ಮನೋರಂಜನೆ

ಹಿಂದೂಗಳಿಗೆ ಉಗ್ರ ಪಟ್ಟದ ವಿವಾದ : ಕೊನೆಗೂ ಕ್ಷಮೆಯಾಚಿಸಿದ ಪ್ರಿಯಾಂಕಾ ಚೋಪ್ರಾ.

ಬಾಲಿವುಡ್‌ನಲ್ಲಿ ತನ್ನ ನಟನೆಯ ಖದರಿನಿಂದಲೇ ಅವಕಾಶಗಳನ್ನು ಗಿಟ್ಟಿಸಿಕೊಂಡು ಇದೀಗ ವಿಶ್ವಾದ್ಯಂತ ಮಿಂಚುತ್ತಿರೋ ಪ್ರಿಯಾಂಕಾ ಚೋಪ್ರಾ ವಿನಾಕಾರಣ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾಳೆ. ಅಮೇರಿಕಾದ ಕ್ವಾಂಟಿಕೋ ಸಂಚಿಕೆಯಲ್ಲಿ ಭಾರತೀಯರನ್ನು ಹಿಂದೂ ಉಗ್ರಗಾಮಿಗಳೆಂದು ಬಿಂಬಿಸಿ ಭಾರತೀಯ ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿದ್ದಾಳೆ. ನಿರ್ದೇಶಕನು ಹೇಳಿಕೊಟ್ಟಿದ್ದನ್ನು ನೀಟಾಗಿ ನಟಿಸಿ ತನಗೆ ತಿಳಿದೆಯೇ ಮಾಡಿಕೊಂಡಿರುವ ಎಡವಟ್ಟಿಗೆ ಪ್ರಿಯಾಂಕಾ ಚೋಪ್ರಾ ಇದೀಗ ಎಲ್ಲರಲ್ಲೂ ವಿನಮ್ರವಾಗಿ ಕ್ಷಮೆಯಾಚಿಸಿದ್ದಾಳೆ.

 

 

ಈ ಬಗ್ಗೆ ತನ್ನ ಟ್ವಿಟರ್ ಅಕೌಂಟ್ ನಲ್ಲಿ ಟ್ವೀಟ್ ಮಾಡಿರುವ ಪಿಗ್ಗಿ ‘ನನಗೆ ತುಂಬಾ ಬೇಸರವಾಗಿದೆ. ಕ್ವಾಂಟಿಕೋ ಸಂಚಿಕೆಯಲ್ಲಿ ಆ ರೀತಿ ತೋರಿಸಿರುವುದು ಭಾರತೀಯರ ಮನಸ್ಸಿಗೆ ನೋವುಂಟಾಗಿರುವುದಕ್ಕೆ ಎಲ್ಲರಲ್ಲೂ ನಾನು ಕ್ಷಮೆ ಕೇಳುತ್ತೇನೆ., ಯಾರಿಗೂ ನೋವುಂಟು ಮಾಡುವ ಉದ್ದೇಶ ನನಗಿರಲಿಲ್ಲ. ನಾನು ಪ್ರಾಮಾಣಿಕವಾಗಿ ಕ್ಷಮೆ ಕೇಳುತ್ತಿದ್ದೇನೆ. ನಾನು ಭಾರತೀಯಳು ಎಂದು ಹೇಳಲು ಹೆಮ್ಮೆ ಪಡುತ್ತೇನೆ.’ ಎಂದು ಬರೆದುಕೊಂಡಿದ್ದಾಳೆ.


ಪ್ರಿಯಾಂಕಾ ಛೋಪ್ರ ನಟಿಸಿದ್ದ ಅಮೆರಿಕನ್ ಟಿವಿ ಕಾರ್ಯಕ್ರಮ ಸರಣಿ ಕ್ವಾಂಟಿಕೊ ದಲ್ಲಿ ಆಲೆಕ್ಸ್ ಪ್ಯಾರಿಸ್ ಎಂಬ ಎಫ್‍ಬಿಐ ಏಜೆಂಟ್ ಅಧಿಕಾರಿ ಪಾತ್ರ ಮಾಡಿರುವ ಪಿಗ್ಗಿ ಮ್ಯಾನ್‍ಹಟನ್‍ನಲ್ಲಿ ಪಾಕಿಸ್ತಾನದಲ್ಲಿ ಪರಮಾಣು ದಾಳಿ ಮಾಡಲು ಸಿದ್ಧತೆ ನಡೆಸುತ್ತಿದ್ದ ಶಂಕಿತ ಆರೋಪಿಯನ್ನು ಬಂಧಿಸಿರುತ್ತಾಳೆ. ಆತ ಕೊರಳಲ್ಲಿ ರುದ್ರಾಕ್ಷಿ ಧರಿಸಿರುತ್ತಾನೆ. ರುದ್ರಾಕ್ಷಿ ಧರಿಸಿದ ಹಿನ್ನೆಲೆಯಲ್ಲಿ ಆತನನ್ನು ಹಿಂದೂ ಉಗ್ರಗಾಮಿ ಎಂಬಂತೆ ಸಂಚಿಕೆಯಲ್ಲಿ ತೋರಿಸಲಾಗಿದೆ ಎಂದು ಹಿಂದೂಪರ ಸಂಘಟನೆಗಳು ಪಿಗ್ಗಿ ಮತ್ತು ಕ್ವಾಂಟಿಕೊ ಎಪಿಸೋಡ್ ವಿರುದ್ಧ ಕೆರಳಿದ್ದವು. ಭಯೋತ್ಪಾದಕ ದಾಳಿಯಲ್ಲಿ ಪಾಕಿಸ್ತಾನಿಯರನ್ನು ಸಿಲುಕಿಸಲು ಭಾರತೀಯರು ಯತ್ನಿಸುತ್ತಿದ್ದಾರೆ’ ಎಂದು ಅನೇಕರು ಅಭಿಪ್ರಾಯಗಳನ್ನು ಹೊರಹಾಕಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top