ಮನೋರಂಜನೆ

ಸುಳ್ ಸುದ್ದಿಗಳಿಗೆ ಕಿವಿಕೊಡಬೇಡಿ ಅಪ್ಪು ಚಿತ್ರಕ್ಕೆ ರಚಿತಾನೇ ಹೀರೋಯಿನ್.

ಪ್ರೇಕ್ಷಕ ವಲಯದಲ್ಲಿ ಭಾರಿ ನಿರೀಕ್ಷೆ ಹುಟ್ಟುಹಾಕಿರೋ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಮುಂದಿನ ಚಿತ್ರ ನಟಸಾರ್ವಭೌಮ ನಾನಾ ರೀತಿಯಲ್ಲಿ ಸುದ್ದಿಯಲ್ಲಿದೆ. ಕೆಲ ಮಂದಿ ಚಿತ್ರಕ್ಕೆ ರಚಿತಾ ರಾಮ್ ನಾಯಕಿ ಎಂದು ಆಯ್ಕೆ ಮಾಡಿದ್ದಾಗ ರಚಿತಾಬೇಡ ಎಂದು ವಿರೋಧಿಸಿದ್ದರು.. ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ರಚಿತಾ ತನ್ನ ಪಾಡಿ ತಾನು ಹೋಗಿ ಶೂಟಿಂಗ್ ನಲ್ಲಿ ಭಾಗಿಯಾಗಿದ್ದರು.

ಇತ್ತೀಚಿನ ಒಂದೆರೆಡು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ನಟಸಾರ್ವಭೌಮ ಚಿತ್ರದಿಂದ ರಚಿತಾ ರನ್ನು ಕೈಬಿಡಲಾಗಿದೆ, ಅಭಿಮಾನಿಗಳ ಬೇಡಿಕೆಯಂತೆ ರಚಿತಾ ಬದಲು ಬೇರೆ ನಟಿ ಚಿತ್ರದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ ಎನ್ನುವ ಸುದ್ದಿ ಹರಡಿಕೊಂಡಿತ್ತು. ಆದರೆ ಇದು ಮಾಡಲು ಕೆಲಸಿಲ್ಲದ ಕಿಡಿಗೇಡಿಗಳು ಹಬ್ಬಿಸಿರುವ ಸುದ್ದಿಯಾಗಿದ್ದು ಚಿತ್ರಕ್ಕೆ ಅದಾಗಲೇ 45% ಶೂಟಿಂಗ್ ಮುಕ್ತಾಯಗೊಂಡಿದೆ. ರಚಿತಾ ರಾಮ್ ಕೂಡ ಮೊದಲ ಹಂತದ ಶೂಟಿಂಗ್ ನಲ್ಲಿ ಭಾಗವಹಿಸಿ ನಟಿಸಿ ಹೋಗಿದ್ದಾರೆ. ಹಾಗಾಗಿ ಸುಳ್ಳು ಸುದ್ದಿಗಳಿಗೆ ಅಭಿಮಾನಿಗಳು ಕಿವಿಕೊಡಬಾರದು ಎಂದು ಅಪ್ಪು ಅಭಿಮಾನಿಗಳು ತಿಳಿಸುತ್ತಿದ್ದಾರೆ.

 

 

ಅಂದಹಾಗೆ ಚಿತ್ರತಂಡ ನಾಯಕಿಯನ್ನು ಹುಡುಕುತ್ತಿರುವುದಂತೂ ನಿಜ ಆದರೆ ಅದು ಎರಡನೇ ನಾಯಕಿಯ ಪಾತ್ರಕ್ಕೆ, ಕೆಲವೇ ದಿನಗಳಲ್ಲಿ ಹೊಸ ನಾಯಕಿ ಯಾರು ಎಂಬುದನ್ನು ಫೈನಲ್ ಮಾಡಲಿದ್ದೇವೆ. ಎಂದು ನಿರ್ದೇಶಕ ಪವನ್ ಒಡೆಯರ್ ಅವರೇ ಹೇಳಿದ್ದಾರೆ. ಎರಡನೇ ನಾಯಕಿಯ ಪಾತ್ರ ಚಿತ್ರದಲ್ಲಿ ಕತೆಗೆ ಅತಿದೊಡ್ಡ ತಿರುವು ನೀಡುತ್ತದೆ ಎನ್ನುವುದು ಪವನ್ ಒಡೆಯರ್ ಅವರ ಮಾತು.

ಅಂದಹಾಗೆ ಈ ಚಿತ್ರವನ್ನು ಶಾಸಕ ಮುನಿರತ್ನ ಅರ್ಪಿಸುತ್ತಿದ್ದು ರಾಕ್ ಲೈನ್ ವೆಂಕಟೇಶ್ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದಲ್ಲಿ ಅಪ್ಪುಗೆ ನಾಯಕಿಯಾಗಿ ಡಿಂಪಲ್ ಕ್ವೀನ್ ರಚಿತಾ ರಾಮ್ ಜೋಡಿಯಾಗಿದ್ದು ಹಿರಿಯ ನಟಿ ಬಿ. ಸರೋಜಾದೇವಿ ಕೂಡ ವಿಶೇಷ ಪಾತ್ರವೊಂದನ್ನು ಮಾಡಿದ್ದಾರೆ, ಇವರ ಜೊತೆ ಚಿಕ್ಕಣ್ಣ, ರವಿಶಂಕರ್, ಅಚ್ಚುತ್ ಕುಮಾರ್ ಸೇರಿದಂತೆ ಸಾಕಷ್ಟು ಕಲಾವಿದರು ಬಣ್ಣ ಹಚ್ಚಲಿದ್ದಾರೆ. ಚಿತ್ರಕ್ಕೆ ಕೋಟಿಗೊಬ್ಬ ೨ ಖ್ಯಾತಿಯ ಡಿ.ಇಮಾನ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top