ಸಮಾಚಾರ

ಪ್ಯಾಂಟ್ ಹಾಕಿಲ್ಲ ಅಂತೇಳಿ ಬಾಲಿವುಡ್ ನಟಿಯ ತಂಗಿಯನ್ನು ಹೋಟೆಲ್’ನಿಂದ ಹೊರ ದಬ್ಬಿದ ಸಿಬ್ಬಂದಿ.

ಬಾಲಿವುಡ್ ನಟಿಮಣಿಯರಿಗೆ ಸುದ್ದಿಯಾಗಲು ಘನಂದಾರಿ ವಿಷಯಗಳೇ ಬೇಕಿಲ್ಲ ಸಣ್ಣ ಸುತ್ತ ವಿಚಾರಗಳೇ ಸಾಕು ಎಂದು ಮತ್ತೊಮ್ಮೆ ಸಾಬೀತಾಗಿದೆ. ನಟಿ ಯಾಮಿ ಗೌತಮ್ ಅವರ ಸಹೋದರಿ ಸುರೀಲಿ ಗೌತಮ್ ಅವರನ್ನು ರೆಸ್ಟೋರೆಂಟ್ ಸಿಬ್ಬಂದಿ ಹೊರಹಾಕಿದ ಘಟನೆ ಸರ್ಬಿಯಾದಲ್ಲಿ ನಡೆದಿದೆದ್ದು ಇದು ಇದೀಗ ಚರ್ಚೆಗೆ ಗ್ರಾಸವಾಗಿದೆ.

 

 

ಯಾಮಿ ಗೌತಮ್ ಯಾವ ಕಾರಣಕ್ಕಾಗಿ ತನ್ನ ತಂಗಿಯನ್ನು ರೆಸ್ಟೋರೆಂಟ್‍ನಿಂದ ಹೊರ ಹಾಕಿದ್ದಾರೆ ಎಂದು ತನ್ನ ಇನ್‍ಸ್ಟಾಗ್ರಾಂನಲ್ಲಿ ವಿಡಿಯೋ ಮಾಡುವ ಮೂಲಕ ಎಲ್ಲರಿಗೂ ಹೇಳಿದ್ದಾರೆ. ಪ್ಯಾಂಟ್ ಧರಿಸಲಿಲ್ಲ ಎಂಬ ಕಾರಣಕ್ಕೆ ಸರ್ಬಿಯಾದ ಹೋಟೆಲ್ ಆಕೆಯನ್ನು ಒಳಕ್ಕೆ ಸೇರಿಸಲಿಲ್ಲ ಎಂಬ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

ಇನ್ಸ್ಟಾಗ್ರಾಮ್ ವಿಡಿಯೋದಲ್ಲಿ ಯಾಮಿ ತನ್ನ ಸಹೋದರಿಗೆ “ನಾವು ಮೊದಲೇ ಮಾತನಾಡಿಕೊಂಡಂತೆ ಯಾಕೆ ನೀನು ರೆಸ್ಟೋರೆಂಟ್‍ನಲ್ಲಿ ಇಲ್ಲ. ಈ ಬಾರ್ ನಲ್ಲಿ ಕೂತು ಏನು ಮಾಡುತ್ತಿದ್ದೀಯಾ?” ಎಂದು ಪ್ರಶ್ನಿಸಿದ್ದಾರೆ. ಅಕ್ಕನ ಪ್ರಶ್ನೆಗೆ ಸುರೀಲಿ ನಾನು ಪ್ಯಾಂಟ್ ಹಾಕೊಂಡಿಲ್ಲ ಅದಕ್ಕೆ ಅವ್ರು ಸೇರಿದಲಿಲ್ಲ ಎಂದು ಉತ್ತರಿಸಿದ್ದಾರೆ.. ಆಗ ಅಕ್ಕ ಯಾಮಿ “ನೀನು ಪ್ಯಾಂಟ್ ಧರಿಸಿದ ಕಾರಣ ರೆಸ್ಟೋರೆಂಟ್ ಸಿಬ್ಬಂದಿ ನಿನ್ನನ್ನು ಹೊರಹಾಕಿದ್ದಾರಾ” ಎಂದು ತಂಗಿಯನ್ನು ಆಡಿಕೊಳ್ಳುತ್ತಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ,

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top