ವಿಶೇಷ

ಈ ಮೂರು ಸಮ್ಮೋಹಿನಿ ವಿದ್ಯೆಯಿಂದ ಏನು ಬೇಕಾದರೂ ಸಾಧಿಸಬಹುದು, ಸಮ್ಮೋಹಿನಿ ವಿದ್ಯೆಯಿಂದ ಏನೇ ಬೇಕಿದ್ರೂ ನೆನಪಿಟ್ಟಿಕೊಳ್ಳಬಹುದು ಗೊತ್ತಾ

ಈ ಮೂರು ಸಮ್ಮೋಹಿನಿ ವಿದ್ಯೆಯಿಂದ ಏನು ಬೇಕಾದರೂ ಸಾಧಿಸಬಹುದು. ಸಮ್ಮೋಹಿನಿ ವಿದ್ಯೆಯಿಂದ ನೆನಪಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ವಿಧಾನ.

 

ನಾವು ಹುಟ್ಟಿದಾಗಿನಿಂದ ಇಲ್ಲಿಯವರೆಗೂ ನೋಡಿದ ಕೇಳಿದ ಎಲ್ಲ ವಿಷಯಗಳು ಅತ್ಯಂತ ಸ್ಪಷ್ಟವಾಗಿ ನಮ್ಮ ಮನಸ್ಸಿನ ಆಳದಲ್ಲಿ ಅಥವಾ ನಮ್ಮ ಸುಪ್ತ ಪ್ರಜ್ಞೆಯಲ್ಲಿ ಅಚ್ಚಾಗಿರುತ್ತದೆ. ನಾವು ಜೀವನದ ಯಾವುದೇ ಘಟನೆಯನ್ನು ನೆನಪು ಮಾಡಿಕೊಳ್ಳಬಹುದು .

ನಮ್ಮ ಮನಸ್ಸಿನ ಈ ಸಾಮರ್ಥ್ಯವನ್ನು ನಮ್ಮ ಓದಿನಲ್ಲಿ ಅಂದರೆ ನೆನಪಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಬಳಸಿಕೊಳ್ಳಬಹುದು. ನಾವು ಆಳವಾದ ಏಕಾಗ್ರತೆಯಿಂದ ಆಳವಾದ ಧ್ಯಾನದ ಸ್ಥಿತಿ ಅಥವಾ ಅಲ್ಫಾ ಸ್ಟೇಟ್ ನಲ್ಲಿ ಓದಿದರೆ, ಕೇಳಿದರೆ ಆ ವಿಷಯಗಳು ನಮ್ಮ ಮನಸ್ಸಿನಲ್ಲಿ ಸ್ಪಷ್ಟವಾಗಿ ಮೂಡುತ್ತವೆ ಹಾಗೂ ಬಹಳ ಸುಲಭವಾಗಿ ನೆನಪು ಮಾಡಿಕೊಳ್ಳಬಹುದು. ಎಲ್ಲೋ ಇಟ್ಟು ಮರೆತ ವಸ್ತುಗಳು, ಪರೀಕ್ಷೆ ಬರೆಯುವಾಗ ಬೇಕಾದ ಉತ್ತರಗಳು, ಹೀಗೆ ಎಲ್ಲವನ್ನೂ ಬಹಳ ಸುಲಭವಾಗಿ ನೆನಪು ಮಾಡಿಕೊಳ್ಳಬಹುದು.

 

 

ಮೊದಲು ನಾವು ಆಳವಾದ ಏಕಾಗ್ರತೆ ಆಳವಾದ ಧ್ಯಾನದ ಸ್ಥಿತಿ ಅಥವಾ ಅಲ್ಫಾ ಸ್ಟೇಟ್ ಹೋಗುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಅದೇನೂ ಅಷ್ಟು ಕಷ್ಟದ ಕೆಲಸವಲ್ಲ. ಕೇವಲ ಹತ್ತು, ಹದಿನೈದು ದಿನಗಳಲ್ಲಿ ಯಾರು ಬೇಕಾದರೂ ಅಭ್ಯಾಸ ಮಾಡಿಕೊಳ್ಳಬಹುದು. ಒಮ್ಮೆ ಇದು ಅಭ್ಯಾಸವಾಗಿ ಬಿಟ್ಟರೆ ನಿಮಗೆ ಜೀವನದಲ್ಲಿ ಎಲ್ಲ ವಿಷಯಗಳು ಬಹಳ ಸುಲಭವಾಗಿ ಬಿಡುತ್ತವೆ. ಸೆಲ್ಫ್ ಹಿಪ್ನೋಸಿಸ್ ನಿಂದ ಬಹಳ ಸುಲಭವಾಗಿ ಆಳವಾದ ಧ್ಯಾನದ ಸ್ಥಿತಿ ಅಥವಾ ಅಲ್ಫಾ ಸ್ಟೇಟ್ ಗೆ ಹೋಗಬಹುದು.

 

1.ನಮ್ಮನ್ನು ನಾವೇ ಸಮ್ಮೋಹಿನಿಗೆ  ಒಳಪಡಿಸಿಕೊಳ್ಳುವುದು. (ಸೆಲ್ಫ್ ಹಿಪ್ನೋಸಿಸ್ )

ಸದ್ದಿಲ್ಲದೆ ಪ್ರಶಾಂತವಾದ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಿ. ಆರಾಮವಾಗಿ ಕುಳಿತುಕೊಳ್ಳಿ ಅಥವಾ ಮಲಗಿಕೊಳ್ಳಿ. ಕಣ್ಣುಗಳನ್ನು ಮುಚ್ಚಿಕೊಂಡು ಮೂಗಿನಿಂದ ದೀರ್ಘವಾದ ಉಸಿರನ್ನು ತೆಗೆದುಕೊಳ್ಳಿ.  5 ರಿಂದ 10 ಸೆಕೆಂಡುಗಳು ಉಸಿರನ್ನು ಹಿಡಿದುಕೊಳ್ಳಿ. ಈಗ ಬಾಯನ್ನು ಸಣ್ಣಗೆ ತೆರೆದು ನಿಧಾನವಾಗಿ ಉಸಿರನ್ನು ಬಾಯಿಯ ಮೂಲಕ ಹೊರಹಾಕಿ. ಈ ರೀತಿ ಮೂರು  ಅಥವಾ ಐದು ಬಾರಿ ಮಾಡಿ , ಆಗ ನಿಮ್ಮ ಮನಸ್ಸಿಗೆ ಸಮಾಧಾನವಾಗುತ್ತದೆ ಮತ್ತು  ತುಂಬಾ ರಿಲ್ಯಾಕ್ಸ್ ಆಗುತ್ತೀರ .

ಈಗ ನಿಮ್ಮ ಕಣ್ಣಿನ ರೆಪ್ಪೆಗಳನ್ನು ಭಾರವಾಗುತ್ತಿವೆ. ಬಹಳ ಬಹಳ ಭಾರವಾಗುತ್ತಿವೆ . ನೀವು ರೆಪ್ಪೆಗಳನ್ನು ತೆಗೆಯುವುದಕ್ಕೆ ಪ್ರಯತ್ನಿಸಿದಷ್ಟು ಹೆಚ್ಚು ಹೆಚ್ಚು ಭಾರವಾಗುತ್ತಿವೆ ಹಾಗೂ ಕಣ್ಣಿಗೆ ಅಂಟಿಕೊಂಡಂತೆ ಭಾರವಾಗಿದೆ. (ಕಣ್ಣಿನ ರೆಪ್ಪೆ ಭಾರ ಅನ್ನಿಸಿದರೆ ನೀವು ಸಮ್ಮೋಹಿನಿಗೆ ಒಳಗಾಗುತ್ತಿದ್ದೀರ ಎಂದರ್ಥ. ಆಗಲಿಲ್ಲ ಅಂದರೆ ಮತ್ತೆ ಮತ್ತೆ ಆರಾಮವಾಗಿ ತೆರೆದ ಹಾಗೂ ಶಾಂತ ಮನಸ್ಸಿನಿಂದ ಪ್ರಯತ್ನಿಸಬೇಕು ).

ಆಗ ನಿಮ್ಮ ಮನಸ್ಸಿಗೆ ರಿಲ್ಯಾಕ್ಸ್ ಅನಿಸುತ್ತದೆ. ಈಗ ಮನಸ್ಸು ಶಾಂತವಾಗುತ್ತದೆ. ಖುಷಿ ,ಸಂತೋಷ ಮನಸ್ಸನ್ನು ಆವರಿಸಿಕೊಳ್ಳುತ್ತಿದೆ. ಈಗ ನನ್ನ ಮುಖ ತಲೆಕಟ್ಟು ಮೈ, ಕೈ, ಕಾಲು ಎಲ್ಲಾ ಹಗುರಾಗುತ್ತದೆ. ಖುಷಿ, ಶಾಂತಿ , ಸಂತೋಷ ದೇಹದ ಎಲ್ಲ ಭಾಗಗಳನ್ನು ಆವರಿಸಿಕೊಳ್ಳುತ್ತಿದೆ. ಈಗ ರಿಲ್ಯಾಕ್ಸ್ ಅನಿಸುತ್ತದೆ. ಮನಸ್ಸು ಇನ್ನೂ ಹೆಚ್ಚು ಹೆಚ್ಚು  ಶಾಂತವಾಗುತ್ತಿದೆ.

 

 

2. ಆಳವಾದ ಸಮ್ಮೋಹಿನಿಗೆ ಹೋಗುವುದು.

ನಾನು ಈಗ ಐದರಿಂದ ಒಂದನ್ನು ಎಣಿಸಿದಾಗ ಇನ್ನೂ ಆಳವಾದ ನಿದ್ರೆಗೆ ನನ್ನ ದೇಹ ಹೋಗುತ್ತದೆ ಹಾಗೂ ಮನಸ್ಸು ಜಾಗೃತವಾಗಿರುತ್ತದೆ. ನಾನು ಈಗ ಅದರಿಂದ ಒಂದನ್ನು ಎಣಿಸಿದಾಗ ಇನ್ನೂ ಆಳವಾದ ನಿದ್ರೆಗೆ ನನ್ನ ದೇಹ ಹೋಗುತ್ತದೆ. ಹಾಗೂ ಮನಸ್ಸು ಜಾಗೃತವಾಗಿರುತ್ತದೆ. ಅದು ರಿಲ್ಯಾಕ್ಸ್ ಅನಿಸುತ್ತದೆ. ಮನಸ್ಸು ಶಾಂತವಾಗುತ್ತದೆ. ಸಾಧ್ಯವಾದಷ್ಟು ನಿಧಾನವಾಗಿ ಸಂಖ್ಯೆಗಳನ್ನು ಎಣಿಸಿ .

 

3.ಸಮ್ಮೋಹಿನಿಯಿಂದ ಹೊರ ಬರುವುದು .

ಈಗ ನನ್ನ ಸುತ್ತಲಿನ ವಾತಾವರಣದ ಅರಿವಾಗುತ್ತಿದೆ . ನನ್ನ ಕೈಕಾಲು ಹಾಗೂ ನನ್ನ ದೇಹ ಹಗುರವಾಗಿದೆ. ನಿಧಾನವಾಗಿ ಕಣ್ಣುಗಳನ್ನು ತೆರೆಯಿರಿ. ಈ ಮೇಲಿನ ವಿಧಾನವನ್ನು ಒಂದು ವಾರ ಅಥವಾ ಹತ್ತು ದಿನಗಳವರೆಗೆ ಅಭ್ಯಾಸ ಮಾಡಿ. ನೀವು ಸುಲಭವಾಗಿ ಆಹಾರವಾದ ಸ್ಥಿತಿಯನ್ನು ತಲುಪುವಂತಾದ ಮೇಲೆ ಆಳವಾದ ಸ್ಥಿತಿಯಲ್ಲಿದ್ದಾಗ  ಎಡಗೈನ  ಹೆಬ್ಬೆರಳು ಮತ್ತು ತೋರು ಬೆರಳನ್ನು ಒಂದು ಬಾರಿ ಅಥವಾ ನಿಮಗೆ ಸುಲಭವಾಗುವ ಯಾವುದಾದರೂ ಒಂದು ಚಿಹ್ನೆಯನ್ನು ಆಯ್ಕೆ ಮಾಡಿಕೊಳ್ಳಿ ಹಾಗೂ ನಾನು ಪ್ರತಿ ಬಾರಿ ಎಡಗೈ ಹೆಬ್ಬೆರಳು ಮತ್ತು ತೋರು ಬೆರಳನ್ನು ಒಂದು ಮಾಡಿ ನಿಮಗೆ ಸುಲಭವಾಗುವ ಯಾವುದಾದರೊಂದು ಪದವನ್ನು ಆಯ್ಕೆ ಮಾಡಿಕೊಳ್ಳಿ ಎಂದು ಹೇಳಿದರೆ ನನ್ನ ಮನಸ್ಸು ಆ ಆಳವಾದ ಧ್ಯಾನದ ಸ್ಥಿತಿ ಅಥವಾ ಅಲ್ಫಾ ಸ್ಟೇಟ್ ಗೆ ಹೋಗುತ್ತದೆ.

ಈ ಮೇಲಿನ ವಿಧಾನದಿಂದ ತಕ್ಷಣ ಆಳವಾದ ಧ್ಯಾನದ ಸ್ಥಿತಿ ಅಥವ ಆಲ್ಫಾ ಸ್ಟೇಟ್ ಗೆ ಹೋಗಬಹುದು. ಇದನ್ನು ಕೆಲ ದಿನಗಳ ಕಾಲ ಅಭ್ಯಾಸ ಮಾಡಿ ಕರಗತ ಮಾಡಿಕೊಳ್ಳಿ. ಹೆಚ್ಚು ಹೆಚ್ಚು ಅಭ್ಯಾಸ ಮಾಡಿದಷ್ಟು ಮನಸ್ಸಿನ ಮೇಲೆ  ಹಿಡಿತ ಹಾಗೂ ಏಕಾಗ್ರತೆ ಹೆಚ್ಚುತ್ತದೆ.

ನೀವು ಇದನ್ನು ಅಭ್ಯಾಸ ಮಾಡಿಕೊಂಡ ಮೇಲೆ ಶಾಲೆಯಲ್ಲಿ, ಕಾಲೇಜಿನಲ್ಲಿ ಪಾಠ ಕೇಳುವ ಮುನ್ನ ಮತ್ತು ಮನೆಯಲ್ಲಿ ಓದಲು ಕುಳಿತುಕೊಳ್ಳುವ ಮುನ್ನ ಅಥವಾ ಬಹಳ ಏಕಾಗ್ರತೆಯಿಂದ ಮಾಡಬಯಸುವ ಯಾವುದೇ ಕೆಲಸದ ಮುನ್ನ ನಾನು ಪ್ರತಿ ಬಾರಿ ಎಡಗೈ ಹೆಬ್ಬೆರಳು ಮತ್ತು ತೋರು ಬೆರಳನ್ನು ಒಂದು ಮಾಡಿ ಅಥವಾ ನಿಮಗೆ ಸುಲಭವಾಗುವ ಯಾವುದಾದರೊಂದು ಪದವನ್ನು ಆಯ್ಕೆ ಮಾಡಿಕೊಳ್ಳಿ ಎಂದು ಕೇಳಿದೊಡನೆ ನನ್ನ ಮನಸ್ಸು ಆಳವಾದ ಧ್ಯಾನದ ಸ್ಥಿತಿ ಅಥವಾ ಅಲ್ಫಾ ಸ್ಟೇಟ್ ಗೆ ಹೋಗುತ್ತದೆ.

 

 

ನಾನು ಏಕಾಗ್ರತೆಯಿಂದ ಓದುತ್ತೇನೆ, ಪಾಠ ಕೇಳುತ್ತೇನೆ ಹಾಗೂ ಸ್ಪಷ್ಟವಾಗಿ ನೆನಪಿನಲ್ಲಿ ಇಟ್ಟುಕೊಳ್ಳುತ್ತೇನೆ. ಹೀಗೆ ಹೇಳಿಕೊಳ್ಳುವುದರಿಂದ ನಮ್ಮ ಮನಸ್ಸು ಆಳವಾದ ಏಕಾಗ್ರತೆಯಿಂದ ವಿಷಯಗಳನ್ನು ಗ್ರಹಿಸುತ್ತದೆ. ಪರೀಕ್ಷೆಯನ್ನು ಬರೆಯುವಾಗ ಸಹ ಮೊದಲು ಪ್ರಶ್ನೆಯನ್ನು ಓದಿಕೊಳ್ಳಿ ಆಮೇಲೆ ಮೇಲೆ ಹೇಳಿದ ರೀತಿಯಲ್ಲಿ ಆಳವಾದ ಅಲ್ಪಾ ಸ್ಟೇಟ್ ಗೆ ಹೋಗಿ, ನೀವು ಓದಿದ ಪಾಠ, ಕೇಳಿದ ಎಲ್ಲ ವಿಷಯಗಳನ್ನು ಸ್ಪಷ್ಟವಾಗಿ ನೆನಪು ಮಾಡಿಕೊಂಡು ಪರೀಕ್ಷೆಯನ್ನು ಬರೆಯಬಹುದು.

ನಿಮಗೆ ಅರ್ಥವಾಗದ ಅಥವಾ ಕೇವಲ ನೆನಪಿನಲ್ಲಿ ಮಾತ್ರ ಇಟ್ಟುಕೊಳ್ಳಬೇಕಾದ ಗಣಿತದ ಲೆಕ್ಕಾಚಾರಗಳನ್ನು ಮೊದಲು ನಿಮ್ಮ ಫೋನ್ನಲ್ಲಿ ರೆಕಾರ್ಡ್ ಮಾಡಿ ಆ ಮೇಲೆ ಆಳವಾದ ಅಲ್ಪಾ ಸ್ಟೇಟ್ ಗೆ ಹೋಗಿ ರೆಕಾರ್ಡ್  ಮಾಡಿದ ವಿಷಯಗಳನ್ನು ಕಣ್ಣು ಮುಚ್ಚಿಕೊಂಡು ಕೇಳುವುದರಿಂದ, ಅವು ಬಹಳ ಸುಲಭವಾಗಿ ನೆನಪಿನಲ್ಲಿ ಇರುತ್ತವೆ.ಅಥವಾ ನೀವು ಆಳವಾದ ಅಲ್ಫಾ ಸ್ಟೇಟ್ ಗೆ ಹೋಗಿ ನಿಮ್ಮ ಸ್ನೇಹಿತರಿಗೆ ಗಟ್ಟಿಯಾಗಿ ಓದಲು ಹೇಳಿ ಅದನ್ನು ನೀವು ನೆನಪಿನಲ್ಲಿ ಇಟ್ಟುಕೊಳ್ಳಬಹುದು. ಈ ವಿಧಾನದಿಂದ ನೀವು ಎಲ್ಲೋ ಇಟ್ಟು ಮರೆತ ಬೀಗದ ಕೈ, ವಾಚ್ ಹಾಗೂ ಫೋನ್ ನಂಬರ್ ಗಳನ್ನು ಸಹ ಸುಲಭವಾಗಿ ನೆನಪು ಮಾಡಿಕೊಳ್ಳಬಹುದು. ನಿಮ್ಮ ಮನಸ್ಸಿನ ಸಾಮರ್ಥ್ಯಕ್ಕೆ ಯಾವುದೇ ಮಿತಿ ಇಲ್ಲ. ಆಗ ನೀವು ಎಲ್ಲಾ ಅದ್ಭುತಗಳನ್ನು ಸಾಧಿಸಲು ಸಮರ್ಥರಿದ್ದೀರಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top