ಭವಿಷ್ಯ

ನಿಮ್ಮ ಅಂಗೈಯಲ್ಲಿ ತ್ರಿಕೋನಾಕಾರದ ರೇಖೆ ಇದ್ದರೆ ಅದು ನಿಮ್ಮ ಭೂತ, ವರ್ತಮಾನ ಮತ್ತು ಭವಿಷ್ಯವನ್ನ ಚೆನ್ನಾಗಿ ಹೇಳುತ್ತೆ ತಿಳ್ಕೊಳ್ಳಿ .

ನಿಮ್ಮ ಅಂಗೈಯಲ್ಲಿ ತ್ರಿಕೋನಾಕಾರದ ರೇಖೆ ಇದ್ದರೆ ಅದು ನಿಮ್ಮ ಭೂತ, ವರ್ತಮಾನ ಮತ್ತು ಭವಿಷ್ಯವನ್ನ ಚೆನ್ನಾಗಿ ಹೇಳುತ್ತೆ ತಿಳ್ಕೊಳ್ಳಿ .

ಹಸ್ತ ಸಾಮುದ್ರಿಕಾ ಶಾಸ್ತ್ರದಲ್ಲಿ ಅಂಗೈಯಲ್ಲಿ ತ್ರಿಕೋನಾಕಾರದ ರೇಖೆ ಅಥವಾ ಚಿತ್ರ ಮೂಡಿದ್ದರೆ ಅದು ಏನನ್ನು ಸೂಚಿಸುತ್ತದೆ ? ಇದರ ಸುಳಿವು ಏನು ? ಅಂಗೈಯಲ್ಲಿ ಇರುವಂತಹ ರೇಖೆಗಳನ್ನು ನೋಡಿಕೊಂಡು ಕೆಲವರು ನಮ್ಮ ಭೂತ, ವರ್ತಮಾನ ಮತ್ತು ಭವಿಷ್ಯ ಹೇಳುತ್ತಾರೆ. ಜನರು ತಮ್ಮ ಅಂಗೈಯಲ್ಲಿ ರೇಖೆಗಳು ತ್ರಿಕೋಣಾಕೃತಿ ಹೊಂದಿರುವುದನ್ನು ಕಾಣಬಹುದು. ನಿಮ್ಮ ಅಂಗೈಗಳನ್ನು ನೋಡಿದರೆ ಆಗ ನಿಮಗೆ ತ್ರಿಕೋನಾಕೃತಿಯೂ ಕಂಡು ಬಂದರೆ, ಇದು ತುಂಬಾ ಪವಿತ್ರವಾದ ಚಿಹ್ನೆ ಎಂದು ಭಾವಿಸಲಾಗಿದೆ.

 

 

ಅಂಗೈಯಲ್ಲಿ ಯಾವ ಭಾಗದಲ್ಲಿ ಯಾವ ರೀತಿಯಲ್ಲಿ ? ಯಾವ ಪರ್ವತದ ಮೇಲೆ ಇದೆ ? ಎನ್ನುವುದರ ಆಧಾರದ ಮೇಲೆ ಇದರ ಅರ್ಥವನ್ನು ನಾವು ತಿಳಿಯಬಹುದು. ಅಂಗೈಯಲ್ಲಿ ಇರುವಂತಹ ತ್ರಿಕೋನಾಕೃತಿಯನ್ನು ತಿಳಿದುಕೊಂಡರೆ ಅದು ತುಂಬಾ ಆಸಕ್ತಿಯ ವಿಚಾರವಾಗಿರುವುದು. ನಿಮ್ಮ ಅಂಗೈಯಲ್ಲಿರುವತ್ರಿಕೋನಾಕೃತಿಗಳು ಯಾವ ರೀತಿಯ ಅರ್ಥ ಕಲ್ಪಿಸುತ್ತವೆ ಎಂದು ತಿಳಿದುಕೊಳ್ಳೊಣ ಬನ್ನಿ.

ಶುಕ್ರನ ಪರ್ವತದ ಮೇಲೆ ದೊಡ್ಡ ತ್ರಿಕೋಣ ಇದ್ದರೆ
ಶುಕ್ರನ ಪರ್ವತದ ಮೇಲೆ ದೊಡ್ಡ ತ್ರಿಕೋಣಾಕಾರವೂ ಇದ್ದರೆ ತುಂಬಾ ವಿಶಾಲವಾದ ಹೃದಯವನ್ನು ಅಂದರೆ ದೊಡ್ಡ ಹೃದಯವನ್ನು ಹೊಂದಿರುವ ಸೂಚನೆಯಾಗಿದೆ . ಶುಕ್ರನ ಪರ್ವತದ ಮೇಲಿರುವ ಈ ತ್ರಿಕೋನಾಕಾರವನ್ನು ಹೊಂದಿರುವ ವ್ಯಕ್ತಿಯು ತುಂಬಾ ಸರಳತೆಯನ್ನು ಹೊಂದಿದ್ದು , ಜೀವನದಲ್ಲಿ ಉನ್ನತವಾದ ಮೌಲ್ಯಗಳೊಂದಿಗೆ ವಾಸಿಸುವಂತಹ ತುಂಬಾ ಭಾವನಾತ್ಮಕ ಪ್ರೇಮಿ ಮತ್ತು ಜೀವಿಯಾಗಿದ್ದಾನೆ. ಅಂಗೈಯಲ್ಲಿರುವ ತ್ರಿಕೋನಾಕಾರದಲ್ಲಿ ಯಾವುದೇ ತೊಂದರೆ ಇದ್ದರೆ ಆಗ ಇವರು ಅಮರ ಪ್ರೇಮಿಯಾಗಿರುವರು.

ಮಂಗಳನ ಪರ್ವತದ ಮೇಲೆ ತ್ರಿಕೋನಾಕಾರದ ರೇಖೆ ಇದ್ದರೆ.
ಮಂಗಳನ ಪರ್ವತದ ಮೇಲೆ ತ್ರಿಕೋನಾಕಾರದ ರೇಖೆಯನ್ನು ಹೊಂದಿದ್ದರೆ, ಆ ವ್ಯಕ್ತಿ ಒಬ್ಬ ಯೋಧನಾಗುವನು . ಇವರು ಹಾಕಿಕೊಂಡ ಯೋಜನೆಗಳಲ್ಲಿ ಯಾವಾಗಲೂ ತುಂಬಾ ಧೈರ್ಯ ಮತ್ತು ತಾಳ್ಮೆಯನ್ನು ಪ್ರದರ್ಶಿಸುವ ವ್ಯಕ್ತಿಯಾಗಿದ್ದಾರೆ. ಮಂಗಳನ ಪರ್ವತದ ಮೇಲೆ ಇರುವ ರೇಖೆಯಲ್ಲಿ ಏನಾದರೂ ತೊಂದರೆ ಇದ್ದರೆ ಆಗ ಆ ವ್ಯಕ್ತಿಯು ಹೇಡಿ ಆಗಿರುವನು.

ಗುರುವಿನ ಪರ್ವತದ ಮೇಲೆ ತ್ರಿಕೋನಾಕಾರದ ರೇಖೆ ಇದ್ದರೆ.

ಗುರುವಿನ ಪರ್ವತದ ಮೇಲೆ ತ್ರಿಕೋನಾಕಾರದಲ್ಲಿ ರೇಖೆ ಇರುವಂತಹ ವ್ಯಕ್ತಿಯೂ ತುಂಬಾ ರಾಜತಾಂತ್ರಿಕ ಮತ್ತು ತನ್ನ ಪ್ರಗತಿಗೆ ಹೆಚ್ಚಿನ ಆಕಾಂಕ್ಷೆ ಹೊಂದಿರುವವರು. ಮಂಗಳನ ಪರ್ವತದ ಮೇಲಿರುವ ತ್ರಿಕೋನಾಕಾರದ ರೇಖೆಯಲ್ಲಿ ಏನಾದರೂ ಸಮಸ್ಯೆ ಇದ್ದರೆ ಆಗ ವ್ಯಕ್ತಿಯು ತುಂಬಾ ಹೆಮ್ಮೆ ಪಡುವ ಮತ್ತು ಸ್ವಾರ್ಥಿಯಾಗಿರುವ ಜೀವಿ ಯಾಗಿದ್ದಾನೆ.

 

 

 

ಶನಿಯ ಪರ್ವತದ ಮೇಲೆ ತ್ರಿಕೋನಾಕಾರದ ರೇಖೆ ಇದ್ದರೆ.
ಯಾವುದೇ ಸಮಸ್ಯೆ ಇಲ್ಲದೆ ಇರುವಂತಹ ತ್ರಿಕೋನಾಕಾರದ ರೇಖೆಯ ಕಂಡು ಬಂದರೆ ಅಂತಹ ವ್ಯಕ್ತಿಗಳು ಸೌಂದರ್ಯದಲ್ಲಿ ಅಧಿಪತ್ಯ ಸ್ಥಾಪಿಸುವರು. ಈ ತ್ರಿಕೋನಾಕಾರದಲ್ಲಿ ಯಾವುದಾದರು ತೊಂದರೆ ಇದ್ದರೆ ಆಗ ವ್ಯಕ್ತಿಯು ಮೋಸ ಮಾಡುವ ಮತ್ತು ನಂಬಿಕೆಗೆ ಅರ್ಹನಲ್ಲದ ವ್ಯಕ್ತಿಯಾಗಿರುತ್ತಾನೆ .

ತಲೆಯ ಗೆರೆಯ ಮೇಲೆ ತ್ರಿಕೋನಾಕಾರವು ಕಾಣಿಸಿಕೊಂಡರೆ

ಆ ವ್ಯಕ್ತಿಯೂ ತುಂಬಾ ಜಾಣ ನಾಗಿರುತ್ತಾನೆ ಮತ್ತು ಉನ್ನತ ಸ್ಥಾನವನ್ನು ಪಡೆಯುವವರು ಆಗಿರುತ್ತಾರೆ. ವಿಧಿ ರೇಖೆಯ ಮೇಲೆ ತ್ರಿಕೋನಾಕಾರದ ರೇಖೆ ಇದ್ದರೆ , ಆಗ ಆ ವ್ಯಕ್ತಿಯೂ ತುಂಬಾ ದುರಾದೃಷ್ಟ ಮತ್ತು ಜೀವನದಲ್ಲಿ ಇವರಿಗೆ ಯಶಸ್ಸು ಸಿಗುವುದು ಕಡಿಮೆ ಎಂದೇ ಹೇಳಬಹುದು.

ಸೂರ್ಯನ ಪರ್ವತದ ಮೇಲೆ ತ್ರಿಕೋನಾಕಾರದ ರೇಖೆ ಇದ್ದರೆ .
ಸೂರ್ಯನ ಪರ್ವತದ ಮೇಲೆ ತ್ರಿಕೋನಾಕಾರದ ರೇಖೆ ಇದ್ದರೆ ಆಗ ಆ ವ್ಯಕ್ತಿಯು ತುಂಬಾ ಧಾರ್ಮಿಕ ಮತ್ತು ಇತರರ ಹಿತ ಬಯಸುವವನು ಎಂದು ನಂಬಲಾಗಿದೆ. ತ್ರಿಕೋನಾಕಾರದಲ್ಲಿ ದೋಷವಿದ್ದರೆ ಆಗ ಆ ವ್ಯಕ್ತಿಯನ್ನು ಸಮಾಜವು ಟೀಕಿಸುವುದು. ಇವರಿಗೆ ಜೀವನದಲ್ಲಿ ಯಶಸ್ಸು ಸಿಗುವುದು ತುಂಬಾ ಕಷ್ಟ .

ಮಂಗಳನ ಪರ್ವತ ಅಥವಾ ಪ್ರದೇಶದಲ್ಲಿ ತ್ರಿಕೋನಾಕಾರದ ರೇಖೆಯಿದ್ದರೆ .
ಮಂಗಳನ ಪ್ರದೇಶದಲ್ಲಿ ತ್ರಿಕೋನಾಕಾರವೂ ಕಂಡು ಬಂದರೆ ಆ ವ್ಯಕ್ತಿಯು ತನ್ನ ಜೀವನದಲ್ಲಿ ಯಶಸ್ವಿ ವಿಜ್ಞಾನಿ ಆಗುವರು. ಇವರಿಗೆ ಜೀವನದಲ್ಲಿ ದೊಡ್ಡ ಮಟ್ಟದ ಯಶಸ್ಸು ಸಿಗುವುದು. ಜೀವನದ ರೇಖೆಯ ಮೇಲೆ ತ್ರಿಕೋನಾಕಾರದ ರೇಖೆಯಿದ್ದರೆ ಆಗ ಇದು ದೀರ್ಘಾಯುಷ್ಯದ ಸೂಚನೆಯಾಗಿದೆ.

ಮದುವೆ ರೇಖೆಯ ಮೇಲೆ ತ್ರಿಕೋನಾಕಾರವಿದ್ದರೆ.
ಮದುವೆಯ ರೇಖೆಯ ಮೇಲೆ ತ್ರಿಕೋನಾವು ಕಂಡು ಬರುವಂತಹ ವ್ಯಕ್ತಿಗಳು ವೈವಾಹಿಕ ಜೀವನದಲ್ಲಿ ತುಂಬಾ ಏಳು ಬೀಳುಗಳನ್ನು ಕಾಣುವವರು ಇವರಿಗೆ ಯಶಸ್ಸು ಸಿಗುವುದಿಲ್ಲ.
ಚಂದ್ರನ ಪ್ರದೇಶದಲ್ಲಿ ತ್ರಿಕೋನಾಕಾರದ ರೇಖೆ ಇದ್ದರೆ ಅವರು ವಿದೇಶ ಪ್ರಯಾಣ ಕೈಗೊಳ್ಳುವವರು ಮತ್ತು ಯಶಸ್ವಿಯಾಗುವರು.

 

 

ಜೀವನ ರೇಖೆ ಮತ್ತು ತಲೆಯ ರೇಖೆಯ ಮೇಲೆ ತ್ರಿಕೋನಾಕಾರದ ರೇಖೆ ಇದ್ದರೆ.
ಜೀವನ ರೇಖೆ ಮತ್ತು ತಲೆ ರೇಖೆಯ ಮೇಲೆ ತ್ರಿಕೋನಾಕಾರದ ರೇಖೆ ಇದ್ದರೆ ಆ ವ್ಯಕ್ತಿಗೆ ಅದು ತುಂಬಾ ಶುಭವೆಂದು ಪರಿಗಣಿಸಲಾಗಿದೆ.

ಇನ್ನೊಂದೆಡೆ ಆರೋಗ್ಯದ ರೇಖೆ ಮತ್ತು ತಲೆಯ ರೇಖೆಯ ಮೇಲೆ ತ್ರಿಕೋಣಾಕಾರದ ರೇಖೆ ಇದ್ದರೆ
ಇವರು ತುಂಬಾ ಜಾಣ ವ್ಯಕ್ತಿಗಳ ಆಗಿರುವವರು. ಆರೋಗ್ಯದ ರೇಖೆ ಮತ್ತು ತಲೆಯ ರೇಖೆಯ ಮೇಲೆ ತ್ರಿಕೋನಾಕಾರವಿದ್ದರೆ. ಆ ವ್ಯಕ್ತಿ ವಿಶ್ವದಲ್ಲೇ ಪ್ರಸಿದ್ಧಿ ಪಡೆಯುವನು ಎಂದು ನಂಬಲಾಗಿದೆ. ಈ ಗೆರೆಗಳು ಸ್ಪಷ್ಟವಾಗಿಲ್ಲದೇ ಇದ್ದರೆ, ಆಗ ಆ ವ್ಯಕ್ತಿಯೂ ತುಂಬಾ ಸ್ವಾರ್ಥಿ ಹಾಗೂ ಬೌದ್ಧಿಕ ವಾಗಿರುವವರು ನಿಮ್ಮ ಅಂಗೈನ ಮೇಲೆ ಯಾವ ಭಾಗದ ಮೇಲೆ ತ್ರಿಕೋನಾ ಇದೆ ಎಂದು ಈಗಲೇ ಹುಡುಕಿ ನೀವು ನಿಮ್ಮ ಬಗ್ಗೆ ನೀವೇ ತಿಳಿದುಕೊಳ್ಳಿ .

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top