fbpx
ಭವಿಷ್ಯ

ವಾರ ಭವಿಷ್ಯ ಜೂನ್ 11ನೇ ತಾರೀಖಿನಿಂದ ಜೂನ್ 17ನೇ ತಾರೀಖಿನವರೆಗೆ.

ವಾರ ಭವಿಷ್ಯ ಜೂನ್ 11ನೇ ತಾರೀಖಿನಿಂದ ಜೂನ್ 17ನೇ ತಾರೀಖಿನವರೆಗೆ.

 

ಮೇಷ ರಾಶಿ.

 

ಯಾರು ರಿಯಲ್ ಎಸ್ಟೇಟ್ ವ್ಯಾಪಾರವನ್ನು ಮಾಡುತ್ತಿದ್ದೀರೋ ಅವರಿಗೆ ಬಹಳಷ್ಟು ಲಾಭ , ಕುಟುಂಬದಲ್ಲಿ ನೆಮ್ಮದಿಯ ವಾತಾವರಣ , ಆದರೆ ದಾಯಾದಿಗಳ ಕಲಹ ಸಹೋದರ ಸಹೋದರಿಯರು ಅಥವಾ ಚಿಕ್ಕಪ್ಪ ದೊಡ್ಡಪ್ಪನ ಮಕ್ಕಳ ಜತೆಯಲ್ಲಿ ಜಗಳಗಳು , ವೈಮನಸ್ಯ ಉಂಟಾಗುತ್ತದೆ, ಪುಣ್ಯಕ್ಷೇತ್ರ ದರ್ಶನ ಮಾಡುವ ಶುಭಯೋಗ, ಮಾತೃವಿನಿಂದ ಸಹಾಯವನ್ನು ಪಡೆಯುತ್ತೀರ, ಯಾರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದೀರೋ ಅವರಿಗೆ ಬಹಳ ಲಾಭ , ಆದರೆ ವಾರಾಂತ್ಯದಲ್ಲಿ ಉದರ ಬಾಧೆ ಹೊಟ್ಟೆಗೆ ಸಂಬಂಧಿಸಿರುವ ಕಾಯಿಲೆಗಳಿಂದ ನರಳಬೇಕಾಗುತ್ತದೆ, ನಿವೇಶನಕ್ಕೆ ಹಂಬಲಿಸುತ್ತಿರುವವರಿಗೆ ನಿವೇಶನ ಪ್ರಾಪ್ತಿ .

ಪರಿಹಾರ.

ಪ್ರತಿದಿನ “ಓಂ ಮಹಾಲಕ್ಷ್ಮೀ ದೇವಿಯೇ ನಮಃ” ಈ ಮಂತ್ರವನ್ನು 48 ಬಾರಿ ಜಪಿಸಿ , ಶುಕ್ರವಾರ ಎಂಟು ಜನ ಸುಮಂಗಲಿಯರಿಗೆ ಅರಿಶಿನ ಕುಂಕುಮವನ್ನು ಕೊಟ್ಟು ನಮಸ್ಕಾರ ಮಾಡಿ .

ವೃಷಭ ರಾಶಿ.

 

 

ಅನಿರೀಕ್ಷಿತ ದ್ರವ್ಯ ಲಾಭ , ನೀವು ಅಂದುಕೊಂಡೆ ಇರಲ್ಲ ಇದ್ದಕ್ಕಿದ್ದ ಹಾಗೆ ಯಾವುದೋ ಮೂಲದಿಂದ ಧನಲಾಭವಾಗುತ್ತದೆ, ವಿದ್ಯಾಭ್ಯಾಸ ಮಾಡುತ್ತಿರುವವರಿಗೆ ಆಸಕ್ತಿ ಹೆಚ್ಚಾಗುತ್ತದೆ , ವಾರದ ಮಧ್ಯ ಭಾಗದಲ್ಲಿ ಆರೋಗ್ಯ ಹದಗೆಡುವ ಸಂಭವ ಇದೆ, ಅನಾರೋಗ್ಯ ಪೀಡಿತರಾಗಿ ಬೇಕಾಗುತ್ತದೆ, ಸ್ತ್ರೀ ಲಾಭ , ವೈದ್ಯ ವೃತ್ತಿಯಲ್ಲಿ ಇರುವವರಿಗೆ ಬಹಳಷ್ಟು ಲಾಭ ,ಯಾರು ಉದ್ಯೋಗದಲ್ಲಿದ್ದೀರೋ ಅವರಿಗೆ ಅಧಿಕಾರಿಗಳ ಜೊತೆಯಲ್ಲಿ ಕರಕಲಾಗುವ ಸಾಧ್ಯತೆಗಳು ಹೆಚ್ಚಾಗಿದೆ, ಸ್ವಲ್ಪ ಜಾಗ್ರತೆಯನ್ನು ವಹಿಸಿ, ನಂಬಿದ ಜನರಿಂದ ವಾರಾಂತ್ಯದಲ್ಲಿ ಮೋಸ ಹೋಗಲಿದ್ದೀರಿ, ಪರಸ್ಥಳ ವಾಸ ಮಾಡಬೇಕಾಗುತ್ತದೆ.

ಪರಿಹಾರ.

ಪ್ರತಿನಿತ್ಯ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ ಸೂರ್ಯ ನಮಸ್ಕಾರವನ್ನು ಮಾಡಿ.

ಮಿಥುನ ರಾಶಿ.

 

 

ಈ ವಾರ ಅತಿಯಾದ ಆತ್ಮವಿಶ್ವಾಸದಿಂದ ತೊಂದರೆಗೆ ಒಳಗಾಗಲಿದ್ದೀರಿ , ಕೃಷಿಯಲ್ಲಿ ನಷ್ಟವನ್ನು ಅನುಭವಿಸಲಿದ್ದೀರಿ, ವಿವಾಹ ಮತ್ತು ಮಂಗಳ ಕಾರ್ಯಗಳಲ್ಲಿ ಭಾಗಿಯಾಗುವ ಶುಭಯೋಗ, ತಂಪಾದ ಪಾನೀಯಗಳಿಂದ ರೋಗ ಬಾಧೆ , ಹೊಸ ಹೊಸ ರೋಗಗಳ ಆಗಮನವಾಗುವುದು, ಸ್ವಲ್ಪ ಎಚ್ಚರಿಕೆಯನ್ನು ವಹಿಸಿ, ಮಾತಾ ಪಿತೃವಿನಲ್ಲಿ ಪ್ರೀತಿ ಹೆಚ್ಚಾಗುವುದು, ಪರರಿಂದ ತೊಂದರೆಯಾಗುವ ಸಾಧ್ಯತೆಗಳು ಹೆಚ್ಚಾಗಿವೆ, ಮನಃಕ್ಲೇಶ, ಮನಸ್ಸನ್ನು ಕೆಡಿಸಿಕೊಳ್ಳುತ್ತೀರಿ , ವಾರಾಂತ್ಯದಲ್ಲಿ ಮನಸ್ಸನ್ನು ಏಕಾಗ್ರತೆಯಿಂದ ಇಟ್ಟುಕೊಳ್ಳಿ.

ಪರಿಹಾರ.

ಪ್ರತಿನಿತ್ಯ “ಓಂ ಚಂದ್ರಮೌಳೇಶ್ವರಾಯ ನಮಃ” ಈ ಮಂತ್ರವನ್ನು ನೂರಾ ಎಂಟು ಬಾರಿ ಜಪಿಸಿ, ಶಿವಾಲಯಕ್ಕೆ ಹೋಗಿ ದೀರ್ಘದಂಡ ನಮಸ್ಕಾರವನ್ನು ಮಾಡಿ .

ಕಟಕ ರಾಶಿ.

 

 

ಈ ವಾರದಲ್ಲಿ ಬದುಕಿಗೆ ಉತ್ತಮ ತಿರುವು ಲಭಿಸುವುದು, ದ್ರವ್ಯ ರೂಪದ ವಸ್ತುಗಳಿಂದ ಬಹಳಷ್ಟು ಲಾಭ , ಆದರೆ ಶತ್ರುಗಳಿಂದ ಮತ್ತು ಶತ್ರುಗಳು ಮಾಡುವ ಷಡ್ಯಂತ್ರಕ್ಕೆ ಬಲಿಯಾಗುವಿರಿ , ಸ್ವಲ್ಪ ಜಾಗ್ರತೆಯನ್ನು ವಹಿಸಿ , ಮನಃಕ್ಲೇಶ ,ಶರೀರದಲ್ಲಿ ಏನೋ ಒಂದು ರೀತಿಯ ತಳಮಳ,ಹೇಳಿಕೆ ಮಾತನ್ನು ಕೇಳಿ ಕಷ್ಟಕ್ಕೆ ಸಿಲುಕುವ ಸಂದರ್ಭವಿದೆ, ನಿಮ್ಮ ಬುದ್ಧಿಯಿಂದ ಎಲ್ಲ ಕೆಲಸ ಕಾರ್ಯಗಳನ್ನು ಮಾಡಿ, ತಾಳ್ಮೆ ಅತ್ಯಗತ್ಯ.

ಪರಿಹಾರ.

ದುರ್ಗಾ ಸಪ್ತಶತಿ ಪಾರಾಯಣ ಮಾಡಿ, ಶುಕ್ರವಾರ ಮತ್ತು ಮಂಗಳವಾರ ದುರ್ಗಾ  ದೇವಿಗೆ ಅರ್ಚನೆಯನ್ನು ಮಾಡಿಸಿ .

ಸಿಂಹ ರಾಶಿ.

 

 

ನಾನಾ ವಿಚಾರಗಳಲ್ಲಿ ಗೊಂದಲ ಉಂಟಾಗುವುದು , ಒಂದು ಕಡೆ ಕುಟುಂಬದ ಸಮಸ್ಯೆ ಇನ್ನೊಂದು ಕಡೆ ಉದ್ಯೋಗದಲ್ಲಿ ಸಮಸ್ಯೆ , ಈ ರೀತಿ ಗೊಂದಲದಲ್ಲಿ ಸಿಲುಕಿ ಹಾಕಿಕೊಳ್ಳಬೇಕಾಗುತ್ತದೆ, ದೂರ ಪ್ರಯಾಣ, ಪ್ರಿಯ ಜನರ ಭೇಟಿಯನ್ನು ಮಾಡುವಿರಿ, ಮನೋವ್ಯಥೆ, ಧನಾತ್ಮಕ ಚಿಂತನೆಯಿಂದ ಕಾರ್ಯದಲ್ಲಿ ಯಶಸ್ಸನ್ನು ಗಳಿಸುತ್ತೀರಿ, ದಾಂಪತ್ಯದಲ್ಲಿ ಪ್ರೀತಿ ವಾತ್ಸಲ್ಯ ಹೆಚ್ಚಾಗುತ್ತದೆ .

ಪರಿಹಾರ.

ಪ್ರತಿನಿತ್ಯ “ ಓಂ ಲಕ್ಷ್ಮೀ ಹಯಗ್ರೀವಾಯ ನಮಃ” ಈ ಮಂತ್ರವನ್ನು ನೂರಾ ಎಂಟು ಬಾರಿ ಜಪಿಸಿ , ವಿಷ್ಣು ದೇವಾಲಯಕ್ಕೆ ಹೋಗಿ, ನಾಟಿ ತುಳಸಿಯಿಂದ ಅರ್ಚನೆ ಮಾಡಿಸಿ , ನಮಸ್ಕಾರವನ್ನು ಮಾಡಿ.

ಕನ್ಯಾ ರಾಶಿ.

 

 

ರಾಜಕೀಯ ವ್ಯಕ್ತಿಗಳಲ್ಲಿ ವೈಮನಸ್ಯ ಹೆಚ್ಚಾಗುತ್ತದೆ,ನಿಮ್ಮ ಬಳಿ ಹಣ ಬಂದರೂ ಕೂಡ ಉಳಿಯುವುದಿಲ್ಲ, ದುಷ್ಟರಿಂದ ದೂರವಿರಿ, ಮಾತಿನ ಚಕಮಕಿಗೆ ಇಳಿದು ಬಿಡುತ್ತೀರ, ಮಾತಿನ ಮೇಲೆ ನಿಗವನ್ನು ಇಟ್ಟು ಮಾತನಾಡಿ, ಹಿರಿಯರಿಗೆ ಭಕ್ತಿ, ಗೌರವವನ್ನು ತೋರಿಸುವಿರಿ , ವಾರಾಂತ್ಯದಲ್ಲಿ ಕಾರ್ಯ ಸಿದ್ದಿಯಾಗುತ್ತದೆ.

ಪರಿಹಾರ.

ಪ್ರತಿನಿತ್ಯ ಗಣೇಶ ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಮಾಡಿ, ಮಂಗಳವಾರ ಅರ್ಕ ಮಾಲೆಯನ್ನು ಅರ್ಪಣೆ ಮಾಡಿ, ನಮಸ್ಕಾರವನ್ನು ಮಾಡಿ.

ತುಲಾ ರಾಶಿ.

 

 

ಸ್ವಲ್ಪ ಹೆಚ್ಚು ಪ್ರಯತ್ನ ಪಟ್ಟರೆ ಉತ್ತಮ ಫಲಗಳನ್ನು ಪಡೆಯುತ್ತೀರ, ಷೇರು ವ್ಯವಹಾರಗಳಲ್ಲಿ ಬಹಳಷ್ಟು ಲಾಭವನ್ನು ಗಳಿಸುತ್ತೀರ,  ಸಕಾಲದಲ್ಲಿ ಕೆಲಸ ಕಾರ್ಯಗಳಲ್ಲೂ ನೆರವೇರುತ್ತವೆ, ಯಾರು ವಾಹನವನ್ನು ಚಲಾಯಿಸುತ್ತೀರೋ, ಅವರು ವಾಹನ ಕಂಟಕಕ್ಕೆ ಬಲಿಯಾಗಬೇಕಾಗುವ ಸಾಧ್ಯತೆಗಳಿವೆ ,ಅಪಘಾತಗಳಾಗುವ ಸಾಧ್ಯತೆಗಳಿವೆ , ಆದ್ದರಿಂದ ಜಾಗ್ರತೆಯನ್ನು ವಹಿಸಿ, ವಾಹನವನ್ನು ಚಲಾವಣೆಯನ್ನು ಮಾಡಿ ,ಆಕಸ್ಮಿಕ ಧನ ಲಾಭ.

 ಪರಿಹಾರ.

ಪ್ರತಿನಿತ್ಯ “ ಓಂ ನಮೋ ನಾರಾಯಣಾಯ ನಮಃ” ಈ ಮಾತ್ರವನ್ನು ನೂರಾ ಎಂಟು ಬಾರಿ ಜಪಿಸಿ, ಬುಧವಾರ ಹೆಸರು ಬೇಳೆ ಮತ್ತು ಕೋಸಂಬರಿಯನ್ನು ವಿಷ್ಣು ದೇವಾಲಯದಲ್ಲಿ ನೈವೇದ್ಯವಾಗಿ ಅರ್ಪಿಸಿ, ವಿನಿಯೋಗವನ್ನು ಮಾಡಿ.

ವೃಶ್ಚಿಕ ರಾಶಿ .

 

 

ಈ ವಾರ ಯಂತ್ರೋಪಕರಣ ಮಾರಾಟಗಳಿಂದ ಬಹಳಷ್ಟು ಲಾಭ, ಅಧಿಕ ಕೋಪವನ್ನು ಮಾಡಿಕೊಳ್ಳುತ್ತೀರ, ಕೋಪದಿಂದ ಯಾವುದೇ ಪ್ರಯೋಜನವಿಲ್ಲ ಶಾಂತ ರೀತಿಯಿಂದ ವರ್ತಿಸಿ, ಶತ್ರುಬಾಧೆ, ಶತ್ರುಗಳು ಮಾಡುವ ಷಡ್ಯಂತ್ರಕ್ಕೆ  ಬಲಿಯಾಗಬೇಕಾಗುತ್ತದೆ, ಕೋರ್ಟ್ ವ್ಯವಹಾರಗಳಲ್ಲಿ ಬಹಳಷ್ಟು ವಿಘ್ನಗಳು ಎದುರಾಗುತ್ತವೆ, ಪರರಿಂದ ಸಹಾಯವನ್ನು ಪಡೆಯುವಿರಿ, ಶ್ರಮಕ್ಕೆ ತಕ್ಕ ಫಲ , ವಾರಾಂತ್ಯದಲ್ಲಿ ಕುಟುಂಬದಲ್ಲಿ ಸೌಖ್ಯ.

ಪರಿಹಾರ.

ಪ್ರತಿನಿತ್ಯ ಸೂರ್ಯ ನಮಸ್ಕಾರವನ್ನು ಮಾಡಿ, ದಕ್ಷಿಣಾಭಿಮುಖವಾಗಿರುವ ಆಂಜನೇಯನಿಗೆ ದೀರ್ಘದಂಡ ನಮಸ್ಕಾರವನ್ನು ಮಾಡಿ.

ಧನಸ್ಸು ರಾಶಿ.

 

 

ಈ ವಾರ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ , ಅವುಗಳನ್ನು ಮುಂದೂಡಿ, ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿ ನಿಮ್ಮ ಮೇಲೆ ಬರಲಿದೆ, ಸಾಲಬಾಧೆ, ಸಾಲಕ್ಕೆ ಸಿಕ್ಕಿ ಹಾಕಿಕೊಂಡು ಒದ್ದಾಡುವ ಪರಿಸ್ಥಿತಿ ಬರುತ್ತದೆ, ಯತ್ನ ಕಾರ್ಯದಲ್ಲಿ ಜಯ, ವಿದೇಶ ಪ್ರಯಾಣ ಮಾಡುವ ಶುಭಯೋಗ , ಆತ್ಮೀಯರಿಂದ ಹಿತನುಡಿಯನ್ನು ಸ್ವೀಕರಿಸಿ ಕೇಳುವುದು ಒಳ್ಳೆಯದು, ವಾರಾಂತ್ಯದಲ್ಲಿ ಸುಖ ಭೋಜನ ಪ್ರಾಪ್ತಿ.

ಪರಿಹಾರ.

ಪ್ರತಿನಿತ್ಯ ವೃದ್ಧ ದಂಪತಿಗಳಿಗೆ ಪಾದಪೂಜೆಯನ್ನು ಮಾಡಿ, ನಮಸ್ಕರಿಸಿ ಆಶೀರ್ವಾದವನ್ನು ಪಡೆಯಿರಿ.

ಮಕರ ರಾಶಿ .

 

 

ಈ ವಾರ ವಿವೇಚನೆ ಇಲ್ಲದೆ ಮಾತನಾಡುವಿರಿ, ಆದ್ದರಿಂದ ಸ್ವಲ್ಪ ತಾಳ್ಮೆಯಿಂದ ಇದ್ದು ಯೋಚನೆ ಮಾಡಿ ಮಾತನಾಡುವುದು ಒಳ್ಳೆಯದು, ಆದಾಯದ ಮೂಲ ಹೆಚ್ಚಳವಾಗುತ್ತದೆ, ಋಣ ಬಾಧೆಯಿಂದ ಮುಕ್ತಿಯನ್ನು ಪಡೆಯುವಿರಿ, ವ್ಯಾಪಾರದಲ್ಲಿ ಉತ್ತಮ ವಹಿವಾಟು , ಯಾರು ವ್ಯಾಪಾರವನ್ನು ಮಾಡುತ್ತಿದ್ದೀರೋ ಅವರಿಗೆ ಉತ್ತಮವಾಗಿರುವ ವಾರವಾಗುತ್ತದೆ, ವಿನಾ ಕಾರಣ ದ್ವೇಷವನ್ನು ಕಟ್ಟಿಕೊಳ್ಳಬೇಕಾಗುತ್ತದೆ, ಸ್ವಲ್ಪ ಮಾತಿನ ಮೇಲೆ ನಿಗಾ ಇಟ್ಟು ಮಾತನಾಡಿ.

ಪರಿಹಾರ.

ಪ್ರತಿನಿತ್ಯ “ಓಂ ವಿಜಯ ಗಣಪತಿಯೇ ನಮಃ” ಈ ಮಂತ್ರವನ್ನು 21 ಬಾರಿ ಜಪಿಸಿ , ಉತ್ತರಾಭಿಮುಖವಾಗಿರುವ ಗಣೇಶನ ದೇವಾಲಯಕ್ಕೆ ಹೋಗಿ ಗರಿಕೆಯಿಂದ ಅರ್ಚನೆಯನ್ನು ಮಾಡಿ 21 ನಮಸ್ಕಾರವನ್ನು ಮಾಡಿ.

ಕುಂಭ ರಾಶಿ.

 

 

ಈ ವಾರ ಉತ್ತಮವಾಗಿರುವುದು ಬುದ್ಧಿ ಶಕ್ತಿ ನಿಮ್ಮ ಶರೀರದಲ್ಲಿ ಉತ್ಪತ್ತಿಯಾಗುತ್ತದೆ ,ದಾನ ಧರ್ಮದಲ್ಲಿ ಆಸಕ್ತಿ ಹೆಚ್ಚಾಗುತ್ತದೆ, ಸ್ತ್ರೀಯರಿಗೆ ಲಾಭ, ಮಿತ್ರರಲ್ಲಿ ದ್ವೇಷವನ್ನು ಸಾಧಿಸುತ್ತೀರಿ, ಯಾರಿಗೆ ವಿವಾಹವಾಗಿಲ್ಲ ಅವರಿಗೆ ವಿವಾಹ ಯೋಗ, ಮಕ್ಕಳಿಂದ ಸಹಾಯವನ್ನು ಪಡೆಯುವಿರಿ, ವಾಹನ ಅಪಘಾತಗಳಾಗುವ ಸಾಧ್ಯತೆಗಳಿವೆ, ಸ್ವಲ್ಪ ಎಚ್ಚರಿಕೆಯನ್ನು ವಹಿಸಿ , ವಾರಾಂತ್ಯದಲ್ಲಿ ಹಣದ ತೊಂದರೆ, ಯಾರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದೀರೋ, ಅವರಿಗೆ ಬಹಳಷ್ಟು ಲಾಭವಾಗುತ್ತದೆ .

ಪರಿಹಾರ .

ಪ್ರತಿನಿತ್ಯ ಶಿವಾಲಯಕ್ಕೆ ಭೇಟಿ ನೀಡಿ ಶಿವಾರ್ಚನೆಯನ್ನು ಮಾಡಿಸಿ ನಮಸ್ಕಾರವನ್ನು ಮಾಡಿ.

ಮೀನ ರಾಶಿ.

 

 

ನಗದು ವ್ಯವಹಾರದಲ್ಲಿ ಎಚ್ಚರವನ್ನು ವಹಿಸಿ , ಹಣಕಾಸು ಪರಿಸ್ಥಿತಿಯಲ್ಲಿ ಉತ್ತಮವಾಗಿರುತ್ತದೆ, ಚಂಚಲ ಮನಸ್ಸು ಆದ್ದರಿಂದ ಮನಸ್ಸನ್ನು ಏಕಾಗ್ರತೆಗೆ ತರುವ ಪ್ರಯತ್ನವನ್ನು ಮಾಡಿ, ಆರೋಗ್ಯದಲ್ಲಿ ಸುಧಾರಣೆ, ಪ್ರವಾಸ ಮಾಡುವ ಸಾಧ್ಯತೆ ಹೆಚ್ಚಾಗಿ ಕಂಡುಬರುತ್ತದೆ, ಅಧಿಕವಾಗಿ ಲಾಭವಾಗುವ ಸಾಧ್ಯತೆಗಳಿವೆ , ಆರೋಗ್ಯದಲ್ಲಿ ಸುಧಾರಣೆಯಾಗುತ್ತದೆ, ಶತ್ರು ಬಾಧೆ ಶತ್ರುಗಳು ಮಾಡುವ ಷಡ್ಯಂತ್ರಕ್ಕೆ ನೀವು ಬಲಿಯಾಗಬೇಕಾಗುತ್ತದೆ, ಎಚ್ಚರಿಕೆಯಿಂದ ಇರಿ.

ಪರಿಹಾರ.

ಅಶ್ವತ್ಥ ವೃಕ್ಷಕ್ಕೆ 18 ಬಾರಿ ಪ್ರದಕ್ಷಿಣೆಯನ್ನು ಮಾಡಿ , ದೀರ್ಘದಂಡ ನಮಸ್ಕಾರವನ್ನು ಮಾಡಿ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top