ಮನೋರಂಜನೆ

ಚಂದನ್ ಶೆಟ್ಟಿಯ ನೆಕ್ಸ್ಟ್ ಆಲ್ಬಮ್‍ನಲ್ಲಿ ಹೆಜ್ಜೆಹಾಕಲಿದ್ದಾರೆ ಸ್ಯಾಂಡಲ್‌ವುಡ್ ಸ್ಟಾರ್ಸ್.

ಬಿಗ್ ಬಾಸ್ ಶೋ ವಿನ್ ಆದ ನಂತರ ರ್ಯಾಪರ್ ಚಂದನ್ ಶೆಟ್ಟಿಗೆ ದೊಡ್ಡ ಬ್ರೇಕ್ ಸಿಕ್ಕಿದೆ. ಸಿನಿಮಾ, ಇವೆಂಟ್, ಟಿವಿ ಷೋ ಸೇರಿದಂತೆ ಅನೇಕ ಆಫರ್ ಗಳು ತನ್ನ ಮನೆ ಬಾಗಿಲ ಬಳಿಗೆ ಬರುತ್ತಿವೆ. ಸಾಕಷ್ಟು ಕೆಲಸದ ನಡೆವೆಯೂ ರ್ಯಾಪ್ ಸಾಂಗ್ ಗಳತ್ತವೂ ಗಮನಹರಿಸಿರುವ ಚಂದನ್ ತಮ್ಮ ಮುಂದಿನ ಆಲ್ಬಮ್ ‘ಫಯರ್’ ಅನ್ನು ಹೊಸ ರೀತಿಯಲ್ಲಿ ತಯಾರಿಸಲು ಸಾಕಷ್ಟು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಅವರ ಹಿಂದಿನ ಟಾಕೀಲ ಹಾಡು ಬಾರಿ ಹಿಟ್ ಆಗಿರುವ ಕಾರಣ ಫಯರ್ ಹಾಡಿನ ಮೇಲೂ ಈಗಾಗಲೇ ನಿರೀಕ್ಷೆ ಬೆಟ್ಟಮಾಡಿದೆ.

 

 

ಇದೀಗ ‘ಫಯರ್’ ಸಂಭಂದಿಸಿದಂತೆ ಹೊಸ ಬ್ರೇಕಿಂಗ್ ಸುದ್ದಿಯೊಂದು ಲಭ್ಯವಾಗಿದ್ದು ಫೈಯರ್ ಹಾಡಿನಲ್ಲಿ ಚಂದನವನದ ಇಬ್ಬರು ಸೂಪರ್ ಸ್ಟಾರ್’ಗಳು ಹೆಜ್ಜೆ ಹಾಕಲಿದ್ದಾರಂತೆ. ಶಿವಣ್ಣ, ಸುದೀಪ್ ,ಪುನೀತ್ ಮತ್ತು ದರ್ಶನ್ ಅವರ ಪೈಕಿ ಇಬ್ಬರು ಈ ಹಾಡಿನಲ್ಲಿ ಕಾಣಿಸಿಕೊಳೋದು ಈಗಾಗಲೇ ಪಕ್ಕಾ ಆಗಿದೆಯಂತೆ. ಆದರೆ ಹಾಡಿನಲ್ಲಿ ಕಾಣಿಸಿಕೊಳ್ಳಲಿರುವ ಇಬ್ಬರು ಸ್ಟಾರ್ ನಟರುಗಳು ಯಾರು ಎಂಬ ಗುಟ್ಟನ್ನು ಮಾತ್ರ ಚಂದನ್ ಬಿಟ್ಟುಕೊಟ್ಟಿಲ್ಲ. ವಿಶೇಷ ಅಂದ್ರೆ ಈ ಹಾಡಿನಲ್ಲಿ ಐನೂರಕ್ಕೂ ಹೆಚ್ಚು ನೃತ್ಯಗಾಗರು ಹೆಜ್ಜೆಹಾಕಲಿದ್ದು ತುಂಬಾ ರಿಚ್ ಆಗಿ ತಯಾರಿಸಲು ಪ್ಲಾನ್ ಗಳು ನಡೆಯುತ್ತಿವೆ. ಈ ಹಾಡಿನ ಮೂಲಕ ಕನ್ನಡ ರ್ಯಾಪ್ ಶೈಲಿಯ ಹಾಡುಗಳನ್ನು ವಿಶ್ವದ ಮಟ್ಟಕ್ಕೆ ಕೊಂಡೊಯ್ಯುವುದು ಚಂದನ್ ಶೆಟ್ಟಿಯ ಇರಾದೆ.

ಫಯರ್ ಅಂದ್ರೆ ಬೆಂಕಿ, ಕಿಚ್ಚು ಅಂತ ಅರ್ಥ, ಮನುಷ್ಯನಿಗೆ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎನ್ನುವ ಫಯರ್ ಇರಬೇಕು. ಇದೆ ಈ ಹಾಡಿನ ಮೂಲ ಕಾನ್ಸೆಪ್ಟ್ ಅಂತೇ. ಉಳಿದಂತೆ ಹಾಡಿಗೆ ಸಂಭಂದಪಟ್ಟ ಪ್ರೀಪ್ರೊಡಕ್ಷನ್ ಕೆಲ್ಸಗಳು ಬಿರುಸಿನಿಂದ ನಡೆಯುತ್ತಿದ್ದು ಜೂಲೈ ತಿಂಗಳಲ್ಲಿ ಶೂಟಿಂಗ್ ನಡೆಯುವ ಸಾಧ್ಯತೆಯಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top