ಸಿನಿಮಾ

‘ಮಳೆ ಬಿಲ್ಲು’ ಶೇ. 60 ರಷ್ಟು ಮುಕ್ತಾಯ

ನಾಗರಾಜ್ ಹಿರಿಯೂರು (ಎಲ್.ಎನ್.ಆರ್. ಬ್ರದರ್ಸ್ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಸಾಹಿತ್ಯ ರಚನೆ ಮಾಡುವುದರೊಂದಿಗೆ ನಿರ್ದೇಶನ ಕೂಡ ಮಾಡಿರುವ ಚಿತ್ರ ‘ಮಳೆ ಬಿಲ್ಲು’. ಗ್ರಾಮೀಣ ಭಾಗದಲ್ಲಿ ನಾಟಕಗಳನ್ನು ನಿರ್ವಹಿಸಿ ಸಾಕಷ್ಟು ಅನುಭವ ಹೊಂದಿರುವ ನಾಗರಾಜ್ ಹಿರಿಯೂರು ಅವರ ಚಿತ್ರದಲ್ಲಿ ಒಂದು ನವಿರಾದ ಪ್ರೇಮಕಥೆಯನ್ನು ಹೇಳಹೊರಟಿದ್ದಾರೆ. ಪ್ರತಿಯೊಬ್ಬ ಯುವಕನ ಜೀವನದಲ್ಲೂ 7 ಬಣ್ಣಗಳಿಂದ ರಚನೆಯಾಗುವ ಮಳೆ ಬಿಲ್ಲುವಿನಂತಹ ಹುಡುಗಿಯೊಬ್ಬಳು ಇದ್ದೇಇರುತ್ತಾಳೆ.

 

 

ಅಂತಹ ಒಂದು ಹುಡುಗಿಯೊಬ್ಬಳು ಜೀವನದಲ್ಲಿ ಬಂದಾಗ ಆತನ ಜೀವನ ಹೇಗೆ ಬದಲಾಗುತ್ತದೆ ಎಂದು ಹೇಳಹೊರಟಿದ್ದಾರೆ. ಇತ್ತೀಚೆಗೆ ಸಾವನದುರ್ಗ, ರಾಮನಗರ ಸುತ್ತಮುತ್ತ ‘’ ಮಳೆಬಿಲ್ಲು ಮಳೆ ಬಿಲ್ಲು, ಪ್ರೀತಿನೇ ಹೀಗೆ, ಮಾತಾಡು ಮಾತಾಡು ಎಂಬ ಮೂರು ಹಾಡುಗಳನ್ನು ಕಪಿಲ್ ನೃತ್ಯ ನಿರ್ದೇಶನದಲ್ಲಿ ಚಿತ್ರೀಕರಿಸಿಕೊಳ್ಳಲಾಯಿತು. ಇದರೊಂದಿಗೆ ಶೇ. 60 ಭಾಗದಷ್ಟು ಚಿತ್ರೀಕರಣ ಮುಕ್ತಾಯಗೊಂಡಿದೆ.

 

ಅನನ್ಯ ಸಿನಿ ಎಂಟರ್ ಪ್ರೈಸಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಸಿ. ನಾರಾಯಣ್ ಛಾಯಾಗ್ರಹಣ, ಗಣೇಶ್ – ನಾರಾಯಣ್ ಸಂಗೀತ, ಎಂ. ಮುನಿರಾಜು ಸಂಕಲನ, ಎಂ.ಆರ್. ಕಪಿಲ್ ನೃತ್ಯ ನಿರ್ದೇಶನವಿದೆ. ಶರತ್, ಸಂಜನಾ, ಕಿರ್ಲೋಸ್ಕರ್ ಸತ್ಯ, ನಾರಾಯಣ್, ಮೈಕೋ ನಾಗರಾಜ್, ಮಹದೇವ್, ಚಂದನ್, ಮೀಸೆ ಅಂಜನಪ್ಪ, ಕೃಷ್ಣಮೂರ್ತಿ, ಡಿ.ಕೆ. ಯಶೋಧ, ರವಿತೇಜ, ಹರ್ಷಿತ, ಪ್ರಜ್ಬಲ್, ಸೌಮ್ಯ, ಲಾವಣ್ಯ, ಡಾ. ನಾಗೇಶ್, ಡಾ. ಪುನೀತ್, ಬಸವೇಶ, ಅಭಿóಷೇಕ್, ನಿಂಗರಾಜು, ಭೂಪತಿ, ಪ್ರಶಾಂತ್, ಇನ್ನೂ ಮುಂತಾದವರ ತಾರಾಬಳಗವಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top