ಭವಿಷ್ಯ

11 ಜೂನ್ : ನಾಳೆಯ ಭವಿಷ್ಯ ಮತ್ತೆ ಪಂಚಾಂಗ

ಸೋಮವಾರ, ೧೧ ಜೂನ್ ೨೦೧೮
ಸೂರ್ಯೋದಯ : ೦೫:೫೬
ಸೂರ್ಯಾಸ್ತ : ೧೮:೪೧
ಶಕ ಸಂವತ : ೧೯೪೦ ವಿಲಂಬಿ
ಅಮಂತ ತಿಂಗಳು : ಜ್ಯೇಷ್ಠ (ಅದಿಕ)

ಪಕ್ಷ : ಕೃಷ್ಣ ಪಕ್ಷ
ತಿಥಿ : ದ್ವಾದಶೀ
ನಕ್ಷತ್ರ : ಭರಣಿ
ಯೋಗ : ಅತಿಗಂಡ
ಸೂರ್ಯ ರಾಶಿ : ವೃಷಭ

ಅಭಿಜಿತ್ ಮುಹುರ್ತ : ೧೧:೫೩ – ೧೨:೪೪
ಅಮೃತಕಾಲ : ೧೬:೩೫ – ೧೮:೦೫
ರಾಹು ಕಾಲ: ೦೭:೩೨ – ೦೯:೦೮
ಗುಳಿಕ ಕಾಲ: ೧೩:೫೪ – ೧೫:೩೦
ಯಮಗಂಡ: ೧೦:೪೩ – ೧೨:೧೯

ಮೇಷ (Mesha)

ವ್ಯಾಪಾರ ವ್ಯವಹಾರಗಳಲ್ಲಿ ಮುನ್ನಡೆ ಇರುತ್ತದೆ. ವಿದ್ಯಾರ್ಥಿಗಳಿಗೆ ಮುನ್ನಡೆ ತೋರಿ ಬಂದರೂ ಪ್ರಯತ್ನಬಲ ಅಗತ್ಯ ಇದ್ದೇ ಇರುತ್ತದೆ. ದಿನಾಂತ್ಯ ಶುಭವಾರ್ತೆ, ಪಿತ್ರಾಜಿತ ಆಸ್ತಿಪಾಸ್ತಿಗಳಲ್ಲಿ ತೊಂದರೆಗಳು ಗೋಚರಕ್ಕೆ ತಂದಾವು. ಆಗಾಗ ವೃತ್ತಿರಂಗದಲ್ಲಿ ತೊಂದರೆಗೆ ಸಿಲುಕುವಿರಿ.

ವೃಷಭ (Vrushabh)


ಮುಖ್ಯವಾಗಿ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಿರಿ. ಮೂರ್ಖ ಜನರಿಂದ ಆಗಾಗ ಸಮಸ್ಯೆಗಳನ್ನು ಅನುಭವಿಸಬೇಕಾದೀತು. ವ್ಯವಹಾರದಲ್ಲಿ ಹೆಚ್ಚಿನ ಸಮಸ್ಯೆಗಳು ತೋರಿ ಬಂದರೂ ಸುಧಾರಿಸಿಕೊಂಡು ಹೋಗಿರಿ.

ಮಿಥುನ (Mithuna)


ಕೆಲಸಕಾರ್ಯಗಳಲ್ಲಿ ನೌಕರ ವರ್ಗದವರಿಂದ ಕಿರಿಕಿರಿ ತೋರಿ ಬರುವುದು. ಧೀರ್ಘ‌ಕಾಲದ ಕೆಲಸಕಾರ್ಯಗಳು ಅನುಕೂಲವಾಗಿ ಚಾಲನೆಗೆ ಬರಲಿವೆೆ. ಕಟ್ಟಡ ಸಂಬಂಧಿ ವೃತ್ತಿಯಲ್ಲಿ ಅನನುಕೂಲ, ಹಣಕಾಸಿನ ಸ್ಥಿತಿಯು ಆಗಾಗ ಏರುಪೇರಾದರೂ ಸುಧಾರಿಸಿಕೊಂಡು ಹೋಗಬಹುದಾಗಿದೆ. ವಿದ್ಯಾರ್ಥಿಗಳ ನಿರೀಕ್ಷೆಯ ಫ‌ಲ ಸದ್ಯದ ಸ್ಥಿತಿಯು ತೃಪ್ತಿದಾಯಕವಾಗಲಾರದು.

ಕರ್ಕ (Karka)


ವ್ಯಾಪಾರ, ವ್ಯವಹಾರಗಳಲ್ಲಿ ನಿರೀಕ್ಷಿತ ಅಭಿವೃದ್ಧಿ ಮುನ್ನಡೆಗೆ ಸಾಧಕವಾಗುತ್ತದೆ. ಆರ್ಥಿಕವಾಗಿ ಚೇತರಿಕೆಯು ಕಂಡುಬರುತ್ತದೆ. ವಿದ್ಯಾರ್ಥಿ ಸಮೂಹಕ್ಕೆ ಹೊಸ ಹುರುಪು ಕಾಣಿಸಲಿದೆ. ನಿರುದ್ಯೋಗಿಗಳಿಗೆ ಹಾಗೂ ಅವಿವಾಹಿತರಿಗೆ ಅನಿರೀಕ್ಷಿತ ರೂಪದಲ್ಲಿ ಅವಕಾಶಗಳು ಒದಗಿ ಬರಲಿವೆ.

ಸಿಂಹ (Simha)


ವಿಶ್ವಾಸದ ದುರುಪಯೋಗವಾಗದಂತೆ ಗಮನಹರಿಸಬೇಕಾಗುತ್ತದೆ. ಅವಿವಾಹಿತರ ಪ್ರಯತ್ನಬಲಕ್ಕೆ ಕಂಕಣಭಾಗ್ಯ ಪ್ರಾಪ್ತಿಯಾಗಲಿದೆ. ಅನಾವಶ್ಯಕವಾಗಿ ಸಮಯ ವ್ಯರ್ಥವಾಗದಂತೆ ಕಾಳಜಿ ವಹಿಸಿರಿ. ದಾಂಪತ್ಯ ಜೀವನವು ಸಮಾಧಾನಕರವಾಗಲಿದೆ

ಕನ್ಯಾರಾಶಿ (Kanya)


ಆಹಾರ ವ್ಯತ್ಯಯದಿಂದ ಆರೋಗ್ಯ ಸಮಸ್ಯೆ ತಂದು ಕೊಳ್ಳುವಿರಿ. ಕಾಳಜಿ ವಹಿಸಿರಿ. ಹಿರಿಯರ ಅಭಿಪ್ರಾಯ ಭೇದದಿಂದ ಶುಭಮಂಗಲ ಕಾರ್ಯಗಳು ವಿಳಂಬವಾಗುತ್ತದೆ. ಗೃಹ ಕಾರ್ಯನಿಮಿತ್ತ ಅಧಿಕ ರೂಪದಲ್ಲಿ ಖರ್ಚು ತಂದೀತು.

ತುಲಾ (Tula)


ಜೀವನದಲ್ಲಿ ಮಹತ್ತರ ಬದಲಾವಣೆಯ ಹಂತದಲ್ಲಿ ನೀವೀಗ ಇದ್ದೀರಿ. ಜೀವನವನ್ನು ಬಂದ ಹಾಗೆ ಎದುರಿಸುವುದನ್ನು ನೀವು ಕಲಿಯಬೇಕು. ಹೊಸ ಹೊಸ ಘಟನೆ, ಸಂಗತಿಗಳಲ್ಲಿ ತೊಡಗಿಸಿಕೊಳ್ಳಬೇಕಾದೀತು. ಹಲವಾರು ಘಟನೆ ಯಲ್ಲಿ ನಿಮಗೆ ಚಾಂಚಲ್ಯ ಬಂದರೂ ನೀವು ದೃಢ ನಿರ್ಧಾರದಿಂದ ಮುಂದುವರಿದಲ್ಲಿ ಯಶಸ್ಸು ನಿಮಗಿದೆ

ವೃಶ್ಚಿಕ (Vrushchika)


ಅವಿವಾಹಿತರಿಗೆ ಕಂಕಣಬಲದ ಭಾಗ್ಯ ಒದಗಿಬರಲಿದೆ. ನಿರುದ್ಯೋಗಿ ಗಳಿಗೆ ಅವಕಾಶಗಳು ಒದಗಿಬರಲಿದೆ. ಆರ್ಥಿಕವಾಗಿ ಸಂಪತ್ತು ಸಮೃದ್ಧಿ ಇದೆ. ಶುಭ ಕಾರ್ಯಕ್ಕೆ ಇದು ಸಕಾಲ.

ಧನು ರಾಶಿ (Dhanu)


ವೃಥಾ ಸಂಯಮ ಕಳೆದುಕೊಳ್ಳಬೇಡಿರಿ. ಗುರು-ಹಿರಿಯರು ತೋರಿದ ಮಾರ್ಗದಲ್ಲಿ ನಡೆಯಿರಿ. ನಿಮ್ಮ ಬಾಲ್ಯ ಸ್ನೇಹಿತರ ಭೇಟಿ ಸಂಭವ. ಹಣಕಾಸಿನ ವಿಷಯದಲ್ಲಿ ಜಾಗ್ರತೆ. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿರಿ.

ಮಕರ (Makara)


ಹತ್ತಿರದವರಿಂದಲೇ ಹೊಸ ಸಮಸ್ಯೆಯು ಎದುರಾಗುವ ಸಾಧ್ಯತೆ. ಆದರೆ ಮಾತಿನಲ್ಲಿ ಕುಶಲಿಗಳಾದ ನೀವು ಅದನ್ನು ಸಮರ್ಥವಾಗಿ ಬಗೆಹರಿಸುವಿರಿ. ಆಂಜನೇಯ ಸ್ವಾಮಿಯನ್ನು ಪ್ರಾರ್ಥಿಸಿರಿ. ಹಣಕಾಸು ಉತ್ತಮವಾಗಿರುತ್ತದೆ.

ಕುಂಭರಾಶಿ (Kumbha)


ಎದುರಾಳಿಗಳನ್ನು ಎದುರಿಸುವ ಕಲೆ ನಿಮಗೆ ಕರಗತವಾಗಿರುವುದು. ಅಂತೆಯೇ ಅವರ ಮನಸ್ಥಿತಿಯನ್ನು ಅರಿತು ಅವರ ಸ್ನೇಹವನ್ನು ಬಯಸುವಿರಿ. ಆದರೆ ಶತ್ರು, ಶತ್ರುವೇ ಮಿತ್ರನಲ್ಲ. ಆತನನ್ನು ಎಚ್ಚರಿಕೆಯಿಂದ ಬಳಸಿಕೊಳ್ಳಿ.

ಮೀನರಾಶಿ (Meena)


ಸ್ಪಷ್ಟ ನಡೆಯ ಸ್ವಭಾವವುಳ್ಳ ನೀವು ಅದನ್ನು ಇಂದು ಜಾರಿಗೆ ತರುವಿರಿ. ಇದರಿಂದ ನಿಮ್ಮ ಮೇಲೆ ಹೆಚ್ಚಿನ ಪ್ರೀತಿ-ವಿಶ್ವಾಸವನ್ನು ನಿಮ್ಮ ಉನ್ನತ ಅಧಿಕಾರಿಗಳು ತೋರಿಸುವರು. ಚಿಕ್ಕ ಮಗುವಿನ ಪ್ರಶ್ನೆಗೆ ಉತ್ತರಿಸಲು ಸೋಲುವಿರಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top