ದೇವರು

ಜ್ಯೇಷ್ಠ ಅಧಿಕ ಮಾಸದ ಸೋಮವಾರದ ದಿನ ಶಿವನನ್ನು ಈ ರೀತಿ ಪೂಜೆ ಮಾಡಿದರೆ ಅಂದುಕೊಂಡ ಕೆಲಸಗಳು ನೆರವೇರಿ ಸಮಸ್ಯೆಗಳು ದೂರವಾಗುತ್ತದೆ

ಜ್ಯೇಷ್ಠ  ಅಧಿಕ ಮಾಸದ ಸೋಮವಾರದ ದಿನ ಶ್ರದ್ಧೆ, ಭಕ್ತಿಯಿಂದ ಶಿವನನ್ನು ಹೀಗೆ ಆರಾಧಿಸಿದರೆ, ನಿಮ್ಮ  ಪ್ರಾರ್ಥನೆಗಳು ದ್ವಿಗುಣವಾಗಿ ನಿಮಗೆ ಸಾಮಾನ್ಯ ದಿನಕ್ಕಿಂತ ಅಧಿಕ ಮಾಸದಲ್ಲಿ ಮಾಡುವ ಪೂಜೆಗೆ ಅಧಿಕವಾಗಿಯೇ ಪಲವು ಲಭಿಸುತ್ತದೆ.ಬನ್ನಿ ಶಿವನನ್ನು ಯಾವ ರೀತಿ ಸೋಮವಾರ ದಿನ ಆರಾಧಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ.

ಪ್ರತಿ ಸೋಮವಾರ ಮಹಾಶಿವನನ್ನು ಭಕ್ತಿ, ಶ್ರದ್ಧೆಯಿಂದ ಪೂಜಿಸುತ್ತಾರೆ. ಸೋಮವಾರ ಶಿವನ ದಿನವೆಂದೇ, ಶಿವನಿಗೆ ಶ್ರೇಷ್ಠ ದಿನವೆಂದೇ ಪರಿಗಣಿಸಲಾಗಿದೆ. ಶಿವನಿಗೆ ಒಂದು ತಾಮ್ರ ಅಥವಾ ಬೆಳ್ಳಿಯ  ಚೊಂಬಿನಲ್ಲಿ ನೀರಿನಿಂದ ಅಭಿಷೇಕ ಮಾಡಿದರೂ ಸಾಕು ಆ ಶಿವನು ಪ್ರಸನ್ನನಾಗಿ, ನಮ್ಮ ಇಷ್ಟಾರ್ಥಗಳನ್ನು ಪೂರೈಸುತ್ತಾನೆ ಎಂದು ಹೇಳಲಾಗುತ್ತದೆ. ಆದರೆ ಶಿವ ದೇವನಿಗೆ ಪೂಜೆಯನ್ನು ಮಾಡುವಾಗ ಕೆಲವು ನಿಯಮಗಳನ್ನು ನಾವು ಖಡ್ಡಾಯವಾಗಿ ಪಾಲಿಸಲೇಬೇಕು ಎಂದು ಹೇಳಲಾಗುತ್ತದೆ. ಬನ್ನಿ ಆ ನಿಯಮಗಳ ಯಾವುವು ಎಂಬುದನ್ನು ಈಗ ನಾವು ತಿಳಿದುಕೊಳ್ಳೋಣ.

 

 

ಶಿವನಿಗೆ ಬಿಲ್ವಪತ್ರೆಯನ್ನು ಸಮರ್ಪಿಸುವುದು ತುಂಬಾ ಶ್ರೇಷ್ಠವಾದದ್ದು . ಮೂರು ಎಲೆಗಳಲ್ಲಿ ಇರುವ ಈ ಬಿಲ್ವಪತ್ರೆ ಶಿವನ ಕಣ್ಣುಗಳು ಎನ್ನುವ ಅರ್ಥವನ್ನು ಹೊಂದಿದೆ .ಆದರೆ ಈ ಪತ್ರೆಗಳನ್ನು ಮರದಿಂದ ಕಿತ್ತುಕೊಳ್ಳುವಾಗ ಕೆಲವು ನಿಯಮಗಳನ್ನು ಅವಶ್ಯವಾಗಿ ಪಾಲಿಸಬೇಕಾಗುತ್ತದೆ. ಬಿಲ್ವಪತ್ರೆಯನ್ನು ಸೋಮವಾರ, ಅಮಾವಾಸ್ಯೆ, ಹುಣ್ಣಿಮೆ ,ಅಷ್ಟಮಿ ,ನವಮಿಯ ದಿನಗಳಂದು ಮರದಿಂದ ಕೀಳಬಾರದು ಅಥವಾ  ಮರದಿಂದ ಬೇರ್ಪಡಿಸಬಾರದು.

ಹಾಗೆಯೇ ಒಣಗಿ ಹೋಗಿರುವ ಬಿಲ್ವಪತ್ರೆಯನ್ನು ಶಿವನಿಗೆ ಅರ್ಪಿಸಬಾರದು ಹಾಗೆ ಶಿವನಿಗೆ ಬಿಲ್ವ ಪತ್ರೆಯನ್ನು ಅರ್ಪಿಸುವುದಕ್ಕೂ ಮುಂಚೆ ಶುದ್ದವಾದ ನೀರಿನಲ್ಲಿ ಸ್ವಚ್ಛಗೊಳಿಸಿ ನಂತರವೇ ಅರ್ಪಿಸಬೇಕು .

ಶಿವಲಿಂಗಕ್ಕೆ ಎಂದಿಗೂ ಸಹ ಕುಂಕುಮವನ್ನು ಅರ್ಪಿಸಬಾರದು. ಕೇವಲ ಗಂಧ ಮತ್ತು ವಿಭೂತಿಯನ್ನು ಮಾತ್ರವೇ ಉಪಯೋಗಿಸಬೇಕು. ಏಕೆಂದರೆ ಶಿವನು ತುಂಬಾ ಏಕಾಗ್ರತೆಯಿಂದ ಧ್ಯಾನ ಮಾಡುತ್ತಾ ಇರುತ್ತಾನೆ. ಆದ್ದರಿಂದ ಕೆಂಪಾಗಿರುವ ಕುಂಕುಮವನ್ನು ಸಮರ್ಪಿಸುವುದರಿಂದ ದೇಹದ ಉಷ್ಣತೆಯೂ ಹೆಚ್ಚಾಗುತ್ತದೆ. ಆದ್ದರಿಂದಲೇ ಕುಂಕುಮದ ಬದಲಿಗೆ ತಂಪಾಗಿಸುವ ಗಂಧವನ್ನು ಉಪಯೋಗಿಸಬೇಕು .

 

 

ಶಿವನಿಗೆ ಎಲ್ಲ ರೀತಿಯ ಹಣ್ಣನ್ನು ಅರ್ಪಿಸಬಹುದು ಆದರೆ ಬೇಲದ ಹಣ್ಣು ಎಂದರೆ ಶಿವನಿಗೆ ತುಂಬಾ ಇಷ್ಟ. ಇದನ್ನು ಸಮರ್ಪಿಸುವುದರಿಂದ ನಮಗೆ ದೀರ್ಘಾಯುಷ್ಯ ಪ್ರಾಪ್ತಿಯಾಗುತ್ತದೆ .

ಶಿವನಿಗೆ ಎಲ್ಲ ಬಗೆಯ ಹೂವನ್ನು ಅರ್ಪಿಸಬಹುದು, ಆದರೆ ಸಂಪಿಗೆ ಹೂವನ್ನು ಯಾವುದೇ ಪರಿಸ್ಥಿತಿಯಲ್ಲಿಯೂ ಸಹ ಶಿವನ  ಪೂಜೆಯಲ್ಲಿ ಉಪಯೋಗಿಸಬಾರದು. ಶಿವನು ಈ ಹೂವಿಗೆ ಶಾಪವನ್ನು ಕೊಟ್ಟಿದ್ದಾನೆ. ಆದ್ದರಿಂದ ಶಿವ ಪುರಾಣಗಳಲ್ಲಿ ಉಲ್ಲೇಖಿತವಾಗಿರುವ ಪ್ರಕಾರ ಈ ಹೂವನ್ನು ಶಿವನಿಗೆ ಅರ್ಪಿಸಬಾರದಂತೆ.ಸೃಷ್ಟಿಕರ್ತನಾದ ಬ್ರಹ್ಮನ ಸಂಪಿಗೆ ಹೂವನ್ನು ಒಂದು ಸಾರಿ ತಪ್ಪು ಸಾಕ್ಷಿ ಅಂದರೆ ಸುಳ್ಳು  ಹೇಳುವಂತೆ ಕೇಳುತ್ತಾನೆ. ಅದು ಶಿವನಿಗೆ ತಿಳಿಯುತ್ತದೆ  ಮತ್ತು ಸಂಪಿಗೆ ಹೂವಿಗೆ ಪೂಜೆಗೆ ಅರ್ಹತೆ ಇಲ್ಲದಂತೆ ಶಾಪವನ್ನು ನೀಡುತ್ತಾನೆ .

ಶಿವನಿಗೆ ಉಕ್ಕಿನ ಮೇಜಿನ ಮೇಲೆ ಇಟ್ಟು ಅಭಿಷೇಕ ಮಾಡಬಾರದು. ಒಂದು ವೇಳೆ ಮನೆಯಲ್ಲಿ ಶಿವಲಿಂಗವನ್ನು ಇಟ್ಟುಕೊಂಡರೆ ಜಲಧಾರೆ ಖಂಡಿತವಾಗಿಯೂ ಇರಬೇಕು. ಜಲಧಾರೆ ಇಲ್ಲದೆ ಶಿವಲಿಂಗವನ್ನು ಇಟ್ಟುಕೊಂಡಲ್ಲಿ ನಕಾರಾತ್ಮಕ ಶಕ್ತಿ ಮನೆಯಲ್ಲಿ ಉತ್ಪತ್ತಿಯಾಗುತ್ತದೆ.

ಶಿವನಿಗೆ ಪೂಜೆ ಮಾಡುವ ಮೊದಲು ವಿನಾಯಕನಿಗೆ ಪೂಜೆ ಮಾಡಬೇಕು ಅಂದರೆ ನೀರು, ಹಾಲು ಇವುಗಳನ್ನು ಮೊದಲಿಗೆ ಗಣೇಶನ ವಿಗ್ರಹಕ್ಕೆ ಸಮರ್ಪಿಸಿದ ನಂತರವೇ ಬೇರೆ ದೇವರಿಗೆ ಉಪಯೋಗಿಸಬೇಕು. ಯಾಕೆಂದರೆ ಗಣೇಶನೇ ವಿಘ್ನ ವಿನಾಶಕನು, ವಿಘ್ನ ನಿವಾರಕನು.

 

 

ಶಿವ ಪುರಾಣದ ಪ್ರಕಾರ ಶಿವನು ತುಳಸಿಯ ಪತಿಯಾದ ಜಲಂಧರನನ್ನು ಕೊಂದಿದ್ದರಿಂದ ಯಾವುದೇ ಪರಿಸ್ಥಿತಿಯಲ್ಲಿಯೂ ಸಹ ಶಿವನಿಗೆ ತುಳಸಿ ಪತ್ರೆಯನ್ನು ಸಮರ್ಪಿಸಬಾರದು. ಒಂದು ವೇಳೆ ತುಳಸಿಯನ್ನು ಸಮರ್ಪಿಸಿದರೆ ಅದರ ಫಲಿತಾಂಶ ದೊರೆಯುವುದಿಲ್ಲ.

ಸೂರ್ಯೋದಯದ ಸಮಯದಲ್ಲಿ  ಈಗ ಹೇಳಿರುವ ಈ ನಿಯಮವನ್ನು ಅನುಸರಿಸಿ, ಶಿವನಿಗೆ  ಶ್ರದ್ಧೆ ,ಭಕ್ತಿಯಿಂದ ಪೂಜೆಯನ್ನು ಮಾಡಿದರೆ. ನಿಮ್ಮ ಇಷ್ಟಾರ್ಥಗಳು ಈ ಅಧಿಕ ಮಾಸದಲ್ಲಿ ಬೇಗನೆ ಅಧಿಕವಾಗಿಯೇ ಫಲಗಳು ಲಭಿಸುತ್ತದೆ .

ಇನ್ನು ಕಂಕಣ ಭಾಗ್ಯ ಕೂಡಿ ಬರದೇ ಇರುವ ಸ್ತ್ರೀಯರು ಮತ್ತು ಕನ್ಯೆಯರು ವಿವಾಹವಾಗ ಬೇಕಾಗಿರುವ ಕನ್ಯೆಯರು ಸೋಮವಾರದ ದಿನ ವ್ರತವನ್ನು ಆಚರಿಸಿದರೆ, ಅದರಲ್ಲೂ ವಿಶೇಷವಾಗಿ ಈ ಅಧಿಕ ಮಾಸದಲ್ಲಿ ವ್ರತವನ್ನು ಆಚರಿಸುವದರಿಂದ ಅಧಿಕ ಫಲ ಲಭಿಸುತ್ತದೆ. ಸೂರ್ಯೋದಯಕ್ಕೂ ಮುನ್ನ ಬೇಗನೆ ಎದ್ದು ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ಶುಚೀರ್ಭುತರಾಗಿ  ಪೂಜೆ ಸಲ್ಲಿಸಿ, ಸಂಕಲ್ಪ ಮಾಡಿ, ನಿರಾಹಾರ ವ್ರತವನ್ನು ಆಚರಿಸಿ ಸೂರ್ಯೋದಯದ ನಂತರವೂ ಪೂಜೆ ಸಲ್ಲಿಸಿ ಮತ್ತೆ ಶಿವ ದೇವರಿಗೆ ನೈವೇದ್ಯವನ್ನು ಅಂದರೆ  ಯಾವುದಾದರೂ ಸಿಹಿಯಾದ ನೈವೇದ್ಯವನ್ನು ಅರ್ಪಿಸಬೇಕು,

ನೀವು ಸಹ ಉಪ್ಪಿಲ್ಲದೇ ಇರುವ ಸಿಹಿಯಾದ ಆಹಾರವನ್ನು ಅಥವಾ ನೈವೇದ್ಯವನ್ನು ಪ್ರಸಾದವಾಗಿ ಸ್ವೀಕರಿಸಿದರೆ ನಿಮ್ಮ ಸೋಮವಾರದ ವ್ರತವೂ ಸಂಪೂರ್ಣವಾಗುತ್ತದೆ. ಹೀಗೆ ಮಾಡುವುದರಿಂದ ಶಿವನು ಸಂತೃಪ್ತನಾಗಿ,ಪ್ರಸನ್ನನಾಗಿ  ಅಧಿಕ ಮಾಸದಲ್ಲಿ ಅಧಿಕವಾಗಿಯೇ ಫಲವು  ಸಹ ಲಭಿಸುತ್ತದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top