ಸಿನಿಮಾ

ಜುರಾಸಿಕ್ ವರ್ಲ್ಡ್ ನೋಡಲು ಹೋಗಿದ್ದವರಿಗೆ ತೋರಿಸಿದ್ರು ಕಾಲ ಸಿನಿಮಾ , ಇದನ್ನು ಕಂಡ ಪ್ರೇಕ್ಷಕ ಕೆಂಡಾಮಂಡಲ

ಅನೇಕ ಕನ್ನಡ ಪರ ಸಂಘಟನೆಗಳು ಕಾಲ ಚಿತ್ರವನ್ನು ಪ್ರದರ್ಶನ ಮಾಡಬಾರದೆಂದು ಅಡ್ಡಿಪಡಿಸಿದ ಹಿನ್ನಲೆಯಲ್ಲಿ ಅನೇಕ ಚಿತ್ರಮಂದಿರಗಳಿಂದ ಕಾಲ ಚಿತ್ರವನ್ನು ತೆಗೆದು ಹಾಕಲಾಗಿತ್ತು , ಹಾಗೆಯೇ ಊರ್ವಶಿ ಚಿತ್ರಮಂದಿರ ಸಹ ಕಾಲ ಚಿತ್ರವನ್ನು ತೆಗೆದು ಹಾಕಲಾಗಿತ್ತು ಆ ನಂತರ ಜುರಾಸಿಕ್ ವರ್ಲ್ಡ್ ಚಿತ್ರ ಪ್ರದರ್ಶನ ಮಾಡಲಾಗುತ್ತೆ ಎಂದು ಹೇಳಲಾಗಿತ್ತು.

 

 

ಜುರಾಸಿಕ್ ವರ್ಲ್ಡ್ ಪೋಸ್ಟರ್ ಗಳನ್ನು ಸಹ ಅಂಟಿಸಲಾಗಿತ್ತು ಹಾಗೆಯೇ ಜುರಾಸಿಕ್ ವರ್ಲ್ಡ್ ಪ್ರದರ್ಶನಗೊಳ್ಳುತ್ತಿದೆ ಎಂದು ಭಾವಿಸಿ ಅನೇಕರು ಟಿಕೆಟ್ ಅನ್ನು ಕೊಂಡುಕೊಂಡು ಸಿನಿಮಾ ನೋಡಲು ಬಂದಿದ್ದರು ಹಾಗೆಯೇ ಬುಕ್ ಮೈಶೋ ದಲ್ಲೂ ಕೂಡ ಜುರಾಸಿಕ್ ವರ್ಲ್ಡ್ ಸಿನಿಮಾ ಪ್ರದರ್ಶನಗೊಳ್ಳುತ್ತಿದೆ ಎಂದು ಹಾಕಿದ್ದರು , ಆದರೆ ಅಲ್ಲಿ ಥಿಯೇಟರ್ ಒಳಗೆ ಹೋಗಿದ್ದ ಪ್ರೇಕ್ಷಕರಿಗೆ ಆಶ್ಚರ್ಯ ಕಾದಿತ್ತು.

 

 

ಜುರಾಸಿಕ್ ವರ್ಲ್ಡ್ ಚಿತ್ರದ ಬದಲು ಕಾಲ ಚಿತ್ರವನ್ನು ಪ್ರದರ್ಶನ ಮಾಡಿದರು ಇದರಿಂದ ರೊಚ್ಚೆಗೆದ್ದ ಪ್ರೇಕ್ಷಕ ಥಿಯೇಟರ್ ಮಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಹಾಗೆಯೇ ಪ್ರದರ್ಶನವನ್ನು ಅಡ್ಡಿಪಡಿಸಿ ಚಿತ್ರಮಂದಿರದ ಸಿಬ್ಬಂದಿಯೇ ಸಖತ್ತಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top