ಮನೋರಂಜನೆ

ವಿಜಯಲಕ್ಷ್ಮಿಗೇಕೆ ಈ ದಾರುಣ ಸ್ಥಿತಿ- ಕಣ್ಣೀರಿಟ್ಟು ಸಂಕಟ ತೋಡಿಕೊಂಡ ‘ಸೇವಂತಿ’.

ತನ್ನ ರೂಪ ಲಾವಣ್ಯದಿಂದಲೇ ಕನ್ನಡ ಸಿನಿರಸಿಕರ ಮನಗೆದ್ದಿದ್ದ ನಟಿ ವಿಜಯಲಕ್ಷ್ಮಿ ‘ನಾಗಮಂಡಲ’, ‘ಸೂರ್ಯವಂಶ’ ,ಜೋಡಿಹಕ್ಕಿ’, ‘ಹಬ್ಬ’ ಅಂತಹ ಸೂಪರ್ ಹಿಟ್ ಚಿತ್ರಗಲ್ಲಿ ನಟಿಸಿಸುವ ಮೂಲಕ ಸ್ಟಾರ್ ನಟಿಯಾಗಿ ಮೆರೆದಿದ್ದರು.. ಚಿತ್ರರಂಗದಲ್ಲಿ ಕೈತುಂಬಾ ಅವಕಾಶಗಳಿರುವಾಗಲೇ ಅದ್ಯಾಕೋ ಸಂಪೂರ್ಣವಾಗಿ ತೆರೆಮರೆಗೆ ಸರಿದು ನಾಪತ್ತೆಯಾಗಿದ್ದ ಈಕೆ ಮತ್ತೆ ಪ್ರತ್ಯಕ್ಷವಾಗಿದ್ದಾರೆ. ಮುದ್ದು ಮುಖದ ಚೆಲುವೆ ಮತ್ತೆ ಬಂದಿದ್ದು ಅಭಿಮಾನಿಗಳಿಗೇನೋ ಖುಷಿ ಸಮಾಚಾರವೇ ಆಗಿದ್ದು ವಿಜಯಲಕ್ಷ್ಮಿ ಅವರ ಸದ್ಯದ ಪರಿಸ್ಥಿತಿ ತುಂಬಾ ದಾರುಣವಾಗಿದೆ.

 

 

ದಿಢೀರ್ ಅಂತ ಕನ್ನಡ ಸುದ್ದಿವಾಹಿನಿಯೊಂದರಲ್ಲಿ ಪ್ರತ್ಯಕ್ಷವಾಗಿರುವ ವಿಜಯಲಕ್ಷ್ಮಿ ತಮ್ಮ ಕಷ್ಟಗಳನ್ನು ಹೇಳಿಕೊಂಡಿದ್ದಾರೆ, ಒಂದು ಕಾಲದಲ್ಲಿ ಕನ್ನಡ ಚಿತ್ರಗಳಲ್ಲಿ ಮಾತ್ರವಲ್ಲದೆ ತಮಿಳು, ತೆಲುಗಿನಾದ್ಯಂತ ಕೈತುಂಬಾ ಅವಕಾಶಗಳನ್ನು ಇಟ್ಟುಕೊಳ್ಳುತ್ತಿದ್ದ ಈಕೆ ಇದೀಗ ಜೀವನ ಸಾಗಿಸುವುದಕ್ಕೆ ತುಂಬಾ ಕಷ್ಟ ಪಡುತ್ತಿದ್ದಾರೆ. ಕೈಯಲ್ಲಿ ಯಾವ ಕೆಲಸವೂ ಇಲ್ಲದೆ ಕಂಗಾಲಾಗಿರುವ ವಿಜಯಲಕ್ಷ್ಮಿ ಅವಕಾಶಕ್ಕಾಗಿ ಎದುರುನೋಡುತ್ತಿದ್ದಾರೆ. ಅಷ್ಟೇ ಅಲ್ಲದೇ ಇನ್ನು ವಿಜಯಲಕ್ಷ್ಮೀಯ ಸಹೋದರಿ ಉಷಾ ಆರೋಗ್ಯ ಹದಗೆಟ್ಟಿದ್ದು ಪ್ರತಿದಿನ ಡಯಾಲಿಸಿಸ್​ ಮಾಡಿಸಬೇಕಿದೆ. ಆದರೆ ಉಷಾ ಅವ್ರ ಚಿಕಿತ್ಸೆಗೂ ವಿಜಯಲಕ್ಷ್ಮೀ ಹತ್ತಿರ ದುಡ್ಡಿಲ್ಲವಂತೆ.

“ನಾನು ಸತ್ತಿಲ್ಲ, ಇನ್ನೂ ಬದುಕಿದ್ದೀನಿ. ನಾನು ಯಾರನ್ನೂ ಮಡೆಯಾಗಿಲ್ಲ, ನಾನು ದೇಶ ಬಿಟ್ಟು ಹೋಗಿಲ್ಲ, , ಕರ್ನಾಟಕದಲ್ಲೇ ಇದ್ದೀನಿ. ಯಾರಾದರೂ ಸಿನಿಮಾಗಳಲ್ಲಿ ನಟಿಸೋಕೆ ಅವಕಾಶ ಕೊಟ್ರೆ ಅಭಿನಯಿಸುತ್ತೀನಿ, ನಟಿಸೋದನ್ನ ಬಿಟ್ಟರೆ ನನಗೇನು ಬರೋಲ್ಲ. ನನ್ನ ಕುಟುಂಬವನ್ನ ನಾನೇ ನೋಡಿಕೊಳ್ಬೇಕು. ಕುಟುಂಬವನ್ನ ಸಲಹೋದೆ ದೊಡ್ಡ ನೋಡಿಕೋಳ್ಳೋದೇ ದೊಡ್ಡ ಸವಾಲಾಗಿದೆ. ನನ್ನನ್ನ ಬಿಟ್ರೆ ನನ್ನ ಕುಟುಂಬಕ್ಕೆ ಇನ್ಯಾರು ಆಧಾರವಿಲ್ಲ.” ಇವಿಷ್ಟು ನಟಿ ವಿಜಯಲಕ್ಷ್ಮಿ ಅವರ ಬಾಯಿಂದ ಬಂದಿರುವಂತ ಭಾವುಕ ಮಾತುಗಳು.

 

 

ಟಿವಿ ಚಾನೆಲ್ಲಿನಲ್ಲಿ ಕೂತು ಅಳಲು ತೋಡಿಕೊಳ್ಳುತ್ತಿದ್ದ ವಿಜಯಲಕ್ಷ್ಮಿಗೆ ತಾರಾ,ರಾಧಿಕಾ ಕುಮಾರಸ್ವಾಮಿ, ಸಾರಾ ಗೋವಿಂದು ಸೇರಿದಂತೆ ಅನೇಕರು ಸಾಂತ್ವನ ಹೇಳಿ ಧೈರ್ಯ ತುಂಬಿದರು. ವೃತ್ತಿ ಜೀವನದಲ್ಲಿ ಮಾತ್ರವಲ್ಲದೆ ವಯಕ್ತಿಕ ಜೀವನದಲ್ಲೂ ಸಾಕಷ್ಟು ನೋವುಂಡಿರುವ ವಿಜಯಲಕ್ಷ್ಮಿ ಸದ್ಯ ಮನಸ್ಸಿನಲ್ಲಿ ತುಂಬಾ ನೋವಿಟ್ಟುಕೊಂಡಿದ್ದು ಅವಕಾಶಕ್ಕಾಗಿ ಚಿತ್ರರಂಗದವರ ಮುಂದೆ ಅಂಗಲಾಚಿ ನಿಂತಿದ್ದಾರೆ, ಅವರೇ ಹೇಳುವ ಪ್ರಕಾರ ಸಣ್ಣ ಪುಟ್ಟ ಪಾತ್ರಗಳನ್ನ ನೀಡಿದರೋ ಮಾಡುತ್ತಾರಂತೆ. ಅದೇನೇ ಇರಲಿ ಎಲ್ಲರನ್ನೂ ಕಳೆದುಕೊಂಡು ಒಂಟಿಯಾಗಿರುವ ವಿಜಯಲಕ್ಷ್ಮಿಗೆ ಚಿತ್ರರಂಗ ಕೈಹಿಡಿಯಲಿ, ಆಕೆಯ ಜೀವನೋಪಾಯಕ್ಕೆ ಒಳ್ಳೆಯ ಅವಕಾಶಗಳೇ ಸಿಗಲಿ ಎನ್ನುವದೇ ಎಲ್ಲರ ಆಶಯ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top