ಸಿನಿಮಾ

ದಿನಾ ಬೆಳಗ್ಗೆ ಈ ಕೆಲಸ ಮಾಡೋಕೆ ನೀರ್ ದೋಸೆ ಬೆಡಗಿ ಹರಿಪ್ರಿಯಾಗೆ ತುಂಬ ಇಷ್ಟ ಅಂತೇ

ಕೇಂದ್ರ ಯುವಜನ ಹಾಗು ಕ್ರೀಡಾ ಸಚಿವರಾಗಿರುವ ರಾಜವರ್ಧನ್ ಸಿಂಗ್ ರಾಥೋಡ್ ರವರು ಮೇ 22 ರಂದು, “ನಾನು ಫಿಟ್ ಆದ್ರೆ ದೇಶ ಫಿಟ್ (#HumFitTohIndiaFit) ನೀವು ನಿಮ್ಮ ಫಿಟ್ ನೆಸ್ ಗೆ ಸಂಬಂಧಿಸಿದ ಚಿತ್ರ ಹಾಗು ವಿಡಿಯೋವನ್ನು ಶೇರ್ ಮಾಡಿ” ಎಂದು ಕೊಹ್ಲಿ, ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್, ನಟ ಹೃತಿಕ್ ರೋಷನ್ ಅವರಿಗೆ ಫಿಟ್ ನೆಸ್ ಚಾಲೆಂಜ್ ಟ್ವೀಟ್ ಮಾಡಿದ್ದರು. ಸ್ಯಾಂಡಲ್ ವುಡ್ ನಟರು ಕೂಡ ಫಿಟ್ನಿಸ್ ಚಾಲೆಂಜ್‍ನಿಂದ ಹೊರತಾಗಿಲ್ಲ. ಈಗಾಗಲೇ ನಟ ಸುದೀಪ್, ಯಶ್ ಫಿಟ್ನಿಸ್ ಬಗ್ಗೆ ಅಭಿಮಾನಿಗಳಲ್ಲಿ ಚಾಲೆಂಜ್ ಹಾಕಿ ಆಸಕ್ತಿ ಹುಟ್ಟಿಸಿದ್ದಾರೆ.

ಸ್ಯಾಂಡಲ್ ವುಡ್ ನಟ ನಟಿಯರು ಈಗ ತಾವು ಮಾಡುತ್ತಿರುವ ಕಸರತ್ತುಗಳ ವಿಡಿಯೋಗಳನ್ನು ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಾ ಬಂದಿದ್ದಾರೆ, ಇದಕ್ಕೆ ನೀರ್ ದೋಸೆ ಬೆಡಗಿ ಹರಿಪ್ರಿಯಾ ಹೊರತಲ್ಲ, ಹರಿಪ್ರಿಯಾ ಫಿಟ್ನೆಸ್ಗಾಗಿ ಚಾಲೆಂಜ್ ಸ್ವೀಕರಿಸಿಲ್ಲ ಹಾಗೆಯೇ ಸವಾಲನ್ನು ಬೇರೆ ಯಾರಿಗೂ ಹಾಕಲು ಇಲ್ಲ ಬದಲಾಗಿ ಈ ಒಂದು ಕೆಲಸವನ್ನು ಮಾಡಿ ತಾವು ಫಿಟ್ ಆಗಿದ್ದೇವೆ ಎಂದು ಪ್ರೊ ಮಾಡಿದ್ದಾರೆ .

 

 

ಈ ಹಿಂದೆ ತಾವು ನಟಿಸಿದ ತೆಲುಗು ಚಿತ್ರ ಬಿಡುಗಡೆಯಾದಾಗ ಥೇಟರ್ ಒಳಗೆ ಮುಸುಕು ಹಾಕಿಕೊಂಡು ಹೋಗಿ ಆ ಫೋಟೊವನ್ನು ಪೋಸ್ಟ್ ಮಾಡಿದ್ದ ಹರಿಪ್ರಿಯಾ ಈಗ ಮತ್ತೊಮ್ಮೆ ಅದೇ ರೀತಿಯ ಕೆಲಸವನ್ನು ಮಾಡಿದ್ದಾರೆ , ಹೋದ ಕಡೆ ಎಲ್ಲ ಜನ ತಮ್ಮನ್ನು ಗುರುತು ಹಿಡಿಯುತ್ತಾರೆ ಎಂದು ಭಾವಿಸಿ ಸಾರ್ವಜನಿಕ ಸ್ಥಳಗಳಲ್ಲಿ ಸೆಲೆಬ್ರಿಟಿಗಳು ಅಷ್ಟಾಗಿ ಕಾಣಿಸಿಕೊಳ್ಳುವುದಿಲ್ಲ ಆದರೆ ಹರಿಪ್ರಿಯಾ ಬೆಳಗ್ಗೆ ಎದ್ದು ಸೈಕಲ್ ತುಳಿಯುತ್ತಾ ತಮ್ಮ ದೇಹವನ್ನು ಫಿಟ್ ಆಗಿ ಇಟ್ಟುಕೊಂಡಿದ್ದಾರೆ ಆದರೆ ಸೈಕಲ್ ಏರಿ ರೈಡ್ ಗೆ ತೆರಳುವ ಹರಿಪ್ರಿಯಾ ತಮ್ಮನ್ನು ಯಾರೂ ಗುರುತು ಹಿಡಿಯಬಾರದೆಂದು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಸೈಕಲ್ ಓಡಿಸುತ್ತಾರೆ .

 

 

ಇದೇ ಸಮಯದಲ್ಲಿ ಹರಿಪ್ರಿಯ ಕೆಲವು ಫೋಟೋಗಳನ್ನು ತೆಗೆದು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ ಈಗಾಗಲೇ ಹರಿಪ್ರಿಯಾ ಅವರ ಬಹುನಿರೀಕ್ಷಿತ ಬೆಲ್ ಬಾಟಂ ಹಾಗೂ ಡಾಟರ್ ಪಾರ್ವತಮ್ಮ ಚಿತ್ರಗಳು ಬಿಡುಗಡೆಯಾಗಲು ದಿನಗಳನ್ನು ಎಣಿಸುತ್ತಿವೆ ಹೀಗಿರುವಾಗ ಹರಿಪ್ರಿಯಾ ತಮ್ಮ ದೇಹವನ್ನು ಫಿಟ್ ಆಗಿ ಇಟ್ಟುಕೊಳ್ಳಬೇಕು ಎಂದು ನಾನಾ ಕಸರತ್ತುಗಳನ್ನು ಮಾಡುತ್ತಿದ್ದಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top