ಭವಿಷ್ಯ

ಹಸ್ತ ಸಾಮುದ್ರಿಕ ಶಾಸ್ತ್ರದ ಪ್ರಕಾರ ನಿಮ್ಮ ಕೈನ ಮಣಿಕಟ್ಟಿನ ರೇಖೆಗಳು ನಿಮ್ಮ ಇಡೀ ಜಾತಕವನ್ನೇ ಹೇಳುತ್ತೆ ಗೊತ್ತಾ .

ಹಸ್ತ ಸಾಮುದ್ರಿಕ ಶಾಸ್ತ್ರದ ಪ್ರಕಾರ ನಿಮ್ಮ ಕೈನ ಮಣಿಕಟ್ಟಿನ ರೇಖೆಗಳು ನಿಮ್ಮ ಇಡೀ ಜಾತಕವನ್ನೇ ಹೇಳುತ್ತೆ ಗೊತ್ತಾ .

ಮಣಿಕಟ್ಟಿನ ರೇಖೆಗಳ ಹಿಂದೆ ಅಡಗಿರುವ ರಹಸ್ಯದ ಬಗ್ಗೆ ನಿಮಗೆಷ್ಟು ಗೊತ್ತು ?

ಹಸ್ತ ಸಾಮುದ್ರಿಕ ಶಾಸ್ತ್ರ ಭಾರತದ ಅತಿ ಪುರಾತನವಾದ ಶಾಸ್ತ್ರವಾಗಿದೆ. ಕೈಯಲ್ಲಿರುವ ರೇಖೆಗಳನ್ನು ನೋಡಿ ಭವಿಷ್ಯವನ್ನು ಹೇಳುವ ಹಾಗೆಯೇ ಅಂಗೈಯಲ್ಲಿರುವ ರೇಖೆಗಳನ್ನು ನೋಡಿ ಜಾತಕವನ್ನು ಹೇಳಬಹುದು. ಈ ಶಾಸ್ತ್ರ ನಮ್ಮ ದೇಶದಿಂದ ಚೀನಾ ದೇಶದವರೆಗೂ ರೂಢಿಯಲ್ಲಿದೆ. ನಂತರದ ದಿನಗಳಲ್ಲಿ ಯುರೋಪ್ ದೇಶಕ್ಕೂ ಕೂಡ ಇದು ಹಬ್ಬಿದೆ. ಈ ಶಾಸ್ತ್ರವನ್ನು ದೇಶದಿಂದ ಚೀನಾವರೆಗೂ ಇದು ರೂಢಿಯಾಗಿದ್ದು ನಂತರದ ದಿನಗಳಲ್ಲಿ ಯೂರೋಪ್ ದೇಶದ ಅರಿಸ್ಟಾಟಲ್ನ ಗಮನ ಸೆಳೆಯಿತು. ಈ ವಿದ್ಯೆಯನ್ನು ಅವರ ಶಿಷ್ಯರಾದ ಅಲೆಗ್ಸಾಂಡರ್ ಗೆ ಕಳಿಸಿದರು.

 

 

ಅಲೆಕ್ಸಾಂಡರ್ ಅದನ್ನು ತನ್ನ ರಾಜ್ಯದಲ್ಲಿರುವ ಮಂತ್ರಿಗಳನ್ನು ನೇಮಿಸಿಕೊಳ್ಳಲು ಉಪಯೋಗಿಸಿದ್ದರೆ ಮಾಧ್ಯಮಗಳಲ್ಲಿ ವಿಭಿನ್ನವಾಗಿ ಪ್ರಚಾರ ಮಾಡುತ್ತಿರುವುದರಿಂದ ನಮ್ಮಲ್ಲಿ ತುಂಬಾ ಜನರು ಜಾತಕವನ್ನು ನಂಬುವುದಿಲ್ಲ ನಿಜಕ್ಕೂ ಜಾತಕ ಎಂಬುದು ಮೂಢನಂಬಿಕೆ ಅಲ್ಲ. ಅದು ಒಂದು ಶಾಸ್ತ್ರ.

ಒಂದು ಸಲ ನಿಮ್ಮ ಮಣಿಕಟ್ಟಿನ ಮೇಲಿರುವ ರೇಖೆಗಳನ್ನು ಗಮನಿಸಿ ಇವುಗಳನ್ನು ಬ್ರೇಸ್ಲೆಟ್ ಲೈನ್ಸ್ ಎಂದೂ ಸಹ ಕರೆಯುತ್ತಾರೆ. ಈ ರೇಖೆಗಳು ಅಂಗೈಯಿಂದ ಉಳಿದ ಕೈ ಭಾಗದಿಂದ ಬೇರ್ಪಟ್ಟಂತೆ ಇರುತ್ತವೆ. ಇದರಿಂದ ನಿಮ್ಮ ಆಯುಷ್ಯ ಎಷ್ಟು ಎಂದು ತಿಳಿದುಕೊಳ್ಳಬಹುದು.

 

 

ಈ ಶಾಸ್ತ್ರದ ಪ್ರಕಾರ ನಿಮಗಿರುವ ರೇಖೆಗಳಿಗೆ ಅನುಗುಣವಾಗಿ ನೀವು ಎಷ್ಟು ವರ್ಷ ಆರೋಗ್ಯವಂತರಾಗಿ ಜೀವಿಸುತ್ತೀರಿ. ಎಂದು ತಿಳಿದುಕೊಳ್ಳಬಹುದಂತೆ.

ಮೊದಲನೇ ರೇಖೆ ಸ್ಪಷ್ಟವಾಗಿ ಇದ್ದರೆ..
ನಿಮಗೆ ಆರೋಗ್ಯಕರ ಜೀವನ ನಿಮ್ಮದಾಗುತ್ತದೆ. ಅಸ್ಪಷ್ಟವಾಗಿದ್ದಲ್ಲಿ ನಿಮಗೆ ಅನಾರೋಗ್ಯ ಸಮಸ್ಯೆಗಳು ಎದುರಾಗುತ್ತದೆಯಂತೆ.ಮೊದಲನೇ ರೇಖೆ 23- 28 ವಯಸ್ಸಿನವರೆಗೆ ಜೀವಿಸುತ್ತೀರಿ ಎಂದು, ಎರಡನೇ ರೇಖೆ 46-56 ವರೆಗೆ ಜೀವಿಸುತ್ತೀರಿ ಎಂದು, ಮೂರನೇ ರೇಖೆ ಇದ್ದಲ್ಲಿ 84 ವರ್ಷದವರೆಗೆ ಜೀವಿಸುತ್ತೀರಿ ಎಂದು ತಿಳಿಯಬೇಕು.
ಈ ರೇಖೆಗಳು ಪುರುಷರಿಗೆ ಮಹಿಳೆಯರಿಗೆ ಬೇರೆ ಬೇರೆಯಾಗಿ ಫಲಗಳನ್ನು ಸೂಚಿಸಿದರೂ ಆರೋಗ್ಯ ವಿಷಯದಲ್ಲಿ ಮಾತ್ರ ಇಬ್ಬರಿಗೂ ಒಂದೇ ಹೇಳುತ್ತದೆಯಂತೆ. ಮಹಿಳೆಯರಿಗೆ ಮೊದಲನೇ ರೇಖೆ ಅಂಗೈ ಕಡೆಗೆ ಮುಖ ಮಾಡಿದ್ದರೆ, ಪ್ರಸವ ಸಮಯದಲ್ಲಿ ಸಮಸ್ಯೆಗಳು ಎದುರಾಗುತ್ತವೆ. ಪುರುಷರಿಗಾದರೆ ಮಕ್ಕಳು ಹುಟ್ಟುವ ಅವಕಾಶಗಳು ಕಡಿಮೆಯಾಗಿರುತ್ತದೆ.

ಎರಡನೇ ರೇಖೆ ದಾನದ ಬಗ್ಗೆ ತಿಳಿಸುತ್ತದೆ.
ಅದು ಸ್ಪಷ್ಟವಾಗಿದ್ದರೆ ಐಶ್ವರ್ಯವು ಸುಲಭವಾಗಿ ದೊರೆಯುತ್ತದೆ.ಅದು ಆಸ್ಪಷ್ಟವಾಗಿದ್ದರೆ ಅವರ ಜೀವನದಲ್ಲಿ ಐಶ್ವರ್ಯ ಸಿಗುವ ಅವಕಾಶಗಳು ಕಡಿಮೆ ಇದೆಯಂತೆ.

ಮೂರನೇ ರೇಖೆ ನಿಮ್ಮ ಘನತೆಯ ಬಗ್ಗೆ ತಿಳಿಸುತ್ತದೆ.
ಮೂರನೇ ರೇಖೆ ಸ್ಪಷ್ಟವಾಗಿದ್ದರೆ ಮಾನ, ಮರ್ಯಾದೆಗಳಿಂದ ಜೀವಿಸುತ್ತೀರಿ.ಇಲ್ಲದಿದ್ದಲ್ಲಿ ಜೀವನದಲ್ಲಿ ಗೌರವವನ್ನು ಪಡೆಯುವುದು ಸ್ವಲ್ಪ ಕಷ್ಟವಾಗಬಹುದು.

ನಾಲ್ಕನೇ ರೇಖೆ ಇದ್ದರೆ.
ಒಂದು ವೇಳೆ ನಿಮಗೆ ನಾಲ್ಕನೇ ರೇಖೆ ಇದ್ದು , ಅದು ಮೂರನೇ ರೇಖೆಯೊಂದಿಗೆ ಹೊಂದಿಕೊಂಡಿದ್ದರೆ, ನಿಮಗೆ ಸಾಟಿ ಇಲ್ಲದ ಕೀರ್ತಿ, ಪ್ರತಿಷ್ಠೆಗಳು ದೊರೆಯುತ್ತವೆ .

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top