ಮನೋರಂಜನೆ

ಸಾಹಸ ಮಾಡಲು ಹೋಗಿ ಕಣ್ಣಿಗೆ ಶಾಶ್ವತ ಕುತ್ತು ತಂದುಕೊಂಡ ಬಾಲಿವುಡ್ ನಟಿ ಜಾಕ್ವೆಲಿನ್.

ಬಾಲಿವುಡ್ ನಟಿಯರು ಏನಾದರೊಂದು ಎಡವಟ್ಟು ಮಾಡಿಕೊಳ್ಳೋ ಮೂಲಕ ಸುದ್ದಿಯಾಗೋದು ಹೊಸತೇನಲ್ಲ.ಇಂಥ ನಟಿಯರಿಗೆ ನಾನಾ ರೀತಿಯ ಹುಚ್ಚುಗಳಿರುತ್ತವೆ, ಅದರಲ್ಲೂ ಥ್ರಿಲ್ಲಿಂಗ್ ಆಗಿರುವಂತ ಸಾಹಸಮಯ ಕೆಲಸಗಳನ್ನ ಮಾಡಲು ಸದಾ ಮುಂದುರಿತ್ತಾರೆ. ಆದರೆ ಕೆಲವೊಮ್ಮೆ ಅವರು ಕೈಗೊಳ್ಳುವ ಸಾಹಸಮಯ ಕೆಲಸಗಳಿಂದಲೇ ಅವರಿಗೆ ಅಪಾಯಗಳಾಗಿರುವ ಉದಾಹರಣೆಗಳೂ ನಮ್ಮ ಕಣ್ಣ ಮುಂದಿವೆ. ಇದೀಗ ಅಂತಹುದೇ ಅನಾಹುತವನ್ನು ಮಾಡಿಕೊಂಡಿರೋದು ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫರ್ನಾಂಡಿಸ್.

 

 

ಬಾಲಿವುಡ್ ನಲ್ಲಿ ವಿಪರೀತಿ ಕುತೂಹಲ ಹುಟ್ಟುಹಾಕಿರುವ ಸಲ್ಮಾನ್ ಖಾನ್ ಅವರ ರೇಸ್3 ಚಿತ್ರದಲ್ಲಿ ಜಾಕ್ವೆಲಿನ್ ಕೂಡ ನಟಿಸಿದ್ದಾಳೆ. ಕಳೆದ ಮಾರ್ಚ್ ನಲ್ಲಿ ಚಿತ್ರದ ಶೂಗಿಂಗ್ ನಲ್ಲಿ ಭಾಗಿಯಾಗಿದ್ದ ವೇಳೆ ಸಾಹಸ ದೃಶ್ಯವೊಂದನ್ನು ಮಾಡಲು ಹೋಗಿ ಕಣ್ಣಿಗೆ ಜಾಕ್ವೆಲಿನ್ ಪೆಟ್ಟು ಮಾಡಿಕೊಂಡಿದ್ದಳು..ಈ ಬಗ್ಗೆ ಕೇಳಿದಾಗ ಇದು ಸಣ್ಣ ಗಾಯವಷ್ಟೇ ಎಂದು ಪ್ರತಿಕ್ರಿಯಿಸಿದ್ದರು. ಆದರೆ ತಮಗೆ ಆಗಿದ್ದ ಗಾಯ ಸಣ್ಣಗಾಯವಲ್ಲ ಬದಲಾಗಿ ಅದು ಶಾಶ್ವತವಾಗಿ ವಾಸಿಯಾಗದ ಗಾಯ ಎಂದು ಇದೀಗ ಆಕೆಗೆ ಮನವರಿಕೆಯಾಗಿದೆ. ಹೀಗಂತ ಖುದ್ದು ಆಕೆಯ ಬಹಿರಂಗಪಡಿಸಿದ್ದಾಳೆ..

 

 

ಈ ಬಗ್ಗೆ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತನ್ನ ಗಾಯವಾಗಿರುವ ಕಣ್ಣಿನ ಫೋಟೋ ಪೋಸ್ಟ್ ಮಾಡಿರುವ ಜಾಕ್ವೆಲಿನ್ “ಇದು ನನ್ನ ಕಣ್ಣಿಗೆ ಆಗಿರುವ ಶಾಶ್ವತ ಗಾಯ.ಇನ್ನು ಮುಂದೆ ನನ್ನ ಕಣ್ಣಿನ ಐರಿಸ್(ಕಣ್ಣಿನ ಮಧ್ಯದಲ್ಲಿರುವ ಕಪ್ಪು ಭಾಗ ) ಗೋಲಾಕಾರದಲ್ಲಿ ಇರೋದಿಲ್ಲ. ಅದೃಷ್ಟವಶಾತ್ ನನ್ನ ದೃಷ್ಟಿಗೆ ಯಾವುದೇ ತೊಂದರೆಯಾಗಿಲ್ಲ” ಎಂದು ಬರೆದುಕೊಂಡಿದ್ದಾರೆ. ಒಟ್ಟಿನಲ್ಲಿ ಆಕೆಯೇ ಹೇಳುವಂತೆ ಕೂದಲೆಳೆಯಂತರದಲ್ಲಿ ತನ್ನ ಒಂದು ಕಣ್ಣನ್ನು ಕಾಪಾಡಿಕೊಂಡಿದ್ದಾಳೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top