ಸಿನಿಮಾ

ಸಲ್ಮಾನ್ ಖಾನ್ ಹತ್ಯೆ ಮಾಡಲು ಸ್ಕೆಚ್ ,ಪೊಲೀಸ್ ರಿಂದ ಹೊರಬಿತ್ತು ಸ್ಪೋಟಕ ಮಾಹಿತಿ

ಈ ಹಿಂದೆ ಹಲವಾರು ಕೇಸುಗಳಲ್ಲಿ ಬೇಕಾಗಿದ್ದ ಗ್ಯಾಂಗ್ಸ್ಟರ್ ಸಂಪತ್ ನೆಹ್ರಾ ನನ್ನು ಪೊಲೀಸರು ಹರಿಯಾಣದಲ್ಲಿ ಬಂಧಿಸಲು ಯಶಸ್ವಿಯಾಗಿದ್ದಾರೆ ಹಾಗೆಯೇ ಪೊಲೀಸರು ಸ್ಫೋಟಕ ಮಾಹಿತಿಯೊಂದನ್ನು ಬಯಲು ಪಡಿಸಿದ್ದಾರೆ ಸಂಪತ್ ನೆಹ್ರಾ ಸಲ್ಮಾನ್ ಖಾನ್ ಅವರನ್ನು ಮುಗಿಸಿಬಿಡಲು ಸ್ಕೆಚ್ ಹಾಕಿದ್ದನಂತೆ.

 

 

ಅಲ್ಲದೆ ಸಲ್ಮಾನ್ ಖಾನ್ ಕುರಿತಾಗಿ ಸಾಕಷ್ಟು ವಿವರಗಳನ್ನು ನೆಹ್ರಾ ಕಲೆ ಹಾಕಿದ್ದನಂತೆ ಮುಂಬೈಗೆ ಹೋಗಿದ್ದ ಇಪ್ಪತ್ತೆಂಟು ವರ್ಷ ವಯಸ್ಸಿನ ನೆಹ್ರಾ ಸಲ್ಮಾನ್ ಖಾನ್ ಮನೆಯ ಫೋಟೋಗಳು ಹಾಗೆಯೇ ಸಲ್ಮಾನ್ ಖಾನ್ ದಿನಾಗಲೂ ಓಡಾಡುವ ರಸ್ತೆಯ ಮಾರ್ಗಗಳನ್ನು ಸಹ ಫೋಟೋ ತೆಗೆದು ತನ್ನ ಮೊಬೈಲ್ ಫೋನ್ನಲ್ಲಿ ಇಟ್ಟುಕೊಂಡಿದ್ದ ಎಂದು ತಿಳಿದು ಬಂದಿದೆ .

ನಟೋರಿಯಸ್ ಕಿಲ್ಲರ್ ಆಗಿದ್ದ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ನಲ್ಲಿ ಸಂಪರ್ ನೆಹ್ರಾ ಶಾರ್ಪ್ ಶೂಟರ್ ಆಗಿದ್ದ ಎಂದು ತಿಳಿದು ಬಂದಿದೆ , ಕೃಷ್ಣಮೃಗ ಹತ್ಯೆ ಪ್ರಕರಣದಲ್ಲಿ ಬಿಷ್ಣೋಯಿ ಸಮುದಾಯದವರ ವೈರತ್ವವನ್ನು ಕಟ್ಟಿಕೊಂಡಿದ್ದ ಸಲ್ಮಾನ್ ಖಾನ್ ಗೆ ಲಾರೆನ್ಸ್ ನಿಂದ ಬೆದರಿಕೆ ಕರೆ ಕೂಡ ಬಂದಿತ್ತು .

 

 

ಸಲ್ಮಾನ್ ಖಾನ್ ಅವರನ್ನು ಮುಗಿಸಿದ ನಂತರ ವಿದೇಶಕ್ಕೆ ಎಸ್ಕೇಪ್ ಆಗುವ ಪ್ಲಾನನ್ನು ಮಾಡಿದ್ದ ನೆಹ್ರಾ ಎಂದು ತಿಳಿದು ಬಂದಿದೆ , ೧೯೯೮ ರಲ್ಲಿ ಎರಡು ಕೃಷ್ಣ ಮೃಗಗಳನ್ನು ಬೇಟೆಯಾಡಿದ ಆರೋಪದ ಮೇಲೆ ಸಲ್ಮಾನ್ ಖಾನ್ ಅವರಿಗೆ ಏಪ್ರಿಲ್ ನಲ್ಲಿ ಶಿಕ್ಷೆಯಾಗಿತ್ತು, ಆ ನಂತರ ಜೋಧಪುರ ಸೆಂಟ್ರಲ್ ಜೈಲಿನಲ್ಲಿ ಎರಡು ದಿನಗಳ ಕಾಲ ಸಲ್ಲು ಶಿಕ್ಷೆಯನ್ನು ಅನುಭವಿಸಿದ್ದರು ಆ ನಂತರ ಜಾಮೀನು ಪಡೆದು ಹೊರ ಬಂದಿದ್ದರು .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top