ಸಮಾಚಾರ

ಬೆಳಗ್ಗೆ ಬರ್ತಾ ಇದ್ದ ಕಸದ ಗಾಡಿ ಕಳೆದೆರಡು ದಿನಗಳಿಂದ ನಾಪತ್ತೆಯಾಗಿದ್ಯಾ ಅದಕ್ಕೆ ಕಾರಣ ಇಲ್ಲಿದೆ ನೋಡಿ

ದಿನೇ ದಿನೇ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿನಲ್ಲಿ ಕಸ ವಿಲೇವಾರಿ ಮಾಡುವುದುದೇ ದೊಡ್ಡ ಸಮಸ್ಯೆ. ಪಕ್ಕದ ಸೈಟ್ ಗೆ ಹಾಕುವಂತಿಲ್ಲ, ಸಿಕ್ಕ ಸಿಕ್ಕಲ್ಲಿ ಕಸ ಎಸೆದರೆ ನಮಗೇ ತೊಂದರೆ. ಆದರೆ ಕಸದ ಗಾಡಿ ಸರಿಯಾಗಿ ಬರದೇ ಇದ್ದರೆ ಏನು ಮಾಡುವುದು ಎನ್ನುವಂತಾಗಿದೆ.

ಈಗ ಬೆಂಗಳೂರು ವಾಸಿಗಳ ಸಮಸ್ಯೆ ಇದೇ ಆಗಿದೆ. ಕಳೆದ ದಿನಗಳಿಂದ ಕಸದ ಗಾಡಿಗಳು ಮನೆ ಮುಂದೆ ಬಂದಿರಲಿಲ್ಲ. ಇದಕ್ಕೆ ಕಾರಣ ಕಸ ವಿಲೇವಾರಿ ಮಾಡುವ ನೌಕರರ ಮುಷ್ಕರ ಎಂದು ತಿಳಿದು ಬಂದಿದೆ.

 

 

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಳೆದೆರಡು ತಿಂಗಳಿನಿಂದ ಬಿಲ್ ಪಾವತಿಸದ ಹಿನ್ನಲೆಯಲ್ಲಿ ಕಳೆದೆರಡು ದಿನಗಳಿಂದ ಕಸ ವಿಲೇವಾರಿ ನೌಕರರು ಮತ್ತು ಆಟೋ ವಿಲೇವಾರಿ ನೌಕರರು ಮುಷ್ಕರ ನಡೆಸುತ್ತಿದ್ದಾರೆ. ಹೀಗಾಗಿ ಸೂಕ್ತವಾಗಿ ಕಸ ವಿಲೇವಾರಿಯಾಗದೇ ಬೆಂಗಳೂರು ನಿವಾಸಿಗಳು ಒದ್ದಾಡುವಂತಾಗಿದೆ.

‘ಇದು ಪೌರ ಕಾರ್ಮಿಕರ ಸಮಸ್ಯೆ ಮಾತ್ರವಲ್ಲ. ಸ್ವಚ್ಛತಾ ಕಾರ್ಯದಲ್ಲಿ ಕೈಜೋಡಿಸುತ್ತಿರುವ ಆಟೋ ಟಿಪ್ಪರ್‌ ಚಾಲಕರು, ಲೋಡರ್‌ಗಳು, ಸಹಾಯಕರು ಇವರೆಲ್ಲರೂ ವೇತನ ಸಮಸ್ಯೆಯಿಂದ ಪರದಾಡುತ್ತಿದ್ದಾರೆ. ಆದ್ದರಿಂದ ಕೆಲಸ ನಿಧಾನಗತಿಯಲ್ಲಿ ಸಾಗಿದೆ. ಪರಿಸ್ಥಿತಿ ಬಿಗಡಾಯಿಸುವ ಮುನ್ನ ಪರಿಹಾರ ಮಾರ್ಗ ಕಂಡುಕೊಳ್ಳಬೇಕು’

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top