fbpx
ಹೆಚ್ಚಿನ

ಸೂರ್ಯ ದೇವನಿಗೆ ಜಲ ಅಥವಾ ಅರ್ಘ್ಯವನ್ನು ಅರ್ಪಿಸುವ ವೇಳೆ ಈ ತಪ್ಪನ್ನು ಅಪ್ಪಿ ತಪ್ಪಿನ್ನು ಮಾಡ್ಬೇಡಿ ಇಲ್ಲ ಅಂದ್ರೆ ಕಷ್ಟಗಳು ಜಾಸ್ತಿ ಆಗುತ್ತೆ .

ಸೂರ್ಯ ದೇವನಿಗೆ ಜಲ ಅಥವಾ ಅರ್ಘ್ಯವನ್ನು ಅರ್ಪಿಸುವ ವೇಳೆ ಈ ತಪ್ಪನ್ನು ಅಪ್ಪಿ ತಪ್ಪಿನ್ನು ಮಾಡ್ಬೇಡಿ ಇಲ್ಲ ಅಂದ್ರೆ ಕಷ್ಟಗಳು ಜಾಸ್ತಿ ಆಗುತ್ತೆ .

ಹಿಂದೂ ಧರ್ಮದಲ್ಲಿ ಸೂರ್ಯ ದೇವರನ್ನು ಭಕ್ತಿ , ಶ್ರದ್ಧೆಯಿಂದ ಆರಾಧಿಸುತ್ತಾರೆ. ಸೂರ್ಯ ಮತ್ತು ಚಂದ್ರರನ್ನು ಈ ಭೂಮಿಯ ಮೇಲೆ ಕಣ್ಣಿಗೆ ಕಾಣಿಸುವ ದೇವರು ಎಂದು ಆರಾಧಿಸುತ್ತೇವೆ. ಅಂತಹ ಸೂರ್ಯ ದೇವನನ್ನು ನಾವು ಭಾನುವಾರದ ದಿನ ಅದು ಸೂರ್ಯ ದೇವನ ದಿನವೆಂದು, ಆ ದಿನ ಭಕ್ತಿ ಶ್ರದ್ಧೆಯಿಂದ ಪೂಜಿಸುತ್ತೇವೆ. ಸೂರ್ಯನಿಗೆ ಸೂರ್ಯನಮಸ್ಕಾರ ಮಾಡಿ, ಅರ್ಘ್ಯ ಅಂದರೆ ಜಲವನ್ನು ಅರ್ಪಿಸುವುದು ಪೂಜಾ ವಿಧಾನವಾಗಿದೆ. ಸೂರ್ಯನು ಪ್ರಸನ್ನನಾದರೆ ಸಮಾಜದಲ್ಲಿ ಗೌರವ , ಸನ್ಮಾನ ಆರೋಗ್ಯ ಭಾಗ್ಯ ದೊರಕುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ.

 

 

ಸೂರ್ಯ ದೇವನಿಗೆ ಜಲ ಅರ್ಪಿಸುವ ವೇಳೆ ಹಾಗೂ ಪೂಜೆ ಮಾಡುವ ವೇಳೆ ಮಾಡುವ ಕೆಲವು ತಪ್ಪುಗಳಿಂದ ಸೂರ್ಯದೇವನು ಕೋಪಕ್ಕೆ ಕಾರಣವಾಗುವುದರ ಜೊತೆಗೆ ನಷ್ಟವನ್ನು ಉಂಟು ಮಾಡುತ್ತಾನೆ .ಸೂರ್ಯನು ಪೂಜೆ ಮಾಡುವಾಗ ಕೆಂಪು ಹೂವು , ಕೆಂಪು ಚಂದನ, ಕೆಂಪು ದಾಸವಾಳ, ಅಕ್ಷತೆಯನ್ನು ಅರ್ಪಿಸಬೇಕು . ಬೆಲ್ಲದಿಂದ ತಯಾರಿಸಿದ ಸಿಹಿ ನೈವೇದ್ಯವನ್ನು ಅರ್ಪಿಸಬೇಕು.
ಸೂರ್ಯನಿಗೆ ಆರೋಗ್ಯವನ್ನು ಅಂದರೆ ನೀರನ್ನು ಅರ್ಪಿಸುವ ಸಮಯದಲ್ಲಿ ಆ ನೀರು ನಿಮ್ಮ ಕಾಲ ಮೇಲೆ ಬೀಳದಂತೆ ನೋಡಿಕೊಳ್ಳಬೇಕು. ನೀರು ಕಾಲಿಗೆ ಬಿದ್ದರೆ ಸೂರ್ಯನಿಗೆ ಅರ್ಪಿಸಿದ ಜಲದ ಶುಭ ಫಲಗಳು ಆ ಭಕ್ತರಿಗೆ ಸಿಗುವುದಿಲ್ಲ . ಆ ನೀರಿನಲ್ಲಿ ಕೆಂಪು ಹೂವು, ಕೆಂಪು ಅಕ್ಷತೆ ಇರುವಂತೆ ನೋಡಿಕೊಳ್ಳಬೇಕು .

 

 

ಭಾನುವಾರ ಸ್ನಾನ ಮಾಡಿ ದೇವಸ್ಥಾನಕ್ಕೆ ಹೋಗಿ ನಂತರ ಸೂರ್ಯನಿಗೆ ಆರ್ಘ್ಯವನ್ನು ಅರ್ಪಿಸಿ , ಹೀಗೆ ಮಾಡಿದ್ದಲ್ಲಿ ಜಾತಕದಲ್ಲಿರುವ ಎಲ್ಲ ದೋಷಗಳು ನಿವಾರಣೆಯಾಗುತ್ತದೆ. ಬ್ರಹ್ಮ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿಯೇ, ಸೂರ್ಯನಿಗೆ ಅರ್ಘ್ಯವನ್ನು ಸೂರ್ಯೋದಯದ ಸಮಯದಲ್ಲಿ ಅರ್ಪಿಸಬೇಕು . ಸ್ನಾನ ಮಾಡದೇ ಸೂರ್ಯ ದೇವನ ಪೂಜೆಯನ್ನು ಮಾಡಬಾರದು .

ಅರ್ಘ್ಯವನ್ನು ಅರ್ಪಿಸುವ ವೇಳೆ ಸ್ಟೀಲ್, ಬೆಳ್ಳಿ, ಗ್ಲಾಸ್, ಪ್ಲಾಸ್ಟಿಕ್ ಪಾತ್ರೆಯನ್ನು ಬಳಸಬಾರದು. ತಾಮ್ರದ ಪಾತ್ರೆಯನ್ನು ಮಾತ್ರ ಬಳಸಬೇಕು. ಎರಡೂ ಕೈಗಳಲ್ಲಿ ಪಾತ್ರೆಯನ್ನು ನಿಮ್ಮ ತಲೆಯ ಎತ್ತರಕ್ಕಿಂತ ಮೇಲೆ ಹಿಡಿದು, ಜಲವನ್ನು ಅರ್ಪಿಸಬೇಕು. ಹೀಗೆ ಮಾಡಿದ್ದಲ್ಲಿ ಸೂರ್ಯನ ಜೊತೆಗೆ ನವಗ್ರಹಗಳ ಬಲವೂ ಕೂಡ ನೀವು ಪಡೆಯುತ್ತೀರ. ಪೂರ್ವ ದಿಕ್ಕಿಗೆ ಮುಖ ಮಾಡಿ ನೀರನ್ನು ಅರ್ಪಿಸಬೇಕು .

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top