ಮನೋರಂಜನೆ

ದರ್ಶನ್ ಮನೆಮುಂದೆ ಸಾಲುಗಟ್ಟಿ ನಿಂತ ಆಟೋಗಳು- ಯಾಕೆ ಗೊತ್ತಾ?

ಶೀರ್ಷಿಕೆ ನೋಡಿ ಇದೇನಪ್ಪಾ ಇದು, ದರ್ಶನ್ ಅವರು ಇರೋ ಬರೋ ಕಾರ್ ಗಳನ್ನೆಲ್ಲಾ ತಗೊಂಡು ಈಗ ಆಟೋ ಬೇಟೆಗಿಳಿದಿದ್ದಾರಾ ಎಂದು ಭಾವಿಸಬೇಡಿ. ದರ್ಶನ್ ಮನೆ ಮುಂದೆ ಕಳೆದ ಎರಡು ದಿನಗಳಿಂದ ಸಾಲು ಸಾಲು ಆಟೋಗಳು ನಿಂತಿರೋದು ನಿಜ ಹಾಗಂತ ಅವ್ಯಾವು ಕೂಡ ಅವರದ್ದಲ್ಲ ಬದಲಾಗಿ ಆ ಆಟೋಗಳೆಲ್ಲಾ ಅವರ ಕಟ್ಟಾ ಅಭಿಮಾನಿಗಳದ್ದು.

 

 

ದರ್ಶನ್ ಅಭಿಮಾನಿಗಳು ತಮ್ಮ ಅಭಿಮಾನವನ್ನು ತೋರಿಸಲು ಹೊಸ ಮಾರ್ಗವೋಒಂದನ್ನು ಹಿಡಿದಿದ್ದು ಸಾಲು ಗಟ್ಟಿ ದರ್ಶನ್ ಮನೆ ಮುಂದೆ ನಿಂತಿದ್ದಾರೆ. ಸಾಮಾನ್ಯವಾಗಿ ಅಭಿಮಾನಿಗಳು ತಮ್ಮ ನೆಚ್ಚಿನ ಸಿನಿಮಾ ತಾರೆಯರ ಆಟೋಗ್ರಾಫ್ ಅನ್ನು ಕೈ ಮೇಲೆಯೋ ಅಥವಾ ಹಳೆ ಮೇಲೆಯೋ ಹಾಕಿಸಿಕೊಳ್ಳುತ್ತಾರೆ ಆದರೆ ದಚ್ಚು ಅಭಿಮಾನಿಗಳು ಈ ವಿಷ್ಯದಲ್ಲಿ ಸ್ವಲ್ಪ ಡಿಫರೆಂಟು.

 

 

ದರ್ಶನ್ ಅಭಿಮಾನಿಗಳಾಗಿರುವ ಆಟೋ ಡ್ರೈವರುಗಳು ತಮ್ಮ ನೆಚ್ಚಿನ ನಟನ ನೆನಪು ಶಾಶ್ವತವಾಗಿ ಉಳಿಯಲಿ ಎಂದು ತಮ್ಮ ಆಟೋ ಮೇಲೆ ದರ್ಶನ್ ಅವರ ಆಟೋಗ್ರಾಫ್ ಅನ್ನು ಪಡೆದಿದ್ದಾರೆ. ದರ್ಶನ್ ಆಟೋಗ್ರಾಫ್ ನೀಡಿ ವಿಭಿನ್ನವಾಗಿ “ಡ್ರೈವ್ ಸೇಫ್” ಎಂದು ಬರೆದಿದ್ದಾರೆ. ಸಾಮಾನ್ಯವಾಗಿ ಸ್ಟಾರ್ ನಟರು ಆಟೋಗ್ರಾಫ್ ಕೊಡುವಾಗ ಸಾಮಾನ್ಯವಾದ ಸಂಗತಿಗಳನ್ನೇ ಅರ್ಜೆಂಟಿನಲ್ಲಿ ಗೀಚಿ ಕೊಡುತ್ತಾರೆ. ಆದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾತ್ರ ಆಟೋಗ್ರಾಫ್ ನಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದು ತಮ್ಮನ್ನು ಮಾತಾಡಿಸಿದ ಅಭಿಮಾನಿಗೆ ಡ್ರೈವ್ ಸೇಫ್ ಎಂಬ ಸಂದೇಶವಿರುವ ಆಟೋಗ್ರಾಫ್ ಕೊಡುವ ಮೂಲಕ ಕಾಳಜಿ ಮೆರೆದಿದ್ದಾರೆ!

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top