ದೇವರು

ಜೂನ್ 10 ನೇ ತಾರೀಖು ಮೂರು ವರ್ಷಗಳಿಗೆ ಒಮ್ಮೆ ಬಂದಿರುವ ಅಧಿಕ ಜ್ಯೇಷ್ಠ ಮಾಸದ ಕಮಲಾ ಏಕಾದಶಿ ದಿನ ಈ ಕೆಲಸಗಳನ್ನ ಮಾಡಿದ್ರೆ ನಿಮಗೆ ಒಳ್ಳೇದಾಗುತ್ತೆ

ಮೂರು ವರ್ಷಗಳಿಗೆ ಒಮ್ಮೆ ಬರುವ ಅಧಿಕ ಮಾಸ ಮತ್ತು ಮತ್ತು ಅಧಿಕ ಜ್ಯೇಷ್ಠ ಮಾಸದ ಏಕಾದಶಿಯ ದಿನ ಈ ಒಂದು ಕೆಲಸವನ್ನು ಮಾಡಿ ನೀವು ಅದೃಷ್ಟವನ್ನು ಪಡೆದುಕೊಳ್ಳಿ.

 

ಜೂನ್ 10 ನೇ ತಾರೀಖು, ಭಾನುವಾರ, ಕೃಷ್ಣ ಪಕ್ಷದ, ಅಧಿಕ ಜ್ಯೇಷ್ಠ ಮಾಸದ ಏಕಾದಶಿ ಇದಾಗಿದ್ದು,ಅಶ್ವಿನಿ ನಕ್ಷತ್ರದಲ್ಲಿ ಈ ದಿನ ಏಕಾದಶಿ ಇದೆ. ಇದನ್ನು ಪದ್ಮ ಅಥವಾ ಕಮಲಾ ಏಕಾದಶಿ ಎಂದು ಕರೆಯಲಾಗುತ್ತದೆ. ರವಿವಾರದ ದಿನವೇ ಬಂದಿರುವುದರಿಂದ ಸೂರ್ಯನ ಆರಾಧನೆಗೂ ಸಹ ಈ ದಿನ ಬಹಳ ವಿಶೇಷ ಮಹತ್ವವನ್ನು ಹೊಂದಿದೆ.

ಜೂನ್ ಹತ್ತು ಭಾನುವಾರ ಏಕಾದಶಿ. ಪ್ರತಿ ತಿಂಗಳು ಏಕಾದಶಿ ಬರುತ್ತದೆ. ಈ ಬಾರಿಯ ಏಕಾದಶಿ ತುಂಬಾ ವಿಶೇಷತೆ ಹೊಂದಿದೆ. ಯಾಕೆಂದರೆ ಅಧಿಕ ಮಾಸದ ಏಕಾದಶಿ ಇದಾಗಿದೆ. ಅಧಿಕ ಮಾಸ ಮೂರು ವರ್ಷದಲ್ಲಿ ಒಮ್ಮೆ ಬರುತ್ತದೆ.ಮತ್ತೆ ಅಧಿಕ ಮಾಸವು 2021 ರಲ್ಲಿ ಬರಲಿದೆ.

ಪಂಡಿತರ ಪ್ರಕಾರ ಅಧಿಕ ಮಾಸ ಶ್ರೀ ಕೃಷ್ಣನಿಗೆ ಇದು ತುಂಬಾ ಪ್ರಿಯವಾದ ಮಾಸವಾಗಿದೆ. ಹಾಗಾಗಿ ಇದನ್ನು ಪುರುಷೋತ್ತಮ ಮಾಸವೆಂದು ಕೂಡ ಕರೆಯಲಾಗುತ್ತದೆ. ಅಧಿಕ ಮಾಸದ ಏಕಾದಶಿಯಂದು ಕೆಲವೊಂದು ಉಪಾಯ ಆನುಸರಿಸಿದರೆ ಶ್ರೀ ಕೃಷ್ಣನ ಕೃಪೆಗೆ ಪಾತ್ರರಾಗಬಹುದು.

 

 

ಏಕಾದಶಿಯಂದು ಶ್ರೀ ಕೃಷ್ಣ ಪೂಜೆ ಮಾಡಿ. ಪೂಜೆಯ ವೇಳೆ ಕೃಷ್ಣನ ಮೂರ್ತಿ ಬಳಿ ಸ್ವಲ್ಪ ಹಣವನ್ನು ಇಡಿ ಹಣವನ್ನು ಇಡಿ. ಪೂಜೆ ನಂತರ ಈ ಹಣವನ್ನು ನಿಮ್ಮ ಪರ್ಸ್ ನಲ್ಲಿ ಇಟ್ಟುಕೊಳ್ಳಿ. ಇದರಿಂದ ಧನ ಲಾಭವಾಗುವ ಸಾಧ್ಯತೆ ಹೆಚ್ಚಾಗಿದೆ.

ಶ್ರೀಮಂತರಾಗಲು ಬಯಸುವವರು ಏಕಾದಶಿಯಂದು ಶ್ರೀಕೃಷ್ಣನ ದೇವಸ್ಥಾನಕ್ಕೆ ಹೋಗಿ ಬಿಳಿ ಬಣ್ಣದ ಮಿಠಾಯಿ ಅಥವಾ ಕೀರು ದೇವರಿಗೆ ಅರ್ಪಿಸಿ. ಮಿಠಾಯಿ ಮೇಲೆ ತುಳಸಿಯನ್ನು ಅವಶ್ಯಕವಾಗಿ ಇಡಿ.

ಏಕಾದಶಿಯಂದು ಬ್ರಹ್ಮ ಮುಹೂರ್ತದಲ್ಲಿ ಎದ್ದು ಪವಿತ್ರ ನದಿಯಲ್ಲಿ ಸ್ನಾನ ಮಾಡಿ ಅಥವಾ ಸಂಜೆ ಗೋಧೂಳಿಯ ಸಮಯದಲ್ಲಿ ಶುದ್ಧಿಯಾಗಿ ಪೂಜೆ ಮಾಡಿದರೆ ಎಲ್ಲಾ ಸುಖ ಪ್ರಾಪ್ತಿಯಾಗುತ್ತದೆ. ನಂತರ ವಿಧಿ ವಿಧಾನದ ಮೂಲಕ ಗಾಯತ್ರಿ ಮಂತ್ರವನ್ನು ಜಪಿಸಬೇಕು. ಮಹಿಳೆಯರು ಸ್ನಾನದ ನಂತರ ಉತ್ತಮ ಆರೋಗ್ಯ ಹಾಗೂ ಗಂಡನ ಆಯುಷ್ಯಕ್ಕೆ ಪ್ರಾರ್ಥನೆ ಮಾಡಿ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top