fbpx
ಮನೋರಂಜನೆ

ಡಿಂಗ್ರಿ ನಾಗರಾಜ್ ಮಗನಿಗೆ ಹೊಡಿತು ಬಂಪರ್- ಹಂಸಲೇಖ ನಿರ್ದೇಶನದ ಐತಿಹಾಸಿಕ ಚಿತ್ರಕ್ಕೆ ಹೀರೊ ಆಗ್ತಿದ್ದಾರೆ ರಾಜವರ್ಧನ್

ಡಿಂಗ್ರಿ ನಾಗರಾಜ್ ಗೊತ್ತಲ್ಲ. ಕನ್ನಡದ ಹಿರಿಯ ಮತ್ತು ಖ್ಯಾತ ಹಾಸ್ಯ ಕಲಾವಿದ. ಅವರ ಪುತ್ರ ರಾಜವರ್ಧನ್ ನಾದಬ್ರಹ್ಮ ಹಂಸಲೇಖ ಅವರು ನಿರ್ದೇಶಿಸುತ್ತಿರುವ ಬಿಚ್ಚುಗತ್ತಿ ರಾಮಣ್ಣ ನಾಯಕ ಅವರ ಜೀವನನ್ನಾಧರಿಸಿ ತಯಾರಿಸಲಿಚ್ಛಿಸರುವ ಐತಿಹಾಸಿಕ ಮಹೋನ್ನತ ಚಿತ್ರಕ್ಕೆ ನಾಯಕನಾಗಿ ಆಯ್ಕೆಯಾಗಿದ್ದಾರೆ. ಮೂರು ವರ್ಷದ ಹಿಂದೆಯೇ ‘ಫ್ಲೈ’ ಎಂಬ ವಿಭಿನ್ನ ಸಿನಿಮಾ ಮೂಲಕ ನಾಯಕನಾಗಿ ರಾಜವರ್ಧನ್ ಕೆಲಸ ಶುರುವಚ್ಚುಕೊಂಡಿದ್ದರು ಆದರೆ ಕಾರಣಾನಂತರಗಳಿಂದ ಆ ಚಿತ್ರ ಇನ್ನೂ ತೆರೆಕಂಡಿಲ್ಲ. ಆದರೆ ಕಳೆದ ವರ್ಷ ತೆರೆಕಂಡಿದ್ದ ನೂರೊಂದು ನೆನಪು ಚಿತ್ರದಲ್ಲಿ ಗಮನಾರ್ಹ ನಟನೆ ಮಾಡಿದ್ದ ರಾಜವರ್ಧನ್ ಸದ್ಯ ಬಿಡುಗಡೆಗೆ ತಯಾರಾಗಿರುವ ‘ಐರ’ ಸಿನಿಮಾದಲ್ಲೂ ನಟಿಸಿದ್ದಾರೆ. ಇಂತಿಪ್ಪ ರಾಜವರ್ಧನ್ ಇದೀಗ ಹಂಸಲೇಖರ ಮಹೋನ್ನತ ಚಿತ್ರಕ್ಕೆ ನಾಯಕನಾಗುವ ಚಾನ್ಸ್ ಹೊಡೆದಿದ್ದಾರೆ.

 

 

ರಾಜವರ್ಧನ್ ತಮ್ಮ ಸಿನಿಮಾಗಾಗಿ ಕುದುರೆ ಸವಾರಿ ಕಲಿಯುತ್ತಿದ್ದಾರೆ, ಜೊತೆಗೆ ಫಿಟ್ ನೆಸ್ ಕಡೆ ಕೂಡ ಗಮನ ಹರಿಸಿದ್ದು ಈ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಇದೇ ತಿಂಗಳ 23ರಂದು ಹಂಸಲೇಖ ತಮ್ಮ ಹುಟ್ಟುಹಬ್ಬದ ದಿನ ಆ ಚಿತ್ರವನ್ನು ಅಧಿಕೃತವಾಗಿ ಘೋಷಿಸಲಿದ್ದಾರೆ. ಖ್ಯಾತ ಕಥೆಗಾರರಾದ ಬಿ.ಎಲ್. ವೇಣು ಅವರು ಬರೆದಿರೋ ದುರ್ಗದ ಹುಲಿ ಬಿಚ್ಚುಗತ್ತಿ ಭರಮಣ್ಣ ನಾಯಕ ಎಂಬ ಪುಸ್ತಕವನ್ನು ಸಿನಿಮಾ ರೂಪದಲ್ಲಿ ಹಂಸಲೇಖ ತರಲಿದ್ದಾರೆ.

ಈ ಮೊದಲು ಈ ಸಿನಿಮಾಗೆ ಹಲವು ಸ್ಟಾರ್ ನಟರ ಹೆಸರು ಕೇಳಿ ಬಂದಿದ್ದವು, ಆದರೆ ನಾನಾ ಕಾರಣಗಳಿಂದ ಯಾರೊಬ್ಬರೂ ಈ ಪಾತ್ರಕ್ಕೆ ನಿಕ್ಕಿಯಾಗಿರಲಿಲ್ಲ ಹೀಗಾಗಿ ಹೊಸ ಮುಖ ತರಲು ಹಂಸಲೇಖ ನಿರ್ಧರಿಸಿದ ಪರಿಣಾಮ ರಾಜವರ್ಧನ್’ಗೆ ಬಂಗಾರದಂತ ಅವಕಾಶ ದಕ್ಕಿದೆ. ಹಾಸ್ಯಕಲಾವಿದರಾಗಿದ್ದರೂ ಬದುಕಿನಲ್ಲಿ ಸಾಕಷ್ಟು ನೋವುಂಡ ಡಿಂಗ್ರಿ ನಾಗರಾಜ್ ಪುತ್ರನಿಗೆ ಇಂತದೊಂದು ದೊಡ್ಡ ಅವಕಾಶ ಸಿಕ್ಕಿರುವುದು ಆತನಿಗೆ ಚಿತ್ರರಂಗದಲ್ಲಿ ನೆಲೆಯೂರಲ್ಲಿ ಒಂದೊಳ್ಳೆ ಪ್ಲಾಟ್ ಫಾರಂ ಆಗಲಿದೆ ಎಂಬುದು ಸಿನಿಪಂಡಿತರ ಮಾತು. ಅದೇನೇ ಇರಲಿ ಒಬ್ಬ ಸಿನಿಮಾ ಹೀರೋ ಇರಬೇಕಾದ ಹೈಟು, ವೇಟು, ಕಲರ್, ರೂಪ ಎಲ್ಲವೂ ಇರುವ ಹೊಂದಿರುವ ರಾಜವರ್ಧನ್ ಈ ಚಿತ್ರದ ಮೂಲಕ ಒಳ್ಳೆಯ ನಟನಾಗಿ ಹೊರಹೊಮ್ಮಲಿ ಎಂದು ಹಾರೈಸೋಣ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top