇಷ್ಠ (ಅದಿಕ)

ಪಕ್ಷ : ಕೃಷ್ಣ ಪಕ್ಷ
ತಿಥಿ : ದಶಮೀ
ನಕ್ಷತ್ರ : ರೇವತಿ
ಯೋಗ : ಸೌಭಾಗ್ಯ
ಸೂರ್ಯ ರಾಶಿ : ವೃಷಭ

ಅಭಿಜಿತ್ ಮುಹುರ್ತ : ೧೧:೫೩ – ೧೨:೪೪
ಅಮೃತಕಾಲ : ೨೦:೪೬ – ೨೨:೨೨
ರಾಹು ಕಾಲ: ೦೯:೦೭ – ೧೦:೪೩
ಗುಳಿಕ ಕಾಲ: ೦೫:೫೬ – ೦೭:೩೨
ಯಮಗಂಡ: ೧೩:೫೪ – ೧೫:೩೦

ಮೇಷ (Mesha)

ಕಷ್ಟದ ದಿನಗಳು ಚೈನಿನ ಸರಪಳಿಯಂತೆ ಒಂದಕ್ಕೊಂದು ಅಂಟಿಕೊಂಡೇ ಇರುತ್ತದೆ. ಅಂತಹ ಕಷ್ಟದ ಸಂಕೋಲೆಗಳಿಂದ ಬಿಡುಗಡೆ ಹೊಂದಲು ಭಗವಂತನ ನಾಮಸ್ಮರಣೆ ಒಂದೇ ವಜ್ರಾಯುಧ. ಹಾಗಾಗಿ ಕುಲದೇವರನ್ನು ಭಕ್ತಿಯಿಂದ ಬೇಡಿಕೊಳ್ಳಿರಿ.

ವೃಷಭ (Vrushabh)


ನಿಮ್ಮ ಬಳಿ ಅಗಾಧವಾದ ಪ್ರತಿಭೆ ಇದ್ದು ಅದು ಇಂದು ಸಾರ್ವಜನಿಕವಾಗಿ ಅನಾವರಣಗೊಳ್ಳಲಿದೆ. ವಿವಿಧ ಮೂಲಗಳಿಂದ ಹಣಕಾಸು ಒದಗಿ ಬರುವ ಸಾಧ್ಯತೆ ಇದ್ದು, ಮನೆಯ ಹಿರಿಯರ ಆರೋಗ್ಯದ ಕಡೆ ಗಮನ ಹರಿಸುವುದು ಒಳ್ಳೆಯದು.

ಮಿಥುನ (Mithuna)


ನಂಬಿಕಸ್ಥರೇ ಹಣದ ವಿಷಯದಲ್ಲಿ ಮೋಸ ಮಾಡುವ ಸಾಧ್ಯತೆ ಇರುವುದು. ಈ ಬಗ್ಗೆ ಜಾಗ್ರತೆ. ಹಣಕಾಸಿನ ವಿಚಾರವಾಗಿ ಅನ್ಯರೊಡನೆ ಚರ್ಚೆ ಮಾಡದಿರಿ. ಆಂಜನೇಯ ಸ್ವಾಮಿಯನ್ನು ಭಕ್ತಿಯಿಂದ ಆರಾಧಿಸಿ. ಮನಸ್ಸಿಗೆ ಧೈರ್ಯ ತುಂಬಿರಿ.

ಕರ್ಕ (Karka)


ಜಯವಿರುವವರೆಗೂ ಭಯವಿಲ್ಲ ಎನ್ನುವಂತೆ ಗುರುವಿನ ಶ್ರೀರಕ್ಷೆ ನಿಮಗೆ ಇರುವುದರಿಂದ ಮಹತ್ತರವಾದ ಕೆಲಸ ಕಾರ್ಯಗಳನ್ನು ಹಮ್ಮಿಕೊಳ್ಳಲು ಇಂದು ಸಕಾಲ. ಉತ್ಸಾಹದ ಭರದಲ್ಲಿ ನಿಮ್ಮ ಮಾತಿನಲ್ಲಿ ತಪ್ಪು ನುಸುಳದಂತೆ ನೋಡಿಕೊಳ್ಳಿರಿ.

ಸಿಂಹ (Simha)


ನಿಮ್ಮ ಹೆಸರನ್ನು ಕೆಡಿಸುವ ಪ್ರಯತ್ನವನ್ನು ಇತರರು ಮಾಡುವ ಸಾಧ್ಯತೆ ಇದೆ. ಹಾಗಾಗಿ ಈದಿನ ಬಹು ಎಚ್ಚರಿಕೆಯಿಂದ ನಿಮ್ಮ ವಿಚಾರಗಳನ್ನು ಮಂಡಿಸಿರಿ. ಸಂಗಾತಿಯ ಆರೋಗ್ಯದಲ್ಲಿ ಚೇತರಿಕೆ ಕಂಡುಬರುವುದರಿಂದ ನೆಮ್ಮದಿ ಉಂಟಾಗುವುದು.

ಕನ್ಯಾರಾಶಿ (Kanya)


ಜನ್ಮಶನಿಯು ಇನ್ನು ಕೆಲಕಾಲ ಬಾಧಿಸುವುದರಿಂದ ಯಾವುದೇ ಮಹತ್ತರ ಕಾರ್ಯಗಳು ಸುಲಲಿತವಾಗಿ ಆಗುತ್ತಿಲ್ಲ. ಹಾಗಾಗಿ ಚಿಂತೆ ಬೇಡ. ನೂತನವಾಗಿ ಕಟ್ಟುತ್ತಿರುವ ದೇವಾಲಯಕ್ಕೆ ಕಬ್ಬಿಣ ದಾನ ಮಾಡಿರಿ. ಇಲ್ಲವೇ ಕಪ್ಪು ಹಸುವಿಗೆ ಆಹಾರ ನೀಡಿರಿ.

ತುಲಾ (Tula)


ನಿಮ್ಮ ಶಾಂತ ಪ್ರತಿಕ್ರಿಯೆ ಹಾಗೂ ಜಾಣ್ಮೆಯಿಂದ ಬಿರುಗಾಳಿಯನ್ನು ಸಹ ತಡೆಯುವ ಶಕ್ತಿ ಉಂಟಾಗುವುದು. ರಾಜತಾಂತ್ರಿಕ ಕಚೇರಿಯಲ್ಲಿ ಕೆಲಸ ಮಾಡುವವರಿಗೆ ಉತ್ತಮ. ಆದಷ್ಟು ಖರ್ಚು-ವೆಚ್ಚ ಕಡಿಮೆ ಮಾಡಿಕೊಳ್ಳುವುದು ಒಳ್ಳೆಯದು.

ವೃಶ್ಚಿಕ (Vrushchika)


ನಿಮ್ಮ ಆಸ್ತಿಪಾಸ್ತಿಗಳ ಕಡತಗಳನ್ನು ಜತನದಿಂದ ರಕ್ಷಿಸಿಕೊಳ್ಳಿರಿ. ಸೋದರ ಸಂಬಂಧಿ ಜನರಿಂದ ಕಿರಿಕಿರಿಗೆ ಕಾರಣವಾಗುವ ಸಾಧ್ಯತೆ ಇದೆ. ಈ ವಿಷಯಕ್ಕೆ ಸಂಬಂಧಪಟ್ಟಂತೆ ವಾದ-ವಿವಾದಗಳು ಉಂಟಾಗುವ ಸಾಧ್ಯತೆ ಇದೆ.

ಧನು ರಾಶಿ (Dhanu)


ನಿಮ್ಮ ವಿಚಾರವನ್ನು ಸ್ವೀಕರಿಸುವ ಅಥವಾ ಬೆಂಬಲಿಸುವ ಜನರು ಇರುವುದರಿಂದ ಅಧೈರ್ಯಪಡುವ ಕಾರಣವಿಲ್ಲ. ಆಂಜನೇಯ ಸ್ವಾಮಿಯನ್ನು ನೆನೆದು ಇಂದು ಕಾರ್ಯ ಪ್ರವೃತ್ತರಾಗಿರಿ ಮತ್ತು ಇಂದಿನ ಕೆಲಸದಲ್ಲಿ ಯಶಸ್ಸು ಹೊಂದಿರಿ.

ಮಕರ (Makara)


ಎಂಜಿನಿಯರುಗಳಿಗೆ, ವಸ್ತ್ರವಿನ್ಯಾಸಕಾರರಿಗೆ ಇಂದು ಹೊಸ ದಾರಿ ದೊರೆಯುವುದು. ಇದರಿಂದ ಆರ್ಥಿಕ ಅಭಿವೃದ್ಧಿ ಉಂಟಾಗುವುದು. ಸಮಾಜವು ನಿಮ್ಮ ಕೌಶಲ್ಯವನ್ನು ಕೊಂಡಾಡುತ್ತಿದ್ದರೆ ನಿಮ್ಮ ಸಂಗಾತಿಯ ಚಿಂತನೆ ಬೇರೆಯದಾಗಿ ಇರುತ್ತದೆ.

ಕುಂಭರಾಶಿ (Kumbha)


ಆರ್ಥಿಕ ಅಭಿವೃದ್ಧಿ ನಿಧಾನವಾದರೂ ಸಂತೃಪ್ತಿ ಬದುಕು, ಹೊಸ ಆಲೋಚನೆಗಳು ನಿಮ್ಮನ್ನು ಕಾಡುತ್ತವೆ. ಕೌಟುಂಬಿಕವಾಗಿ ನೆಮ್ಮದಿಯ ದಿನ. ಆರೋಗ್ಯ ಉತ್ತಮವಾಗಿರುವುದು.

ಮೀನರಾಶಿ (Meena)


ಮಹತ್ವದ ಯೋಜನೆಗಳಲ್ಲಿ ಯಶಸ್ಸು ನಿಮ್ಮದಾಗುವುದು. ಹೊಸ ಯೋಜನೆಗಳ ತಯಾರಿ ಮತ್ತು ಅನುಷ್ಠಾನಗಳಿಗೆ ಒಳ್ಳೆಯ ಸಮಯ. ಮನೆಗೆ ಬಂಧುಗಳ ಆಗಮನದಿಂದ ಸಂತಸವಾಗುವುದು. ಆರೋಗ್ಯ ಉತ್ತಮ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top