ಹೆಚ್ಚಿನ

ಶ್ರೀ ಚಕ್ರ ಆರಾಧನೆ ಮಾಡಿ ಈ ಒಳ್ಳೆಯ ಫಲಗಳನ್ನ ಪಡ್ಕೊಳ್ಳಿ ಹಾಗೂ ಶ್ರೀ ಚಕ್ರ ಪೂಜಾ ವಿಧಾನ ಹೇಗೆ ಅಂತ ತಪ್ಪದೆ ತಿಳ್ಕೊಳ್ಳಿ .

ಶ್ರೀ ಚಕ್ರ ಆರಾಧನೆ ಮಾಡಿ ಈ ಒಳ್ಳೆಯ ಫಲಗಳನ್ನ ಪಡ್ಕೊಳ್ಳಿ ಹಾಗೂ ಶ್ರೀ ಚಕ್ರ ಪೂಜಾ ವಿಧಾನ ಹೇಗೆ ಅಂತ ತಪ್ಪದೆ ತಿಳ್ಕೊಳ್ಳಿ .

ಶ್ರೀಚಕ್ರವನ್ನು ಮನೆಯಲ್ಲಿ ಸ್ಥಾಪನೆ ಮಾಡಿ ಅದನ್ನು ಪೂಜಿಸಿ ಆರಾಧನೆ ಮಾಡುವುದರಿಂದ ವಿಶೇಷವಾದ ಫಲ ಸಿದ್ಧಿಸುತ್ತದೆ ಎಂದು ಹೇಳಲಾಗುತ್ತದೆ. ಅದರಲ್ಲೂ ನಮ್ಮ ಕಷ್ಟಗಳೆಲ್ಲವೂ ದೂರವಾಗುತ್ತವೆ. ಶತ್ರುಗಳ ಕಾಟದಿಂದ ವೃತ್ತಿ ಹೊಂದಬಹುದು ಎಂದು ಹೇಳಲಾಗುತ್ತದೆ . ಇದರ ನಿಯಮಗಳು ಏನೇನು ? ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ .

 

 

“ಶ್ರೀ” ಎಂದರೆ ಶ್ರೀಹರಿಯ ಸ್ವರೂಪ .
ಇನ್ನು “ಚಕ್ರ” ಎಂದರೆ ಲೋಕವನ್ನು ದುಷ್ಟರಿಂದ ರಕ್ಷಿಸಿ, ಶಿಷ್ಟರ ಪಾಲನೆಯನ್ನು ಮಾಡುತ್ತಾ, ನಮ್ಮನ್ನು ಪ್ರಕೃತಿಯ ನಿಯಮದಂತೆ ನಡೆಸುತ್ತಾ ನಮ್ಮಲ್ಲಿರುವ ಸತ್ವ ಗುಣಗಳನ್ನು ಪರಮಾತ್ಮನಿಗೆ ಸೇವೆ ಮಾಡುವಂಥದ್ದೇ ಈ ಶ್ರೀ ಚಕ್ರ.
ಶ್ರೀಚಕ್ರ ಸ್ಥಾಪನೆಯನ್ನು ಮಾಡಿಕೊಂಡು, ಶ್ರೀಚಕ್ರವನ್ನು ನಿಯಮಬದ್ಧವಾಗಿ ಆರಾಧನೆ ಮಾಡಿದರೆ ಮಾತ್ರವೇ ಅದಕ್ಕೆ ಸಿದ್ಧಿ ಎನ್ನುವುದು ಇರುತ್ತದೆ.
ಶ್ರೀ ಚಕ್ರ ಈಗ ಮಾರುಕಟ್ಟೆಯಲ್ಲಿ ಬೀದಿ ಬೀದಿಯಲ್ಲೂ ಸಿಗುತ್ತದೆ. ಕೆಲವು ಮಕ್ಕಳು ,ಭಕ್ತರು ಅಥವಾ ಸಾರ್ವಜನಿಕರು ಏನು ಮಾಡುತ್ತಾರೆಂದರೆ ? ಎಲ್ಲೋ ಸಿಕ್ಕಿರುವುದನ್ನು ತಂದು ಮನೆಗೆ ಇಟ್ಟುಕೊಳ್ಳುವ ಸಾಧ್ಯತೆಯಿದೆ. ಆದರೆ ಹಾಗೆ ಮಾಡಬಾರದು.ಅದಕ್ಕೆ ಸಿದ್ದಿ ಇರುವುದಿಲ್ಲ.

ಶ್ರೀ ಚಕ್ರಕ್ಕೆ ಸಿದ್ಧಿ ಎನ್ನುವುದು ಇದೆ. ಅಷ್ಟ ಸಿದ್ಧಿ ಅಂದರೆ ಎಂಟು ದಿನಗಳ ಕಾಲ ತ್ರಿಕಾಲ ಪೂಜೆ , ಅನುಷ್ಠಾನ , ಜಪ, ಅಗ್ನಿಹೋತ್ರ ಇವೆಲ್ಲವನ್ನೂ ಕೂಡ ನಡೆಸಿ ಅಗ ಆ ಸಿದ್ಧಗೊಳಿಸಿದ ಶ್ರೀಚಕ್ರವನ್ನು ನಂತರ ನಮ್ಮ ಮನೆಯಲ್ಲಿ ನಾವು ಸ್ಥಾಪನೆಯನ್ನು ಮಾಡಿಕೊಂಡರೆ ಮಾತ್ರ ಶತ್ರು ಬಾಧೆ ನಿವಾರಣೆ, ಧನ, ಕನಕ ವಸ್ತುಗಳು ಪ್ರಾಪ್ತಿ ,ಇವೆಲ್ಲವೂ ಕೂಡ ದೊರೆಯಲಿವೆ.
ಕೆಲವರು ಏನು ಮಾಡುತ್ತಾರೆ ? ಅಯ್ಯೋ ಶ್ರೀಚಕ್ರ ಸ್ಥಾಪನೆ ಯಾರೋ ಹೇಳಿದ್ದಾರೆ ಎಂದು ಶ್ರೀಚಕ್ರವನ್ನು ಸ್ಥಾಪನೆ ಮಾಡುತ್ತಾರೆ , ನಂತರ ಎಲ್ಲೋ ಸಿಗುವ ಶ್ರೀಚಕ್ರವನ್ನು ತೆಗೆದುಕೊಂಡು ಬಂದು ಅದನ್ನು ಪೂಜಿಸುತ್ತಾರೆ. ಆದರೆ ಅದರಿಂದ ಯಾವ ಫಲವು ಲಭಿಸುವುದಿಲ್ಲ.

ಶ್ರೀಚಕ್ರದ ಪೂಜಾ ವಿಧಾನ .
ಮೊದಲು ಶ್ರೀಚಕ್ರವನ್ನು ಒಂದು ಕೆಂಪು ಬಟ್ಟೆಯ ಮೇಲೆ ಸ್ಥಾಪಿಸಬೇಕು. ಅದು ಪೂರ್ವ ಅಥವಾ ಉತ್ತರಾಭಿಮುಖವಾಗಿ ಇರುವಂತೆ ಸ್ಥಾಪಿಸಬೇಕು. ಚಕ್ರದ ಬಲಭಾಗಕ್ಕೆ ಕುಬೇರ ಯಂತ್ರವನ್ನು ಸ್ಥಾಪಿಸಬೇಕು.
ಮಂಗಳವಾರ, ಶುಕ್ರವಾರ, ಹುಣ್ಣಿಮೆ ಮತ್ತು ಅಮಾವಾಸ್ಯೆ ದಿನಗಳಲ್ಲಿ ಮುಖ್ಯವಾಗಿ ಪೂಜಿಸಬೇಕು. ನಿಮಗೆ ಸಮಯವಿದ್ದಲ್ಲಿ ಪ್ರತಿ ದಿನವೂ ಕೂಡ ಪೂಜಿಸಬಹುದು.
ಭಾನುವಾರ ಸಿಂಹ ರಾಶಿಯವರು, ಸೋಮವಾರ ಕಟಕ ರಾಶಿಯವರು, ಮಂಗಳವಾರ ಮೇಷ ರಾಶಿ ಮತ್ತು ವೃಶ್ಚಿಕ ರಾಶಿಯವರು, ಶುಕ್ರವಾರ ವೃಷಭ ರಾಶಿ ಮತ್ತು ತುಲಾ ರಾಶಿಯವರು ,ಶನಿವಾರ ಕುಂಭ ರಾಶಿ ಮತ್ತು ಮಕರ ರಾಶಿಯವರು ಪೂಜಿಸಬೇಕು .

 

 

ಶ್ರೀಲಕ್ಷ್ಮಿ ಅಶೋತ್ತರಗಳನ್ನು ಪಠಿಸಬೇಕು. ಶ್ರೀಲಲಿತಾ ಅಷ್ಟೋತ್ತರ ಶತನಾಮಾವಳಿಯನ್ನು ಪಠಿಸಬೇಕು.

ಪೂಜಾ ಸಾಮಗ್ರಿಗಳು.
ಶುದ್ಧವಾದ ನೀರು, ಹೂವು, ಹೂವಿನ ಮಾಲೆ, ಗಂಧ, ಕುಂಕುಮ, ಅರಿಶಿಣ, ಮಂತ್ರಾಕ್ಷತೆ ಮತ್ತಿತರ ಪೂಜಾ ಸಾಮಾನುಗಳನ್ನು ಸಿದ್ಧಪಡಿಸಿಕೊಳ್ಳಬೇಕು.
ಶ್ರೀಚಕ್ರವನ್ನು ಶ್ರದ್ಧೆ ,ಭಕ್ತಿಯಿಂದ ಆರಾಧಿಸಿದ ಸಕಲ ಇಷ್ಟಾರ್ಥಗಳು ನೆರವೇರಿ, ಸಕಲ ದೋಷಗಳು ತೊಲಗಿ ಹೋಗಿ ಎಲ್ಲಾ ಒಳ್ಳೆಯದೇ ಆಗುತ್ತದೆ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top