ಹೆಚ್ಚಿನ

ಪಂಚೆ ಕಟ್ಟು ಮತ್ತು ಸೀರೆ ಕಟ್ಟು ಎಂದರೇನು ? ಈ ಸಂಪ್ರದಾಯದ ಹಿಂದಿರುವ ಈ ವಿಷಯಗಳು ನಿಮಗೆ ಗೊತ್ತೇ .

ಪಂಚೆ ಕಟ್ಟು ಮತ್ತು ಸೀರೆ ಕಟ್ಟು ಎಂದರೇನು ? ಈ ಸಂಪ್ರದಾಯದ ಹಿಂದಿರುವ ಈ ವಿಷಯಗಳು ನಿಮಗೆ ಗೊತ್ತೇ .

ಗಂಡಸರು ಸೊಂಟದ ಸುತ್ತಲೂ ಕಟ್ಟಿಕೊಳ್ಳುವ ಪಂಚೆ ಕಟ್ಟುವಿಕೆಯಲ್ಲಿಯೂ, ಸ್ತ್ರೀಯರು ಕಟ್ಟಿಕೊಳ್ಳುವ ಸೀರೆ ಕಟ್ಟುವಿಕೆಯಲ್ಲಿಯೂ ಸಹ ಜ್ಞಾನವನ್ನು ಒಳಗೊಂಡಿರುವ ಆಚರಣೆಯನ್ನು ಪೂರ್ವ ಕಾಲದಲ್ಲಿ ಹಿರಿಯರು ಇಟ್ಟಿದ್ದಾರೆ. ಈಗಿನ ಆಧುನಿಕ ಕಾಲದಲ್ಲಿ ಪ್ಯಾಂಟ್ಗಳು ಬಂದು ಗಂಡಸರಿಗೆ ಪಂಚೆ ಕಟ್ಟುವುದು ಅಪರೂಪವಾಗಿದೆ. ಹಾಗೆಯೇ ಪಂಜಾಬಿ ಡ್ರಸ್ಸುಗಳು ಬಂದು ಹೆಂಗಸರಿಗೆ ಸೀರೆ ಕಟ್ಟುವುದು ಅಪರೂಪವಾಗಿದೆ.

 

 

ಸ್ವಲ್ಪ ಕಾಲಕ್ಕೆ ಪಂಚೆ ಎಂದರೆ ಏನೆಂಬುವುದು ಗಂಡಸರಿಗೂ ಸೀರೆ ಎಂದರೆ ಏನು ? ಎಂಬುದು ಹೆಂಗಸರಿಗೂ ತಿಳಿಯದಂತೆ ಹೋಗುವ ಕಾಲ ಬರಬಹುದು. ಈಗಲೂ ಅಲ್ಲಲ್ಲಿ ಪಂಚೆ ಕಟ್ಟುವ ಗಂಡಸರು ಸೀರೆ ಕಟ್ಟುವ ಹೆಂಗಸರು ಇದ್ದಾರೆ. ಪಂಚೆ, ಸೀರೆ ಕಟ್ಟುವ ಪ್ರಜೆಗಳು ಎಲ್ಲಾದರೂ ಇದ್ದರೂ ಅವುಗಳಲ್ಲಿನ ಅರ್ಥ ತಿಳಿದಿಲ್ಲವೆಂದೇ ಹೇಳಬಹುದು. ಪೂರ್ವದಲ್ಲಿದ್ದು ಈಗ ಇಲ್ಲದ ಪಂಚೆ ಕಟ್ಟು, ಸೀರೆ ಕಟ್ಟು ಇವುಗಳ ಆಚಾರ ಅರ್ಥವೇನೆಂಬುದನ್ನು ತಿಳಿದುಕೊಳ್ಳೋಣ.

ಗಂಡಸರು ಪಂಚೆ ಕಟ್ಟುವಾಗ, ಹೊಟ್ಟೆಯ ಮುಂದೆ ನೆರಿಗೆ ಹಾಕಿ ಕಟ್ಟಿಕೊಳ್ಳುತ್ತಿದ್ದರು. ನೆರಿಗೆಗಳು ಎಂದರೆ ಪಂಚೆಯನ್ನು ಮಡತೆ ಹಾಕುವುದು. ಪಂಚೆಯನ್ನು ಸೊಂಟದ ಸುತ್ತಲೂ ಕಟ್ಟಿ, ಉಳಿದ ಪಂಚೆಯನ್ನು ಏಳು ಮಡತೆಗಳನ್ನು ಹಾಕಿ ಹೊಟ್ಟೆಯ ಮುಂದೆ ಸಿಕ್ಕಿಸಿ ಕೊಳ್ಳುತ್ತಿದ್ದರು. ಹಾಗೆಯೇ ಹೆಂಗಸರು ಸ್ವಲ್ಪ ಸೀರೆಯನ್ನು ಏಳು ಮಡತೆಗಳ ನೆರಿಗೆಗಳನ್ನು ಹಾಕಿ ಸೊಂಟದ ಹಿಂದೆ ಸಿಕ್ಕಿಸಿ ಕೊಳ್ಳುತ್ತಿದ್ದರು. ಹೆಂಗಸರು ಹಿಂದಕ್ಕೆ ಗಂಡಸರು ಮುಂದೆ ನೆರಿಗೆ ಸಿಕ್ಕಿಸುವುದು ಇಂದಿಗೂ ಕರ್ನಾಟಕದ ಕೆಲವು ಪ್ರಾಂತ್ಯಗಳಲ್ಲಿ ಉಳಿದುಕೊಂಡಿದೆ.

 

 

 

ಕೆಲವು ಸಂಪ್ರದಾಯ ಬ್ರಾಹ್ಮಣ ಕುಟುಂಬಗಳಲ್ಲಿಯೂ ಸಹ ಇದೆ. ಕರ್ನಾಟಕ ಗ್ರಾಮೀಣ ಪ್ರಾಂತ್ಯಗಳಲ್ಲಿ ಈಗಲೂ ಹೆಂಗಸರು ಗಂಡಸರು ಮಡಕೆಗಳನ್ನು ಹಾಕಿ ಕಟ್ಟುವುದು ಇದೆ. ಅಲ್ಲಿ ಈ ಆಚಾರ ಸ್ವಲ್ಪ ಉಳಿದುಕೊಂಡಿದ್ದರೂ ಏಳು ಮಡತೆಗಳ ಪದ್ಧತಿ ಅವರಿಗೆ ತಿಳಿದಿಲ್ಲ. ಏಳು ಮಡತೆಗಳನ್ನಿಡದೆ ಹೆಚ್ಚು ಕಡಿಮೆ ಮಡತೆಗಳನ್ನು ಇಡುತ್ತಿದ್ದಾರೆ.

ನಮ್ಮ ಶರೀರವನ್ನು ಕದಲಿಸಿ ನಡೆಸುವ ಆತ್ಮ ಏಳು ಕೇಂದ್ರಗಳಲ್ಲಿ ವ್ಯಾಪಿಸಿಕೊಂಡಿದೆ ಎಂದು, ಏಳು ಕೇಂದ್ರಗಳಿಂದ ಬರುವ ಶಕ್ತಿಯಿಂದಲೇ ನಮ್ಮ ಶರೀರದಲ್ಲಿ ಶ್ವಾಸ ಆಡುತ್ತಿದೆ ಎಂದು ತಿಳಿಯಲು ಶರೀರಕ್ಕೆ ಸುತ್ತಿರುವ ಬಟ್ಟೆಯನ್ನು ಏಳು ಮಡತೆಗಳನ್ನು ಹಾಕುತ್ತಿದ್ದರು. ಒಂದೊಂದು ನಾಡಿ ಕೇಂದ್ರದ ಮೂಲಕ ಸ್ವಲ್ಪ ಹೊತ್ತು ಶರೀರ ಶ್ವಾಸವನ್ನು ಆತ್ಮ ನಡೆಸುತ್ತಿದೆ.
ಒಂದು ಕೇಂದ್ರವೊಂದರ ಶ್ವಾಸದ ಆರಂಭವನ್ನು ಅಂತ್ಯವನ್ನು ಒಂದು ಮಡತೆಯಾಗಿ ಲೆಕ್ಕಿಸಿ, ದಿನಕ್ಕೆ ಏಳು ಕೇಂದ್ರಗಳ ಮೂಲಕ ಆಡುವ ಶ್ವಾಸದಿಂದ ಶರೀರ ಬದುಕುತ್ತಿದೆ. ಆದ್ದರಿಂದ ಶರೀರಕ್ಕೆ ಸುತ್ತುವ ಬಟ್ಟೆಯನ್ನು ಏಳು ಮಡತೆಗಳನ್ನಿಟ್ಟು, ಏಳು ನಾಡಿ ಕೇಂದ್ರಗಳು ಎಲ್ಲರಿಗೂ ತಿಳಿಯುವಂತೆ ಮಾಡಿದ್ದಾರೆ.

 

 

ಪೂರ್ವಕಾಲದಲ್ಲಿ ಗಂಡಸರು ಪಂಚೆಗಳನ್ನು, ಹೆಂಗಸರು ಸೀರೆಗಳನ್ನು ಕಟ್ಟುತ್ತಾ ಅವರ ವಸ್ತ್ರಗಳಿಗೆ ಏಳು ಮಡತೆಗಳನ್ನೇ ಅರ್ಥದಿಂದ ಇಟ್ಟುಕೊಳ್ಳುತ್ತಿದ್ದರು. ಹಾಗೆ ಮಾಡುವುದರಿಂದ ಈ ಶರೀರವು ಆತ್ಮದ ಏಳು ನಾಡಿ ಕೇಂದ್ರಗಳ ಮೂಲಕವೇ ಜೀವಿಸುತ್ತಿದೆಯೆಂದು ಜ್ಞಾಪಕ ಮಾಡಿಕೊಳ್ಳುತ್ತಿದ್ದರು. ಪೂರ್ವದಲ್ಲಿ ಜ್ಞಾನವಿರುವ ಆಚರಣೆಗಳನ್ನೇ ಹಿರಿಯರು ನಿರ್ಣಯಿಸಿ ಇಟ್ಟಿದ್ದಾರೆ. ಅವುಗಳನ್ನು ಆಚರಿಸುತ್ತಾ ಜ್ಞಾನವನ್ನು ಅಭಿವೃದ್ಧಿ ಮಾಡಿಕೊಳ್ಳುವವರು ಪೂರ್ವದಲ್ಲಿ ಇದ್ದರು.

 

 

ಕಾಲ ಗಮನದಲ್ಲಿ ಅರ್ಥ ಹೋದರು ಆಚರಣೆಗಳು ಕೆಲವು ಪ್ರಾಂತ್ಯಗಳಲ್ಲಿ ಮಾತ್ರ ಉಳಿದುಕೊಂಡಿದೆ. ಅರ್ಥವಿಲ್ಲದ ಆಚರಣೆಗಳು ಉಸಿರು ಹೋಗಿರುವ ಶರೀರಗಳಿದ್ದಂತೆ, ಸ್ವಲ್ಪ ಮಟ್ಟಿಗಾದರೂ ಕಟ್ಟು ಬೊಟ್ಟು ಸಂಪ್ರದಾಯಗಳನ್ನು ನಾವು ಆಚರಿಸಿ, ಅವುಗಳಿಗೆ ಪ್ರಾಣ ಕೊಟ್ಟು ಇತರರು ಆಚರಿಸುವಂತೆ ಮಾಡೋಣ. ಇಂದೂ ಸಂಪ್ರದಾಯಗಳಲ್ಲಿ ಮನುಷ್ಯ ತನ್ನ ಶರೀರಕ್ಕೆ ತಗುಲಿಸಿ ಕೊಂಡಿರುವ ಆಚಾರಗಳಲ್ಲಿ ಕೆಲವನ್ನು ತಿಳಿದುಕೊಳ್ಳಬೇಕಾದವುಗಳು ಇವೆ.

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top