ಜ್ಯೋತಿಷ್ಯ

ಜಾತಕದಲ್ಲಿಗುರುಬಲ ಇಲ್ಲದೇ ಹೋದರೆ ಎಲ್ಲ ಕೆಲಸಗಳಿಗೂ ಕಷ್ಟ ಅಡೆತಡೆಗಳು ಉಂಟಾಗುತ್ತಲೇ ಇರುತ್ತದೆ, ಗುರುಬಲ ಪಡೆಯಲು ಏನ್ ಮಾಡ್ಬೇಕು ಗೊತ್ತಾ

ಗುರುಬಲ ಯಾಕೆ ಬೇಕು ?ಅದಕ್ಕೆ ನಾವು ಏನು ಮಾಡಬೇಕು ?

 

ಗುರುಬಲ ಇದ್ದರೆ ಸಾಕು ಯಾವುದೇ ಕೆಲಸ ಕಾರ್ಯ ಹೂವು ಎತ್ತಿದಷ್ಟು ಸುಲಭವಾಗಿ ಆಗುತ್ತದೆ ಎಂದು ಹೇಳುತ್ತಾರೆ. ಅದೇ ಗುರುಬಲ ಇಲ್ಲದೇ ಹೋದರೆ ಎಲ್ಲ ಕೆಲಸಗಳಿಗೂ ಕಷ್ಟ ಅಡೆತಡೆಗಳು ಉಂಟಾಗುತ್ತಲೇ ಇರುತ್ತದೆ. ಯಾವುದೇ ಕೆಲಸವೂ ಕೈಗೂಡುವುದಿಲ್ಲ ಎಂದು ಹೇಳಲಾಗುತ್ತದೆ. ಹಾಗಾದರೆ ಗುರುಬಲ ಎನ್ನುವುದು ಅಷ್ಟೊಂದು ಮುಖ್ಯವೇ ? ಗುರುಬಲ ಪ್ರಾಪ್ತಿಗಾಗಿ ಏನೇನು ಮಾಡಬೇಕು ? ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

 

 

ಗುರುಬಲ ಎನ್ನುವುದು ಅಷ್ಟೊಂದು ಮುಖ್ಯವೇ ? ಎಂದರೆ , ಹೌದು ಗುರುಬಲ ಎನ್ನುವುದು ಇಂದಿಗೂ ಕೂಡ ಗುರುಬಲ ಇಲ್ಲದ ಸಮಯದಲ್ಲಿ ಎಷ್ಟೊಂದು ಜನ ವಿವಾಹವನ್ನು ಮಾಡಿಕೊಂಡಿರುವವರು ಕೂಡ ಅವರ ಜೀವನದಲ್ಲಿ ನೆಮ್ಮದಿಯಾಗಿ ಇರುವುದಕ್ಕೆ ಸಾಧ್ಯವಿಲ್ಲ . ಅದಕ್ಕೆ ಪ್ರತಿಯೊಬ್ಬರೂ ಕೂಡ ಮದುವೆ ಮಾಡಬೇಕು, ಮನೆ ಕಟ್ಟಬೇಕು ಅಥವಾ ಬ್ರಹ್ಮೋಪದೇಶ ಮಾಡಬೇಕು, ಉಪನಯನ ಮಾಡಬೇಕು, ಮುಂಜಿ ಮಾಡಬೇಕು ಎಂದರು ಕೂಡ ಗುರುಬಲವನ್ನು ಮುಖ್ಯವಾಗಿ ನೋಡುತ್ತಾರೆ.

ಇಂದಿಗೂ ಕೂಡ ನಾವು ಮಾಡುವಂತಹ ಮುಖ್ಯ ಕೆಲಸಗಳಲ್ಲಿ ಗುರುಬಲ ಇಲ್ಲ ಎಂದರೆ ಅವರು ನಾನಾ ರೀತಿಯ ತೊಂದರೆಗಳನ್ನು ಅನುಭವಿಸುತ್ತಾರೆ. ಶತ್ರುಬಾಧೆ ಗಳಿರಬಹುದು, ಇನ್ನೊಂದು ಮತ್ತೊಂದು ಕಷ್ಟದಲ್ಲಿರುವುದು.ಅದೇ ಒಂದು ವೇಳೆ  ಗುರುಬಲ ಎನ್ನುವುದು ಇತ್ತು ಎಂದರೆ ಶತ್ರುಗಳು ಕೂಡ ಮಿತ್ರರಾಗಿ ಪರಿವರ್ತನೆಯಾಗುತ್ತಾರೆ .ಆದರೆ ಗುರುಬಲ ಎನ್ನುವುದು ನಮಗೆ ಇಲ್ಲ ಎಂದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುವುದು.

ಗುರುಬಲ ಬರಬೇಕು ಎಂದರೆ ನಾವೇನು ಮಾಡಬೇಕು ?

 

 

 

ಪ್ರತಿ ಗುರುವಾರ ಗುರು ಸಮಾನರಾಗಿರುವವರಿಗೆ ಪಾದ ಪೂಜೆಯನ್ನು ಮಾಡಿ, ನಮಸ್ಕರಿಸಿ ಆಶೀರ್ವಾದವನ್ನು ಪಡೆಯಬೇಕು. ನಮ್ಮ ಅಗತ್ಯಕ್ಕೆ ತಕ್ಕಂತೆ ಅವರಿಗೆ ವಸ್ತ್ರ ದಾನ ಅಥವಾ ಹಳದಿ ಬಟ್ಟೆಯನ್ನು ದಾನ ಮಾಡುವುದರಿಂದಲೂ ಸಹ ಗುರುವಿನ ಅನುಗ್ರಹ ಪ್ರಾಪ್ತಿಯಾಗುತ್ತದೆ.

ನಾವು ಮೊದಲೇ ಹೇಳುವಂತೆ ತಾಯಿಯೇ ಮೊದಲ ಗುರು, ತಂದೆಯೇ ಗುರು ಮತ್ತು  ನಿಮಗೆ ಬೋಧನೆಯನ್ನು ಮಾಡುವಂಥವರು ಗುರು, ಅದಕ್ಕೆ ಹೇಳುವುದು  ತ್ರಿಮೂರ್ತಿಸ್ವರೂಪೇಣ ಮಾತಾ, ಪಿತೃ ಮತ್ತು ಗುರು. ಈ ಮೂರು ಜನಕ್ಕೆ ನಾವು ನಮಸ್ಕರಿಸಬೇಕು.

ಆದರೆ ಎಷ್ಟೋ ಮಕ್ಕಳು ನಿಮ್ಮ ಜೀವನದಲ್ಲಿ ಅಭಿವೃದ್ಧಿಯತ್ತ ಹೋಗಬೇಕು ಎಂದರೆ ತಾಯಿಯನ್ನು ಬೈಯುವವರು ಬಹಳಷ್ಟು ಜನ ಇದ್ದೀರಾ, ತಂದೆಗೆ ದ್ರೋಹವನ್ನು ಮಾಡುವವರು ಬಗೆಯುವವರು ಬಹಳಷ್ಟು ಜನ ಇದ್ದೀರಾ, ಗುರುವಿಗೂ ಸಹ ದ್ರೋಹವನ್ನು ಬಗೆದು ಅನ್ಯಾಯವನ್ನು ಮಾಡುತ್ತೀರಾ, ಈ ರೀತಿ ನೀವೇನಾದರೂ ದ್ರೋಹ ಮಾಡಿದ್ದೇ ಆದರೆ , ನಿಮಗೆ ಗುರುಬಲ ಬಂದರೂ ಕೂಡ ಆ ಗುರುಬಲ ಕೆಲಸ ಮಾಡುವುದಿಲ್ಲ.

 

 

ಅದಕ್ಕೇ ಸಂಗೀತದಲ್ಲಿ ಒಂದು ವಾಕ್ಯವನ್ನು ಹೇಳುತ್ತಾರೆ “ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ” ಎಂದು ಇದನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಿ. ಗುರುಬಲ ಎನ್ನುವುದು ನಮಗೆ ಮುಖ್ಯವಾಗಿ ಬೇಕು ಎಂದರೆ ತಂದೆ, ತಾಯಿ ಮತ್ತು ಗುರುವನ್ನು ವ್ಯವಸ್ಥಿತವಾಗಿ ನಾವು ನೋಡಿಕೊಳ್ಳಬೇಕು. ನೀವು ಎಷ್ಟೇ ತೀರ್ಥಯಾತ್ರೆ ಮಾಡಿ, ಎಷ್ಟೇ ದೇವರ ಪೂಜೆ ಮಾಡಿ, ಎಷ್ಟೇ ಯಜ್ಞ ಯಾಗಾದಿಗಳನ್ನು ಮಾಡಿದರು ಕೂಡ ಫಲ ಲಭಿಸುವುದಿಲ್ಲ.

ಆ ಫಲಗಳು ನಿಮಗೆ ಬರಬೇಕು ಎಂದರೆ ಮಾತೃವಿನ ಅನುಗ್ರಹ, ಪಿತೃವಿನ ಅನುಗ್ರಹ ಮತ್ತು ಗುರುವಿನ ಅನುಗ್ರಹ ಬೇಕು. ಯಾವುದೇ ಯಜ್ಞ ಯಾಗಾದಿ, ಪೂಜೆಗಳನ್ನು ಮಾಡಬೇಕಾದರೂ ಕೂಡ ಸಂಕಲ್ಪವನ್ನು ಮಾಡುತ್ತೀರಾ , ಆಚಾರ್ಯ ಮುಖೇನ ಗ್ರಹಿಕೆ ಆಚಾರ್ಯರ ಮುಖಾಂತರವೇ ಗುರುವಿನ ಮುಖಾಂತರವೇ ನೀವು ಮುಕ್ತಿಯನ್ನು ನೋಡಬೇಕು .ಆಗಲೇ ನಿಮಗೆಲ್ಲರಿಗೂ ಗುರುಬಲ ಪ್ರಾಪ್ತಿಯಾಗುವುದು .ಸುಖ ಜೀವನ ಪ್ರಾಪ್ತಿಯಾಗುವುದು. ನಿಮ್ಮ ಜೀವನ ಉತ್ತಮವಾಗಿರುವುದು .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top