ಸಿನಿಮಾ

ದಶಕದ ಬಳಿಕ ಮತ್ತೆ ಒಂದಾದ ‘ಚಕ್ ದೇ ಇಂಡಿಯಾ’ ಹುಡ್ಗಿರು

ಚಕ್ ದೇ! ಇಂಡಿಯಾ 2007 ರಲ್ಲಿ ಬಿಡುಗಡೆಯಾದ ಭಾರತದ ಹಾಕಿ ಕುರಿತ ಬಾಲಿವುಡ್ ಕ್ರೀಡಾ ಸಿನಿಮಾ. ಈ ಚಿತ್ರ ಸೂಪರ್ ಹಿಟ್ ಆಗಿತ್ತು. ಈ ಚಿತ್ರವನ್ನು ಶಿಮಿತ್ ಅಮೀನ್ ನಿರ್ದೇಶಿಸಿ, ಯಶ್ ರಾಜ್ ಫಿಲ್ಮ್ಸ್ ಅವರು ನಿರ್ಮಿಸಿದ್ದಾರೆ. ನಟ ಶಾರುಖ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದ ಚಿತ್ರ ಅದರಲ್ಲೂ ಈ ಸಿನಿಮಾದಲ್ಲಿ ಹಾಕಿ ತಂಡದ ಸದಸ್ಯರಾಗಿ ಅಭಿನಯಿಸಿದ ನಟಿಯರನ್ನಂತೂ ಮರೆಯಲಾಗದು.

 

 

ಚಕ್ ದೇ! ಇಂಡಿಯಾ ಚಿತ್ರದ ನಟಿಯರ ಪೈಕಿ ಕೆಲವರು ಮಾತ್ರ ಸಿನಿಮಾ ಹಿನ್ನೆಲೆಯಿಂದ ಬಂದವರಾಗಿದ್ದರೂ ಕೂಡ ಇನ್ನುಳಿದವರು ಇದ್ಯಾವುದಕ್ಕೂ ಕಮ್ಮಿ ಇಲ್ಲದಂತೆ ಅಭಿನಯ ಮಾಡಿ ಸೈ ಎನಿಸಿಕೊಂಡಿದ್ದರು. ಹೀಗಾಗಿ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಯಶಸ್ಸು ಗಳಿಸಿತ್ತಲ್ಲದೆ ಕ್ರಿಕೆಟ್ ಹೊರತಾದ ಮತ್ತೊಂದು ಕ್ರೀಡೆಯೂ ಭಾರತದಲ್ಲಿ ವಿಜೃಂಭಿಸಿತ್ತು ಎಂಬುದನ್ನು ಸಾಬೀತು ಮಾಡಿದ್ದರು.

 

 

‘ಚಕ್ ದೇ ಇಂಡಿಯಾ’ ಸಿನಿಮಾ ರಿಲೀಸ್ ಬಳಿಕ ಇದರಲ್ಲಿ ಅಭಿನಯಿಸಿದ್ದ ಬಹಳಷ್ಟು ಮಂದಿ ನೇಪಥ್ಯಕ್ಕೆ ಸರಿದಿದ್ದರು. ಇದೀಗ ದಶಕಗಳ ಬಳಿಕ ‘ಚಕ್ ದೇ ಇಂಡಿಯಾ’ದಲ್ಲಿ ನಟನೆ ಮಾಡಿದ ಇಬ್ಬರು ನಟಿಯರು ಮತ್ತೊಂದು ಚಿತ್ರಕ್ಕೆ ಜೊತೆಯಾಗಿದ್ದಾರೆ. ‘ಮಾನ್ಸೂನ್ ಫುಟ್ಬಾಲ್’ ಸಿನಿಮಾದಲ್ಲಿ ಸಾಗರಿಕಾ ಘಾಟ್ಗೆ ಹಾಗೂ ಚಿತ್ರಾಶಿ ರಾವತ್ ಜೊತೆಯಾಗಿ ನಟಿಸುತ್ತಿದ್ದು, ಈ ಚಿತ್ರವೂ ಯಶಸ್ಸು ಗಳಿಸುವ ವಿಶ್ವಾಸ ಹೊಂದಿದ್ದಾರೆ.

ಮಿಲಿಂದ್ ಯುಕೆ (ಚಲನಚಿತ್ರ ನಿರ್ಮಾಪಕ) ಚಿತ್ರವು ದ್ವಿಭಾಷಾ ಸಿನಿಮಾ ಆಗಿದೆ. ಚಿತ್ರದ ಕಥೆಯು ಅವರ ದೈನಂದಿನ ಜೀವನದಿಂದ ಫುಟ್ಬಾಲ್ನ ಆಯ್ಕೆ ಮಾಡುವ ಕೆಲವು ಭಾರತೀಯ ಗೃಹಿಣಿಯರನ್ನು ಸುತ್ತಿದೆ. ಆದ್ದರಿಂದ, ಈ ಸಮಯದಲ್ಲಿ, ಸಾಗರಿಕಾ ಘಾಟ್ಜ್ ಮತ್ತು ಚಿತ್ರಶಿ ರಾವತ್ ಹಾಕಿ ಆಟದಿಂದ ಫುಟ್ಬಾಲ್ ತಂಡದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ತಿಳಿದು ಬಂದಿದೆ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top