ಹೆಚ್ಚಿನ

ರಾಹುಕಾಲದಲ್ಲಿ ಯಾವುದೇ ಒಳ್ಳೆ ಕೆಲಸಗಳು ಮಾಡಬಾರದು ಮಾಡಿದ್ರೆ ರಾಹುವಿನ ದೋಷದಿಂದ ಪರಿಹಾರ ಕಂಡುಕೊಳ್ಳಲು ಈ ವಸ್ತುಗಳನ್ನು ದಾನ ಮಾಡಿ .

ರಾಹುಕಾಲದಲ್ಲಿ ಯಾವುದೇ ಒಳ್ಳೆ ಕೆಲಸಗಳು ಮಾಡಬಾರದು ಮಾಡಿದ್ರೆ ರಾಹುವಿನ ದೋಷದಿಂದ ಪರಿಹಾರ ಕಂಡುಕೊಳ್ಳಲು ಈ ವಸ್ತುಗಳನ್ನು ದಾನ ಮಾಡಿ .

ರಾಹು ಎಂದರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಮತ್ತು ಹಿಂದೂ ನಂಬಿಕೆಯ ಪ್ರಕಾರ ಹಾವಿನ ತಲೆ ಹಾಗೂ ಕೇತು ಎಂದರೆ ಹಾವಿನ ಬಾಲದ ಭಾಗವಾಗಿದೆ . ರಾಹು ಎಂಬುದು ಸೂರ್ಯ ಅಥವಾ ಚಂದ್ರನನ್ನು ನುಂಗಿ ಈ ಭೂಮಿಯ ಮೇಲೆ ಗ್ರಹಣಗಳನ್ನು ಉಂಟು ಮಾಡುವುದು. ರಾಹು ಮತ್ತು ಕೇತು ಈ ಎರಡು ಗ್ರಹಗಳು ನವಗ್ರಹಗಳಲ್ಲಿ ಇವು ಕೂಡ ಸೇರಿದ್ದು, ನಾಲ್ಕು ಹಾಗೂ ಏಳನೇ ಕ್ರಾಮಾಂಕದ ಸಂಖ್ಯೆಯಲ್ಲಿಯೂ , ನಾಲ್ಕು ಮತ್ತು ಏಳನೇ ಸಂಖ್ಯೆಯಾಗಿ ಸ್ಥಾನವನ್ನು ಪಡೆದಿದೆ. ರಾಹುಕಾಲವನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ರಾಹುಕಾಲದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಕೂಡ ಮಾಡಲಾಗುವುದಿಲ್ಲ .

 

 

ಜ್ಯೋತಿಷ್ಯಶಾಸ್ತ್ರದಲ್ಲಿ ರಾಹು ಕಾಲವನ್ನು ಅಶುಭ ಸಮಯವೆಂದು ಅಥವಾ ಕಾಲವೆಂದು ಪರಿಗಣಿಸಲಾಗಿದೆ. ರಾಹುಕಾಲದಲ್ಲಿ ಶುರು ಮಾಡುವ ಕೆಲಸಗಳಲ್ಲಿ ಯಶಸ್ಸು ಗಳಿಸಲು ತುಂಬಾ ಕಷ್ಟ ಹಾಗೂ ಯಶಸ್ಸು ಗಳಿಸಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತದೆ. ಕೆಲಸದಲ್ಲಿ ವಿನಾ ಕಾರಣ ಸಮಸ್ಯೆಗಳು ಎದುರಾಗುತ್ತವೆ.

ರಾಹುಕಾಲದಲ್ಲಿ ಕೆಲಸಗಳನ್ನು ಮಾಡಬಾರದು. ರಾಹುಕಾಲದಲ್ಲಿ ಉದ್ಯೋಗ ಶುರು ಮಾಡಬಾರದು. ಯಜ್ಞ, ಯಾಗಾದಿಗಳನ್ನು ಸಹ ಮಾಡಬಾರದು. ರಾಹುಕಾಲದಲ್ಲಿ ದೊಡ್ಡ ಒಪ್ಪಂದಗಳನ್ನು ಕೂಡ ಮಾಡಿಕೊಳ್ಳಬಾರದು. ನಿಶ್ಚಿತಾರ್ಥ, ಮದುವೆ, ಗೃಹಪ್ರವೇಶ ಸೇರಿದಂತೆ ಇನ್ನು ಅನೇಕ ಶುಭ ಮತ್ತು ಮಂಗಳ ಕಾರ್ಯಗಳನ್ನು ಮಾಡಬಾರದು .ಇನ್ನು ರಾಹು ಕಾಲದಲ್ಲಿ ಎಲ್ಲಿಗೂ ಕೂಡ ಪ್ರವಾಸವನ್ನು ಕೈಗೊಳ್ಳಬಾರದು. ಅವಶ್ಯಕತೆ ಇದ್ದಲ್ಲಿ ಮೊಸರು ಹಾಗೂ ಸಿಹಿ ತಿಂದು ಹೊರಗೆ ಹೋಗಬೇಕು . ಹೊಸ ಕೃಷಿ ಚಟುವಟಿಕೆಗಳನ್ನು ಮತ್ತು ಕೆಲಸಗಳನ್ನು ಮಾಡಬಾರದು.ರಾಹುಕಾಲದಲ್ಲಿ ವಾಹನ, ಮನೆ, ಮೊಬೈಲ್ , ಕಂಪ್ಯೂಟರ್ , ಟಿವಿ ಆಭರಣ ಸೇರಿದಂತೆ ಯಾವುದೇ ಅಮೂಲ್ಯ ವಸ್ತುಗಳನ್ನು ಖರೀದಿ ಮಾಡಬಾರದು .

 

 

 

ರಾಹುವಿನ ದೋಷಕ್ಕೆ ಪರಿಹಾರಗಳು.
ಇರುವೆಗಳು ಸಹ ರಾಹುವಿಗೆ ಮೆಚ್ಚಿನ ಜೀವಿಗಳಲ್ಲಿ ಒಂದಾಗಿದೆ. ಭಾರತದ ಕೆಲವು ಭಾಗಗಳಲ್ಲಿ ಇರುವೆಗಳಿಗೆ ಆಹಾರ ನೀಡುವುದು ಕೂಡ ರಾಹುವನ್ನು ಪ್ರಸನ್ನ ಗೊಳಿಸುತ್ತದೆ.

ರಾಹುವಿನ ದೋಷಕ್ಕೆ ದಾನ ಮಾಡಬೇಕಾದ ವಸ್ತುಗಳು.
ಸಾಸಿವೆ, ಮೂಲಂಗಿ, ಕಂಬಳಿ ,ಎಳ್ಳು, ಸೀಸಾ, ಕೇಸರಿ, ಸಮಾಜ ಅಂದರೆ ಏಳು ಧಾನ್ಯಗಳ ಮಿಶ್ರಣ ಮತ್ತು ಕಲ್ಲಿದ್ದಿಲು.

ದಾನ ನೀಡುವ ಸಮಯ.
ಭಾನುವಾರ ಬೆಳಗಿನ ಜಾವ ಈ ಪದಾರ್ಥಗಳನ್ನು ರಾಹುವಿನಿಂದ ಕೆಟ್ಟ ಪರಿಣಾಮಗಳನ್ನು ಅನುಭವಿಸುತ್ತಿರುವವರು ಅಥವಾ ಜಾತಕದಲ್ಲಿ ರಾಹು ಒಳ್ಳೆಯ ಮನೆಯಲ್ಲಿ ಇಲ್ಲದ ವ್ಯಕ್ತಿಯು ದಾನ ಮಾಡಬೇಕು.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top