ಮನೋರಂಜನೆ

ಮೈಸೂರಲ್ಲಿ ಆಟೋ ಓಡಿಸಿ ಗಮನಸೆಳೆದ ಚಿರಂಜೀವಿ ಸರ್ಜಾ.

ಕಳೆದ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಸ್ಯಾಂಡಲ್’ವುಡ್ ನಟ ಚಿರಂಜೀವಿ ಸರ್ಜಾ ತಮ್ಮ ಸಿನಿಮಾ ಸಂಭಂದಿತ ಕೆಲಸಗಳಿಗೆ ಮರಳಿದ್ದಾರೆ. ಸದ್ಯ ಬಿಡುಗಡೆಗೆ ಅವರ ‘ಅಮ್ಮಾ ಐ ಲವ್ ಯೂ’ ಚಿತ್ರದ ಪ್ರೊಮೋಷನ್ ನಲ್ಲಿ ಚಿರು ಸಕತ್ ಬ್ಯುಸಿಯಾಗಿದ್ದಾರೆ.

 

 

ಚಿತ್ರದ ಪ್ರೊಮೋಷನ್’ಗೆಂದು ಮೈಸೂರಿಗೆ ಆಗಮಿಸಿದ್ದ ಚಿರು ಹಿಂದೆ ಇಬ್ಬರನ್ನು ಕೂರಿಸಿಕೊಂಡು ಆಟೋ ಸವಾರಿ ಮಾಡಿದ್ದಾರೆ.ಮೈಸೂರಿನ ಬೀದಿಬೀದಿಯನ್ನು ಆಟೋದಲ್ಲೇ ಸುತ್ತಾಡಿ, ಅರಮನೆ ನಗರಿಯ ಅಂದ ಸವಿದಿದ್ದಾರೆ. ಚಿರು ಆಟೋ ಓಡಿಸುವುದನ್ನು ಚಿಂತ್ರತಂಡದವರು ವಿಡಿಯೋ ಮಾಡಿದ್ದು ಇದನ್ನು ಪೋಸ್ಟ್ ಮಾಡಿರುವ ಚಿರು ‘ನಾನು ಮೈಸೂರಿಗೆ ಬಂದಾಗ ಈ ರೀತಿ ಆಟೋ ಚಲಾಯಿಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ.

ಅಂದಹಾಗೆ ಈ ಚಿತ್ರವು ದ್ವಾರಕೀಶ್ ನಿರ್ಮಾಣದ 51ನೇ ಚಿತ್ರವಾಗಿದ್ದು ನಿರ್ದೇಶಕ ಚೈತನ್ಯ ಮತ್ತು ಚಿರಂಜೀವಿ ಸರ್ಜಾ ಸಹಯೋಗದ 4ನೇ ಚಿತ್ರವಾಗಿದೆ. ದಕ್ಷಿಣ ಭಾರತದ ಪ್ರಸಿದ್ದ ನಟಿ ಸಿತಾರಾ ಅಮ್ಮನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದರ ಜೊತೆಗೆ ರವಿಕಾಳೆ, ಕರಿಸುಬ್ಬು, ನಟನಾ ಪ್ರಶಾಂತ್‌ ಪ್ರಮುಖ ತಾರಾಗಣದಲ್ಲಿ ನಟಿಸುತ್ತಿದ್ದಾರೆ. ಇದೇ ಶುಕ್ರವಾರ ಅಂದರೆ ಜೂನ್ 15ರಂದು ತೆರೆಕಾಣುತ್ತಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top